Asianet Suvarna News Asianet Suvarna News

ಆ ಹೀರೋ ಅಂದು ಮಲಗಲು ಕರೆದ, ಮುಂದಾದದ್ದು ಭಯಾನಕ! ಬಿಗ್​ಬಾಸ್​ ಸ್ಪರ್ಧಿ, ನಟಿ ಬಿಚ್ಚಿಟ್ಟ ಕರಾಳ ನೆನಪು

ಆ ಹೀರೋ ಅಂದು ಮಲಗಲು ಕರೆದ, ಮುಂದಾದದ್ದು ಭಯಾನಕ! ಬಿಗ್​ಬಾಸ್​ ಸ್ಪರ್ಧಿ, ನಟಿ ವಿಚಿತ್ರಾ ಹೇಳಿದ್ದೇನು?
 

Bigg Boss Vichitra says she quit acting due to casting couch Fans react suc
Author
First Published Nov 22, 2023, 3:55 PM IST

ಇದಾಗಲೇ ಹಲವಾರು ತಾರೆಯರು ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಟಿಯರು ಮಾತ್ರವಲ್ಲದೇ ಕೆಲವು ನಟರಿಗೂ ಈ ಕೆಟ್ಟ ಅನುಭವ ಆಗಿದ್ದಿದೆ. ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ ತಮ್ಮ ಜೊತೆ ಮಲಗಲು ನೇರವಾಗಿ ಆಹ್ವಾನವಿತ್ತ ನಟರು, ನಿರ್ದೇಶಕರು, ನಿರ್ಮಾಪಕರು ಮುಂತಾದವರ ಬಗ್ಗೆ ಇದಾಗಲೇ ಹಲವರು ಮಾತನಾಡಿದ್ದು, ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ಅದರಲ್ಲಿಯೂ ಬಾಲಿವುಡ್‌ನಲ್ಲಿ ಸದಾ ಅವಕಾಶ ಸಿಗಬೇಕು ಎಂದರೆ ಇದು ಅನಿವಾರ್ಯ, ಇಲ್ಲದಿದ್ದರೆ ಚಿತ್ರರಂಗದಿಂದಲೇ ಹೊರಹಾಕಲಾಗುತ್ತದೆ ಎನ್ನುವ ಮಾತುಗಳನ್ನೂ ಆಡಿದ್ದಾರೆ. ಇದೀಗ ತಮಗಾಗಿರುವ ನೋವನ್ನು ತೋಡಿಕೊಂಡಿದ್ದಾರೆ ತಮಿಳು ನಟಿ ವಿಚಿತ್ರಾ. ತಮಿಳಿನ ಬಿಗ್​ಬಾಸ್​ ಸ್ಪರ್ಧಿಯೂ ಆಗಿರುವ ನಟಿ ವಿಚಿತ್ರಾ ತಾವು ಚಿತ್ರರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೇಕೆ ಎಂಬ ಬಗೆಗಿನ ಕರಾಳ ನೆನಪನ್ನು ಹಂಚಿಕೊಂಡಿದ್ದಾರೆ. 

ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ವಿಚಿತ್ರಾ ಅವರು, ಸದ್ಯ ಬಿಗ್ ಬಾಸ್ ತಮಿಳು 7 ನಲ್ಲಿ ಸ್ಪರ್ಧಿಯಾಗಿದ್ದು,  20 ವರ್ಷಗಳ ಹಿಂದೆ ಚಿತ್ರರಂಗವನ್ನು ತೊರೆಯುವಂತೆ ಮಾಡಿದ ಕಾಸ್ಟಿಂಗ್ ಕೌಚ್‌ನ ಅನುಭವವನ್ನು ನೆನಪಿಸಿಕೊಂಡರು. ಸಿನಿಮಾ ದೂರುದಾರರ ಸಂಘಕ್ಕೆ ದೂರು ನೀಡಿದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಕರಾಳ ನೆನಪನ್ನೂ ಅವರು ಬಿಚ್ಚಿಟ್ಟರು. 2001ರಲ್ಲಿ ಸೋಷಿಯಲ್​ ಮೀಡಿಯಾ ಇಷ್ಟೆಲ್ಲಾ ಪ್ರಭಾವವಾಗಿರಲಿಲ್ಲ. ಇಲ್ಲದಿದ್ದರೆ ಅಂದು ಬೇರೆಯದ್ದೇ ಆಗಿರುತ್ತಿತ್ತು ಎಂದ ನಟಿ, ನಟನೆಯ ಉತ್ತುಂಗದಲ್ಲಿ ಇರುವಾಗಲೇ ತಾವು ನಟನೆ ತೊರೆದಿರುವ ಬಗ್ಗೆ ಮಾತನಾಡಿದ್ದಾರೆ. 

