ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಸ್ಪರ್ಧಿ ಕೃತಿಕಾ ಮಲಿಕ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ "ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ" ಬಗ್ಗೆ ಎರಡು ವರ್ಷದ ಮಕ್ಕಳಿಗೆ ಪಾಠ ಮಾಡಿದ್ದಾರೆ. ಖಾಸಗಿ ಅಂಗಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು, ಮಡಿಲಲ್ಲಿ ಕೂರಿಸಿಕೊಳ್ಳುವುದು ಕೆಟ್ಟ ಸ್ಪರ್ಶ ಎಂದು ಮಕ್ಕಳಿಗೆ ತಿಳಿಸಿದ್ದಾರೆ.
ಇಂದು ಐದು ತಿಂಗಳ ಹಸುಗೂಸಿನ ಮೇಲೆ ಅ*ತ್ಯಾಚಾರ ಆಗುವುದು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ ಐದು ವರ್ಷದ ಬಾಲೆಯನ್ನು ಕರೆದುಕೊಂಡು ಹೋಗಿ ಅ*ತ್ಯಾಚಾರ ಮಾಡಲಾಗಿತ್ತು. ಮಕ್ಕಳ ಮೇಲಿನ ದೌರ್ಜನ್ಯ, ಅ*ತ್ಯಾಚಾರವನ್ನು ತಡೆಯುವ ಸಲುವಾಗಿ ದೇಶದಲ್ಲಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಹೀಗಿರುವಾಗ ಬಿಗ್ ಬಾಸ್ ಸ್ಪರ್ಧಿಯೋರ್ವರು ಬ್ಯಾಡ್ ಟಚ್, ಗುಡ್ ಟಚ್ ಪಾಠ ಮಾಡಿದ್ದಾರೆ.
ಕೃತಿಕಾ ಮಲಿಕ್ ಪಾಠ
ಬಿಗ್ ಬಾಸ್ ಒಟಿಟಿ ಶೋನಲ್ಲಿ ಪತಿ ಅರ್ಮಾನ್ ಮಲಿಕ್ ಜೊತೆ ಅವರ ಇಬ್ಬರು ಪತ್ನಿಯರಾದ ಪಾಯಲ್, ಕೃತಿಕಾ ಭಾಗವಹಿಸಿದ್ದರು. ಕೃತಿಕಾ ಮಲಿಕ್ ಅವರು ಫಿನಾಲೆವರೆಗೂ ಶೋನಲ್ಲಿದ್ದರು. ಪಾಯಲ್ ಅವರನ್ನು ಮದುವೆಯಾದ ಬಳಿಕ ಅವರ ಗೆಳತಿ ಕೃತಿಕಾರನ್ನು ಅರ್ಮಾನ್ ಮದುವೆಯಾಗಿದ್ದರು. ಇಬ್ಬರು ಪತ್ನಿಯರು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಪಾಯಲ್ ಅವರಿಗೆ ಮೂವರು ಮಕ್ಕಳು, ಕೃತಿಕಾಗೆ ಓರ್ವ ಮಗ ಇದ್ದಾನೆ. ಇವರಿಬ್ಬರು ಏಕಕಾಲಕ್ಕೆ ಗರ್ಭಿಣಿಯಾಗಿದ್ದರು. ಅಷ್ಟೇ ಅಲ್ಲದೆ 2023 ಏಪ್ರಿಲ್ ತಿಂಗಳಿನಲ್ಲಿ ಇಪ್ಪತ್ತು ದಿನಗಳ ಅಂತರದಲ್ಲಿ ಇವರು ಮಗುವಿಗೆ ಜನ್ಮ ನೀಡಿದ್ದರು. ಎರಡು ವರ್ಷದ ಮಕ್ಕಳಿಗೆ ಈಗ ಕೃತಿಕಾ ಮಲಿಕ್ ಪಾಠ ಮಾಡಿದ್ದಾರೆ. ಒಂದು, ಎರಡು ಹೇಳಲು ಬಾರದ ಈ ಮಕ್ಕಳಿಗೆ ಈ ವಯಸ್ಸಿಗೆ ಗುಡ್ ಟಚ್, ಬ್ಯಾಡ್ ಟಚ್ ಅರ್ಥ ಆಗತ್ತಾ ಅಂತ ಕೆಲವರು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ಒಳ್ಳೆಯ ಪಾಠ ಎಂದು ಹೇಳಿದ್ದಾರೆ. ಕೃತಿಕಾ ಅವರು ಇದನ್ನು ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಕೃತಿಕಾ ಮಲಿಕ್ ಹೇಳಿದ್ದೇನು?
