'ಸೀತಾರಾಮ' ಧಾರಾವಾಹಿಯನ್ನು ಕುಂಭಮೇಳದಲ್ಲಿ ಶೂಟಿಂಗ್ ಮಾಡಲಾಗಿದೆ. ಇದು ನಿಜಕ್ಕೂ ಐತಿಹಾಸಿಕ ಕ್ಷಣ ಎನ್ನಬಹುದು. ತೆರೆ ಹಿಂದಿನ ವಿಡಿಯೋ ಈಗ ರಿವೀಲ್ ಆಗಿದೆ.
ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರ ಈ ಬಾರಿಯ ಜನ್ಮದಿನ ತುಂಬ ವಿಶೇಷ ಎನ್ನಬಹುದು. 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದಲ್ಲಿ ವೈಷ್ಣವಿ ಗೌಡ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದು ನೆನಪಿಡುವಂಥಹ ಸಂದರ್ಭ ಎಂದು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ವಿಮಾನದಲ್ಲಿ ಪ್ರಯಾಣ
ವೈಷ್ಣವಿ ಗೌಡ ಅವರು ಕುಂಭಮೇಳಕ್ಕೆ ಹೋಗಿ ಅಲ್ಲಿ ಶೂಟಿಂಗ್ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಹಾಗೂ ಸೀತಾರಾಮ ಧಾರಾವಾಹಿ ತಂಡವು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ಇವರೆಲ್ಲರೂ ಪ್ರಯಾಗ್‌ರಾಜ್‌ಗೆ ಹೋಗಿದ್ದಾರೆ. ವಿಮಾನದಲ್ಲಿ ಒಂದಷ್ಟು ಸುಂದರ ಸಮಯ ಕಳೆದಿದ್ದಾರೆ.
ʼನಾನೇ ಪುಣ್ಯವಂತೆ, ಅದೃಷ್ಟವಂತೆʼ- ಅತ್ತೆ ಜೊತೆಗೆ ಮಹಾಕುಂಭಮೇಳದಲ್ಲಿ ನಟಿ ಕತ್ರಿನಾ ಕೈಫ್
ಗಗನ್‌ಗೆ ನೀರಿನ ಭಯ?
ಇನ್ನು ಬೋಟಿಂಗ್ ಕೂಡ ಮಾಡಿದ್ದಾರೆ. ಆ ವೇಳೆ ಗಗನ್ ಅವರಿಗೆ ಭಯ ಆಯ್ತು ಎಂದು ವೈಷ್ಣವಿ ಗೌಡ ಹೇಳಿದ್ದಾರೆ, ಆಗ ಗಗನ್ ಇಲ್ಲ ಎಂದು ನಕ್ಕಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಬೋಟಿಂಗ್ ಮಾಡಿರೋ ರೀತು ಸಿಂಗ್‌ಗೆ ಬೋಟಿಂಗ್ ಭಯ ಇಲ್ವಂತೆ. ಇನ್ನು ವೈಷ್ಣವಿ ಗೌಡ ಅವರು ಅಮೃತಸ್ನಾನ ಮಾಡಿದ್ದಲ್ಲದೆ, ಹಣೆಗೆ ತಿಲಕ ಕೂಡ ಇಟ್ಟುಕೊಂಡಿದ್ದಾರೆ.
ಹೊರರಾಜ್ಯದಲ್ಲಿ ಜನ್ಮದಿನ ಆಚರಣೆ
ಪ್ರಯಾಗ್‌ರಾಜ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ವೈಷ್ಣವಿ ಗೌಡ ಅವರ ಜನ್ಮದಿನವನ್ನು ಆಚರಿಸಲಾಯಿತು. ಮೊದಲ ಬಾರಿಗೆ ತಂದೆ-ತಾಯಿಯಿಂದ ಇದ್ದು ಜನ್ಮದಿನವನ್ನು ಆಚರಿಸಿಕೊಳ್ತಿರೋದು ಒಂದು ಲೆಕ್ಕದಲ್ಲಿ ಎಮೋಶನಲ್ ಆಗಿದೆ ಎಂದು ವೈಷ್ಣವಿ ಹೇಳಿಕೊಂಡಿದ್ದಾರೆ. ಮಧ್ಯರಾತ್ರಿ ಅಪ್ಪ-ಅಮ್ಮ ನನಗೆ ಶುಭಾಶಯ ತಿಳಿಸುತ್ತಿದ್ದರು ಇಲ್ಲವೇ ಬೆಳಗ್ಗೆ ನಾನು ಅವರ ಆಶೀರ್ವಾದ ಪಡೆಯುತ್ತಿದ್ದೆ. ಈ ಬಾರಿ ಇದೆಲ್ಲ ಮಿಸ್ ಆಗಿದೆ ಎಂದು ವೈಷ್ಣವಿ ಗೌಡ ಹೇಳಿಕೊಂಡಿದ್ದಾರೆ.
ಕಿರುತೆರೆಯಲ್ಲಿ ಮಹಾ ಪ್ರಯೋಗ… ಪ್ರಯಾಗದ ಕುಂಭಮೇಳದಲ್ಲಿ ಸುಬ್ಬಿ ಜೊತೆ ಸೀತಾ-ರಾಮ… ತ್ರಿವೇಣಿ ಸಂಗಮದಲ್ಲಿ ಸ್ನಾನ
ʼಸೀತಾರಾಮʼ ಎಪಿಸೋಡ್
ಕುಂಭಮೇಳದಲ್ಲಿ ಸೀತಾರಾಮ ಧಾರಾವಾಹಿ ಎಪಿಸೋಡ್ ಶೂಟ್ ಆಗಿದೆ. ಶ್ರೀರಾಮ್ ದೇಸಾಯಿ, ವೈಷ್ಣವಿ ಗೌಡ, ಸಿಹಿ ಈ ಮೂವರು ಸೇರಿಕೊಂಡು ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ್ದಾರೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದು ಹೊಸ ಪ್ರಯತ್ನ ಎನ್ನಬಹುದು.
ಸಿಹಿ ಸತ್ತು ಗಂಧರ್ವ ಆಗಿದ್ದಾಳೆ. ಸಿಹಿ ಸತ್ತಿರೋದು ಸೀತಾಗೆ ಗೊತ್ತಿಲ್ಲ. ಸೀತಾ ಆರೋಗ್ಯದ ಕಾರಣಕ್ಕೆ ಸಿಹಿಯಂತೆ ಇರೋ ಸುಬ್ಬಿಯನ್ನು ರಾಮ್ ಮನೆಗೆ ಕರೆಸಿದ್ದಾನೆ. ಸಿಹಿ ಆತ್ಮಕ್ಕೆ ಶಾಂತಿ ಸಿಗಲಿ ಅಂತ ರಾಮ್ ಬೇಡಿಕೊಂಡಿರೋದು ಸೀತಾ ಕಿವಿಗೆ ಬಿದ್ದಿದೆ. ಒಟ್ಟಿನಲ್ಲಿ ಈ ವಿಷಯ ಸೀತಾ ಕಿವಿಗೆ ಬಿದ್ದನಂತರದಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

