ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಪಾತ್ರದಲ್ಲಿ ರೀತು ಸಿಂಗ್ ಎಲ್ಲ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸು ಕದ್ದಿದ್ದಾಳೆ. ಹಂಪಿ ಉತ್ಸವದಲ್ಲಿ ಭಾಗಿಯಾದ ಸಿಹಿ ಡ್ಯಾನ್ಸ್‌ ಮಾಡುವುದರ ಜೊತೆಗೆ ನಿರೂಪಕಿ ಕೇಳಿದ ಪ್ರಶ್ನೆಗೆ ಪಂಚಿಂಗ್‌ ಡೈಲಾಗ್‌ ಹೊಡೆದಿದ್ದಾರೆ.   

ʼಸೀತಾರಾಮʼ ಧಾರಾವಾಹಿ ರೀತು ಸಿಂಗ್‌ ಸದಾ ಪಂಚಿಂಗ್‌ ಮಾತುಗಳು, ನಟನೆ, ಹಾವಭಾವದಿಂದಲೇ ಗಮನಸೆಳೆಯುತ್ತಾಳೆ. ಈ ಬಾರಿಯ ಹಂಪಿ ಉತ್ಸವದಲ್ಲಿ ಭಾಗಿಯಾಗಿರೋ ರೀತು ಸಿಂಗ್‌ ನಿರೂಪಕಿಗೆ ಠಕ್ಕರ್‌ ಕೊಡೋ ರೀತಿಯಲ್ಲಿ ಮಾತನಾಡಿದ್ದಾರೆ.

ಡ್ಯಾನ್ಸ್‌ ಮಾಡಿರುವ ರೀತು ಸಿಂಗ್!‌ 
ಹಂಪಿ ಉತ್ಸವದಲ್ಲಿ ರೀತು ಸಿಂಗ್‌ ಡ್ಯಾನ್ಸ್‌ ಮಾಡಿದ್ದರು. ಇನ್ನು ʼಸೀತಾರಾಮʼ ಧಾರಾವಾಹಿ ಸೀತಾ ಪಾತ್ರಧಾರಿ ನಟಿ ವೈಷ್ಣವಿ ಗೌಡ, ಗೀತಾ ಧಾರಾವಾಹಿ ಹಾಗೂ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಖ್ಯಾತಿಯ ಭವ್ಯಾ ಗೌಡ ಕೂಡ ಡ್ಯಾನ್ಸ್‌ ಮಾಡಿದ್ದರು. ಅವರ ಜೊತೆಯಲ್ಲಿ ವೇದಿಕೆ ಮೇಲೆ ಮಾತನಾಡಿದ ರೀತು ಸಿಂಗ್‌, ನಿರೂಪಕಿಗೆ ಠಕ್ಕರ್‌ ಕೊಡುವ ರೀತಿಯಲ್ಲಿ ಪಂಚಿಂಗ್‌ ಡೈಲಾಗ್‌ ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರಿಗೂ ಆಶ್ಚರ್ಯ ಆಗಿದೆ. 

Shrirasthu Shubhamasthu Serial: ಹೊಸ ಪಾತ್ರದ ಎಂಟ್ರಿಯಾಯ್ತು, ಯಾರವರು?

ಸಂಭಾಷಣೆ ಏನು?

ನಿರೂಪಕಿ: ಸಿಹಿ ಎಷ್ಟು ಸಿಹಿಯಾಗಿ ಹೆಸರು ಇಟ್ಟಿದ್ದಾರೆ? 
ರೀತು ಸಿಂಗ್-‌ ಸಿಹಿ ಅಂದ್ಮೇಲೆ ಸಿಹಿಯಾಗಿಯೇ ಇರ್ತಾಳೆ

ನಿರೂಪಕಿ: ಡ್ಯಾನ್ಸ್‌ ಮಾಡಿ ಹೇಗೆ ಅನಿಸಿತು?
ರೀತು ಸಿಂಗ್- ಸೂಪರ್.‌ ನಾನು ಡ್ಯಾನ್ಸರ್‌ ಹೀಗಾಗಿ ಡ್ಯಾನ್ಸ್‌ ಮಾಡೇ ಮಾಡ್ತೀನಿ. 
ಈ ಜನರೇಶನ್‌ಆಲ್ಪಾ ಇರಬೇಕು ಅಲ್ವಾ. ಜೆನ್ಸಿ ಅಲ್ಲ ಆಲ್ಪಾ...

