Asianet Suvarna News Asianet Suvarna News

ನಾನು ಯಾವ ಆಡಿಷನ್‌ ಕೊಟ್ಟಿಲ್ಲ, ಮಾಕ್ ಶೂಟಿಂಗ್ ಮಾಡಿಲ್ಲ: ಕಿರುತೆರೆ ವಿಲನ್ ಅನಿಖಾ ಸಿಂಧ್ಯಾ

ತೆರೆ ಮೇಲೆ ವಿಲನ್ ಆಗಿ ಮಿಂಚುವ ಅನಿಖಾ ಸಿಂಧ್ಯಾ ತಮ್ಮ ಜರ್ನಿ ಬಗ್ಗೆ ರಿವೀಲ್ ಮಾಡಿದ್ದಾರೆ.

I never gave audition or did mock shoot says Anikha Sindhya vcs
Author
First Published Dec 2, 2023, 3:54 PM IST

ಕನ್ನಡ ಕಿರುತೆರೆಯ ಖಡಕ್ ವಿಲನ್ ಆಗಿ ಗುರುತಿಸಿಕೊಂಡಿರುವ ಅನಿಖಾ ಸಿಂಧ್ಯಾ ಯಾವ ಆಡಿಷನ್ ನೀಡದೆ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಈ ವೃತ್ತಿಯಲ್ಲಿ 17 ವರ್ಷ ಪೂರೈಸಿರುವ ನಟಿ ತಮ್ಮ ಜರ್ನಿ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. 

'ಕಾದಂಬರಿ ಧಾರಾವಾಹಿಯಲ್ಲಿ ವಿಲನ್‌ ಪಾತ್ರದ ಮೂಲಕ ನಟನೆ ಲೋಕಕ್ಕೆ ಕಾಲಿಟ್ಟೆ. ಅಲ್ಲಿಂದ ಸಾಕಷ್ಟು ಶೋಗಳು ಮತ್ತು ಸಿನಿಮಾಗಳಲ್ಲಿ ನಟಿಸುತ್ತಿರುವೆ. ಆ ನನಗೆ ಇದ್ದ ಸ್ನೇಹಿತರು ಈ ಅವಕಾಶ ಸಿಗದೆ ಕಷ್ಟ ಪಡುತ್ತಿದ್ದಾರೆ ಆದರೆ ನಾನು ಈಗಲೂ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿರುವೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಅನಿಖಾ ಮಾತನಾಡಿದ್ದಾರೆ. 