ಬಿಗ್​ಬಾಸ್​ಗೆ ಕಾಂಟ್ರವರ್ಸಿ ಜೋಡಿ ರಾಖಿ- ಆದಿಲ್​ ಖಾನ್​ ಎಂಟ್ರಿ? ನಟಿ ಹೇಳಿದ್ದೇನು ನೋಡಿ...
 
ಅದು 2000ನೇ ಇಸವಿ, ಚಿತ್ರವೊಂದರಲ್ಲಿ ನಟಿಸುತ್ತಿದ್ದೆ. ಆಗ  ಒಬ್ಬ ಪ್ರಸಿದ್ಧ ನಾಯಕ ನಡೆದುಕೊಂಡ ರೀತಿ ನನಗೆ ಈಗಲೂ ಆಘಾತ ತರುತ್ತದೆ ಎಂದರು.  “ಒಂದು ಪಾರ್ಟಿ ಇತ್ತು, ಅಲ್ಲಿ ನಾನು ಬಹಳ ಪ್ರಸಿದ್ಧ ನಾಯಕನನ್ನು ಭೇಟಿಯಾದೆ. ಅವರು ನನ್ನ ಹೆಸರನ್ನೂ ಕೇಳಲಿಲ್ಲ, ಆದರೆ  ಕೋಣೆಗೆ ಬರಲು ನನ್ನನ್ನು ಕರೆದರು. ಅವರು ಸನ್ನೆಯ ಮೂಲಕ ನನ್ನನ್ನು ಕರೆದರು.  ಅದು ಯಾವ ರೀತಿಯ ಸನ್ನೆ ಎಂದು ನನಗೆ ಅರ್ಥವಾಗಲಿಲ್ಲ. ಆದರೆ ಅದು ಅಸಭ್ಯವಾಗಿದ್ದುದು ನನಗೆ ಗೊತ್ತಾಗಿ ಆಘಾತಕ್ಕೆ ಒಳಗಾದೆ. ಅವರತ್ತ ನೋಡದೇ ನಾನು ನನ್ನ ಕೋಣೆಗೆ ಹಿಂತಿರುಗಿ ಮಲಗಿದೆ. ಅಲ್ಲಿಂದಲೇ ನನ್ನ ವೃತ್ತಿ ಜೀವನದ ಮೇಲೆ ಅಗಾಧ ಕೆಟ್ಟ ಪರಿಣಾಮ ಎದುರಿಸಬೇಕಾಯಿತು ಎಂದಿದ್ದಾರೆ ವಿಚಿತ್ರಾ.

ಆ ನಾಯಕನ ಜೊತೆ ನಾನು ಮಲಗಲು ಒಪ್ಪದ ಕಾರಣ,  ಚಿತ್ರೀಕರಣದ ಸಮಯದಲ್ಲಿ ನಾನು ಸಮಸ್ಯೆಗಳನ್ನು ಎದುರಿಸಲಾರಂಭಿಸಿದೆ.  ಒಂದು ದಿನ ಗಲಾಟೆ ನಡೆಯುವ ದಟ್ಟವಾದ ಪ್ರದೇಶದಲ್ಲಿ ಹೊರಾಂಗಣದಲ್ಲಿ ಶೂಟಿಂಗ್ ಮಾಡುತ್ತಿದ್ದೆವು.  ಯಾರೋ ನನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದಾರೆಂದು ನನಗೆ ಅನಿಸಿತು. ಮೊದಲು ನಾನೇ ತಪ್ಪಾಗಿ ಭಾವಿಸಿದೆ ಎಂದುಕೊಂಡೆ. ಆದರೆ ಆ ಸ್ಪರ್ಶ ಅಸಹ್ಯವಾಗಿತ್ತು. ಕೂಡಲೇ ನಾನು  ಆ ವ್ಯಕ್ತಿಯನ್ನು ಹಿಡಿದು ಸ್ಟಂಟ್ ಮಾಸ್ಟರ್ ಬಳಿಗೆ ಕರೆದೊಯ್ದೆ. ಆದರೆ ಪರಿಸ್ಥಿತಿ ತೀರಾ ಕೆಟ್ಟದ್ದಾಗಿತ್ತು. ಅದಾಗಲೇ ನಾನು ಯಾವುದಕ್ಕೂ ಅಡ್ಜಸ್ಟ್​  ಆಗುವುದಿಲ್ಲ ಎಂದು ತಿಳಿದ ಕಾರಣ, ಅವರು ಇಡೀ ಘಟಕದ ಮುಂದೆ ನನಗೆ ಕಪಾಳಮೋಕ್ಷ ಮಾಡಿದರು. ನನ್ನ ಮೂಗಿಗೆ ಬಲವಾದ ಪೆಟ್ಟು ಬಿದ್ದಿತು.  ಇದನ್ನು ನಾನು ನನ್ನ ಪೋಷಕರಿಗೂ  ಹೇಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ನಟಿ.

