Asianet Suvarna News Asianet Suvarna News

Hitler Kalyana: ಹಾವು ಮುಂಗುಸಿಯಂತಿದ್ದ ಏಜೆ - ಲೀಲಾ ಈಗ ಬೆಸ್ಟ್ ಫ್ರೆಂಡ್ಸ್! ಅಬ್ಬಬ್ಬಾ, ಅದ್ಹೇಗೆ?

ಏಜೆ ಮತ್ತು ಲೀಲಾ ಪಫೆಕ್ಟ್ ಆಂಡ್ ಎಡವಟ್ಟು ಜೋಡಿ ಅಂತಲೇ ಫೇಮಸ್. ಸದಾ ಕಿತ್ತಾಡ್ಕೊಂಡು, ಒಬ್ರನ್ನ ಕಂಡ್ರೆ ಒಬ್ರಿಗಾಗದ ಹಾಗೆ ಇರುತ್ತಿದ್ದ ಜೋಡಿ ಈಗ ಹಳೇದನ್ನೆಲ್ಲ ಮರೆತು ಸಾರಿ ಕೇಳ್ತಾ ಬೆಸ್ಟ್ ಫ್ರೆಂಡ್ಸ್ ಆಗ್ತಿದ್ದಾರೆ. ಅಬ್ಬಬ್ಬಾ, ಇದೆಲ್ಲ ಹೇಗೆ ಸಾಧ್ಯವಾಯ್ತು, ಮುಂದೆ ಇದು ಯಾವ ಲೆವೆಲ್‌ಗೆ ಹೋಗಬಹುದು..

In Hitler Kalyana zee kannada serial AJ and Leela became good friends
Author
Bengaluru, First Published Aug 25, 2022, 2:56 PM IST

ಹಿಟ್ಲರ್ ಕಲ್ಯಾಣ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್. ಇಲ್ಲೀವರೆಗೆ ಫ್ಲೋನಲ್ಲಿ ಹೋಗ್ತಿದ್ದ ಕಥೆ ಈಗ ಟರ್ನ್ ತಗೊಂಡಿದೆ. ಎಲ್ಲರಿಗೂ ಆಶ್ಚರ್ಯ ಆಗೋ ಹಾಗೆ ಏಜೆ, ಲೀಲಾ ಬೆಸ್ಟ್ ಫ್ರೆಂಡ್ಸ್ ಆಗಿ ಬದಲಾಗಿದ್ದಾರೆ. ಏಜೆ ಕಂಡರೆ ಹೆದರಿ ನಡುಗುತ್ತಿದ್ದ, ಆತನೆದುರು ನಿಂತು ಮಾತನಾಡಲು ಅಂಜುತ್ತಿದ್ದ, ಆತನನ್ನು ದ್ವೇಷಿಸುತ್ತಿದ್ದ ಲೀಲಾ ಇದೀಗ ಏಜೆ ಎದುರೇ ಆತನನ್ನು ಹಾಡಿ ಹೊಗಳಿದ್ದಾಳೆ. ತನ್ನೆಲ್ಲ ತಪ್ಪಿಗೂ ಮನಃಪೂರ್ವಕವಾಗಿ ಸಾರಿ ಕೇಳಿದ್ದಾಳೆ. ಇತ್ತ ಅಭಿರಾಮ್ ಕೂಡ ಲೀಲಾ ಎದುರು ಸಾರಿ ಕೇಳಿದ್ದಾನೆ. ಮೊದಲಿಗಿಂತ ಮೆತ್ತಗಾಗಿದ್ದಾನೆ. ಇವರಿಬ್ಬರ ಈ ಬದಲಾವಣೆ ವೀಕ್ಷಕರಿಗೆ ಇಷ್ಟವಾಗಿದೆ. ಬಹಳ ಮಂದಿ ಈ ಜೋಡಿ ಬದಲಾದದ್ದನ್ನು ಖುಷಿಯಿಂದ ಸ್ವಾಗತಿಸಿದ್ದಾರೆ. ಕೆಲವರು ಈಗೇನೋ ಹ್ಯಾಪಿ ಎಂಡಿಂಗ್ ಆಗಿದೆ, ಮತ್ತೆ ಏನೋ ಶುರು ಹಚ್ಕೊಳ್ತಾರೆ, ಎಷ್ಟಾದ್ರೂ ಇದು ಸೀರಿಯಲ್ ಅಲ್ವಾ ಅನ್ನೋ ಥರ ಮಾತಾಡಿದ್ದಾರೆ.

