ಲಕ್ಷ್ಮೀ ನಿವಾಸದ ಸೈಕೋ ಜಯಂತ ಮತ್ತು ಆತನ ಚಿನ್ನುಮರಿ ಶೂಟಿಂಗ್ ಸೆಟ್‌ನಲ್ಲಿ ಹೇಗಿರ್ತಾರೆ ನೋಡಿ. ಇವರ ತರಲೆಗೆ ನಿಮ್ಗೂ ನಗು ಬರಬಹುದು.

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸದ್ಯ ಜಯಂತ ಮತ್ತು ಚಿನ್ನುಮರಿ ಎಪಿಸೋಡ್‌ ಹೆಚ್ಚು ಹುಚ್ಚುತನಗಳಿಲ್ಲದೇ ಬರ್ತಿದೆ. ಈ ಮೊದಲು 'ಲಕ್ಷ್ಮೀ ನಿವಾಸ'ದ ಜಯಂತನ ಸೈಕೋ ಅವತಾರ ಕಂಡು ಸೀರಿಯಲ್‌ ಪ್ರಿಯರೆಲ್ಲ ಬೆಚ್ಚಿಬಿದ್ದವರೇ. ಆತನಿಗೆ ಗಂಟೆಗಟ್ಟಲೆ ಕ್ಲಾಸ್ ತಗೊಂಡವರೇ. ಇಂಥಾ ಪಾತ್ರಗಳನ್ನು ಯಾಕೆ ತರ್ತೀರಿ ಅಂತ ನಿರ್ದೇಶಕರಿಗೆ ಕ್ಲಾಸ್ ತಗೊಂಡವ್ರಿಗಂತೂ ಲೆಕ್ಕ ಇಲ್ಲ. ಇದರ ಜೊತೆಗೆ ಇಂಥವರು ನಮ್ಮ ಮನೆಯಲ್ಲೂ ಇದ್ದರು, ನಾನು ಬಿಟ್ಟು ಬಂದೆ ಅಂತಲೋ, ಇಂಥವರ ಜೊತೆ ದಿನಾ ಏಗ್ತಾ ಇದ್ದೀನಿ ಅಂತಲೋ ಹೇಳುವ ಕೆಲವು ಮಂದಿಯೂ ಈ ಸೀರಿಯಲ್ ಅಭಿಮಾನಿ ಸಂಘದಲ್ಲಿ ಸೇರಿಕೊಂಡರು. ಆದರೆ ಇವರನ್ನು ಬಾಯಿಗೆ ಬಂದ ಹಾಗೆ ಬೈಯ್ಯುವವರೂ, ಇವರ ಜೊತೆ ತಮ್ಮ ಲೈಫಿನ ಕೆಲವರನ್ನು ಹೋಲಿಸಿ ಕಣ್ಣೀರು ಹಾಕುವವರೂ, ತಟಸ್ಥರಾಗಿ ಇರುವವರೂ ಈ ಎಲ್ಲರೂ ಸೀರಿಯಲ್‌ ನೋಡೋದನ್ನಂತೂ ಬಿಡಲಿಲ್ಲ. ಹೀಗಾಗಿ ಈ ಸೀರಿಯಲ್‌ ಸುಮಾರು ದಿನ ಟಿಆರ್‌ಪಿಯಲ್ಲಿ ನಂ.೧ ಸ್ಥಾನದಲ್ಲೇ ಇತ್ತು. ಇದರಲ್ಲಿರುವ ಅನೇಕ ಕಥೆಯಲ್ಲಿ ಎಳೆಗಳೂ ಇಂಟರೆಸ್ಟಿಂಗೇ ಆಗಿದ್ದವು. ಆದರೆ ಜನ ಹುಚ್ಚರಂತೆ ಬೈಯ್ಯುತ್ತಲೇ ನೋಡುತ್ತಿದ್ದದ್ದು ಈ ಜಾನು ಮತ್ತು ಜಯಂತ ಅಂದರೆ ಚಿನ್ನುಮರಿ ಮತ್ತು ಸೈಕೋ ಜಯಂತ ಜೋಡಿಯನ್ನು. 

