ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಒಂದು ಕಡೆ ಆರ್ಯನಿಗೆ ಹಳೆ ನೆನಪು ತರಿಸಲು ಅವರ ಫ್ಯಾಮಿಲಿ ಒದ್ದಾಡುತ್ತಿದ್ದರೆ ಇನ್ನೊಂದೆಡೆ ಸಂಜುವೇ ಆರ್ಯ ಅನ್ನೋ ವಿಚಾರವನ್ನು ರಿವೀಲ್ ಮಾಡಿದರೆ ಅವರ ಪ್ರಾಣಕ್ಕೇ ಅಪಾಯ ಅನ್ನೋ ಮಾತನ್ನು ಡಾಕ್ಟರ್ ಹೇಳಿದ್ದಾರೆ. ಅಷ್ಟಕ್ಕೂ ಆರ್ಯನನ್ನು ಕೊಲೆ ಮಾಡಲು ಸ್ಕೆಚ್ ಹಾಕ್ತಿರೋದು ಯಾರು ಗೊತ್ತಾ?
ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಹೊಸ ಹೊಸ ತಿರುವುಗಳು ಎದುರಾಗುತ್ತಿವೆ. ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ ಸೀರಿಯಲ್‌ನಿಂದ ಹೊರ ಬಿದ್ದ ಮೇಲೆ ಆ ಪಾತ್ರಕ್ಕೆ ಹರೀಶ್ ರಾಜ್ ಬಂದಿದ್ದಾರೆ. ಆ ಪಾತ್ರದಿಂದ ಈ ಪಾತ್ರಕ್ಕೆ ಬದಲಾಗುವಾಗ ಆರ್ಯನ ತಮ್ಮ ವಿಶ್ವಾಸನ ಮುಖವನ್ನೇ ಆರ್ಯನಿಗೆ ಟ್ರಾನ್ಸ್‌ಪ್ಲಾಂಟ್ ಮಾಡಲಾಗಿದೆ. ಆದರೆ ಆಕ್ಸಿಡೆಂಟ್‌ನಿಂದ ಹೊಸ ಆರ್ಯನಿಗೆ ಎಲ್ಲವೂ ಮಸುಕು ಮಸುಕಾಗಿ ಅಷ್ಟೇ ನೆನಪಿರುವ ಹಾಗೆ ಕಥೆ ಹೆಣೆಯಲಾಗಿದೆ. ಇದೀಗ ಸಂಜುಗೆ ಟ್ರೀಟ್‌ಮೆಂಟ್ ನಡೆಯುತ್ತಿದೆ. ಆತನಿಗೆ ಏನೇನೋ ನೆನಪಾಗುತ್ತಿದೆ. ಆದರೆ ಯಾವುದೂ ಸ್ಪಷ್ಟವಿಲ್ಲ. ಆತನಿಗೆ ತಾನು ಇನ್ನೊಬ್ಬರಿಗೆ ಹೊರೆಯಾಗೋದು, ತನ್ನಿಂದ ಇನ್ನೊಬ್ಬರಿಗೆ ಸಮಸ್ಯೆ ಆಗೋದು ಇಷ್ಟವಿಲ್ಲ. ಹೀಗಾಗಿ ಆತ ಸಾಧ್ಯವಾದಲ್ಲೆಲ್ಲ ಸ್ವತಂತ್ರವಾಗಿರಲು ಪ್ರಯತ್ನಿಸುತ್ತಾನೆ. ಡಾಕ್ಟರ್ ಶಾಪ್‌ನಿಂದ ಒಬ್ಬನೇ ಬಸ್‌ನಲ್ಲಿ ಬರುತ್ತಾನೆ. ಹಾಗೆ ಬಂದವನು ನೇರ ಅನು ಮನೆಗೆ ಹೋಗುತ್ತಾನೆ. ಆ ಆವರಣ, ಅಲ್ಲಿ ಅನು ಅಮ್ಮ ಕೊಡುವ ಶುಂಠಿ ಟೀ ಎಲ್ಲವೂ ಈತನಿಗೆ ಚಿರಪರಿಚಿತ ಅನಿಸುತ್ತದೆ. ಇದನ್ನು ಸಂಜು ಬಾಯಿಬಿಟ್ಟು ಹೇಳಿದಾಗ ಮನೆಯವರಿಗೆಲ್ಲ ಅಚ್ಚರಿ ಆಗಿದೆ. ಆದರೆ ಅವರು ಅದನ್ನು ಕಾಕತಾಳೀಯ ಅಂತಲೇ ಭಾವಿಸುತ್ತಾರೆ.
ಇನ್ನೊಂದೆಡೆ ಡಾಕ್ಟರ್ ಹತ್ತಿರ ಸಂಜು ತಂದೆ ತಾಯಿ ಹೋಗಿದ್ದಾರೆ. ಅಲ್ಲಿ ಡಾಕ್ಟರ್ ಹೇಳುವ ಮಾತು ಅವರಿಗೆ ಆರ್ಯನ ಕುರಿತ ಗುಟ್ಟು ಬಿಟ್ಟುಕೊಡಲಾರದಂತೆ ಮಾಡುತ್ತಿದೆ. ಡಾಕ್ಟರ್ ಹೇಳೋ ಪ್ರಕಾರ ಆರ್ಯನಿಗೆ ಸದ್ಯಕ್ಕೆ ಜೀವ ಕಂಟಕ ಇದೆ. ಈ ವಿಚಾರವನ್ನು ಪೊಲೀಸರೇ ಡಾಕ್ಟರ್‌ಗೆ ತಿಳಿಸಿದ್ದಾರೆ. ಹೀಗಾಗಿ ಸಂಜುವೇ ಆರ್ಯವರ್ಧನ ಅನ್ನೋ ವಿಚಾರವನ್ನು ಆತನ ತಂದೆ ತಾಯಿ ಈಗಲೇ ಎಲ್ಲರ ಬಳಿಯೂ ಹೇಳಿದರೆ ಆತನ ಸಾವನ್ನು ಬಯಸುವವರು ಆತನನ್ನು ಸಾಯಿಸುವ ಅಪಾಯವಿದೆ. ಆರ್ಯವರ್ಧನನಿಗೆ ತಾನೇ ಆರ್ಯವರ್ಧನ ಅನ್ನೋ ವಿಚಾರ ಗೊತ್ತಾಗುವವರೆಗೂ ಈ ಗುಟ್ಟು ಹೀಗೇ ಮುಂದುವರಿಯಬೇಕಿದೆ.
