Asianet Suvarna News Asianet Suvarna News

ಏಕಾಏಕಿ ಹೇಗ್ಹೇಗೋ ಆಡುವ ರತ್ನಮಾಲಾ, ಶಾಕ್ ಆದ ವೀಕ್ಷಕರು!

ಕನ್ನಡತಿ ಸೀರಿಯಲ್ ನೋಡ್ತಿರುವವರಿಗೆ ಸಡನ್ನಾಗಿ ಬದಲಾದ ಅಮ್ಮಮ್ಮನ ಬಿಹೇವಿಯರ್ ನೋಡಿ ಶಾಕ್ ಆಗಿದೆ. ಒಂದು ವಯಸ್ಸಿನ ನಂತರ ಹಿರಿಯರಲ್ಲಿ ಡಿಮೆನ್ಶಿಯಾ ಸಮಸ್ಯೆ ಆವರಿಸೋದುಂಟು. ಆದರೆ ಅಮ್ಮಮ್ಮ ಅಷ್ಟೆಲ್ಲ ವಯಸ್ಸಾದವರಲ್ಲ, ಏಕಾಏಕಿ ಅವರು ಪುಟ್ಟ ಮಕ್ಕಳ ಹಾಗೆ ಬಿಹೇವ್ ಮಾಡ್ತಿರೋದಕ್ಕೆ ಏನು ಕಾರಣ? ಅವರ್ಯಾಕೆ ಒಗಟೊಗಟಾಗಿ ಮಾತಾಡ್ತಿದ್ದಾರೆ?

In Kannadathi serial Rathnamala got mental problem
Author
Bengaluru, First Published Aug 24, 2022, 11:26 AM IST

ರತ್ನಮಾಲಾ 'ಕನ್ನಡತಿ' ಸೀರಿಯಲ್‌ನ ಪ್ರಮುಖ ಪಾತ್ರ. ಇಲ್ಲೀವರೆಗೆ ಅವರಿಗೆ ದೈಹಿಕ ಸಮಸ್ಯೆ ಇತ್ತು. ಈಗ ಅವರಿಗೆ ಮಾನಸಿಕ ಸಮಸ್ಯೆ ಇರುವ ಥರ ಬಿಂಬಿಸಲಾಗುತ್ತಿದೆ. ಈಗಾಗಲೇ ಭುವಿಗೆ ಹೆಗಲ ಮೇಲೇರಿರುವ ಸಮಸ್ಯೆ ಜೊತೆಗೆ ಇನ್ನೊಂದಿಷ್ಟು ಸಮಸ್ಯೆಗಳೂ ಎದುರಾಗ್ತಿವೆ. ಏಕಾಏಕಿ ರತ್ನಮಾಲಾ ಹೇಗ್ಹೇಗೋ ಆಡ್ತಿದ್ದಾರೆ. ಅವರಿಗೆ ಮರೆವಿನ ಕಾಯಿಲೆ ಶುರುವಾಗ್ತಿದೆ ಅನ್ನೋ ಮಾತು ಬರ್ತಿದೆ. ಇದು ಭುವಿ ಗಮನಕ್ಕೆ ಬಂದು ಅವಳು ರತ್ನಮ್ಮನನ್ನು ನೋಡುವ ರೀತಿಯಲ್ಲಿ ವ್ಯತ್ಯಾಸ ಆಗಿದೆ. ಹರ್ಷ ಭುವಿ ಫಸ್ಟ್ ನೈಟ್ ನಡೆದ ರಾತ್ರಿ ಇದ್ದಕ್ಕಿದ್ದ ಹಾಗೆ ಜೋರಾಗಿ ಟಿವಿ ಸೌಂಡ್ ಬರುತ್ತೆ. ಎದ್ದು ಹೋದ ಭುವಿ ಅಮ್ಮಮ್ಮ ಒಬ್ಬರೇ ಕೂತು ಟಿವಿ ನೋಡ್ತಿರೋದು ಕಂಡು ಶಾಕ್ ಆಗುತ್ತೆ. ಅವಳು ಸೀದ ಹೋಗಿ ಅವರನ್ನು ಮಾತಾಡಿಸಿದರೆ ಅಮ್ಮಮ್ಮ ತನ್ನದಿನ್ನೂ ಊಟವೇ ಆಗಿಲ್ಲ. ತುಂಬ ಹಸಿವಾಗ್ತಿದೆ. ಯಾಕೆ ನೀವ್ಯಾರೂ ನನಗೆ ಊಟ ಕೊಟ್ಟಿಲ್ಲ, ಎಲ್ಲರೂ ನನ್ನ ಮರೆತು ಬಿಡ್ತಿದ್ದೀರಾ ಅನ್ನುವ ಬಗೆಯ ಮಾತುಗಳನ್ನು ಆಡಿದ್ದಾರೆ. ರತ್ನಮ್ಮ ರಾತ್ರಿ ಊಟ ಮಾಡಿದ್ದು ಭುವಿಗೂ ಗೊತ್ತು. ಆದರೆ ಮಾಡಿರುವ ಊಟವನ್ನೇ ಮರೆತಿರುವ ಅವರ ವರ್ತನೆ ಭುವಿಗೆ ಶಾಕ್ ಆಗಿದೆ. ಭುವಿ ಊಟ ಕಲಸಿ ಊಟ ಮಾಡಿಸ್ತಾಳೆ. ಇದ್ದಕ್ಕಿದ್ದಂತೆ ಅಮ್ಮಮ್ಮ ಮನೆಯಿಂದ ಮಾಯ ಆಗಿ ಬಿಟ್ಟಿರ್ತಾರೆ.

