Asianet Suvarna News Asianet Suvarna News

ಹಿಟ್ಲರ್​ ಕಲ್ಯಾಣದ ಎಜೆಗೆ ರಿಯಲ್​ ಲೈಫ್​ನಲ್ಲಿ ಆ್ಯಟಿಟ್ಯೂಡ್​ ಜಾಸ್ತಿನಾ? ಅವ್ರೇ ಏನ್​ ಹೇಳಿದ್ದಾರೆ ಕೇಳಿ

ಹಿಟ್ಲರ್​ ಕಲ್ಯಾಣದ ಎಜೆಗೆ ರಿಯಲ್​ ಲೈಫ್​ನಲ್ಲಿ ಆ್ಯಟಿಟ್ಯೂಡ್​ ಜಾಸ್ತಿನಾ? ಅವ್ರೇ ಏನ್​ ಹೇಳಿದ್ದಾರೆ ಕೇಳಿ
 

Hitler Kalyanas Abhinav Jayashanakar alias AJ has more attitude in real life suc
Author
First Published Nov 10, 2023, 8:59 PM IST

ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ನಾಳೆಯವರಿಗೂ ಇರಲಿದೆ. ಇದರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಧಾರಾವಾಹಿಗಳ ನಟ-ನಟಿಯರಿಗೆ ಭರಪೂರ ಅವಾರ್ಡ್​ಗಳನ್ನು ಕೊಡಲಾಗುತ್ತಿದೆ. ಇದಕ್ಕಾಗಿ ನಾಮಿನೇಷನ್​ ಆದವರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೀಕ್ಷಕರಿಂದ ಭರ್ಜರಿ ರೆಸ್​ಪಾನ್ಸ್​ ಬರುತ್ತಿದೆ. ಅವಾರ್ಡ್​ ಕಾರ್ಯಕ್ರಮದ ಇನ್ನೊಂದು ಬದಿಯಲ್ಲಿ ಸೀರಿಯಲ್​ ನಟ-ನಟಿಯರ ಸಂದರ್ಶನದ ಜೊತೆಗೆ ಒಳ್ಳೊಳ್ಳೆ ಆಟವೂ ನಡೆಯುತ್ತಿದೆ. ಅದೇ ರೀತಿ ಹಿಟ್ಲರ್​ ಕಲ್ಯಾಣದ ಹೀರೋ ಅಭಿನವ್​ ಜಯಶಂಕರ್​ ಅಲಿಯಾಸ್​ ಎಜೆಯ ಸಂದರ್ಶನ ಮಾಡಲಾಗಿದ್ದು, ಅವರಿಗೆ ಆಟವನ್ನೂ ನಡೆಸಲಾಗಿದೆ. ಎಜೆ ಅವರ ಅಸಲಿ ಹೆಸರು ದಿಲೀಪ್​ ರಾಜ್​. 

ಈ ಅವಾರ್ಡ್​ ಫಂಕ್ಷನ್​ ನಿಮಗೆ ಎಷ್ಟರಮಟ್ಟಿಗೆ ಒಳ್ಳೆಯದು ಎನ್ನಿಸುತ್ತದೆ ಎನ್ನುವ ಪ್ರಶ್ನೆ ದಿಲೀಪ್​ ಅವರು, ಸೀರಿಯಲ್​ನಲ್ಲಿ ಎಷ್ಟೋ ಮಂದಿ ಕೆಲಸ ಮಾಡುತ್ತಿರುತ್ತಾರೆ. ಕೆಲವರಿಗೆ ಗುರುತಿಸುವಿಕೆಯೇ ಇರುವುದಿಲ್ಲ.  ಆದರೆ ಇಂಥ ಅವಾರ್ಡ್​ ಬಂದಾಗ ಅವರನ್ನು ಎಲ್ಲರೂ ಗುರುತಿಸುತ್ತಾರೆ. ಒಂದು ವೇಳೆ ಅವಾರ್ಡ್​ ಸಿಗದೇ ಹೋದರೆ ಮುಂದಿನ ಸಲ ಇದನ್ನು ಗೆಲ್ಲಬೇಕು ಎನ್ನುವ ಛಲ ಬರುತ್ತದೆ. ಆದ್ದರಿಂದ ಇಂಥ ಅವಾರ್ಡ್​ಗಳು ತುಂಬಾ ಮುಖ್ಯ ಎಂದಿದ್ದಾರೆ.  ಇದೇ ವೇಳೆ ತಮಗೆ ಸಿಕ್ಕಿರುವ ಮೊದಲ ಅವಾರ್ಡ್​ ಕುರಿತು ಮಾತನಾಡಿದ ಅವರು, ಕಾಲೇಜಿನ ದಿನಗಳಲ್ಲಿ ಅಕಸ್ಮಾತ್ತಾಗಿ ನಾಟಕ ಪ್ರದರ್ಶನವೊಂದಕ್ಕೆ ಹೋಗಬೇಕಾಗಿ ಬಂತು. ಇದು ಅಚಾನಕ್​ ಆಗಿ ಆಗಿದ್ದಾದರೂ ನನಗೆ ಆಗ ಬೆಸ್ಟ್​ ಆ್ಯಕ್ಟರ್​ ಅವಾರ್ಡ್​ ಸಿಕ್ಕಿತು ಎಂದಿದ್ದಾರೆ.

