ನಾನು ಪ್ರತಿಯೊಂದನ್ನು ಡಿಲೀಟ್ ಮಾಡಿದೆ, ದಯವಿಟ್ಟು ನನ್ನನ್ನು ಬೆಳೆಯಲು ಬಿಡಿ; ಕಣ್ಣೀರಿಟ್ಟ ವರುಣ್ ಆರಾಧ್ಯ

ವರ್ಷ ಕಾವೇರಿ ಕಂಪ್ಲೇಂಟ್‌ ಬಗ್ಗೆ ಸ್ಪಷ್ಟನೆ ನೀಡಿದ ವರುಣ್ ಆರಾಧ್ಯ. ದಯವಿಟ್ಟು ಸರಿ ತಪ್ಪು ತಿಳಿದುಕೊಂಡು ಪೋಸ್ಟ್ ಮಾಡಿ ಎಂದು ಮನವಿ ಮಾಡಿದ ನಟ.....
 

I have deleted all the video support me to grow breaks down actor Varun Aradya vcs

ಬೃಂದಾವನ ಧಾರಾವಾಹಿ ಖ್ಯಾತಿಯ ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್‌ ಫ್ರೆಂಡ್ ವರ್ಷ ಕಾವೇರಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ, ಖಾಸಗಿ ವಿಡಿಯೋ ಮತ್ತು ಫೋಟೋ ಲೀಕ್ ಮಾಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು. ಆದರೆ ವರ್ಷ ಕಾವೇರಿ ಯಾವ ಕಾರಣಕ್ಕೆ ದೂರು ನೀಡಿರುವುದು, ನಿಜಕ್ಕೂ ಏನಾಗಿದೆ ಎಂದು ವರುಣ್ ವಿಡಿಯೋ ಮಾಡಿದ್ದಾರೆ. 

'ಸೋಷಿಯಲ್ ಮೀಡಿಯಾದಲ್ಲಿ ನ್ಯೂಸ್ ಚಾನೆಲ್‌ಗಳಲ್ಲಿ ಮತ್ತು ಪೇಪರ್‌ಗಳಲ್ಲಿ ನೀವು ನೋಡುತ್ತಿದ್ದೀರಾ...ಬೃಂದಾವನ ಸೀರಿಯಲ್‌ ನಾಯಕ ವರುಣ್ ಆರಾಧ್ಯ ಒಬ್ರು ಮೇಲೆ ಕೊಲೆ ಬೆದರಿಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ...ಸದ್ಯ ಪೊಲೀಸ್ ಅರೆಸ್ಟ್ ಮಾಡಿದ್ದಾರೆ ಜೈಲಿನಲ್ಲಿ ಇದ್ದಾನೆ ಎಂದು ಎಲ್ಲೆಡೆ ಹರಿದಾಡುತ್ತಿದೆ. ಯಾಕೆ? ನಾನು ನಮ್ಮ ಮನೆಯಲ್ಲಿ ಇದ್ದೀನಿ ಆ ವ್ಯಕ್ತಿ ಅವರ ಮನೆಯಲ್ಲಿ ಇದ್ದಾರೆ. ನಮ್ಮಿಬ್ಬರ ನಡುವೆ ಏನಾಗಿದೆ ಎಂದು ಕೇಳಿಕೊಂಡು ಸುದ್ದಿ ಮಾಡಿ ಯಾಕೆ ಸುಳ್ಳು ಸುದ್ದಿ ಹಾಕುತ್ತಿದ್ದೀರಾ? ನಿನ್ನೆ ಆ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಒಂದು ಮನವಿ ಮಾಡಿದ್ದಾರೆ...ಏನೆಂದರೆ 2018ರಂದು ನಾವಿಬ್ಬರು ಕ್ಲೋಸ್ ಆಗಿದ್ದಾಗ ಮಾಡಿದ್ದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಲು ಮನವಿ ಮಾಡಿದ್ದರು. ನಾನು ಬ್ಯುಸಿ ಇದ್ದ ಕಾರಣ ಪ್ರತಿಯೊಂದನ್ನು ಡಿಲೀಟ್ ಮಾಡಿರಲಿಲ್ಲ ಸ್ವಲ್ಪ ಮಾಡಿದ್ದೆ' ಎಂದು ವರುಣ್ ಆರಾಧ್ಯ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕ್ಲಾರಿಟಿ ನೀಡಿದ್ದಾರೆ.

ಮೂರ್ನಾಲ್ಕು ಚಿತ್ರಕ್ಕೆ 1 ಲಕ್ಷ ಕೊಟ್ರು, ಜಾಹೀರಾತಿನಲ್ಲಿ 7 ಸಾವಿರ ಬಂತು; ಸಂಭಾವನೆ ಗುಟ್ಟು ರಟ್ಟು ಮಾಡಿದ ಹಿತಾ!