ರತ್ನಮ್ಮನನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಬರುವ ಭುವಿ ಅಲ್ಲೆಲ್ಲ ಹುಡುಕಿದರೂ ಅಮ್ಮಮ್ಮ ಕಾಣೋದಿಲ್ಲ. ಇನ್ನೇನು ದೇವಸ್ಥಾನದಿಂದ ಹೊರಡಬೇಕು ಅಂದುಕೊಳ್ಳುವಾಗ ಅವರು ಒಂದು ಮೂಲೆಯಲ್ಲಿ ಕೂತಿರೋದು ಕಾಣುತ್ತೆ. ಯಾವುದೋ ಧ್ಯಾನದಲ್ಲಿ ಮುಳುಗಿರುವಂತೆ ಕೂತಿರುವ ಅಮ್ಮಮ್ಮನ ವರ್ತನೆ ಭುವಿಗೆ ಆತಂಕ, ಅನುಮಾನ ತಂದಿದೆ. ಅವರು ಕೆಲವೊಮ್ಮೆ ಅರ್ಥಪೂರ್ಣವಾಗಿ ಮಾತನಾಡಿದರೆ ಇನ್ನೂ ಕೆಲವೊಮ್ಮೆ ಒಗಟಾಗಿ ಮಾತಾಡ್ತಾರೆ. ಇನ್ನೊಂದೆಡೆ ಸಾನಿಯಾ ರತ್ನಮ್ಮನ ಮೆಮೊರಿ ಟೆಸ್ಟ್ ಮಾಡೋಕೆ ಹೊರಟಿದ್ದಾಳೆ. ಅವರ ಉಂಗುರವನ್ನು ಬಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: kannadathi serial: ಹರ್ಷ ಭುವಿ ಫಸ್ಟ್‌ನೈಟಲ್ಲಿ ಮತ್ತೆ ಅಡ್ಡ ಬಂತು ತುರಿಮಣೆ!

ಜೊತೆಗೆ ಮಾತಿನ ನಡುವೆ ನನಗೇನೂ ಮರೆವಿನ ರೋಗ ಬಂದಿಲ್ಲ ಅನ್ನುತ್ತಿದ್ದಾರೆ. ಆದರೆ ಅವರಿಗೆ ನಿನ್ನೆ ದೇವಸ್ಥಾನಕ್ಕೆ ಬಂದಿದ್ದೂ ನೆನಪಿಲ್ಲ. ಫೋನ್ ರಿಂಗಾಗ್ತಿರೋದೂ ಅವರ ಗಮನಕ್ಕೆ ಬಂದ ಹಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಾನಿಯಾ ಅವರನ್ನು ಕೊಲೆ ಮಾಡಲು ಯತ್ನಿಸಿರುವ ವೀಡಿಯೋ ಇರುವ ಮೊಬೈಲ್‌ನ ಪಾಸ್‌ವರ್ಡ್‌ನೇ ಅವರು ಮರೆತುಬಿಟ್ಟಿದ್ದಾರೆ. ಯಾವತ್ತೋ ನೆನಪಾಗುತ್ತೆ. ಆಗ ಭುವಿಯಿಂದ ಮೊಬೈಲ್ ತಗೊಳ್ತೀನಿ, ಅಲ್ಲೀವರೆಗೆ ಇದನ್ನು ಜೋಪಾನ ಮಾಡು ಎಂದಿರ್ತಾರೆ.