Puttakkana Makkalu: ಸ್ನೇಹಾಳಲ್ಲಿ ಕಂಠಿ ಬಗ್ಗೆ ಪ್ರೀತಿ ಚಿಗುರಿದೆ!
ವೈದ್ಯರು ಹೇಳಿದ ಇನ್ನೊಂದು ವಿಚಾರ ಸಂಜು ತಂದೆ ತಾಯಿಗೆ ಗಾಬರಿ ಹೆಚ್ಚಾಗುವ ಹಾಗೆ ಮಾಡಿದೆ. ಅದು ಮತ್ತೇನಲ್ಲ, ಆರ್ಯನ ಕುಟುಂಬದಲ್ಲೇ ಯಾರೋ ಆಪ್ತರೇ ಆತನ ಕೊಲೆಗೆ ಪ್ರಯತ್ನಿಸುತ್ತಿದ್ದಾರೆ ಅನ್ನೋ ವಿಚಾರ. ಆದರೆ ಆರ್ಯನ ಪತ್ನಿ ಅನುವಿನ ಮೇಲೆ ಆರ್ಯನ ಗೆಳೆಯ ಝೇಂಡೆಗೆ ಅನುಮಾನ ಇದೆ. ಅಷ್ಟೇ ಅಲ್ಲ ಹರ್ಷನ ಪತ್ನಿ ಮಾನ್ಸಿಗೂ ಅನು ಮೇಲೆ ಅನುಮಾನ ಇದೆ. ಆಕೆಯೇ ಆರ್ಯನ ಹತ್ಯೆ ಮಾಡಿದ್ದಾಳೆ ಅಂತ ಅವರೆಲ್ಲ ನಂಬುತ್ತಿದ್ದಾರೆ. ಇದಕ್ಕಾಗಿ ಅನುವನ್ನು ಪೊಲೀಸರೂ ಅರೆಸ್ಟ್ ಮಾಡಿದ್ದಾರೆ.
ಆದರೆ ನಿಜದಲ್ಲಿ ನೋಡಿದರೆ ಅನು ಆರ್ಯನಿಗಾಗಿ ಹಂಬಲಿಸುತ್ತಿದ್ದಾಳೆ. ಇಡೀ ದಿನ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾಳೆ. ಡಾಕ್ಟರ್ ಆಕೆಗೆ ಹೇಳಿರೋ ಬೆಡ್‌ರೆಸ್ಟ್(Bed rest) ಅವಳನ್ನು ಮತ್ತಷ್ಟು ಅಸ್ವಸ್ಥಳನ್ನಾಗಿ ಮಾಡಿದೆ. ವೀಕ್ಷಕರ ಕಣ್ಣಿಗೆ ಅನು ಮುಗ್ಧೆಯಾಗಿಯೇ ಕಾಣುತ್ತಿದ್ದಾಳೆ. ಆರ್ಯವರ್ಧನನಿಗೆ ಆಕೆಯ ಬಗೆಗೆ ಪ್ರೇಮ(Love)ದ ಭಾವನೆ ಇದ್ದರೂ ಸದ್ಯದ ಸ್ಥಿತಿಯಲ್ಲಿ ಆತ ಇದನ್ನು ಎಲ್ಲೂ ವ್ಯಕ್ತಪಡಿಸಲಾರ. ಆದರೆ ಈತನ ಅಭಿರುಚಿಗಳು, ಮಾತು, ನಡವಳಿಕೆ ಎಲ್ಲವೂ ಆರ್ಯನನ್ನು ಹತ್ತಿರದಿಂದ ನೋಡಿದವರಿಗೆ ಅನುಮಾನ ತರಿಸುತ್ತಿದೆ. ಅನುವಿಗೆ ಆಗಾಗ ಈ ಸೂಕ್ಷ್ಮ ಗೊತ್ತಾದರೂ ಅವಳು ಸಂಜುವನ್ನು ಅವಾಯ್ಡ್(Avoid) ಮಾಡುತ್ತಿದ್ದಾಳೆ.
ಸದ್ಯ ಈ ಕಥೆ ಹೇಗೆ ಮುಂದುವರಿಯಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಈ ಸೀರಿಯಲ್ ಅನ್ನು ಬೈಕಾಟ್ ಮಾಡ್ತೀವಿ ಅಂತ ಸಾಕಷ್ಟು ಜನ ಹೇಳಿದರೂ ಈ ಸೀರಿಯಲ್ ಟಿಆರ್ ಪಿ(TRP) ಇಳಿಯೋ ಬದಲು ಹೆಚ್ಚಾಗ್ತಿದೆ.
ಕೆಂಡಸಂಪಿಗೆ: ಓಟಿಗಾಗಿ ಸುಮನಾಗೆ ತಾಳಿ ಕಟ್ಟಿದ ತೀರ್ಥಂಕರ್, ಎಲೆಕ್ಷನ್ ಮುಗಿದ ಮೇಲೆ ಡಿವೋರ್ಸ್!