'ಅಲ್ಲದೆ ನಮ್ಮ ಫ್ಯಾನ್ ಪೇಜ್‌ಗಳು ಅದನ್ನು ಪದೇ ಪದೇ ಪೋಸ್ಟ್ ಮಾಡುತ್ತಿರುವ ಕಾರಣ ಮನವಿ ಮಾಡಿದ್ದರು...ಇದರಿಂದ ಅವರು ಮದುವೆ ಆದರೆ ಸಮಸ್ಯೆ ಆಗುತ್ತದೆ ಅಥವಾ ಮುಂದೆ ನಾನು ಮದುವೆ ಆಗುವ ಸಮಯ ಬಂದಾಗ ತೊಂದರೆ ಆಗುತ್ತದೆ ಎಂದು ಈ ನಿರ್ಧಾರ ತೆಗೆದುಕೊಂಡಿರುವುದು. ಠಾಣೆಯಲ್ಲಿ ಇಬ್ಬರು ಪರಸ್ಪರ ಮಾತನಾಡಿಕೊಂಡು ಪೊಲೀಸರ ಮುಂದೆನೇ ಡಿಲೀಟ್ ಮಾಡಿದ್ದೀವಿ. ನನ್ನ ಜೀವನ ಮುಂದೆ ನಡೆಯಬೇಕು....ಆದರೆ ನೀವು ಬಂದು ಕಲ್ಲು ಹಾಕುತ್ತಲೇ ಇದ್ದೀರಾ....ನಮ್ಮ ಮನೆಯಲ್ಲಿ ಅಮ್ಮ ಅಕ್ಕ ಮತ್ತು ಪ್ರತಿಯೊಬ್ಬರು ಸಿಕ್ಕಾಪಟ್ಟೆ ನೊಂದಿದ್ದಾರೆ. ಏನೂ ತಪ್ಪು ಮಾಡಿಲ್ಲ ಅಂದ್ರೂ ಪದೇ ಪದೇ ನನ್ನ ಮೇಲೆ ಕಪ್ಪು ಹೇಳಿಕೆಗಳನ್ನು ಹಾಕುತ್ತಲೇ ಇದ್ದಾರೆ. ಕಷ್ಟ ಪಟ್ಟು ಬೆಳೆಯಬೇಕು ಅಂತ ಇದ್ದೀನಿ ಆದರೆ ಪ್ರತಿಯೊಬ್ಬರು ಅದನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದೀರಿ' ಎಂದು ವರುಣ್ ಆರಾಧ್ಯ ಹೇಳಿದ್ದಾರೆ.

ಯೂಟ್ಯೂಬ್ ಒಂದೇ ಅಲ್ಲ 12-13 ಮನೆಗಳ ಬಾಡಿಗೆ ಬರುತ್ತೆ; ಆದಾಯ ಎಷ್ಟಿದೆ ಎಂದು ಬಾಯಿಬಿಟ್ಟ ಮಧು ಗೌಡ!

'ನಮ್ಮ ಮನೆಯಲ್ಲಿ ಅಮ್ಮ ಅಕ್ಕ ಮತ್ತು ಪುಟ್ಟ ಹುಡುಗಿ ಇದ್ದಾಳೆ...ನಾನು ಯಾಕೆ ಬೇರೆ ಅವರ ಮನೆ ಹೆಣ್ಣುಮಗಳ ಮೇಲೆ ಆ ರೀತಿ ವರ್ತಿಸಲಿ. ಮನೆಯವರಿಗೆ ಬೇಸರ ಆದಾಗ ಕೈ ಕಾಲು ನಡುಗುತ್ತದೆ. ಕೈ ಮುಗಿದು ಕೇಳಿಕೊಳ್ಳುತ್ತೀನಿ...ನನ್ನನ್ನು ಇಲಿವರೆಗೂ ಬೆಳೆಸಿಕೊಂಡು ಬಂದಿದ್ದೀರಾ...ಜೀವನದಲ್ಲಿ ಇನ್ನು ಸಾಧನೆ ಮಾಡಬೇಕು ಅನ್ನೋದು ನನ್ನ ಗುರಿಯಾಗಿದೆ ಅದು ಬಿಟ್ಟು ನಾನು ಬ್ಲಾಕ್ ಮೇಲ್ ಮಾಡುವುದು ಅದು ಇದು ಏನೂ ಇಲ್ಲ. ಏನೋ ಸಣ್ಣ ಗೊಂದಲದಿಂದ ನಾವು ಬ್ರೇಕಪ್ ಮಾಡಿಕೊಂಡಿರುವುದು ಅದು ಬೇರೆ ಜೀವನ ನಡೆಸುತ್ತಿದ್ದಾರೆ ನಾನು ಬೇರೆ ಜೀವನ ನಡೆಸುತ್ತಿರುವೆ..... ತುಂಬಾ ಅಂದ್ರೆ ತುಂಬಾ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿಲು ಹೇಳಿರುವುದು. ಜೀವನದಲ್ಲಿ ನಾವು ಮುಂದೆ ಬರಬೇಕು ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದ್ದೀನಿ' ಎಂದಿದ್ದಾರೆ ವರುಣ್.

Latest Videos
Follow Us:
Download App:
  • android
  • ios