ಈ ಚರ್ಚೆಯ ಮಧ್ಯೆ ಜಾತಿಯ ವಿಷಯ ಕೂಡ ನುಸುಳಿ, ಅದೀಗ ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. 'ಗಿಲ್ಲಿ ಉತ್ತಮ ಕಲಾವಿದ. ಕುರುಬ ಎಂಬ ಕಾರಣಕ್ಕೆ ಕುರುಬ ಸಮುದಾಯದ ಜನರೆಲ್ಲಾ ವೋಟ್ ಮಾಡಿ ಅನ್ನೋದು ಗಿಲ್ಲಿಯ ಪ್ರತಿಭೆಗೆ ಮಾಡಿದ ಅವಮಾನ ಎಂಬ ಕೂಗು ಎದ್ದಿದೆ.ಇದೀಗ ಫಿನಾಲೆಗೆ ಹೊಸ ಕಾವು ಏರಿದೆ.

'ಬಿಗ್ ಬಾಸ್ ಕನ್ನಡ ಸೀಸನ್ 12' ಶೋ ಫಿನಾಲೆ (Bigg Boss Kannada Finale) ನಾಳೆ, ಅಂದರೆ ಜನವರಿ 17 ಮತ್ತು 18ರಂದು ನಡೆಯಲಿದೆ. ಈ ರಿಯಾಲಿಟಿ ಶೋನಲ್ಲಿ ಯಾರು ವಿನ್ ಆಗುತ್ತಾರೆ ಎಂಬುದನ್ನು ನೋಡಲು ಬಿಗ್ ಬಾಸ್ ಪ್ರಿಯರು ಕಾದಿದ್ದಾರೆ. ಎಲ್ಲರಿಗೂ ಬಹಳಷ್ಟು ಕುತೂಹಲ ಇದೆ. ಗಿಲ್ಲಿ ನಟ (Gilli Nata) ಅವರೇ ಗೆಲ್ಲುತ್ತಾರೆ ಎಂಬುದು ಬಹುತೇಕ ವೀಕ್ಷಕರು ಹಾಗೂ ಸೋಷಿಯಲ್ ಮೀಡಿಯಾ ಅಭಿಪ್ರಾಯ ಆಗಿದೆ. ಆದರೂ ಕೂಡ ನಿಜವಾಗಿಯೂ ಯಾರು ಗೆಲ್ಲುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ.

ಅವರಿಗೆ ಅಶ್ವಿನಿ ಗೌಡ (Ashwini Gowda) ಕೂಡ ಸಾಕಷ್ಟು ಪೈಪೋಟಿ ನೀಡುತ್ತಿದ್ದಾರೆ. ಅಶ್ವಿನಿ ಗೌಡ ಕೂಡ ಹಲವರ ಪ್ರಕಾರ, ಗೆಲ್ಲುವ ಫೆವರೆಟ್. ಅಶ್ವಿನಿ ಗೌಡ ಪರವಾಗಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಗರು ಸಿಕ್ಕಾಪಟ್ಟೆ ಪಚಾರ ಮಾಡುತ್ತಿದ್ದಾರೆ. ಪ್ರಚಾರದ ಭರದಲ್ಲಿ ಜಾತಿ ಮತ್ತು ಭಾಷೆಯ ವಿಷಯವನ್ನು ಎಳೆದು ತರಲಾಗುತ್ತಿದೆ. ಅದೀಗ ದೊಡ್ಡ ಇಶ್ಯೂ ಆಗ್ತಿದೆ.

