10 ಸಲ ಸೋತು 1 ಸಲ ಗೆದ್ದಿರುವೆ; ಬೆಸ್ಟ್‌ ಎಂಟರ್ಟೈನರ್ ಅವಾರ್ಡ್ ಪಡೆದ ಗಿಲ್ಲಿ ನಟ!

ಮೊದಲ ಸಲ ಅವಾರ್ಡ್ ಪಡೆದ ಗಿಲ್ಲಿ ನಟ. ಗಗನಾ- ಗಿಲ್ಲಿ ಕಾಂಬಿನೇಷನ್‌ ಮೆಚ್ಚಿಕೊಂಡ ವೀಕ್ಷಕರು....

Gilli nata wins zee kannada best entertainer award winners speech viral vcs

ಜೀ ಕನ್ನಡ ವಾಹಿನಿಯ ಜನಪ್ರಿಯ ವ್ಯಕ್ತಿ ಗಿಲ್ಲಿ ನಟರಾಜ್‌ ಈ ವರ್ಷ ಜೀ ಕನ್ನಡದ ಬೆಸ್ಟ್‌ ಎಂಟರ್ಟೈನರ್ ಅವಾರ್ಡ್ ಪಡೆದುಕೊಂಡಿದ್ದಾರೆ. ವೇದಿಕೆ ಮೇಲೆ ಅವಾರ್ಡ್ ಪಡೆಯಲುತ್ತಲೇ ಕುಣಿದ ಗಿಲ್ಲಿ ಕೊಟ್ಟ ಕೊಟ್ಟ ವಿನ್ನಿಂಗ್ ಸ್ಪೀಚ್ ವೈರಲ್ ಆಗಿದೆ. 

'ನಾನು ಒಂದೇ ಸಲ ಗೆದ್ದಿರೋನು 10 ಸಲ ಬಿದ್ದಿರೋನು..ಬಿದ್ದು ಗೆದ್ದ ಮೇಲೆ ಮಜಾ ಇರುತ್ತದೆ ಅಲ್ವಾ ಅದೇ ಇದು. ಸೆಟ್ ಕೆಲಸ ಮಾಡಿದ ಹುಡುಗ ನಾನು...ಕಮಲಿ ಸೀರಿಯಲ್‌ನಲ್ಲಿ ಆರ್ಟ್ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ನಾನು. ಆ ಕಲಾವಿದರ ಜೊತೆ ಕುಳಿತುಕೊಂಡು ಅವರೊಟ್ಟಿಗೆ ನಟಿಸುತ್ತಾ ಈ ವೇದಿಕೆ ಮೇಲೆ ಬಂದು ಅವಾರ್ಡ್ ಪಡೆಯುತ್ತೀನಿ ಅಂದ್ರೆ ಅದಕ್ಕಿಂತ ಮತ್ತೊಂದು ಖುಷಿ ಏನಿದೆ?' ಎಂದು ಅವಾರ್ಡ್ ಸ್ವೀಕರಿಸಿ ಗಿಲ್ಲಿ ಮಾತನಾಡಿದ್ದಾರೆ.

ಜೀ ಕನ್ನಡ ಬೆಸ್ಟ್‌ ಫೈಂಡ್ ಅವಾರ್ಡ್ ಪಡೆದ ಗಗನಾ; ಗಿಲ್ಲಿ ನಟನಿಗೆ ಅನ್ಯಾಯ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು!

'ಮನೆ ಬಿಟ್ಟು ಬೆಂಗಳೂರಿಗೆ ಬಂದಾಗ ಎರಡು ಮೂರು ವರ್ಷ ಊರಿಗೆ ಹೋಗಿರಲಿಲ್ಲ, ಸಿನಿಮಾಗಳಲ್ಲಿ ನೋಡಿದ್ದೀನಿ ಹೀಗಾಗಿ ಸಾಧನೆ ಮಾಡುವವರೆಗೂ ಊರಿಗೆ ಹೋಗಲ್ಲ ಅನ್ನೋ ಹಠ ಮಾಡಿದ್ದೆ. ಒಮ್ಮೆ ತಂದೆಗೆ ಹುಷಾರು ಇರಲಿಲ್ಲ ಅವರನ್ನು ನೋಡಲು ಬೆಂಗಳೂರಿಗೆ ಹೋಗಿದ್ದೆ...ಆಗ ಅನಿಸಿತ್ತು ತಂದೆ ತಾಯಿ ಬೈಯುತ್ತಾರೆ ಅಂತ ಅವರನ್ನು ಎದುರು ಹಾಕಿಕೊಂಡು ಸಾಧನೆ ಮಾಡಲು ಅವರಿಂದ  ದೂರ ಉಳಿದುಬಿಟ್ಟರೆ, ನಾನು ಸಾಧನೆ ಮಾಡಿದ ಸಮಯದಲ್ಲಿ ನನ್ನನ್ನು ಮತ್ತು ಸಾಧನೆ ನೋಡಲು ಅವರೇ ಇರಲ್ಲ ಅಂದ್ರೆ ಕಷ್ಟವಾಗುತ್ತದೆ. ನಾನು ಸಾಧನೆ ಮಾಡಲು 5 ವರ್ಷ ಆಗುತ್ತೋ 10 ವರ್ಷ ಆಗುತ್ತೋ ಆದರೆ ತಂದೆ ತಾಯಿ ಅವರನ್ನು ಚೆನ್ನಾಗಿ ಖುಷಿಯಿಂದ ನೋಡಿಕೊಳ್ಳಬೇಕು ಅದಕ್ಕಿಂತ ಜೀವನದಲ್ಲಿ ಮತ್ತೊಂದು ಏನು ಇಲ್ಲಿ ಅನಿಸಲು ಶುರುವಾಗಿತ್ತು. ಅಜ್ಜಿ ಊರಿನಲ್ಲಿ ಪಿತೃಪಕ್ಷ ಮಾಡುತ್ತಾರೆ ಆಗ ಅಲ್ಲಿದ್ದವರು ನನ್ನ ಅಮ್ಮ ಅಪ್ಪನ ತೋರಿಸಿ ಗಿಲ್ಲಿ ತಂದೆ ಗಿಲ್ಲಿ ತಾಯಿ ಅಂತ ಪರಿಚಯ ಮಾಡಿಕೊಟ್ಟರಂತೆ ಆಗ ಅವರಿಗೆ ತುಂಬಾ ಖುಷಿಯಾಗಿದೆ' ಎಂದು ಗಿಲ್ಲಿ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios