Asianet Suvarna News Asianet Suvarna News

ಸ್ನಾನವಾದ್ರೂ ಬಾತ್​ರೂಮ್​ನಲ್ಲಿ ಸ್ನೇಹಿತ್​ಗೇನು ಕೆಲ್ಸ? ಸಿಡಿದೆದ್ದ ಪ್ರತಾಪ್- ನಮ್ರತಾ ಮಾತಿಗೆ ಫ್ಯಾನ್ಸ್​ ಫುಲ್​ ಖುಷ್​

ಸ್ನಾನದ ವಿಷಯದಲ್ಲಿ ಬಿಗ್​ಬಾಸ್​ ಒಳಗೆ ಗುಂಪುಗಾರಿಕೆ ಶುರುವಾಗಿದ್ದು, ಈ ವಿಷಯದಲ್ಲಿ ಡ್ರೋನ್​ ಪ್ರತಾಪ್​ ಅಸಮಾಧಾನ ಹೊರಹಾಕಿದ್ದಾರೆ. 
 

Groupism against Drone Pratap in Bigg Boss Kannada regarding bathing suc
Author
First Published Nov 24, 2023, 1:04 PM IST

ಬಿಗ್​ಬಾಸ್​ ಮನೆಯಲ್ಲಿ ಗುಂಪುಗಾರಿಕೆ ಭಾರಿ ಜೋರಾಗಿಯೇ ನಡೆಯುತ್ತಿದೆ. ಎರಡು ಗುಂಪುಗಳ ನಡುವೆ ಟಾಸ್ಕ್​ ವಿಷ್ಯಕ್ಕೆ ಇದಾಗಲೇ ಸಾಕಷ್ಟು ರಾದ್ಧಾಂತ ನಡೆದಿರುವ ಬೆನ್ನಲ್ಲೇ ಇದೀಗ ಸ್ನಾನದ ವಿಷ್ಯದಲ್ಲಿಯೂ ಜಟಾಪಟಿ ಶುರುವಾಗಿದೆ. ಡ್ರೋನ್​ ಮಾಡುವುದಾಗಿ ಹೇಳಿ ಹಲವರನ್ನು ನಂಬಿಸಿ ಮೋಸ ಮಾಡಿರೋ ಆರೋಪ ಹೊತ್ತು ಬಿಗ್​ಬಾಸ್​ ಹೊರಗಡೆ ಇದಾಗಲೇ ಸಾಕಷ್ಟು ಹೆಸರು ಕೆಡಿಸಿಕೊಂಡಿರೋ ಡ್ರೋನ್​ ಪ್ರತಾಪ್​, ಬಿಗ್​ಬಾಸ್​ ಮನೆಯಲ್ಲಿ ಸಕತ್​ ಒಳ್ಳೆಯ ಮನುಷ್ಯನಾಗಿರಲು ಟ್ರೈ ಮಾಡುತ್ತಿರುವುದು ಮೊದಲಿನಿಂದಲೂ ಕಂಡುಬರುತ್ತಿದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಯಾರ ತಂಟೆಗೂ ಹೆಚ್ಚು ಹೋಗದೇ, ಸನ್ನಡತೆಯನ್ನು ತೋರಲು ಟ್ರೈ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣಕ್ಕೆ ಇವರಿಗೆ ಇದಾಗಲೇ ಅನೇಕ ಮಂದಿ ಡ್ರೋನ್​ ಪ್ರತಾಪ್​ ಫ್ಯಾನ್ಸ್​ ಪೇಜ್​ ಮೂಲಕ ಅಭಿಮಾನಿಗಳು ಸಪೋರ್ಟ್​ ಮಾಡುತ್ತಿದ್ದಾರೆ. ಇವರೇ ಗೆಲ್ಲಬೇಕು ಎನ್ನುತ್ತಿದ್ದಾರೆ.   

