ಜೀ ಕನ್ನಡ ವಾಹಿನಿಯ ಜೋಡಿ ನಂಬರ್​ 1 ಷೋನ ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ಝಲಕ್​ ಇಲ್ಲಿದೆ ನೋಡಿ... 

ಕಳೆದ ಕೆಲವು ವಾರಗಳಿಂದ ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿದ್ದ ಜೋಡಿ ನಂಬರ್​ 1 ರಿಯಾಲಿಟಿ ಷೋನ ಗ್ರ್ಯಾಂಡ್​ ಫಿನಾಲೆ ಇಂದು (ಫೆ.3) ನಡೆಯಲಿದೆ. ಈ ಸ್ಪರ್ಧೆಯಲ್ಲಿ ಲಾವಣ್ಯಾ, ಶಶಿ ಹೆಗಡೆ, ಸುನೇತ್ರಾ ಪಂಡಿತ್-ರಮೇಶ್ ಪಂಡಿತ್, ಚಿದಾನಂದ್-ಕವಿತಾ, ಸಿಲ್ಲಿ ಲಲ್ಲಿ ಆನಂದ್-ಚೈತ್ರಾ, ಮಾಲತಿ ಸರ್‌ದೇಶಪಾಂಡೆ-ಯಶವಂತ್ ಸರ್‌ದೇಶಪಾಂಡೆ, ಸಂಜುಬಸಯ್ಯ-ಪಲ್ಲವಿ, ಮಂಜುನಾಥ್-ಅನುಷಾ, ಗಣೇಶ್ ಕಾರಂತ್-ವಿದ್ಯಾ, ನೇತ್ರಾವತಿ-ಸದಾನಂದ ಜೋಡಿ ಭಾಗವಹಿಸಿದ್ದು, ಜೋಡಿ ನಂಬರ್​ 1 ಯಾರಾಗಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ.

ಇದಾಗಲೇ ಹಲವಾರು ಸುತ್ತಿನ ಸ್ಪರ್ಧೆಗಳು ಜೋಡಿ ನಂಬರ್​-1 ವೇದಿಕೆಯಲ್ಲಿ ಕಂಡುಬಂದಿದೆ. ಸ್ಪರ್ಧಿಗಳು ತಮ್ಮ ಸ್ವೀಟ್​ ಹಾಗೂ ಕಹಿ ನೆನಪುಗಳನ್ನು ಇದರಲ್ಲಿ ಹಂಚಿಕೊಂಡಿದ್ದಾರೆ. ಇಂದು ನಡೆಯಲಿರುವ ಗ್ರ್ಯಾಂಡ್​ ಫಿನಾಲೆಯ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ನಿರೂಪಕಿ ಶ್ವೇತಾ ಚಂಗಪ್ಪ ಅವರು ಇಂದು ಗ್ರ್ಯಾಂಡ್​ ಫಿನಾಲೆಯ ಅನೌನ್ಸ್​ ಮಾಡಿದ್ದಾರೆ.

ವಧುವಿಗೆ ತಾಳಿ ಕಟ್ಟೋ ಮುನ್ನ ಎಲ್ಲರ ಕೈಲಿ ಮುಟ್ಟಿಸುವುದೇಕೆ? ಶ್ರೀರಸ್ತು ಶುಭಮಸ್ತು ದತ್ತಾ ಹೇಳಿದ್ದಾರೆ ನೋಡಿ..

ಅದೇ ವೇಳೆ, ಶಶಿ ಹಾಗೂ ಲಾವಣ್ಯ ವೇದಿಕೆಯ ಮೇಲೆ ಕಿಚ್ಚು ಹಚ್ಚಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಹೊಸದಾಗಿ ಮದುವೆಯಾಗಿ ಬಂದ ಅತ್ತೆ ತುಳಸಿಗೆ ಪೂರ್ಣಿ ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್‌ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಾಗಲೇ ಕೆಲವು ವಾರಗಳಿಂದ ವಿವಿಧ ರೀತಿಯಲ್ಲಿ ಜೋಡಿ ನಂಬರ್‌ 1 ವೇದಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದೆ ಈ ಜೋಡಿ. ಇದೀಗ ಶಶಿ ಮತ್ತು ಲಾವಣ್ಯ ಜೋಡಿ ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ಇದರ ಪ್ರೊಮೋ ಅನ್ನು ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದೆ. ಗ್ರ್ಯಾಂಡ್​ ಫಿನಾಲೆಯಲ್ಲಿ ಇವರು ಭರ್ಜರಿಯಾಗಿ ಸ್ಟೆಪ್​ ಹಾಕಿದ್ದಾರೆ. ನೀವೇ ಜೋಡಿ ನಂಬರ್​ 1 ಎಂದು ಪ್ರೇಮ್​ ಅವರು ಹೇಳಿದ್ದು, ನಿಜವಾಗಿಯೂ ಯಾರು ಗೆಲ್ಲಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. 

ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಪೂರ್ಣಿ ದಂಪತಿ!

View post on Instagram