ನಿರೂಪಕಿ: ಹಂಪಿ ಉತ್ಸವಕ್ಕೆ ಬಂದಿದ್ದು ಮೊದಲ ಬಾರಿಯೇ?
ರೀತು ಸಿಂಗ್-‌ ಹೌದು, 

ನಿರೂಪಕಿ: ಹೇಗಿತ್ತು ಅನುಭವ?
ರೀತು ಸಿಂಗ್- ಸಿಹಿಗಿಂತ ಸಿಹಿಯಾಗಿತ್ತು. 

ರೀತು ಸಿಂಗ್‌ ಮಾತು ಕೇಳಿ ಎಲ್ಲರಿಗೂ ಇವಳು ಆರು ವರ್ಷದ ಹುಡುಗೀನಾ ಎನ್ನುವ ಪ್ರಶ್ನೆ ಎದ್ದಿದೆ. 

ನೀರು ನೋಡಿ ಗಗನ್‌ ಚಿನ್ನಪ್ಪ ಹೆದರಿದ್ರಾ? ʼಸೀತಾರಾಮʼ ಕುಂಭಮೇಳ ಶೂಟಿಂಗ್‌ ಹಿಂದಿನ ವಿಡಿಯೋ ರಿವೀಲ್‌!

ತಂದೆಯಿಲ್ಲದ ಬದುಕು! 
ʼಡ್ರಾಮಾ ಜ್ಯೂನಿಯರ್ಸ್ʼ‌ ಶೋ ಮೂಲಕ ರೀತು ಸಿಂಗ್‌ ಕನ್ನಡ ಕಿರುತೆರೆ ಲೋಕಕ್ಕೆ ಪರಿಚಯ ಆಗಿದ್ದಳು. ಈ ಶೋನಲ್ಲಿ ರೀತು ಸಿಂಗ್‌ ಕಾಣಿಸಿಕೊಂಡಾಗ ಅವಳಿಗೆ ಮೂರುವರೆ ವರ್ಷ ವಯಸ್ಸು. ರೀತು ಸಿಂಗ್‌ ಮೂಲತಃ ನೇಪಾಳದವರು. ತಂದೆ ಮನೆ ಬಿಟ್ಟು ಹೋದಮೇಲೆ ರೀತು ತಾಯಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದರು. ಬೆಂಗಳೂರಿನಲ್ಲಿ ಮನೆಕೆಲಸ ಮಾಡಿಕೊಂಡು ಬದುಕುತ್ತಿದ್ದ ತಾಯಿಗೆ ರೀತು ಸಿಂಗ್‌ ದೊಡ್ಡ ಶಕ್ತಿಯಾಗಿ ನಿಂತಿದ್ದಾಳೆ. ʼಸೀತಾರಾಮʼ ಧಾರಾವಾಹಿ ಸಿಹಿ ಆಗಿ ಇವಳು ಎಲ್ಲರಿಗೂ ಇಷ್ಟ ಆಗಿದ್ದಾಳೆ. ಅಷ್ಟೇ ಅಲ್ಲದೆ ಡ್ಯಾನ್ಸಿಂಗ್‌ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದಾಳೆ. 

Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್‌ ಯಾವುದು?

ರವಿಚಂದ್ರನ್‌ ಅವರ ಫೇವರಿಟ್‌ ಕಿಡ್!‌ 
ರೀತು ಸಿಂಗ್‌ ಕಂಡರೆ ವಿ ರವಿಚಂದ್ರನ್‌ ಅವರಿಗೂ, ರವಿಚಂದ್ರನ್‌ ಕಂಡರೆ ರೀತು ಸಿಂಗ್‌ಗೂ ತುಂಬ ಇಷ್ಟ. ಮುಂದೊಂದು ದಿನ ಇವಳು ದೊಡ್ಡ ನಟಿಯಾಗ್ತಾಳೆ ಅಂತ ರವಿಚಂದ್ರನ್‌ ಅವರು ಭವಿಷ್ಯ ನುಡಿದಿದ್ದಾರೆ. ಆದರೆ ಈಗ ರೀತು ಸಿಂಗ್‌ ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋ ಎಂದು ಫುಲ್‌ ಬ್ಯುಸಿಯಾಗಿದ್ದಾಳೆ. ರೀತು ಸಿಂಗ್‌ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿಯೂ ಕೂಡ ಭಾಗವಹಿಸಿದ್ದಳು. 

ಸದ್ಯ ʼಸೀತಾರಾಮʼ ಧಾರಾವಾಹಿಯಲ್ಲಿ ರೀತು ಸಿಂಗ್‌ ಕೊಡುವ ಎಕ್ಸ್‌ಪ್ರೆಶನ್‌ಗೆ ಅನೇಕರು ಕಳೆದುಹೋಗಿದ್ದಾರೆ ಎನ್ನಬಹುದು. 

View post on Instagram