ಸ್ಕ್ರೀನ್‌ ಮೇಲಂತೂ ಜಯಂತ, ಚಿನ್ನುಮರಿ ಎಪಿಸೋಡ್ ಸಖತ್ ಫೇಮಸ್ಸು. ಆದರೆ ಆಫ್‌ ಸ್ಕ್ರೀನ್‌ನಲ್ಲಿ ಅವರಿಬ್ಬರು ಹೇಗಿರ್ತಾರೆ? ಅವರ ನಡುವೆ ಫ್ರೆಂಡ್‌ಶಿಪ್‌ ಹೇಗಿದೆ? ಅವರಿಬ್ಬರೂ ಸೆಟ್‌ನಲ್ಲಿ ಉಳಿದವರ ಜೊತೆ ಬೆರೀತಾರಾ? ಸೀರಿಯಸ್ ಆಗಿರ್ತಾರ ಇಲ್ಲ ಕಾಮಿಡಿ ಮಾಡ್ತಿರ್ತಾರ ಅನ್ನೋ ಡೌಟ್‌ಗಳೆಲ್ಲ ಈ ಸೀರಿಯಲ್‌ ನೋಡೋ ಮಂದಿಗೆ ಬಂದೇ ಇರುತ್ತವೆ. ಇವರ ಬಗ್ಗೆ ಅವರಿಗೆ ಕ್ಯೂರಿಯಾಸಿಟಿನೂ ಇರುತ್ತೆ. ಇದಕ್ಕೆ ಉತ್ತರ ಅನ್ನೋ ಹಾಗೆ ಚಿನ್ನುಮರಿ ಮತ್ತು ಸೈಕೋ ಜಯಂತ ಸೆಟ್‌ನಲ್ಲಿ ಹೇಗಿರ್ತಾರೆ ಅನ್ನೋ ವೀಡಿಯೋ ಸೋಷಲ್‌ ಮೀಡಿಯಾದಲ್ಲಿ ಒಂದಿಷ್ಟು ದಿನದ ಹಿಂದೆ ಓಡಾಡ್ತಿತ್ತು. ಈಗಂತೂ ಸಖತ್ ವೈರಲ್ ಆಗ್ತಿದೆ. 

ಸೀರಿಯಲ್‌ ನೋಡಿ ಅಜ್ಜಿ ನನ್ನನ್ನು ಹೊಡೆಯಲು ಬರೋದೊಂದೇ ಬಾಕಿ! ಆ ದಿನ ನೆನೆದ ಪುಟ್ಟಕ್ಕನ ಮಕ್ಕಳು ರಾಧಾ