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

ನಂತರ ಅವರಿಗೆ ಒಂದು ಗೇಮ್​ ಆಡಿಸಲಾಯಿತು. ಜೀವನ ಚಕ್ರ ಎನ್ನುವ ಆಟ. ಅಲ್ಲಿರುವ ಚಕ್ರವನ್ನು ತಿರುಗಿಸಬೇಕು. ಅಲ್ಲಿ ಯಾವ ಪ್ರಶ್ನೆ ಕೇಳಲಾಗುತ್ತದೆಯೋ ಅದಕ್ಕೆ ಉತ್ತರಿಸಬೇಕು. ಆಗ ಅವರಿಗೆ ಬಂದದ್ದು 'ನಾನು ಹಾಗಿಲ್ಲ ಗುರು' ಎನ್ನುವುದು. ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿಲೀಪ್​ ಅವರು, ಮೊದಲನೆಯದ್ದಾಗಿ ನನಗೆ ವಯಸ್ಸಾಗಿಲ್ಲ ಅಂತ ತುಂಬಾ ಮಂದಿ ನೋಡಿದವರು ಹೇಳ್ತಾರೆ.  ಆದರೆ ನಿಜ ಹೇಳಬೇಕು ಎಂದರೆ ನನಗೆ ವಯಸ್ಸಾಗಿದೆ. 45 ವರ್ಷ ನನಗೆ ಎಂದರು. ನಂತರ ನನ್ನನ್ನು ನೋಡಿದವರು ನಿಮಗೆ ಆ್ಯಟಿಟ್ಯೂಡ್​ ಜಾಸ್ತಿ ಅಂತಾರೆ. ನಿಮ್​ ಹತ್ರ ಮಾತನಾಡಲು ಭಯ, ತುಂಬಾ ಸ್ಟ್ರಿಕ್ಟ್​ ಅಂತೆಲ್ಲಾ ಹೇಳ್ತಾರೆ. ಆದ್ರೆ ನಿಜವಾಗ್ಲೂ ಹೇಳ್ತೇನೆ ಕೇಳಿ, ನಾನು ತುಂಬಾ ಕೂಲ್​, ಆ್ಯಟಿಟ್ಯೂಡ್​ ಅಥವಾ ಸೊಕ್ಕು ಯಾವುದೂ ಇಲ್ಲ ಅಂದುಕೊಂಡಿದ್ದೇನೆ. ನಿಜವಾಗಿಯೂ ಹಾಗೆಲ್ಲಾ ಭಾವಿಸಬೇಡಿ. ಮಾತನಾಡುವಾಗ ಸೆಲೆಕ್ಟಿವ್​, ಅಷ್ಟು ಬಿಟ್ರೆ ಮತ್ತೇನೂ ಇಲ್ಲ ಎಂದಿದ್ದಾರೆ.  

ಅಂದಹಾಗೆ ದಿಲೀಪ್​ ರಾಜ್​ ಅವರು ಕುರಿತು ಹೇಳುವುದಾದರೆ, ಪೋಷಕ ನಟನಾಗಿ ಕಿರುತೆರೆಯ ಪಾತ್ರಗಳನ್ನು ನಿರ್ವಹಿಸುತ್ತಿದ್ದ ದಿಲೀಪ್​ರಾಜ್​'ಬಾಯ್​ಫ್ರೆಂಡ್'​​​ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಬಳಿಕ ಪವರ್​ಸ್ಟಾರ್​ಪುನೀತ್​ರಾಜ್​ಕುಮಾರ್​ಅಭಿನಯದ 'ಮಿಲನ', 'ಲವ್​ಗುರು' 'ಯೂಟರ್ನ್'​ಚಿತ್ರದಲ್ಲಿ ಪ್ರಮುಖ ಕಾಣಿಸಿಕೊಂಡಿಸಿದ್ದರು. ಮೊದಲಿನಿಂದಲೂ ಬೆಳ್ಳಿ ತೆರೆಯ ಸಂಪರ್ಕವಿರುವ ದಿಲೀಪ್​ರಾಜ್ ಈಗ ಹಿಟ್ಲರ್​ ಕಲ್ಯಾಣದಿಂದ ಫೇಮಸ್​ ಆಗುತ್ತಿದ್ದಾರೆ. ನಟನೆ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್​ರಾಜ್​, ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಿಗೆ ಬಂಡವಾಳ ಹಾಕಿದ್ದರು.

ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಗೆದ್ದೋರು ಯಾರು?

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios