ಜೀ ಕನ್ನಡ ಬೆಸ್ಟ್ ಫೈಂಡ್ ಅವಾರ್ಡ್ ಪಡೆದ ಗಗನಾ; ಗಿಲ್ಲಿ ನಟನಿಗೆ ಅನ್ಯಾಯ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು!
ಅವಾರ್ಡ್ ಪಡೆದು ಪ್ರತಿಯೊಬ್ಬರಿಗೂ ಧನ್ಯಾವಾದಗಳನ್ನು ತಿಳಿಸಿದ ಗಗನ. ಗಿಲ್ಲಿ ನಟನನ್ನು ನಿರ್ಲಕ್ಷ್ಯ ಮಾಡಲು ಕಾರಣವೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾನಟಿ' ಕಾರ್ಯಕ್ರಮದಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡು ಕಿರುತೆರೆ ವೀಕ್ಷಕರ ಮನಸ್ಸಿಗೆ ಹತ್ತಿರವಾದ ಸುಂದರಿ ಗಗನ. ಮಹಾನಟಿ ಕಾರ್ಯಕ್ರಮದ ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಣ್ಣ ಅವಧಿಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಗಗನ ಈ ವರ್ಷ ಜೀ ಕುಟುಂಬ ಅವಾರ್ಡ್‌ನ ಬೆಸ್ಟ್ ಫೈಂಡ್ ಆಗಿ ದಿ ಇಯರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.
'ಈ ಭೂಮಿಗೆ ನನ್ನನ್ನು ಪರಿಚಯಿಸಿದ್ದು ನಮ್ಮ ಅಪ್ಪ ಅಮ್ಮನೇ ಇರಬಹುದು ಆದರೆ ಜನಕ್ಕೆ ನನ್ನನ್ನು ಪರಿಚಯ ಮಾಡಿದ್ದು ಜೀ ಕನ್ನಡ. ಅಂದು ರಮೇಶ್ ಅರವಿಂದ್ ಸರ್ ಬಳಿ ಗೋಲ್ಡನ್ ಟಿಕೆಟ್ ಪಡೆದ ದಿನದಿಂದ ಹಿಡಿದು ಇಂದು ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರೇಮಾ ಮೇಡಂ ಬಳಿ ಅವಾರ್ಡ್ ಪಡೆಯುವವರೆಗೂ ನನ್ನ ಜೊತೆಯಾಗಿ ನಿಂತಿದ್ದು ನಮ್ಮ ಪ್ರೋಗ್ರಾಂ ಟೀಂ. ವಿಘ್ನೇಶ್ ಸರ್, ಕುಟ್ಟಿ ವಿಘ್ನೇಶ್ ಸರ್, ಅಪೂರ್ವ ಮೇಡಂ, ಭಾಸ್ಕಿ ಸರ್ ಮತ್ತು ಗಣೇಶ್ ಸರ್ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನ ಮಹಾನಟಿ ತಂಡದಿಂದ ರಮೇಶ್ ಸರ್, ನಿಶ್ವಿಕಾ ಮೇಡಂ, ಪ್ರೇಮಾ ಮೇಡಂಗೆ ವಂದನೆಗಳು. ನಮಗೆ ತುಂಬಾ ಆಸೆ ಪ್ರೇಮಾ ಮೇಡಂ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಅವರನ್ನು ಭೇಟಿ ಮಾಡಬೇಕು ಎಂದು ಆದರೆ ಅದಕ್ಕಿಂತ ಹೆಚ್ಚಾಗಿ ಬ್ಯೂಟಿಫುಲ್ ಕ್ಷಣಗಳನ್ನು ಕ್ರಿಯೇಟ್ ಮಾಡಿಕೊಟ್ಟಿದ್ದು ಮಹಾನಟಿ ತಂಡ ಅದನ್ನು ಜೀವನ ಪೂರ್ತಿ ಹಂಚಿಕೊಳ್ಳುತ್ತೀನಿ. ಜೀ ಕನ್ನಡ ವಾಹಿನಿಯ ಒಬ್ಬ ವ್ಯಕ್ತಿ ಆಗಿದ್ದರೆ ಗಟ್ಟಿಯಾಗಿ ತಬ್ಬಿಕೊಂಡು ಐ ಲವ್ ಯು ಜೀ ನನ್ನ ಪರಿಗಣಿಸಿದ್ದಕ್ಕೆ ನನ್ನನ್ನು ನಿಮ್ಮಲ್ಲಿ ಒಬ್ಬಳನಾಗಿ ಮಾಡಿಕೊಂಡಿದ್ದಕ್ಕೆ ವಂದನೆಗಳು ಎಂದು ಹೇಳುತ್ತಿದ್ದೆ. ವೇದಿಕೆ ಮೇಲೆ ಅದೆಷ್ಟೋ ಸಲ ಪದಗಳಲ್ಲಿ ತಪ್ಪು ಮಾಡಿದ್ದೀನಿ, ಮೌನವಾಗಿ ನಿಂತಿದ್ದೀನಿ ಆಗ ನನ್ನ ತಪ್ಪುಗಳನ್ನು ಮುಚ್ಚಾಗಿ ನೀನು ಮಾತನಾಡು ಎಂದು ಧೈರ್ಯ ಹೇಳುತ್ತಿದ್ದರು ಅನುಶ್ರೀ ಅಕ್ಕ' ಎಂದು ಗಗನ ವೇದಿಕೆ ಮೇಲೆ ಮಾತನಾಡಿದ್ದಾರೆ.
ಶೋ ಒಪ್ಪಿಕೊಂಡು ಮನೋರಂಜನೆ ನೀಡುತ್ತೀವಿ ಅಂದ್ರೆ ಇಲ್ಲಸಲ್ಲದ ಮಾತನಾಡಬಾರದು; ನಮ್ರತಾ ಗೌಡ ಗರಂ ಪೋಸ್ಟ್ ವೈರಲ್!
ಚಿತ್ರದುರ್ಗದ ಗಗನ ಎಂಟ್ರಿ ಕೊಡುತ್ತಿದ್ದಂತೆ ದುರ್ಗಾ ನಮ್ಮ ಸ್ವರ್ಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಟನೆ ಮತ್ತು ಡ್ಯಾನ್ಸ್‌ನಲ್ಲಿ ಮಿಂಚುತ್ತಿರುವ ಗಗನಾ ಈ ಅವಾರ್ಡ್ ಪಡೆದಿರುವುದಕ್ಕೆ ವೇದಿಕೆ ಮೇಲೆ ಭಾವುಕರಾಗಿದ್ದಾರೆ. ಆದರೆ ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ನೆಗೆಟಿವ್ ಕಾಮೆಂಟ್ಸ್ ಬಂದಿದೆ....ಗಗನ ಡಿಕೆಡಿ ಕಾರ್ಯಕ್ರಮದಲ್ಲಿ ಹೆಸರು ಮಾಡಲು ಕಾರಣ ಗಿಲ್ಲ ನಟರಾಜ್‌ನಿಂದ ಆತನಿಗೂ ಧನ್ಯವಾದಗಳನ್ನು ಹೇಳಬೇಕು ಅಥವಾ ಗಿಲ್ಲಿ ನಟನಿಗೆ ಅವಾರ್ಡ್ ಕೊಡಬೇಕು ಆದರೆ ಯಾವುದೇ ಕಾರಣಕ್ಕೂ ಗಿಲ್ಲಿ ಹೆಸರು ಹೇಳಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಫೋನ್ ಇಲ್ಲ ಊಟ ಇಲ್ಲ ಹಣ ಇಲ್ಲ ಮಗ ತುಂಬಾ ಪರದಾಡಿದ್ದಾನೆ: ಗಿಲ್ಲಿ ನಟನ ಪರಿಸ್ಥಿತಿ ನೆನೆದು ಪೋಷಕರು ಕಣ್ಣೀರು!