ಇದರ ನಡುವೆಯೇ, ಡ್ರೋನ್​ ಪ್ರತಾಪ್​ ಬಿಗ್​ಬಾಸ್​ ಮನೆಯಲ್ಲಿ ಆಗಾಗ್ಗೆ ಟಾರ್ಗೆಟ್​ ಆಗುವುದು ಇದೆ. ಅದರಲ್ಲಿಯೂ ಗುಂಪುಗಾರಿಕೆ ಮಾಡಿಕೊಂಡು ಪ್ರತಾಪ್​ ವಿರುದ್ಧ ಎತ್ತಿ ಕಟ್ಟುವುದು ನಡೆದೇ ಇದೆ. ಅವರಿಗೆ ಟಾಸ್ಕ್​ ಕೊಡುವ ವಿಷಯದಲ್ಲಿಯೂ ಸ್ವಲ್ಪ ಅತಿ ಎನ್ನಿಸುವಷ್ಟು ಮಾಡಲಾಗುತ್ತಿದೆ.  ಈಗಲೂ ಬಾತ್​ರೂಮ್​ ವಿಷಯದಲ್ಲಿ ಹಾಗೆಯೇ ಆಗಿದೆ. ಈ ಮೊದಲು ಕೂಡ ಪ್ರತಾಪ್‌ಗೆ  ಸ್ನಾನದ ವಿಷಯದಲ್ಲಿ ತೊಂದರೆ ಆಗಿದೆ. ಈಗಲೂ ಹಾಗೆಯೇ ಆಗಿದೆ. ಸ್ನೇಹಿತ್ ತಮ್ಮ ಸ್ನಾನ ಮುಗಿದಿದ್ದರೂ ವಿನಯ್​ ಬರುವುದನ್ನು ಕಾದು  ಬಚ್ಚಲು ಮನೆಯಲ್ಲೇ ಕುಳಿತುಕೊಂಡಿದ್ದಾರೆ. ವಿನಯ್ ಬಂದು ಸ್ನಾನದ ಮನೆಗೆ ಹೋಗಿದ್ದಾರೆ. ‌ಆದರೆ ಕಾಯುತ್ತಿದ್ದ ಪ್ರತಾಪ್ ಕೇಳಿದ್ದಕ್ಕೆ ನನ್ನ ಕೆಲಸ ಆಗಿರಲೇ ಇಲ್ಲ ಎಂದು ಉಡಾಫೆಯಿಂದ ಉತ್ತರ ನೀಡಿದ್ದಾರೆ‌. ಇದರ ಪ್ರೋಮೋ ರಿಲೀಸ್​ ಆಗಿದೆ. ಇದರಲ್ಲಿ  ಸ್ನೇಹಿತ್‌ ಬಾತ್‌ರೂಮ್‌ನಲ್ಲಿ ಇರುವುದನ್ನು ನೋಡಬಹುದು. ಹೊರಗಡೆ  ಟವೆಲ್, ಬಟ್ಟೆ ಹಿಡಿದು ಪ್ರತಾಪ್‌ ಸ್ನಾನ ಮಾಡಲು ಕಾಯುತ್ತಿರುವುದನ್ನು ನೋಡಬಹುದು.  ಸ್ನೇಹಿತ್‌ ಸ್ನಾನ ಮುಗಿಸಿ ಹೊರ ಬರುತ್ತಾರೆ. ಆಗ ವಿನಯ್‌ ಅವರು ಸ್ನೇಹಿತ್‌ ʻನಾನು ಸ್ವಲ್ಪ ಹೋಗಿ ಬರ್ತಿನಿʼ ಅಂತ ಹೇಳಿ ಟವೆಲ್‌ ತೆಗೆದುಕೊಂಡು ಬಂದು ಸೀದಾ ಸ್ನೇಹಿತ್‌ ಇದ್ದ ಬಾತ್‌ ರೂಮ್‌ಗೆ ಹೋಗುತ್ತಾರೆ.  ತಮ್ಮ ಸ್ನಾನ ಆಗಿದ್ದರೂ ವಿನಯ್‌ ಬರುವವರೆಗೂ ಸ್ನೇಹಿತ್‌ ಬಾತ್‌ರೂಮ್‌ನಿಂದ ಆಚೆ ಬರದೇ ಬಾಗಿಲ ಹತ್ತಿರವೇ ನಿಂತಿರುತ್ತಾರೆ.  

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿ ಸುದ್ದಿ ಬೆನ್ನಲ್ಲೇ ದಂಪತಿ ಮಾರಾಮಾರಿ: ಪತಿ ಕುತ್ತಿಗೆ ಹಿಡಿದ್ರೆ, ಪತ್ನಿ ಚಪ್ಪಲಿ ಎಸೆದಳು!