ಅಷ್ಟಕ್ಕೂ ಲೀಲಾ ಏಜೆ ಒಂದಾಗೋದಕ್ಕೆ ಪರೋಕ್ಷವಾಗಿ ದೇವ್ ಕಾರಣ. ಏಜೆ ತಂಗಿ ಪವಿತ್ರಾಗೆ ಕಾಟ ಕೊಡ್ತಿದ್ದ, ಆಕೆಯನ್ನ ಕೊಲ್ಲಲು ಹವಣಿಸುತ್ತಿದ್ದ ದೇವ್‌ನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯೋದೇ ಈ ಜೋಡಿಯ ತಂತ್ರವಾಗಿತ್ತು. ಆದರೆ ಅದಕ್ಕೆ ಇಬ್ಬರೂ ಬೇರೆ ಬೇರೆ ದಾರಿ ಆಯ್ಕೆ ಮಾಡಿಕೊಂಡರು. ಕೊನೆಯಲ್ಲಿ ದೇವ್‌ ಸಿಕ್ಕಾಕಿಕೊಂಡಾಗ ಇಬ್ಬರ ಉದ್ದೇಶವೂ ಈಡೇರಿತು. ಈ ಕಾರಣ ಹಾವು ಮುಂಗುಸಿಯಂತಿದ್ದ ಈ ಇಬ್ಬರನ್ನು ಒಂದು ಮಾಡಿದೆ.

 ಶಿಸ್ತು ಇಲ್ಲದೆ ಕೆಲಸ ಮಾಡುವುದನ್ನು ಏಜೆ ಇಷ್ಟ ಪಡುವುದಿಲ್ಲ. ಅಂತಹದರಲ್ಲಿ ಇದೀಗ ಏಜೆ ಮನಸ್ಸು ಕೊಂಚ ಮಟ್ಟಿಗೆ ಬದಲಾಗುತ್ತಿರುವ ಸೂಚನೆ ಸಿಕ್ಕಿದೆ. ಲೀಲಾ ಏಜೆಯನ್ನು ತಪ್ಪಾಗಿ ಅರ್ಥೈಸಿ ಕೊಂಡಿದ್ದಳು ಹಾಗೆಯೇ ಏಜೆ ಕೂಡ ಲೀಲಾಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ. ಆದರೆ ಇದೀಗ ಇಬ್ಬರಿಗೂ ತಾನು ಅರ್ಥ ಮಾಡಿಕೊಂಡಿರುವುದು ತಪ್ಪು ಎಂದು ಅರ್ಥವಾಗಿದೆ. ಅದನ್ನು ಇಬ್ಬರೂ ಒಬ್ಬರಿಗೊಬ್ಬರು ಹೇಳಿಕೊಂಡು ಮನಸ್ಸು ನಿರಾಳತೆ ಭಾವ ಇಬ್ಬರಲ್ಲೂ ಮೂಡಿದೆ. ಇದೀಗ ಲೀಲಾ ಏಜೆ ಇಬ್ಬರು ಗೆಳೆಯರಾಗಿ ಇರಲು ನಿರ್ಧರಿಸಿದ್ದಾರೆ ಹಾವು ಮುಂಗುಸಿಯಂತೆ ಆಡುತ್ತಿದ್ದ ಇವರು ಇದೀಗ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದೀಗ ಇಬ್ಬರು ಸ್ನೇಹಿತರಾಗಿದ್ದಾರೆ. ಇವರ ಸ್ನೇಹ ಪ್ರೀತಿಗೆ ತಿರುಗುತ್ತಾ? ಎಂಬುವುದು ಈ ಸೀರಿಯಲ್ ವೀಕ್ಷಕರ ಬಹುದೊಡ್ಡ ಪ್ರಶ್ನೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಇನ್ನೊಂದು ಕಡೆ ಮೂವರು ಸೊಸೆಯರನ್ನು ಮನೆಯಿಂದ ಕೊಂಚ ದೂರ ಉಳಿಸಿ ಅವರ ಅಹಂಕಾರ ತೊಡೆದು ಹಾಕಲು ಏಜೆ, ಲೀಲಾ ನಿರ್ಧರಿಸಿದ್ದಾರೆ. ಈ ಬಗ್ಗೆ ಅಮ್ಮನ ಬಳಿ ಮಾತನಾಡಿದ ಲೀಲಾ ಅಮ್ಮ ಈ ಮನೆಗೆ ಮೂವರು ನನ್ನ ಸೊಸೆಯಂದಿರು ಬಂದರೆ ನಿನಗೆ ಏನಾದರು ಕಷ್ಟ ಇದೆಯಾ ಎಂದು ಕೇಳುತ್ತಾಳೆ. ಅದಕ್ಕೆ ಕೌಸಲ್ಯ ಬಹಳ ಖುಷಿ ಪಡುತ್ತಾಳೆ. ಸೊಸೆಯಂದಿಗೆ ಇರುವ ಅಹಂಕಾರವನ್ನು ತೊಡೆದು ಹಾಕಲು ಅಮ್ಮನೇ ಸರಿ ಎಂದು ಯೋಚಿಸಿ ಅಮ್ಮನ ಬಳಿ ಚರ್ಚೆ ಮಾಡುತ್ತಾಳೆ.