ಈ ವೀಡಿಯೋದಲ್ಲಿ ಜಾನು ಪಾತ್ರ ಮಾಡೋ ಚಂದನಾ ಅನಂತಕೃಷ್ಣ ಸೆಟ್‌ನಲ್ಲಿ ಸಖತ್ ಲೈವ್ಲಿ ಆಗಿರ್ತಾರೆ. ಜಯಂತ್ ಪಾತ್ರ ಮಾಡೋ ದೀಪಕ್ ಇವರ ಕಾಲೆಳೀತಾ ತಮಾಷೆ ಮಾಡ್ತಾ ಇರ್ತಾರೆ. ಆನ್‌ಸ್ಕ್ರೀನ್‌ನಲ್ಲಿ ಇವರಿಬ್ಬರನ್ನು ಆತಂಕದಿಂದ ನೋಡಬೇಕಾದ್ರೆ ಆಫ್‌ಸ್ಕ್ರೀನ್‌ನಲ್ಲಿ ಹೊಟ್ಟೆ ಹಣ್ಣಾಗೋ ಹಾಗೋ ನಗ್ತಾ ನಗ್ತಾ ನೋಡಬಹುದು. ಡೈಲಾಗ್‌ಗಳನ್ನು ಆಗಾಗ ಮರೆಯುತ್ತ, ಉದ್ದುದ್ದು ಡೈಲಾಗ್ ಹೇಳೋದಕ್ಕೆ ಒದ್ದಾಡ್ತಾ ಇರುವ ಜಾಹ್ನವಿ ಪಾತ್ರಧಾರಿ ಚಂದನಾ ಒಂದುಕಡೆ, ನಾರ್ಮಲ್‌ ಆಗಿ ನಗುತ್ತಾ ಪಾತ್ರವನ್ನು ಎನ್‌ಜಾಯ್ ಮಾಡ್ತಾ ಆಗಾಗ ಚಂದನಾ ಕಾಲೆಳೆಯುತ್ತಾ ಅವಳನ್ನು ರೇಗಿಸುವ ಜಯಂತ ಪಾತ್ರಧಾರಿ ದೀಪಕ್‌ ಸುಬ್ರಹ್ಮಣ್ಯ ಇನ್ನೊಂದು ಕಡೆ. ಆದರೂ ಇದರಲ್ಲಿ ಚಂದನಾ ಡೈಲಾಗ್‌ ಬಾಯಿಪಾಠ ಮಾಡಲು ಒದ್ದಾಡೋದನ್ನು ನೋಡೋದೆ ಚಂದ. ಆನ್‌ಲೈನ್‌ನಲ್ಲಿ ಕೊಂಕು ತೆಗಿಯೋರ ಮಹಾ ಸಾಮ್ರಾಜ್ಯನೇ ಇದೆ. ಹಾಗಂದ ಮೇಲೆ ಈ ವೀಡಿಯೋಗೂ ಕೊಂಕು ತೆಗೆಯೋರು ಇರಬಾರದು ಅನ್ನೋದು ಹೇಗೆ.. ಇದಕ್ಕೂ ಜನ ಏನೇನೆಲ್ಲ ಕೊಂಕು ತೆಗೆದಿದ್ದಾರೆ. ಆದರೆ ಬಹಳ ಮಂದಿಗೆ ಈ ವೀಡಿಯೋದಲ್ಲಿರುವ ಆಫ್ ಬೀಟ್ ಸೀನ್‌ಗಳು ಖುಷಿಯಾಗಿವೆ. ಮೆಚ್ಚಿನ ನಟ, ನಟಿ ಸೆಟ್‌ನಲ್ಲಿ ಹೇಗಿರ್ತಾರೆ ಅನ್ನೋದನ್ನು ನೋಡಿ ಅವರೆಲ್ಲ ಖುಷಿಪಟ್ಟಿದ್ದಾರೆ. 

ಎರಡು ಜಡೆ ಸೇರಿದ್ರೆ ಜಗಳ ಆಗಲ್ಲ, ಬಹುತೇಕ ಗಂಡಸರು ಇದಕ್ಕೆ ಕಾರಣ : ಭಾಗ್ಯಲಕ್ಷ್ಮಿ ಅತ್ತೆ ಕುಸುಮಾ

ಸದ್ಯ ಚಿನ್ನುಮರಿಗೆ ರಿಯಲ್‌ ಲೈಫಲ್ಲಿ ಮದುವೆ ಆಗಿದೆ. ಎಲ್ಲೋ ಹನಿಮೂನ್‌ ಖುಷಿಯಲ್ಲಿ ರಿಯಲ್‌ ಜೋಡಿ ಇದ್ದರೆ, ಇವರ ಅಭಿಮಾನಿಗಳು ಸೀರಿಯಲ್‌ ಜೋಡಿಯ ತಮಾಷೆಯ ಕ್ಷಣಗಳನ್ನ ಎನ್‌ಜಾಯ್‌ ಮಾಡ್ತಿದ್ದಾರೆ.


View post on Instagram