ಒಳ್ಳೆಯ ಸ್ಪರ್ಶ (ಗುಡ್ ಟಚ್) ಮತ್ತು ಕೆಟ್ಟ ಸ್ಪರ್ಶ (ಬ್ಯಾಡ್ ಟಚ್) ಬಗ್ಗೆ ಕೃತಿಕಾ ಮಲಿಕ್ ಅವರು ಪಾಠ ಮಾಡಿದ್ದಾರೆ. “ಇವು ನಿಮ್ಮ ಖಾಸಗಿ ಭಾಗಗಳು. ಯಾರೂ ಅವನ್ನ ನೋಡಬಾರದು, ಯಾರೂ ಮುಟ್ಟಬಾರದು, ಯಾರೂ ಮುಟ್ಟಬಾರದು. ಯಾರಾದರೂ ನಿಮ್ಮ ಖಾಸಗಿ ಭಾಗಗಳನ್ನ ಮುಟ್ಟಿದರೆ, ನೀವು ನಿಮ್ಮ ಅಮ್ಮನಿಗೆ ಕರೆ ಮಾಡಿ, ಅಪ್ಪನಿಗೆ ಕರೆ ಮಾಡಿ, ಶಿಕ್ಷಕರಿಗೆ ಹೇಳಿ. ಯಾರಾದರೂ ಅಂಕಲ್ ನಿನ್ನನ್ನ ಕರೆದು ಬಲವಾಗಿ ಅಪ್ಪಿಕೊಂಡರೆ, ಅದನ್ನು ಕೆಟ್ಟ ಸ್ಪರ್ಶ ಅಂತಾರೆ! ಯಾರಾದರೂ ಅಂಕಲ್ ನಿನ್ನನ್ನ ಕರೆದು ಮಡಿಲಲ್ಲಿ ಕೂರಿಸಿಕೊಂಡರೆ, ಅದನ್ನು ಕೆಟ್ಟ ಸ್ಪರ್ಶ ಅಂತಾರೆ! ಯಾರಾದರೂ ಹೋಗುವಾಗ ತಡೆದು, ಗಲೀಜಾಗಿ ಮಾತಾಡಿದರೆ, ಅದನ್ನು ಕೆಟ್ಟ ಸ್ಪರ್ಶ ಅಂತಾರೆ!
ಚಿಕ್ಕಪ್ಪ, ಮಾವ, ಚಿಕ್ಕಪ್ಪ, ಅಣ್ಣ ಇರಲಿ, ತಪ್ಪಾಗಿ ಮುಟ್ಟಿದರೆ, ಅದನ್ನು ಕೆಟ್ಟ ಸ್ಪರ್ಶ ಅಂತಾರೆ! ಆದ್ದರಿಂದ, ಮಕ್ಕಳೇ, ಇಂತಹ ಗಲೀಜಾದ ಅಂಕಲ್ ಬಗ್ಗೆ ದೂರು 1098 ಗೆ ಫೋನ್ ಕರೆ ಮಾಡಬೇಕು.
1098 - ಈ ನಂಬರ್‌ಗೆ ಫೋನ್ ಕರೆ ಮಾಡಿ
ಭಾರತದಲ್ಲಿ ಮಕ್ಕಳಿಗಾಗಿ ರಾಷ್ಟ್ರೀಯ, 24-ಗಂಟೆಗಳ ತುರ್ತು ಸಹಾಯವಾಣಿಗಾಗಿ 1098ಕ್ಕೆ ಫೋನ್ ಕರೆ ಮಾಡಬೇಕು, ಇದನ್ನು CHILDLINE 1098 ಎಂದೂ ಕರೆಯಲಾಗುತ್ತದೆ. ಇದು ಆರೈಕೆ, ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಉಚಿತ ಸಹಾಯ, ಬೆಂಬಲವನ್ನು ಒದಗಿಸುತ್ತದೆ. ಮಗುವಿನ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸುವ ವಯಸ್ಕರಿಗೆ ಒಂದು ಪ್ರಮುಖ ಸೇವೆಯಾಗಿದೆ. ಇದು ಟೋಲ್-ಫ್ರೀ ಸಂಖ್ಯೆಯಾಗಿದ್ದು, ಯಾರಾದರೂ ತೊಂದರೆಯಲ್ಲಿರುವ ಮಗುವಿನ ಬಗ್ಗೆ ವರದಿ ಮಾಡಲು ಅಥವಾ ವಿವಿಧ ಸಮಸ್ಯೆಗಳಿಗೆ ಸಹಾಯಕ್ಕಾಗಿ ಡಯಲ್ ಮಾಡಬಹುದು, ಕಾಣೆಯಾದ ಮಕ್ಕಳಿಗೋಸ್ಕರ, ದೌರ್ಜನ್ಯ, ನಿರ್ಲಕ್ಷ್ಯ, ಶೋಷಣೆ ಮಾಡಿದ್ದರೆ ಫೋನ್ ಮಾಡಬಹುದು
ಮಕ್ಕಳ ಯೋಗಕ್ಷೇಮಕ್ಕೆ ಬೆಂಬಲ ನೀಡುವುದು, ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವುದು, ಬಾಲಕಾರ್ಮಿಕ, ಬಾಲವಿವಾಹ ಮತ್ತು ಇತರ ದೌರ್ಜನ್ಯಗಳನ್ನು ತಡೆಯುವುದನ್ನು ಮಾಡುತ್ತದೆ. ಒಟ್ಟಿನಲ್ಲಿ ಇದನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಈ ರೀತಿ ಕೃತಿಕಾ ಮಾಡಿದ್ದಾರೆ ಎನ್ನಲಾಗಿದೆ.



