Bigg Boss Kannada Season 13: ಬಿಗ್ ಬಾಸ್ ಕನ್ನಡ ಸೀಸನ್ 13ರ ವೀಕ್ಷಕರಿಗೆ ಖುಷಿ ಸುದ್ದಿಯೊಂದಿದೆ. ನಿಮಗೂ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಗಲಿದೆ. ಆದ್ರೆ ನೀವು ಏನು ಮಾಡ್ಬೇಕು ಗೊತ್ತಾ?

ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ಆರಂಭಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಪ್ರೋಮೋ ಮೂಲಕ ಬಿಗ್ ಬಾಸ್ ಟೇಕ್ ಆಫ್ ದಿನಾಂಕವನ್ನು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 13, ಸೆಪ್ಟೆಂಬರ್ 6ರಿಂದ ಆರಂಭವಾಗ್ತಿದೆ. ಈಗಾಗಲೇ ಬಿಗ್ ಬಾಸ್ ಅಗ್ನಿಪರೀಕ್ಷೆ ಶುರುವಾಗಿದ್ದು, ಅಲ್ಲಿ ಆಯ್ಕೆಯಾದ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.

ಇನ್ನು ಬಿಗ್ ಬಾಸ್ ವೀಕ್ಷಣೆ ಮಾಡುವ ವೀಕ್ಷಕರಿಗೆ ಸೂಪರ್ ಅವಕಾಶವೊಂದು ಸಿಗ್ತಿದೆ. ಇಷ್ಟೂ ಸೀಸನ್ ಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಿದ್ದವರು ನೀವಾಗಿದ್ರೆ ಈ ಬಾರಿಯೂ ಮಿಸ್ ಮಾಡ್ದೆ ಬಿಗ್ ಬಾಸ್ ರಿಯಾಲಿಟಿ ಶೋ ನೋಡಿ.

ಬಿಗ್ ಬಾಸ್ ವೀಕ್ಷಕರಿಗೆ ಭರ್ಜರಿ ಆಫರ್

ನೀವು JioHotstarನಲ್ಲಿ ಬಿಗ್ ಬಾಸ್ ನೋಡ್ತಿದ್ದರೆ ನಿಮಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಒಂದು ಸಿಗ್ತಿದೆ. ಜಿಯೋ ಹಾಟ್ಸ್ಟಾರ್ ಇಂಥ ಅವಕಾಶವನ್ನು ವೀಕ್ಷಕರಿಗೆ ನೀಡ್ತಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ಬಿಗ್ ಬಾಸ್ ವೀಕ್ಷಣೆಗೆ ಹೆಚ್ಚು ವಾಚ್ ಟೈಮ್ ಗಳಿಸಿದವರಿಗೆ ವಾಚ್ ಟೈಮ್ ಆಧಾರದ ಮೇಲೆ ಪಾಯಿಂಟ್ಸ್ ಸಿಗಲಿದೆ. ಎಷ್ಟು ಹೆಚ್ಚು ಬಿಗ್ ಬಾಸ್ ನೋಡ್ತೀರೋ, ಅಷ್ಟು ಹೆಚ್ಚು ಪಾಯಿಂಟ್ಸ್ ನಿಮ್ಮದಾಗುತ್ತೆ.

ಪಾಯಿಂಟ್ಸ್‌ ಇಟ್ಕೊಂಡು ಏನು ಮಾಡೋದು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿದ್ರೆ ನಿಮಗೆ ಪಾಯಿಂಟ್ ಪಟ್ಟಿಯಲ್ಲಿ ಸ್ಥಾನ ಸಿಗಲಿದೆ. ನೀವು ಅತಿಥಿಯಾಗಿ ಬಿಗ್‌ ಬಾಸ್ ಮನೆಗೆ ಹೋಗುವ ಅವಕಾಶವನ್ನು ಪಡಿತೀರಿ.

ಇಷ್ಟು ದಿನ ಟಿವಿಯಲ್ಲಿ ಬಿಗ್‌ ಬಾಸ್‌ ಮನೆ ನೋಡಿ ಎಂಜಾಯ್‌ ಮಾಡ್ತಿದ್ದ ನಿಮಗೆ ಈಗ ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಅವಕಾಶವನ್ನು ಜಿಯೋ ಹಾಟ್‌ ಸ್ಟಾರ್ ನೀಡ್ತಿದೆ. ನೀವು ಪ್ರತಿ ದಿನ ಎಷ್ಟು ಗಂಟೆ ಬಿಗ್‌ ಬಾಸ್‌ ನೋಡ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹೆಚ್ಚು ಹೊತ್ತು ಬಿಗ್‌ ಬಾಸ್‌ ನೋಡಿದ 40 ಮಂದಿ ಟಾಪ್ 40 ಪಟ್ಟಿ ಸೇರಲಿದ್ದಾರೆ. ಅವರೆಲ್ಲರಿಗೂ ಬಿಗ್‌ ಬಾಸ್‌ ಅತಿಥಿಯಾಗಿ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡುವ ಅವಕಾಶ ಸಿಗುತ್ತದೆ.

ಬಿಗ್‌ ಬಾಸ್‌ ಟೈಮ್

ಬಿಗ್‌ ಬಾಸ್ ಶೋ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ಬಿಗ್‌ ಬಾಸ್‌ ಅಗ್ನಿಪರೀಕ್ಷೆ ಕಲರ್ಸ್‌ ಕನ್ನಡ ಹಾಗೂ ಜಿಯೋ ಹಾಟ್‌ ಸ್ಟಾರ್‌ ನಲ್ಲಿ ಪ್ರಸಾರವಾಗ್ತಿದ್ದು, ಸ್ಪರ್ಧಿಗಳ ಭವಿಷ್ಯ ಜನರ ಕೈನಲ್ಲಿದೆ. ಅತಿ ಹೆಚ್ಚು ಮತ ಗಳಿಸಿದವರು ಬಿಗ್‌ ಬಾಸ್‌ ಮನೆ ಸೇರಲಿದ್ದಾರೆ. ಜಿಯೋ ಹಾಟ್ ಸ್ಟಾರ್‌ ನಲ್ಲಿ ವೋಟಿಂಗ್‌ ಶುರುವಾಗಿದೆ. ಒಬ್ಬರು ಒಂದು ಮತ ಹಾಕುವ ಅವಕಾಶ ಇದ್ದು, 19 ಸ್ಪರ್ಧಿಗಳಲ್ಲಿ ಮೂವರು ಬಿಗ್‌ ಬಾಸ್‌ ಮನೆ ಸೇರಲಿದ್ದಾರೆ.