MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Entertainment
  • TV Talk
  • Bigg Bossಗೆ ಹೋಗಿದ್ದೇ ನನ್ನ ಜೀವನದ ದೊಡ್ಡ ಫೆಲ್ಯೂರ್​: ರಿಷಾ ಗೌಡ ಶಾಕಿಂಗ್​ ಸ್ಟೇಟ್​ಮೆಂಟ್​

Bigg Bossಗೆ ಹೋಗಿದ್ದೇ ನನ್ನ ಜೀವನದ ದೊಡ್ಡ ಫೆಲ್ಯೂರ್​: ರಿಷಾ ಗೌಡ ಶಾಕಿಂಗ್​ ಸ್ಟೇಟ್​ಮೆಂಟ್​

ಬಿಗ್​ಬಾಸ್​ 12ರ ಸ್ಪರ್ಧಿ ರಿಷಾ ಗೌಡ, ದೊಡ್ಮನೆಗೆ ಹೋಗಿದ್ದು ತಮ್ಮ ಜೀವನದ ಅತಿದೊಡ್ಡ ಫೇಲ್ಯೂರ್ ಎಂದು ಹೇಳಿದ್ದಾರೆ. ಬಿಗ್​ಬಾಸ್​ನಿಂದ ಜನಪ್ರಿಯತೆ ಸಿಕ್ಕರೂ, ಅದು ತಾನು ಮಾಡಿದ ದೊಡ್ಡ ತಪ್ಪು ಎನಿಸುತ್ತಿದೆ ಎಂದು ಸಂದರ್ಶನವೊಂದರಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

2 Min read
Author : Suchethana D
Published : Aug 24 2026, 01:43 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​ 12 ಟಫೆಸ್ಟ್​ ಸ್ಪರ್ಧಿ
Image Credit : nammakannadadm Instagram

ಬಿಗ್​ಬಾಸ್​ 12 ಟಫೆಸ್ಟ್​ ಸ್ಪರ್ಧಿ

ಬಿಗ್​ಬಾಸ್​ 12 (Bigg Boss 12)ರ ಟಫೆಸ್ಟ್​ ಸ್ಪರ್ಧಿ ಎನ್ನಿಸಿಕೊಂಡಿದ್ದ ರಿಷಾ ಗೌಡ ಅವರು, 'ಬಿಗ್‌ ಬಾಸ್'ಗೆ ಎಂಟ್ರಿ ಕೊಟ್ಟ 5ನೇ ವಾರದಲ್ಲಿ ದೊಡ್ಮನೆಯಿಂದ ಔಟ್‌ ಆಗಿ ಹೊರ ಬಂದವರು. ನಟಿ, ಮಾಡೆಲ್, ರಂಗಭೂಮಿ ಕಲಾವಿದೆ, ರಾಷ್ಟ್ರೀಯ ಕ್ರೀಡಾಸ್ಪರ್ಧಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನನ್ನ ಜೀವನದ ಫೆಲ್ಯೂರ್​
Image Credit : Instagram

ನನ್ನ ಜೀವನದ ಫೆಲ್ಯೂರ್​

ಬಿಗ್​ಬಾಸ್​ನಿಂದ ಸಾಕಷ್ಟು ಹೆಸರು ಮಾಡಿರುವ ನಟಿ, ಇದೀಗ ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ. ಬಿಗ್​ಬಾಸ್​​ಗೆ ಹೋಗಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಫೇಲ್ಯೂರ್​. ಇದನ್ನು ನಾನು ಈಗ ಹೇಳುತ್ತಿದ್ದೇನೆ ಎಂದಿದ್ದಾರೆ. ಬಿಗ್​ಬಾಸ್​​ಗೂ ಮುನ್ನ ಎರಡು ವರ್ಷ ಆ್ಯಕ್ಟಿಂಗ್​ ಮಾಡಿದ್ದೆ. ಆದರೆ ಜನರು ಗುರುತಿಸಲಿಲ್ಲ, ಬಿಗ್​ಬಾಸ್​​ ನನ್ನನ್ನು ಗುರುತಿಸುವಂತೆ ಮಾಡಿದ್ದು ನಿಜವಾದರೂ, ಅದು ನನ್ನ ಜೀವನದ ಜೊತೆ ಫೆಲ್ಯೂರ್​ ಎಂದಿದ್ದಾರೆ.

