ಹರಿಹರನ್ ಹಾಡಿರುವ ಟಿ-ಸೀರೀಸ್‌ನ ಹನುಮಾನ್ ಚಾಲೀಸಾ ಯೂಟ್ಯೂಬ್‌ನಲ್ಲಿ 4.6 ಬಿಲಿಯನ್ ವೀಕ್ಷಣೆ ದಾಟಿ ಭಾರತದ ಅತಿ ಹೆಚ್ಚು ವೀಕ್ಷಿತ ವಿಡಿಯೋ ಆಗಿದೆ. ಜಾಗತಿಕವಾಗಿ ಜನಪ್ರಿಯವಾಗಿರುವ ಈ ಭಕ್ತಿಗೀತೆ ಭಕ್ತರಿಗೆ ಮಾನಸಿಕ ಶಾಂತಿ, ಆತ್ಮವಿಶ್ವಾಸ, ದುಷ್ಟಶಕ್ತಿ ನಿವಾರಣೆ ಮತ್ತು ಸಕಾರಾತ್ಮಕತೆ ನೀಡುತ್ತದೆ ಎಂಬ ನಂಬಿಕೆಯಿದೆ.

ಮನರಂಜನೆ (Entertainment) ನೀಡೋದ್ರಲ್ಲಿ ಯೂಟ್ಯೂಬ್ (YouTube) ಮುಂದಿದೆ. ಪ್ರತಿ ದಿನ ಲಕ್ಷಾಂತರ ವಿಡಿಯೋ ಇದ್ರಲ್ಲಿ ಅಪ್ಲೊಡ್ ಆಗ್ತಿರುತ್ತೆ. ಹಾಗೆಯೇ ಸಾವಿರಾರು ಮಂದಿ ಯೂಟ್ಯೂಬ್ ಮೂಲಕ ಹಣ ಸಂಪಾದನೆ ಮಾಡ್ತಿದ್ದಾರೆ. ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆಯುವ ಅನೇಕ ವ್ಲಾಗ್ಸ್, ವಿಡಿಯೋಗಳಿವೆ. ಅತಿ ಹೆಚ್ಚು ವೀವ್ಸ್ ಪಡೆದ ಭಾರತದ ಮ್ಯೂಜಿಕ್ ವಿಡಿಯೋ ಯಾವ್ದು ಅನ್ನೋದು ನಿಮಗೆ ಗೊತ್ತಾ? ಈ ಪ್ರಶ್ನೆ ಕೇಳಿದಾಗ ಸೋನು ನಿಗಮ್ ಸಾಂಗ್ ಇರ್ಬಹುದು, ಹನಿ ಸಿಂಗ್ ವಿಡಿಯೋ ಇರ್ಬಹುದು ಇಲ್ಲ ಶಾರುಕ್ ಖಾನ್ ಡಾನ್ಸ್ ವಿಡಿಯೋ ಆಗಿರ್ಬಹುದು ಅಂತ ಜನರು ಭಾವಿಸ್ತಾರೆ. ನೀವೂ ಹಾಗೆ ಅಂದ್ಕೊಂಡಿದ್ರೆ ನಿಮ್ಮ ಊಹೆ ನೂರಕ್ಕೆ ನೂರು ತಪ್ಪು. ಅತಿ ಹೆಚ್ಚು ವೀವ್ಸ್ ಪಡೆದ ಭಾರತದ ಯೂಟ್ಯೂಬ್ ವಿಡಿಯೋ ಯಾವ್ದು ಗೊತ್ತಾ?

ಅತಿ ಹೆಚ್ಚು ವೀವ್ಸ್ ಪಡೆದ ವಿಡಿಯೋ ಇದು :  ಯುಟ್ಯೂಬ್ ನಲ್ಲಿ ಅತಿ ಹೆಚ್ಚು ಬಾರಿ ವೀಕ್ಷಣೆ ಪಡೆದ ವಿಡಿಯೋ ನಮ್ಮ ಭಜರಂಗಿ ಹನುಮಂತನ ವಿಡಿಯೋ. ಯಸ್. ಹನುಮಾನ ಚಾಲೀಸಾ (Hanuman Chalisa)ವನ್ನು ಜನರು ಅತಿ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ಟಿ-ಸೀರೀಸ್ ಭಕ್ತಿ ಸಾಗರ್ ಪ್ರಸ್ತುತಪಡಿಸಿದ ಹನುಮಾನ್ ಚಾಲೀಸಾ ವಿಡಿಯೋ ಯೂಟ್ಯೂಬ್ನಲ್ಲಿ ಅತಿ ಹೆಚ್ಚು ನೋಡಲ್ಪಟ್ಟ ಭಾರತದ ಹಾಡಾಗಿದೆ. ಈ ವೀಡಿಯೊ 4.6 ಬಿಲಿಯನ್ ವೀವ್ಸ್ ಗಡಿಯನ್ನು ದಾಟಿದೆ.