ರಾಯಚೂರಿನ ಎಲೆಕ್ಷನ್‌ನಲ್ಲಿ ಕೆಟ್ಟದಾಗಿ ಸೋತೆ; ರಮ್ಯಾ ಟ್ವೀಟ್‌ ಬಗ್ಗೆ ಪೂಜಾ ಗಾಂಧಿ ಮಾತು

'ಯಾರೂ ನಂಬುವುದಿಲ್ಲ ನನ್ನ ವೃತ್ತಿ ಜೀವನ ಆರಂಭಕ್ಕೂ ಮುನ್ನ ಎಲ್ಲೂ ಆಡಿಷನ್ ಕೊಟ್ಟಿಲ್ಲ. ಒಂದು ಶೋನಲ್ಲಿ ನನ್ನ ನಟನೆ ನೋಡಿ ಮತ್ತೊಬ್ಬರು ಕರೆದು ಅವಕಾಶ ಕೊಡುತ್ತಿದ್ದರು. ಸದಾ ಒಂದಲ್ಲ ಒಂದು ಧಾರಾವಾಹಿ ಶೂಟಿಂಗ್ ಅಂತ ಬ್ಯುಸಿಯಾಗಿರುತ್ತಿದ್ದೆ. ಆದರೆ ಈಗ ಲುಕ್‌ ಟೆಸ್ಟ್‌ ನಡೆದ ಮೇಲೆ ಆ ಪಾತ್ರಕ್ಕೆ ಸೂಕ್ತನಾ ಅನ್ನೋ ನಿರ್ಧಾರ ಆಗುತ್ತದೆ. ಶೂಟಿಂಗ್ ಆರಂಭಕ್ಕೂ ಮುನ್ನ ವರ್ಕ್‌ಶಾಪ್ ಮತ್ತು ಮಾಕ್ ಶೂಟಿಂಗ್ ಮಾಡುತ್ತಾರೆ. ಶೂಟಿಂಗ್ ಸಮಯದಲ್ಲಿ ಸುಲಭವಾಗಿ ಸೀನ್ ಬರಲಿ ಎಂದು ಹೀಗೆ ಮಾಡಲಾಗುತ್ತದೆ. ನನ್ನ ವೃತ್ತಿ ಬದುಕು ಆರಂಭಿಸುವ ಸಮಯದಲ್ಲಿ ಈ ಲುಕ್ ಟೆಸ್ಟ್‌ ಅಥವಾ ಮಾಕ್ ಶೂಟಿಂಗ್ ಯಾವುದು ಇರಲಿಲ್ಲ' ಎಂದು ಅನಿಖಾ ಹೇಳಿದ್ದಾರೆ. 

'ಹಿಂದಿನ ಸಮಯದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟ ಆಗಿತ್ತು. ಹಲವಾರು ಆರ್ಟಿಸ್ಟ್‌ಗಳು ತುಂಬಾ ಕಾಯುತ್ತಿದ್ದರು. ಸೋಷಿಯಲ್ ಮೀಡಿಯಾ ಇರುವ ಕಾರಣ ಈ ಎಲ್ಲವೂ ಬದಲಾಗಿದೆ. ಡಿಜಿಟಲ್ ಆಗಿ ಜನರು ಕನೆಕ್ಟ್ ಆಗುತ್ತಿದ್ದಾರೆ' ಎಂದಿದ್ದಾರೆ ಅನಿಖಾ. 

'ರಾಧಾ ರಮಣ' ಕಾವ್ಯಾ ಗೌಡ ಪ್ರೆಗ್ನೆಂಟ್; ವಿದೇಶಕ್ಕೆ ಹಾರಿದ ನಟಿ, ಬಂಪ್ ಫೋಟೋ ವೈರಲ್

'ಸುಮಾರು ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದರೂ ಈಗ ಬರುತ್ತಿರುವ ಹೊಸ ಕಲಾವಿದರಿಂದ ಕಲಿಯುವುದಕ್ಕೆ ಒಂದಾದರೂ ವಿಷಯ ಇರುತ್ತದೆ. ನಟ ಮತ್ತು ಮೇಕಪ್ ಮೇಲೆ ಗೌರವ ಮತ್ತು ಶ್ರಮ ಸದಾ ಇರುತ್ತದೆ. ಎಂದೂ ಶೂಟಿಂಗ್ ಟೈಮ್ ಮತ್ತು ಶೆಡ್ಯೂಲ್ ಮಿಸ್ ಮಾಡುವುದಿಲ್ಲ. ತೆಲೆ ಮೇಲೆ ಸದಾ ವಿಲನ್ ತರ ಕಾಣಿಸಿಕೊಳ್ಳುತ್ತಿದ್ದೆ ಆದರೆ ಈಗ ಜನರಿಗೆ ಅರ್ಥವಾಗಿ ನಾನು ಆನ್‌ ಸ್ಕ್ರೀನ್‌ ಮಾತ್ರ ಹಾಗೆ ಇರುವುದು  ಎಂದು. ನನ್ನ ನಿಜ ಜೀವನದ ಬಗ್ಗೆ ತಿಳಿದ ಮೇಲೆ ತುಂಬಾ ಪ್ರೀತಿ ಕೊಡುತ್ತಾರೆ' ಎಂದು ಅನಿಖಾ ಹೇಳಿದ್ದಾರೆ.

Follow Us:
Download App:
  • android
  • ios