Kannadathi : ರಾಮಾಚಾರಿ ಪೌರೋಹಿತ್ಯ, ಆಸ್ಪತ್ರೆಯಲ್ಲೇ ಹವಿ ಮದ್ವೆ!

ಫೈನಲೀ ರಾಜ್ಯದ ಜನತೆಯ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡ್ರಾಮಾ ಮೇಲೆ ಡ್ರಾಮಾ ನಡೆದು 'ರಾಮಾಚಾರಿ' ಸೀರಿಯಲ್ ಹೀರೋ ರಾಮಾಚಾರಿ ಪೌರೋಹಿತ್ಯದಲ್ಲಿ ವರೂ ವಿರೋಧದ ನಡುವೆಯೇ ಹರ್ಷ ಭುವಿಯ ಮದುವೆ ನಡೆದುಹೋಗಿದೆ. ಆದರೆ ಹರ್ಷ ಭುವಿ ತಾಳಿ ಕಟ್ಟಿದ ಬಳಿಕ ಸಪ್ತಪದಿ ಶಾಸ್ತ್ರಗಳೆಲ್ಲ ನಡೆದ ಬಳಿಕ ಅಮ್ಮಮ್ಮನ ನಿರ್ಗಮನದ ಸೂಚನೆ ಸಿಕ್ಕಿದೆ.

 

Harsha ties knot to Bhuvi in Kannadathi serial of colors Kannada

ಕನ್ನಡತಿ ಸೀರಿಯಲ್‌(Kannadathi serial) ನಲ್ಲಿ ಹರ್ಷ ಭುವಿ ಮದುವೆ ಕೊನೆಗೂ ನಡೆದಿದೆ. ಕಳೆದ ವಾರ ಇನ್ನೈದು ದಿನಗಳಲ್ಲಿ ಹರ್ಷ ಭುವಿ ಮದುವೆ ನಡೆಯಲಿದೆ ಅಂತ ಕಲರ್ಸ್ ಕನ್ನಡ(Colors Kannada) ಚಾನಲ್ ಅನೌನ್ಸ್(Anounce) ಮಾಡಿತ್ತು. ಕೊಟ್ಟ ಮಾತಿನಂತೆ ಮದುವೆ ಶಾಸ್ತ್ರ ಮುಗಿಸಿದೆ. ಹರ್ಷ ಭುವಿ ಶಾಸ್ತ್ರೋಕ್ತವಾಗಿ ಸತಿ ಪತಿಗಳಾಗಿದ್ದಾರೆ. ಹಾಗಂತ ಈ ಮದುವೆ ಸರಾಗವಾಗಿಯೇನೂ ನಡೆದಿಲ್ಲ. ಈ ಮದುವೆಗೂ ಮೊದಲು ಸಾಕಷ್ಟು ಹೈಡ್ರಾಮಾಗಳು ನಡೆದಿವೆ. ಒಂದು ಹಂತದಲ್ಲಿ ಹರ್ಷನ ಮದುವೆ ವರೂ ಜೊತೆಗೆ ಅಂತ ಆಸ್ಪತ್ರೆ ಸಿಬ್ಬಂದಿಯೂ ಅಂದುಕೊಳ್ಳುವ ಮಟ್ಟಕ್ಕೆ ಕತೆ ವಿಸ್ತರಿಸಿದ್ದರು. ಆದರೆ ಫೈನಲೀ ಮದುವೆ ನಡೆದಿದೆ, ಅದು ವರೂ ಸಮ್ಮುಖದಲ್ಲೇ. 