Related Articles

Related image1
Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ
Related image2
Bigg Boss ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಗೆ ಗೆಟ್​ ಔಟ್​ ಎಂದ ವಿನಯ್​ ಗೌಡ: ಮುಂದೇನಾಯ್ತು ನೋಡಿ
36
ನಾನು ಮಾಡಿದ ದೊಡ್ಡ ತಪ್ಪು
Image Credit : Social Media

ನಾನು ಮಾಡಿದ ದೊಡ್ಡ ತಪ್ಪು

ಬಿಫೋರ್​ ಬಿಗ್​ಬಾಸೇ ನನಗೆ ಚೆನ್ನಾಗಿತ್ತು. ಬಿಗ್​ಬಾಸ್​​ಗೆ ಹೋಗುವುದು ನಾನು ಮ್ಯಾನಿಫೆಸ್ಟೇಷನ್​ ಮಾಡಿಕೊಂಡಿದ್ದೆ. ನಾನು ಯಾರು ಎಂದು ಕರ್ನಾಟಕಕ್ಕೆ ಗೊತ್ತಾಗಲಿ ಎಂದುಕೊಂಡೆ. ಆದರೆ ಅದೇ ನಾನು ಮಾಡಿದ ದೊಡ್ಡ ಮಿಸ್ಟೇಕ್​ ಎಂದು ಎನ್ನಿಸುತ್ತಿದೆ. ನಾನು ಈಗ ಕರ್ನಾಟಕದ ಜನತೆ ನನಗೆ ಪ್ರೀತಿ ಕೊಡಲಿ ಎಂದು ಮ್ಯಾನಿಫೆಸ್ಟೇಷನ್​ ಮಾಡಿಕೊಳ್ಳುತ್ತಿದ್ದೇನೆ. ಇದು ಕೂಡ ಈಡೇರುವ ಭರವಸೆ ಇದೆ ಎಂದು nammakannadadm ಚಾನೆಲ್​ಗೆ ವರ ಮಹಾಲಕ್ಷ್ಮಿ ಹಬ್ಬದ ದಿನದಂದು ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ ನಟಿ.

46
ಬಿಗ್​ಬಾಸ್​​ಗೆ ಹೋಗಿದ್ದೇಕೆ?
Image Credit : Social Media

ಬಿಗ್​ಬಾಸ್​​ಗೆ ಹೋಗಿದ್ದೇಕೆ?

ಈ ಹಿಂದೆ ನಟಿ, ತಾವು ಬಿಗ್​ಬಾಸ್​ಗೆ ಹೋಗಿದ್ದೇಕೆ ಎನ್ನುವ ಗುಟ್ಟನ್ನು ಇದೀಗ ರಿವೀಲ್​ ಮಾಡಿದ್ದರು. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿಷಾ ಅವರು, ಈ ವಿಷಯವನ್ನು ತಿಳಿಸಿದ್ದಾರೆ. ನನಗೆ 11ನೇ ಸೀಸನ್​ನಲ್ಲಿಯೇ ಕರೆ ಬಂದಿತ್ತು. ಆದರೆ ತುಂಬಾ ಬಿಜಿಯಾಗಿದ್ದ ಕಾರಣ, ಹೋಗಲು ಆಗಿರಲಿಲ್ಲ ಎಂದಿದ್ದರು. ಈ ಸಲವೂ ಕರೆಬಂದಿತ್ತು. ನೀವು ಬರಲೇಬೇಕು ಎಂದು ಕರೆ ಮಾಡಿದ್ದರು. ಪದೇ ಪದೇ ಇಲ್ಲ ಎನ್ನಲು ಚೆನ್ನಾಗಿರಲ್ಲ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. ಈ ಸಲವೂ ಬಿಜಿ ಇದ್ದೆ. ಅವುಗಳ ನಡುವೆಯೇ ಸಮಯ ಹೊಂದಾಣಿಕೆ ಮಾಡಿಕೊಂಡು ಬಂದೆ. ಕಳೆದ ಬಾರಿ ಹೋಗದೇ ಇದ್ದುದಕ್ಕೆ ಈ ಸಲ ಕರೆ ಬರಬಹುದು ಎಂದು ಗೊತ್ತಿತ್ತು. ಅದಕ್ಕಾಗಿಯೇ ಸಿದ್ಧವಾಗಿದ್ದೆ ಎಂದಿದ್ದರು ನಟಿ.