ಹನುಮಾನ್ ಚಾಲೀಸಾವನ್ನು ಪ್ರಸಿದ್ಧ ಗಾಯಕ ಹರಿಹರನ್ (Singer Hariharan) ಅವರು ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ್ದಾರೆ. ಇದನ್ನು ಟಿ-ಸೀರೀಸ್ ಭಕ್ತಿ ಸಂಗೀತ ಚಾನೆಲ್ (Series Devotional Music Channel) ನಲ್ಲಿ ಮೇ 10, 2011 ರಂದು ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೊದ ಪೂರ್ಣ ಶೀರ್ಷಿಕೆ ಶ್ರೀ ಹನುಮಾನ್ ಚಾಲೀಸಾ. ಕಳೆದ 14 ವರ್ಷಗಳಲ್ಲಿ ಶ್ರೀ ಹನುಮಾನ್ ಚಾಲೀಸಾ 4.6 ಬಿಲಿಯನ್ ವೀವ್ಸ್ ಪಡೆದಿದೆ. ಭಾರತದ ಮತ್ತ್ಯಾವುದೇ ಹಾಡಿದ ವಿಡಿಯೋ ಇಷ್ಟೊಂದು ವೀವ್ಸ್ ಪಡೆದಿಲ್ಲ. 

ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ ಈ ವಿಡಿಯೋ : ಬರೀ ಭಾರತೀಯರು ಮಾತ್ರ ಈ ವಿಡಿಯೋವನ್ನು ವೀಕ್ಷಣೆ ಮಾಡಿಲ್ಲ. ಟಿ-ಸೀರೀಸ್ ಭಕ್ತಿ ಸಾಗರ್ ಅವರ ಶ್ರೀ ಹನುಮಾನ್ ಚಾಲೀಸಾದ ಈ ವಿಡಿಯೋ ಪ್ರಪಂಚದಾದ್ಯಂತದ ಹನುಮಂತನ ಭಕ್ತರಲ್ಲಿ ಪ್ರಸಿದ್ಧವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಈ ದಾಖಲೆಯನ್ನು ಶ್ಲಾಘಿಸುತ್ತಿದ್ದಾರೆ. ಈ ಹಾಡು ಇಷ್ಟೊಂದು ಜನಪ್ರಿಯವಾಗಲು ಹನುಮಂತನ ಕೃಪೆಯೇ ಕಾರಣ ಎಂದು ಭಕ್ತರು ಬರೆದಿದ್ದಾರೆ.

ಹನುಮಾನ ಚಾಲೀಸದ ಪ್ರಯೋಜನ : ಹನುಮಾನ್ ಚಾಲೀಸಾ ಬಹಳ ಪವಿತ್ರವಾದ ಸ್ತೋತ್ರವಾಗಿದೆ. ಹನುಮಾನ್ ಚಾಲೀಸಾ ಪಠಣವು ನಕಾರಾತ್ಮಕ ಶಕ್ತಿಗಳು, ದುಷ್ಟಶಕ್ತಿಗಳಿಂದ ನಮ್ಮನ್ನ ದೂರವಿಡುತ್ತದೆ. ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಒತ್ತಡ ಕಡಿಮೆ ಮಾಡುತ್ತದೆ. ಆಂತರಿಕ ಶಕ್ತಿ ಜಾಗೃತಗೊಳ್ಳುತ್ತದೆ. ಇದು ಜೀವನದ ಕಷ್ಟಗಳನ್ನು ಧೈರ್ಯ ಮತ್ತು ದೃಢಸಂಕಲ್ಪದಿಂದ ಎದುರಿಸುವ ಶಕ್ತಿಯನ್ನು ನೀಡುತ್ತದೆ. ಪಾಪಗಳನ್ನು ನಾಶ ಮಾಡುತ್ತದೆ. ಶಿಸ್ತು ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಭಯದಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಅಸೂಯೆ, ಕೋಪ ಮತ್ತು ದುರಾಸೆಯಂತಹ ನಕಾರಾತ್ಮಕ ಭಾವನೆಗಳಿಂದ ನಮ್ಮನ್ನು ದೂರವಿಡುತ್ತದೆ. ಮಾನಸಿಕ ಮತ್ತು ದೈಹಿಕ ಕಾಯಿಲೆಗಳು ಗುಣವಾಗುತ್ತವೆ. ಜೀವನದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ರಾತ್ರಿ ಮಲಗುವ ಮುನ್ನ ಹನುಮಾನ್ ಚಾಲೀಸಾ ಪಠಿಸುವುದರಿಂದ ಉತ್ತಮ ನಿದ್ರೆ ಬರುತ್ತದೆ. ಕೆಟ್ಟ ಕನಸುಗಳು ದೂರವಾಗುತ್ತವೆ. ಮಾಟಮಂತ್ರದ ಪರಿಣಾಮ ನಿಮ್ಮ ಮೇಲೆ ಬೀಳುವುದಿಲ್ಲ.ನಿತ್ಯ ಹನುಮಾನ ಚಾಲೀಸ ಓದೋದ್ರಿಂದ ಇಲ್ಲವೆ ಕೇಳೋದ್ರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತದೆ. 

YouTube video player