- Home
- Entertainment
- Sandalwood
- ರಾಯಚೂರಿನ ಎಲೆಕ್ಷನ್‌ನಲ್ಲಿ ಕೆಟ್ಟದಾಗಿ ಸೋತೆ; ರಮ್ಯಾ ಟ್ವೀಟ್ ಬಗ್ಗೆ ಪೂಜಾ ಗಾಂಧಿ ಮಾತು
ರಾಯಚೂರಿನ ಎಲೆಕ್ಷನ್‌ನಲ್ಲಿ ಕೆಟ್ಟದಾಗಿ ಸೋತೆ; ರಮ್ಯಾ ಟ್ವೀಟ್ ಬಗ್ಗೆ ಪೂಜಾ ಗಾಂಧಿ ಮಾತು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಪೂಜಾ ಗಾಂಧಿ ವಿಡಿಯೋ. ತನ್ನ ಪರ ರಮ್ಯಾ ನಿಂತ ಘಟನೆ ಹೇಳಿದ ಪೂಜಾ...

ಮಳೆ ಹುಡುಗಿ ಪೂಜಾ ಗಾಂಧಿ ಕೆಲವು ದಿನಗಳ ಹಿಂದೆ ಕನ್ನಡದಲ್ಲಿ ರಮ್ಯಾ ಅಂದ್ರೆ ಯಾಕೆ ಇಷ್ಟ ಅಂತ ಬರೆದುಕೊಂಡಿದ್ದರು. ಮೊದಲ ಸಲ ರಮ್ಯಾ ಬಗ್ಗೆ ಮಾತನಾಡಿದ್ದಾರೆ.
'ನನಗೆ ರಮ್ಯಾ ಮೇಲೆ ತುಂಬಾ ಗೌರವ ಇದೆ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿ ರಮ್ಯಾ ತುಂಬಾ ಹೆಸರು ಮಾಡಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪೂಜಾ ಮಾತನಾಡಿದ್ದಾರೆ.
ಜೀವನದಲ್ಲಿ ತುಂಬಾ ನಿಷ್ಠೆ ಮತ್ತು ಶ್ರಮದಿಂದ ಸಾಧನೆ ಮಾಡಿ ಮೇಲೆ ಬಂದಿದ್ದಾರೆ. ನನ್ನ ಜೀವನದ ಒಂದು ಸಂದರ್ಭವನ್ನು ಹೇಳಲು ಇಷ್ಟ ಪಡುತ್ತೀನಿ.
ನಾನು ರಾಯಚೂರಿನಲ್ಲಿ ಎಲೆಕ್ಷನ್‌ಗೆ ನಿಂತಾಗ ತುಂಬಾ ಕೆಟ್ಟ ರೀತಿಯಲ್ಲಿ ಸೋತ್ತಿದ್ದೆ. ಆ ಸಮಯದಲ್ಲಿ ರಮ್ಯಾ ನನ್ನ ಪರ ನಿಂತರ. ನನಗೋಸ್ಕರ ಒಂದು ಟ್ವಿಟ್ ಮಾಡಿದ್ದರು.
ಒಂದು ಹೆಣ್ಣುಮಗಳು ಪ್ರಯತ್ನ ಪಟ್ಟಿದ್ದಾರೆ ಅಲ್ವಾ ಅದಕ್ಕೆ ನಾವು ಖುಷಿ ಪಡಬೇಕು. ನಾನು ರಮ್ಯಾ ಭೇಟಿ ಮಾಡಿದಾಗಲೆಲ್ಲಾ ತುಂಬಾ ಪ್ರೀತಿಯಿಂದ ತಂಬಾ ಗೌರವದಿಂದ ಮಾತನಾಡಿಸುತ್ತಾರೆ.
ಹೆಣ್ಣು ಮಕ್ಕಳಿಗೆ ತುಂಬಾ ಸಪೋರ್ಟ್ ಮಾಡ್ತಾರೆ. ರಮ್ಯಾ ಅವರಲ್ಲಿ ಇರುವ ಗುಣಗಳು ನನಗೆ ತುಂಬಾ ಇಷ್ಟ. ಎಲ್ಲರೂ ರಮ್ಯಾನ ಪ್ರೀತಿ ಮಾಡುತ್ತಾರೆ ನಾನು ಪ್ರೀತಿ ಮಾಡುತ್ತೀನಿ ಎಂದು ಪೂಜಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.