ಹರ್ಷ ಭುವಿ ಮದುವೆಯನ್ನು ಹೇಗಾದರೂ ಮಾಡಿ ಮುರಿಯಬೇಕು ಅನ್ನುವ ಉದ್ದೇಶದಲ್ಲಿ ಮೊದಲೇ ವರೂ ಪ್ಲ್ಯಾನ್(Plan) ಸಿದ್ಧವಾಗಿತ್ತು. ಇವರ ಮದುವೆ ಶಾಸ್ತ್ರ ನಡೆಯುವಾಗ ತಾನೂ ಮದುಮಗಳ ಹಾಗೆ ಸಿಂಗರಿಸಿಕೊಂಡು ರೆಡಿ ಆಗಿದ್ಲು ವರೂ. ತನ್ನ ಜೊತೆಗೆ ಹರ್ಷನ ಮದುವೆ ಆಗದಿದ್ದರೂ ಪರ್ವಾಗಿಲ್ಲ. ಹರ್ಷನ ಜೊತೆಗೆ ಭುವಿ ಮದುವೆ ನಡೆಯಬಾರದು ಅನ್ನೋದು ಅವಳ ಪ್ಲ್ಯಾನ್. ಮದುಮಗಳ ಹಾಗೆ ಸಿಂಗರಿಸಿಕೊಂಡು ಹೇಗೂ ಮದುವೆಯ ಸಿಂಗಾರಗಳೆಲ್ಲ ನಡೆದಿವೆಯಲ್ಲಾ, ಇನ್ನೇನು ಇಲ್ಲೇ ನಾನೂ ಮದುವೆ ಆಗಿ ಬಿಡ್ತೀನಿ ಅನ್ನೋ ಮಾತನ್ನೂ ಹೇಳಿದ್ಲು. ಒಂದು ಹಂತದಲ್ಲಿ ಭುವಿಯ ಬಳಿ ಅತ್ತು ಗೋಗರೆದು ಅವಳ ಕಾಲು ಹಿಡಿದು ಹರ್ಷನನ್ನು ನನಗೆ ಬಿಟ್ಟುಕೊಡು ಎಂದು ಬೇಡಿಕೊಂಡಿದ್ದಳು. ಭುವಿ ಸಮಚಿತ್ತದಿಂದ ಅವಳನ್ನು ಸಮಾಧಾನ ಪಡಿಸಿದರೂ ಅವಳು ಕೇಳಲಿಲ್ಲ. ಕೊನೆಗೂ ಭುವಿ ತನ್ನ ಮಾತಿಗೆ ಬಗ್ಗದಿದ್ದಾಗ ಈಳಿಗೆ ಮಣೆಯಿಂದ ತನ್ನ ಕೈ ನರ ಕಟ್ ಮಾಡಿಬಿಟ್ಟಳು. ಅವಳನ್ನು ಎತ್ತಿಕೊಂಡು ಹಸೆಮಣೆ ಏರಬೇಕಿದ್ದ ಭುವಿ ಆಸ್ಪತ್ರೆಗೆ ಹೋಗ್ತಾಳೆ. ತನ್ನ ಮದುವೆ(Wedding) ಅನ್ನೋದನ್ನೂ ಮರೆತು ಅವಳ ಜೀವ ಉಳಿಸುವ ಬಗ್ಗೆ ಚಿಂತಿಸುತ್ತಾಳೆ. ಆದರೆ ಈ ಮುಹೂರ್ತ ತಪ್ಪಿದರೆ ಮತ್ತೆ ಹತ್ತಿರದಲ್ಲಿ ಮದುವೆ ಮುಹೂರ್ತ ಇಲ್ಲ, ಅಲ್ಲಿಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಅನ್ನೋ ಹಾಗೆ ಈ ಮದುವೆ ತಪ್ಪಿಸಿದರೆ ಆಮೇಲೆ ಏನು ಬೇಕಾದರೂ ಮಾಡಿಬಿಡಬಹುದು ಅನ್ನೋ ಯೋಚನೆ ವರೂದು. 

Kannadathi : ಹರ್ಷ ಭುವಿಯ ಮದುವೆ ಆಗುತ್ತಾ ಇಲ್ವಾ, ದಿ ನೇಶನ್ ವಾಂಟ್ಸ್ ಟು ನೋ!
ಬಹುಶಃ ಹರ್ಷನಿಗೆ ಹೀಗೊಂದು ಘಟನೆ ನಡೆಯಬಹುದು ಅನ್ನೋ ಯೋಚನೆ ಮೊದಲೇ ಇತ್ತು ಅನಿಸುತ್ತೆ. ಆತ ಆಸ್ಪತ್ರೆಗೆ ಬಂದು ವರೂ ಕುಶಲ ವಿಚಾರಿಸಿದರೂ ಮನಸ್ಸಲ್ಲೇ ಬೇರೆ ಲೆಕ್ಕಾಚಾರ ಇರುತ್ತದೆ. ತನ್ನ ತಮ್ಮ ಆದಿಯ ಸಹಾಯದಿಂದ ಮದುವೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಆಸ್ಪತ್ರೆಗೇ ತರಿಸುತ್ತಾನೆ. ಮದುವೆ ಮನೆ ಪುರೋಹಿತರು ಹೋದರೂ ಹರ್ಷ ರಾಮಾಚಾರಿ ಸೀರಿಯಲ್ ಹೀರೋ ರಾಮಾಚಾರಿಯನ್ನು ಪುರೋಹಿತನಾಗಿ ಕರೆಸಿಕೊಳ್ಳುತ್ತಾನೆ. ಇದೆಲ್ಲ ನಡೆಯುವಾಗ ಭುವಿ ಅಲ್ಲಿರೋದಿಲ್ಲ. ಆಕೆ ಮೆಡಿಸಿನ್(Medicine) ತರಲು ಹೊರಗೆ ಹೋಗಿರ್ತಾಳೆ. ಇತ್ತ ವರೂಗೂ ತನ್ನ ಈ ನಿರ್ಧಾರದಿಂದ ಹರ್ಷ ತನ್ನನ್ನೇ ಮದುವೆ ಆಗುತ್ತಾನೆ ಅಂತ ಅನಿಸೋ ಸಂದರ್ಭ ನಿರ್ಮಾಣವಾಗಿ ಬಿಡುತ್ತದೆ. ಭುವಿ ಮೆಡಿಸಿನ್ ತರುವ ಹೊತ್ತಿಗೆ ಆಸ್ಪತ್ರೆಯೇ ಮದುವೆ ಮನೆ ಆಗಿದೆ.