ಆಗ ಸಹನೆ ಕಳೆದುಕೊಂಡ ಡ್ರೋನ್ ಪ್ರತಾಪ್​,  ಸ್ನೇಹಿತ್‌ನನ್ನು ಉದ್ದೇಶಿಸಿ, ನೀವು ಯಾಕೆ ಈ ರೀತಿ ಮಾಡಿದ್ರಿ ಎಂದು ಕೇಳಿದ್ದಕ್ಕೆ ನನ್ನ ಕೆಲಸವೇ ಮುಗಿದಿರಲಿಲ್ಲ,  ನಾನು ಟವಲ್ ತೆಗೆದುಕೊಂಡು ಬರಲು ಹೋಗಿದ್ದೆ ಎಂದು ಉತ್ತರ ನೀಡಿದ್ದಾರೆ.‌ ಇದಕ್ಕೆ ಪ್ರತಾಪ್,  ಬೇಕ ಬೇಕಾದವರಿಗೆ ಬಾತ್‌ರೂಮ್‌ ಬ್ಲಾಕ್‌ ಮಾಡ್ಕೊಂಡು ನಿಮಗೆ ಇಷ್ಟ ಬಂದಾಗೆ ಇರೋಕೆ ಆಗಲ್ಲ ಇಲ್ಲಿ ಎನ್ನುತ್ತಾರೆ.  ನೀವೇನು ಮೇಲಿನಿಂದ ಇಳಿದು ಬಂದವರಲ್ಲ ಎನ್ನುತ್ತಾರೆ. ಆಗ ಸ್ನೇಹಿತ್​  ದುರಾಹಂಕಾರದಿಂದ  ʻಹೌದು, ಈಗ ಏನ್‌ ಮಾಡ್ತೀಯʼ ಎನ್ನುತ್ತಾರೆ.  

ಇಷ್ಟು ಪ್ರೊಮೋ ಬಿಡುಗಡೆಯಾಗಿದ್ದು, ಸ್ನೇಹಿತ್​ ಮತ್ತು ವಿನಯ್​ ವಿರುದ್ಧ ಪ್ರತಾಪ್​ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇದೇ ವಿಚಾರವನ್ನು ವಿನಯ್‌ ಮತ್ತು ಅವರ ಗುಂಪು  ಗಾರ್ಡನ್‌ ಏರಿಯಾದಲ್ಲಿ ಕುಳಿತು ಚರ್ಚಿಸುವುದನ್ನು ನೋಡಬಹುದು.  ನಮ್ರತಾ, ಸಂಗೀತ, ಮೈಕಲ್, ವಿನಯ್ ಎಲ್ಲರೂ ಡಿಸ್​ಕಸ್​ ಮಾಡಿದ್ದಾರೆ.  ಆಗ ಮಾತನಾಡಿದ  ನಮ್ರತಾ, ಅವನು ಈ ಮಾತನ್ನು ಫಿನಾಲೆ ವರೆಗೂ ಬಿಡುವುದೇ ಇಲ್ಲ ಎಂದು ಹೇಳುವುದನ್ನು ಕೇಳಬಹುದು.  ಈಗಾಗಲೇ ನಾಮಿನೇಟ್ ಆಗಿರುವ ಪ್ರತಾಪ್ ಫಿನಾಲೆವರೆಗೂ ಬರ್ತಾರೆ ಎಂಬುವುದು ನಮ್ರತಾ ಅಭಿಪ್ರಾಯವಾಗಿದೆ. ಇದಕ್ಕೆ ಡ್ರೋನ್​ ಪ್ರತಾಪ್​ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. ನಿಮ್ಮ ಹಾರೈಕೆ ಅಂತೆ ಆಗಲಿ ಎನ್ನುತ್ತಿದ್ದಾರೆ ಪ್ರತಾಪ್​ ಫ್ಯಾನ್ಸ್​. ಫಿನಾಲೆಗೆ ಮಾತ್ರವಲ್ಲದೇ ಅವರೇ ಗೆಲ್ಲಲಿ ಎಂದು ಆಶಿಸುತ್ತಿದ್ದಾರೆ. 

ಆ ಹೀರೋ ಅಂದು ಮಲಗಲು ಕರೆದ, ಮುಂದಾದದ್ದು ಭಯಾನಕ! ಬಿಗ್​ಬಾಸ್​ ಸ್ಪರ್ಧಿ, ನಟಿ ಬಿಚ್ಚಿಟ್ಟ ಕರಾಳ ನೆನಪು
 

Follow Us:
Download App:
  • android
  • ios