ಏಕಾಏಕಿ ಹೇಗ್ಹೇಗೋ ಆಡುವ ರತ್ನಮಾಲಾ, ಶಾಕ್ ಆದ ವೀಕ್ಷಕರು!

ಅಮ್ಮನ ಒಪ್ಪಿಗೆ ಸಿಕ್ಕ ಬಳಿಕ ಲೀಲಾಗೆ ಖುಷಿ ಆಗುತ್ತದೆ. ಇನ್ನೂ ಮೂವರು ಸೊಸೆಯಂದಿರು ಮಾತನಾಡುತ್ತಾ ಇರುತ್ತಾರೆ. ಏಜೆ-ಲೀಲಾ ಖಂಡಿತ ಒಂದಾಗುತ್ತಾರೆ ಎಂದು ಲಕ್ಷ್ಮಿ, ಸರು ಆತಂಕ ವ್ಯಕ್ತಪಡಿಸಿದರೆ ದುರ್ಗಾ ಮಾತ್ರ ಅವರಿಬ್ಬರೂ ಕ್ಲೋಸ್ ಆದ ಮೇಲೆ ಅವರಿಬ್ಬರಿಗೂ ಇದೆ ಮಾರಿ ಹಬ್ಬ ಎನ್ನುವ ಹಾಗೆ ಯಾವುದೇ ಆತಂಕ ಇಲ್ಲದೆ ಸುಮ್ಮನಿರುತ್ತಾರೆ. ಸೊಸೆಯಂದಿರ ಬಳಿ ಬಂದ ಏಜೆ ಪಿಎ ವಿಶ್ವರೂಪ್ ಖುಷಿಗಾಗಿ ಹೊರಗೆ ಹೋಗುವ ಸಲಹೆ ನೀಡುತ್ತಾನೆ. ಲಕ್ಷ್ಮಿ ಮತ್ತು ಸರುಗೆ ಒಂದು ತಿಂಗಳು ಎಲ್ಲಾದರೂ ಹೋಗಿ ಬರಬೇಕು ಅನ್ನುವ ಆಸೆ ಇದ್ದರೂ ದುರ್ಗಾ ಮಾತ್ರ ಇದಕ್ಕೆ ಕಲ್ಲು ಹಾಕುತ್ತಾಳೆ.

ಮುಂದೆ ಈ ಸೀರಿಯಲ್ ಏನಾಗಬಹುದು, ಈಗ ಇಬ್ಬರ ನಡುವೆ ಮೂಡಿರುವ ಸ್ನೇಹ ಪ್ರೀತಿಯಾಗಿ ಹೇಗೆ ಬದಲಾಗಬಹುದು ಅನ್ನೋ ಲೆಕ್ಕಾಚಾರದಲ್ಲಿ ವೀಕ್ಷಕರಿದ್ದಾರೆ. ಏಜೆ ಪಾತ್ರದಲ್ಲಿ ದಿಲೀಪ್‌ ರಾಜ್, ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್ ನಟಿಸಿದ್ದಾರೆ.

ದೊರೆಸಾನಿ ಸೀರಿಯಲ್‌ನ ಯಾಕಷ್ಟು ಬೇಗ ಮುಗಿಸಿದ್ರೋ ನಂಗೊತ್ತಿಲ್ಲ ಅಂದು ಭಾವುಕರಾದ ಪೃಥ್ವಿರಾಜ್

Follow Us:
Download App:
  • android
  • ios