56
ನಟಿಯ ಕುರಿತು
Image Credit : Instagram

ನಟಿಯ ಕುರಿತು

ಅಷ್ಟಕ್ಕೂ ರಿಷಾ ಗೌಡ ಕುರಿತು ಹೇಳುವುದಾದರೆ, ಇವರು ಮೈಸೂರಿನವರು. 2019ರಲ್ಲಿ ಮಿಸ್ ಮೈಸೂರು, 2020ರಲ್ಲಿ ಮಿಸ್ ಕರ್ನಾಟಕ ಪಟ್ಟ ಗೆದ್ದಿದ್ದಾರೆ. 2021ರಲ್ಲಿ 'ಕ್ರೇಜಿ ಕೀರ್ತಿ' ಸಿನಿಮಾದಲ್ಲಿ ನಟಿಸಿದ್ದು, ಇದು SIIMAಯಲ್ಲಿ ಅತ್ಯುತ್ತಮ ಚೊಚ್ಚಲ ನಟಿ ವಿಭಾಗಕ್ಕೆ ನಾಮನಿರ್ದೇಶನಗೊಂಡಿತು.

66
ಹಲವು ಭಾಷೆಗಳಲ್ಲಿ ನಟನೆ
Image Credit : Instagram

ಹಲವು ಭಾಷೆಗಳಲ್ಲಿ ನಟನೆ

ನಂತರ 'ಜೂನಿಯರ್' (ತೆಲುಗು) ಮತ್ತು 'ಆಸ್ಟಿನ್ ನ ಮಹಾನ್ ಮೌನ', ಭಗೀರಥ ಸಿನಿಮಾಗಳಲ್ಲಿ ನಟಿಸಿದರು. 'ಬೆಂಗಳೂರು ಇನ್' (ಧರ್ಮ ಕೀರ್ತಿ ನಿರ್ದೇಶನ), 'ಪ್ರರಕಾಮಿ' (ಪ್ರಮೋದ್ ಶೆಟ್ಟಿ ನಟಿಸಿದ್ದು), 'ಪಿಂಗಕ್ಷ' ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾಗಳಾದ 'ಮಿಸ್ ಕರೋನಲ್', 'ಡಿಯರ್ ಲವ್'ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಷಾ ಗೌಡಗೆ ರಂಗಭೂಮಿ ನಂಟು ಕೂಡ ಇದೆ. ರಿಷಾ "ಬಿಗ್ ಬಾಸ್ ಮೂಲಕ ಜನರ ಪ್ರೀತಿಯನ್ನು ಸಂಪಾದಿಸಬಹುದು. ಅದಕ್ಕಾಗಿ ನಾನು ಈ ಮನೆಗೆ ಬಂದಿದ್ದೇನೆ" ಎಂದು ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಬಿಗ್ ಬಾಸ್ ಕನ್ನಡ
ಟಿವಿ ಶೋ
ರಿಯಾಲಿಟಿ ಶೋ

Latest Videos
Recommended Stories
Recommended image1
ಬಡ್ದು ಬಾಯಿಗೆ ಹಾಕೊಂಡು ತೇಗಿದ ಮಂಜ; ಟಾಸ್ಕ್ ಬಳಿಕ ಭುಗಿಲೆದ್ದ ಬೇಸ್‌ ವಾಯ್ಸ್‌ ಜಗಳ!
Recommended image2
Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು
Recommended image3
ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ
Related Stories
Recommended image1
Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ
Recommended image2
Bigg Boss ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಗೆ ಗೆಟ್​ ಔಟ್​ ಎಂದ ವಿನಯ್​ ಗೌಡ: ಮುಂದೇನಾಯ್ತು ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved