ವಧುವಿಗೆ ತಾಳಿ ಕಟ್ಟುವ ಮುನ್ನ ಮಂಗಳಸೂತ್ರವನ್ನು ಎಲ್ಲರ ಕೈಯಲ್ಲಿಯೂ ಮುಟ್ಟಿಸುವ ಹಿಂದಿನ ಉದ್ದೇಶವೇನು? 

ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಬಹಳ ಪಾವಿತ್ರ್ಯತೆ ಇದೆ. ಮದುವೆ ಎನ್ನುವುದು ಎರಡು ಮನಸ್ಸುಗಳ ನಡುವಿನ ಸಂಬಂಧವಲ್ಲ, ಬದಲಿಗೆ ಇದು ಎರಡು ಕುಟುಂಬಗಳ ನಡುವಿನ ಸಂಬಂಧವಾಗಿದೆ. ಮದುವೆಯ ಸಂದರ್ಭದಲ್ಲಿ ಸಪ್ತಪದಿ ತುಳಿಯುವುದಕ್ಕೂ ವಿಶೇಷವಾದ ಅರ್ಥವಿದೆ. ಇದರದಲ್ಲಿ ವಧು-ವರನಿಗೆ ಮತ್ತು ವರ-ವಧುವಿಗೆ ನೀಡುವ ಮಾತಿನ ಕುರಿತು ಹೇಳಲಾಗುತ್ತದೆ. ಇಂದು ಮದುವೆಯೆನ್ನುವುದು ಆಡಂಬರದ ವಿಷಯವಾಗಿದೆ. ಅಂತಸ್ತಿಗೆ ತಕ್ಕಂತೆ ಮದುವೆ ಮಾಡುವ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಮ್ಮ ಸ್ಟೇಟಸ್​ ತೋರಿಸುವ ವಿಷಯವಾಗಿದೆ. ಅದೇನೇ ಇದ್ದರೂ ಹಲವರು ಇಂಥ ಮದುವೆಗಳಲ್ಲಿಯೂ ಸಂಪ್ರದಾಯವನ್ನು ಮರೆಯದೇ ಇರುವುದು ವಿಶೇಷ. 

ಮದುವೆಯ ಸಂದರ್ಭದಲ್ಲಿ ವಧುವಿಗೆ ತಾಳಿ ಕಟ್ಟಲು ಮೊದಲು, ಅಲ್ಲಿಗೆ ಬಂದಿರುವ ಸುಮಂಗಲಿಯರಿಂದ ತಾಳಿಯನ್ನು ಮುಟ್ಟಿಸುವ ಸಂಪ್ರದಾಯ ಹಿಂದೂಗಳಲ್ಲಿ ಇದೆ. ಪ್ರತಿಯೊಂದಕ್ಕೂ ಒಂದೊಂದು ಅರ್ಥ ಇರುವಂತೆಯೇ ತಾಳಿಯನ್ನು 
ಮದುವೆಗೆ ಬಂದಿರುವವರ ಕೈಯಿಂದ ಮುಟ್ಟಿಸುವುದಕ್ಕೂ ಅರ್ಥವಿದೆ. ಈ ಬಗ್ಗೆ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಚೆನ್ನಾಗಿ ಹೇಳಲಾಗಿದೆ. ಸೀರಿಯಲ್​ನಲ್ಲಿ ಹಿರಿಯರು ಎನಿಸಿಕೊಂಡಿರುವ ದತ್ತ ಇದರ ಬಗ್ಗೆ ಸುಂದರವಾದ ವರ್ಣನೆ ಮಾಡಿದ್ದಾರೆ. ಮದುವೆಗೂ ಮುನ್ನ ಅಂದರೆ ತಾಳಿ ಕಟ್ಟುವ ಮುನ್ನ ಆ ಮಂಗಳಸೂತ್ರವನ್ನು ಎಲ್ಲರೂ ಆಶೀರ್ವಾದ ಮಾಡಲಿ ಎನ್ನುವ ಉದ್ದೇಶ ಒಂದಾದರೆ, ಒಬ್ಬರ ಕೈಯಲ್ಲಾದರೂ ದೈವಿಶಕ್ತಿ ಇರುತ್ತದೆ. ಆ ಶಕ್ತಿಯ ಆಶೀರ್ವಾದ ತಾಳಿಯ ಮೇಲೆ ಬಿದ್ದರೆ ಪತ-ಪತ್ನಿ ನೂರ್ಕಾಲ ಚೆನ್ನಾಗಿ ಬಾಳುತ್ತಾರೆ ಎನ್ನುವ ಕಾರಣಕ್ಕಾಗಿಯೇ ತಾಳಿಯನ್ನು ಮುಟ್ಟಿಸಲಾಗುತ್ತದೆ ಎಂದಿದ್ದಾರೆ.

ಬಿಗ್​ಬಾಸ್​ನಲ್ಲಿ ಗೆಲ್ಲಲಿಲ್ಲವೆಂದು ತುಕಾಲಿಗೆ ಈ ಪರಿ ಚಚ್ಚಿ ಹಾಕೋದಾ ಹೆಂಡ್ತಿ? ವಿಡಿಯೋ ನೋಡಿ ಫ್ಯಾನ್ಸ್​ ಸುಸ್ತು!

ಇನ್ನು ಶ್ರೀರಸ್ತು ಶುಭಮಸ್ತು ಸೀರಿಯಲ್​ ವಿಷ್ಯಕ್ಕೆ ಬರುವುದಾದರೆ, ರಿಯಲ್​ನಲ್ಲಿ ಮಹಾ ಟ್ವಿಸ್ಟ್​ ಎದುರಾಗಿದೆ. ಎಲ್ಲಾ ಸಮಸ್ಯೆಗಳನ್ನು ದಾಟಿ ತುಳಸಿ ಮಾಧವ್​ ಮಗ ಅವಿಯ ಮದುವೆ ಮಾಡಿಸಿದ್ದಾಳೆ. ಅವಿಯ ಮದುವೆ ಆಗಬಾರದು ಎಂದು ಚಿಕ್ಕಮ್ಮ ಶಾರ್ವರಿ ಮಾಡಿದ ಪ್ಲ್ಯಾನ್​ ಎಲ್ಲಾ ಠುಸ್​ ಆಗಿದೆ. ಅವಿಯ ಮಾವನ ಜೊತೆ ಸೇರಿ ತಂತ್ರ ಹೆಣೆದಿದ್ದಳು ಶಾರ್ವರಿ. ಆದರೆ ಅವಿಯ ಪ್ರೇಯಸಿ ಇದಕ್ಕೆ ಅವಕಾಶ ಕೊಡದೇ ಅಪ್ಪನ ವಿರುದ್ಧವೇ ತಿರುಗಿ ಬಿದ್ದಳು. ಇದರಿಂದ ಮದುವೆಯೇನೋ ಆಗಿಬಿಟ್ಟಿದೆ. ಆದರೆ ಮದುವೆ ಮನೆಯಲ್ಲಿ, ಅವಿಯ ಮಾವ ತುಳಸಿಗೆ ಕಂಡೀಷನ್​ ಹಾಕಿದ್ದಾನೆ. 

ಅದೇನೆಂದರೆ, ನನ್ನ ಮಗಳು ಬರಬೇಕು ಎಂದರೆ ಮದುವೆ ಮನೆ ಹೊಸಲು ದಾಟಿ ಹೋಗಬೇಕು ಎಂದು. ಸದಾ ಎಲ್ಲರ ಹಿತವನ್ನೇ ಬಯಸುವ ತುಳಸಿ ತನ್ನಿಂದ ಮನೆಯವರಿಗೆ ಸಮಸ್ಯೆ ಆಗಬಾರದು ಎಂದುಕೊಂಡು ಇದಕ್ಕೆ ಒಪ್ಪಿದ್ದಾಳೆ. ಅತ್ತ ಮದುವೆಯಾಗುತ್ತಿದ್ದಂತೆಯೇ ಇತ್ತ ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದಾಳೆ. ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ. ತುಳಸಿಯ ಕಷ್ಟ ತೀರುವುದೇ ಇಲ್ಲವೆ ಎನ್ನುವ ಸ್ಥಿತಿಯಲ್ಲಿದೆ ಸದ್ಯ ಆಕೆಯ ಸ್ಥಿತಿ. ಆದರೆ ಮುಂದೇನಾಗುತ್ತದೆ, ತುಳಸಿ ಮನೆ ಬಿಟ್ಟು ಹೋಗುತ್ತಾಳಾ ಎನ್ನುವುದು ಈಗಿರುವ ಕುತೂಹಲ. 

ಬಿಗ್​ಬಾಸ್​ ಮನೆಯ ಕುತೂಹಲದ ವಿಷಯ ಬಿಚ್ಚಿಟ್ಟ ಸ್ಪರ್ಧಿಗಳಾದ ನೀತು, ಪವಿ ಪೂವಯ್ಯ, ಅವಿನಾಶ್​

View post on Instagram