ನಂತರ ಈ ಬಗ್ಗೆ ನನ್ನ ಸ್ನೇಹಿತೆಯೊಬ್ಬರ ಬಳಿ ಹೇಳಿಕೊಂಡಾಗ,  ಒಕ್ಕೂಟಕ್ಕೆ ದೂರು ನೀಡಲು ಹೇಳಿದರು. ಆದರೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ. ಪೊಲೀಸರಲ್ಲಿ ಯಾಕೆ ದೂರು ಕೊಟ್ಟಿಲ್ಲ ಎಂದು ನನ್ನನ್ನೇ ಗದರಿಬಿಟ್ಟರು. ಸಾಲದು ಎಂಬುದಕ್ಕೆ, ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ಪರಿಸ್ಥಿತಿ ಇನ್ನಷ್ಟು  ಹದಗೆಟ್ಟಿತ್ತು.  ಪುರುಷರು ರಾತ್ರಿಯಲ್ಲಿ ಕುಡಿದು ಬಾಗಿಲು ಬಡಿಯುತ್ತಾರೆ.  ನನ್ನ ಪತಿ ನಾವು ಉಳಿದುಕೊಂಡಿದ್ದ 3-ಸ್ಟಾರ್ ಹೋಟೆಲ್‌ನ ಮ್ಯಾನೇಜರ್ ಆಗಿದ್ದರು. ಆಗಿನ್ನೂ ನಮಗೆ ಪರಿಚಯವೂ ಇರಲಿಲ್ಲ. ಅವರು ನನ್ನನ್ನು ಸುರಕ್ಷಿತವಾಗಿಡಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಮತ್ತು ಪ್ರತಿದಿನ ನನ್ನ ಕೊಠಡಿಗಳನ್ನು ಬದಲಾಯಿಸುತ್ತಿದ್ದರು. ಬಡಿಯುವ ಶಬ್ದ ನನಗೆ ಇನ್ನೂ ನೆನಪಿದೆ. ಆಗ ನಾನು ಸಿಕ್ಕಾಪಟ್ಟೆ ಹೆದರುತ್ತಿದ್ದೆ ಎಂದಿದ್ದಾರೆ.

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿ ಸುದ್ದಿ ಬೆನ್ನಲ್ಲೇ ದಂಪತಿ ಮಾರಾಮಾರಿ: ಪತಿ ಕುತ್ತಿಗೆ ಹಿಡಿದ್ರೆ, ಪತ್ನಿ ಚಪ್ಪಲಿ ಎಸೆದಳು!
 
 ವಿಚಿತ್ರಾ ಅವರು ಚಿತ್ರೀಕರಣ ಮಾಡುತ್ತಿರುವ ಚಿತ್ರದ ಭಾಷೆಯನ್ನು ಬಹಿರಂಗಪಡಿಸದಿದ್ದರೂ, ಅವರು ದೃಶ್ಯಗಳ ವಿವರಣೆಯ ಆಧಾರದ ಮೇಲೆ ಬಾಲಕೃಷ್ಣ ಅವರ ತೆಲುಗು ಚಿತ್ರ ಭಲೇವಾದಿವಿ ಬಸು ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹಲವರು ನಂಬುತ್ತಾರೆ.  

Follow Us:
Download App:
  • android
  • ios