 

ಅಲ್ಲಿರುವ ಎಲ್ಲರೂ ವರೂನೇ ಮದುಮಗಳು ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ ಭುವಿಗೆ ಒಳಗೊಳಗೇ ಕುಸಿದ ಭಾಗ. ಒಂದು ಹಂತದಲ್ಲಿ ಅವಳೂ ವರೂ ಹರ್ಷ ಮದುವೆ ನಡೆಯುತ್ತೆ ಅಂತನೇ ಭಾವಿಸುತ್ತಾಳೆ. ಆದರೆ ಕೊನೇ ಘಳಿಗೆಯಲ್ಲಿ ಡ್ರಾಮಾ(Drama) ಮತ್ತೊಂದು ತಿರುವು ಪಡ್ಕೊಳ್ಳುತ್ತೆ. ವರೂ ಕೈಯಲ್ಲಿದ್ದ ಹೂ ಮಾಲೆ ಭುವಿಯ ಕೈಗೆ ಬರುತ್ತೆ. ರಾಮಾಚಾರಿ (Ramachari) ಪ್ರತೀ ಶಾಸ್ತ್ರವನ್ನೂ ಕನ್ನಡದಲ್ಲಿ ವಿವರಿಸಿ ವಧೂ ವರರಿಗೆ ಕನ್ನಡದಲ್ಲೇ ಮಂತ್ರ ಬೋಧಿಸಿ ಅಚ್ಚುಕಟ್ಟಾಗಿ ಮಾಲೆ ಹಾಕುವ ಶಾಸ್ತ್ರ, ತಾಳಿ ಕಟ್ಟುವ ಶಾಸ್ತ್ರವನ್ನೆಲ್ಲಾ ಆಸ್ಪತ್ರೆಯಲ್ಲೇ ಮಾಡಿಸಿ ಬಿಡುತ್ತಾನೆ. ವರೂ ಒದ್ದಾಟ, ಫ್ಲ್ಯಾಶ್ ಬ್ಯಾಕ್ ನೆನಪಿನ ನಡುವೆಯೇ ತಾಳಿ ಕಟ್ಟೋ ಶಾಸ್ತ್ರವೂ ಮುಗಿಯುತ್ತೆ. 

Big Boss: ಯಾವಾಗಿಂದ ಶುರುವಾಗುತ್ತೆ ಕನ್ನಡ ಬಿಗ್‌ ಬಾಸ್ ಸೀಸನ್ 9 ?

ಆಮೇಲೆ ಮದುವೆ ಮನೆಗೆ ಎಲ್ಲರೂ ಬಂದು ಅಲ್ಲಿ ಶಾಸ್ತ್ರ ಮುಂದುವರಿಯುತ್ತೆ. ಆದರೆ ಅಷ್ಟೊತ್ತಿಗೆ ಅಮ್ಮಮ್ಮನಿಗೆ ಅಸೌಖ್ಯ ಕಾಡಿ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಸದ್ಯದ ಆಕೆಯ ಸ್ಥಿತಿ ನೋಡಿದರೆ ಇದು ಆಕೆಯ ನಿರ್ಗಮನದ ಸೂಚನೆಯಂತೆ ಕಾಣುತ್ತಿದೆ. ಹೊಸ ಯಜಮಾನಿ ಬರುತ್ತಿದ್ದ ಹಾಗೆ ತನ್ನ ಸ್ಥಾನ ಬಿಟ್ಟುಕೊಟ್ಟು ರತ್ನಮಾಲಾ ನಿರ್ಗಮಿಸಿ ಬಿಡುತ್ತಾರಾ ಅನ್ನುವ ಪ್ರಶ್ನೆ ಮುಂದಿದೆ. 

Latest Videos
Follow Us:
Download App:
  • android
  • ios