 

ಈಗಷ್ಟೇ ಮದುವೆಯಾಗಿ ಬಂದಿರುವ ವಧು ಭುವಿಯ ಮೇಲೆ ಬೀಳ್ತಿರುವ ಭಾರ ಈ ಸೀರಿಯಲ್‌ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಸೀರಿಯಲ್‌ ಪ್ರೋಮೋಗೆ ಪ್ರತಿಕ್ರಿಯಿಸಿರುವ ಸಾಕಷ್ಟು ಜನ ಭುವಿಯ ಮೇಲೆ ಹೊರಿಸಿರುವ ಜವಾಬ್ದಾರಿ ಅತಿಯಾಯ್ತು. ಈ ಸೀರಿಯಲ್‌ ನೋಡಿದವರಿಗೆಲ್ಲ ಮದುವೆ ಬಗ್ಗೆ ಇರುವ ರಮ್ಯ ಕಲ್ಪನೆಗಳೆಲ್ಲ ಹೋಗಿ ಮದುವೆ ಅಂದರೆ ಬರೀ ಜವಾಬ್ದಾರಿ ಮತ್ತು ಕಷ್ಟ ಅನ್ನೋ ಥರ ಆಗಿದೆ. ಮದುವೆಯ ಬಳಿಕ ಜವಾಬ್ದಾರಿ ಬರುತ್ತೆ ನಿಜ, ಆದರೆ ಈ ಲೆವೆಲ್‌ಗಲ್ಲ, ಮದುವೆಯ ಬಳಿಕ ಖುಷಿಯೂ ಇರುತ್ತೆ. ಅದನ್ನೂ ತೋರಿಸಬೇಕಲ್ವಾ? ಅಂತ ಹೇಳಿದ್ದಾರೆ. ಫಸ್ಟ್‌ನೈಟ್ ದಿನವೂ ಭುವಿ ಅತ್ತೆಯ ಸೇವೆ ಮಾಡೋದು, ಮರುದಿನವೂ ಊರಿಗೆ ಮೊದಲೇ ಎದ್ದು ಅಮ್ಮಮ್ಮನನ್ನ ಹುಡುಕಿಕೊಂಡು ಹೋಗೋದು ಹಲವರಿಗೆ ಅಸಹನೀಯ ಅನಿಸಿದೆ. ಇದೀಗ ಅಮ್ಮಮ್ಮನಿಗೂ ಮಾನಸಿಕ ಸಮಸ್ಯೆ ಶುರುವಾಗಿರುವ ಕಾರಣ ಇನ್ನು ಮೇಲಂತೂ ಅವಳದು ಕ್ಷಣ ಕ್ಷಣವೂ ಹೋರಾಟವೇ. ಮದುವೆ ತನಕ ಅವಳು ಕಷ್ಟಗಳ ಸರಮಾಲೆಯಲ್ಲಿ ಬೆಳೆದರೆ, ಮದುವೆಯ ನಂತರ ಇನ್ನೊಂದು ಬಗೆಯ ಕಷ್ಟಗಳು. ಬರೀ ಕಷ್ಟಗಳನ್ನೇ ತೋರಿಸ್ತಾ ಹೋದರೆ ಸೀರಿಯಲ್‌ ಬಗ್ಗೆ ಆಸಕ್ತಿ ಹೋಗುತ್ತೆ ಅನ್ನೋದು ಈ ಸೀರಿಯಲ್ ಫ್ಯಾನ್ಸ್ ಅಭಿಪ್ರಾಯ. ಚಿತ್ಕಲಾ ಬಿರಾದಾರ್ ರತ್ನಮ್ಮನಾಗಿ ಅತ್ಯುತ್ತಮ ಅಭಿನಯ ನೀಡಿದರೆ, ಭುವಿ ಪಾತ್ರದಲ್ಲಿ ರಂಜನಿ ರಾಘವನ್, ಹರ್ಷನಾಗಿ ಕಿರಣ್‌ರಾಜ್ ನಟಿಸುತ್ತಿದ್ದಾರೆ.

ಇದನ್ನೂ ಓದಿ: ದೊರೆಸಾನಿ ಸೀರಿಯಲ್‌ನ ಯಾಕಷ್ಟು ಬೇಗ ಮುಗಿಸಿದ್ರೋ ನಂಗೊತ್ತಿಲ್ಲ ಅಂದು ಭಾವುಕರಾದ ಪೃಥ್ವಿರಾಜ್

Follow Us:
Download App:
  • android
  • ios