ಹೇಳಿಕೇಳಿ, ಅಶ್ವಿನಿ ಗೌಡ ಅವರು ಕನ್ನಡಪರ ಹೋರಾಟಗಾರ್ತಿ, ಜೊತೆಗೆ ನಟಿ ಕೂಡ ಹೌದು. 'ಬಿಗ್ ಬಾಸ್ ಕನ್ನಡ ಸೀನಸ್ 12' ಶೋಗೆ ಬಂದ ಬಳಿಕ ಅಶ್ವಿನಿ ಗೌಡ ಅವರ ಖ್ಯಾತಿ ಮೊದಲಿಗಿಂತ ಸಾಕಷ್ಟು ಹೆಚ್ಚಾಗಿದೆ. ಅಶ್ವಿನಿ ಪರವಾಗಿ ಕನ್ನಡ ಪರ ಹೋರಾಟಗಾರರು ಪ್ರಚಾರ ಮಾಡಿ ವೋಟ್ ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಕನ್ನಡ ಭಾಷೆಯ ವಿಷಯವನ್ನು ಮುಂದಿಟ್ಟುಕೊಂಡು ಅಶ್ವಿನಿಗೆ ಜನರ ವೋಟ್ ಕೇಳಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾರಣ, ಅಶ್ವಿನಿಗೆ ಓಟ್ ಹಾಕಲು ಅವರು ಕೊಟ್ಟಿರುವ ಕಾರಣವನ್ನು ಮಾತ್ರ ಕೆಲವರಿಗೆ ಒಪ್ಪಲಾಗುತ್ತಿಲ್ಲ.

'ಕೇವಲ ಅಶ್ವಿನಿ ಮಾತ್ರವೇ ಕನ್ನಡಿಗರೇನಲ್ಲ. ಬಿಗ್ ಬಾಸ್ ಮನೆಯಲ್ಲಿ ಇರುವವರು ಎಲ್ಲರೂ ಕನ್ನಡಿಗರು. ಹಾಗಾಗಿ ಕೇವಲ ಕನ್ನಡದ ವಿಷಯವನ್ನು ಮುಂದಿಟ್ಟುಕೊಂಡು ಯಾಕೆ ವೋಟ್ ಕೇಳುತ್ತಿದ್ದೀರಿ' ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೇ, ಅಶ್ವಿನಿ ಗೌಡ ಅವರಿಗೆ ಸರಿಯಾಗಿ ಕನ್ನಡ ಬರೆಯಲು ಬರುವುದಿಲ್ಲ ಹಾಗೂ ಮಾತಿನ ನಡುವೆ ಅವರು ಹೆಚ್ಚು ಇಂಗ್ಲಿಷ್ ಪದಗಳನ್ನು ಬಳಸುತ್ತಾರೆ ಎಂಬ ಟೀಕೆ ಕೂಡ ಇದೆ. ಅದಕ್ಕೆ ಕನ್ನಡ ಪರ ಹೋರಾಟಗಾರರು ಕೂಡ ಸೀಕ್ತವಾದ ಉತ್ತರ ನೀಡಿದ್ದಾರೆ.

'ಕನ್ನಡದ ಪರ ಹೋರಾಟ ಮಾಡಲು ಕನ್ನಡ ಭಾಷೆಯ ಬಗ್ಗೆ ಸಂಪೂರ್ಣ ಜ್ಞಾನ ಇರಲೇಬೇಕು ಅಂತೇನೂ ಇಲ್ಲ. ಅಷ್ಟಕ್ಕೂ ಚೆನ್ನಾಗಿ ಕನ್ನಡ ಬಲ್ಲವರು ಎಷ್ಟು ಜನರು ಕನ್ನಡಪರ ಹೋರಾಟದಲ್ಲಿ ಭಾಗವಹಿಸಿದ್ದಾರೆ, ಭಾಗಿಯಾಗುವ ಮನಸ್ಸು ಮಾಡುತ್ತಾರೆ? ಅದೆಷ್ಟು ಜನರು ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರೆ? ಎಷ್ಟು ಜನರ ಮೇಲೆ ಕೇಸ್ ಇದೆ' ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.

ಇದೀಗ ಈ ಚರ್ಚೆಯ ಮಧ್ಯೆ ಜಾತಿಯ ವಿಷಯ ಕೂಡ ನುಸುಳಿದೆ. ಅದೀಗ ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. 'ಗಿಲ್ಲಿ ಉತ್ತಮ ಕಲಾವಿದ. ಕುರುಬ ಎಂಬ ಕಾರಣಕ್ಕೆ ಕುರುಬ ಸಮುದಾಯದ ಜನರೆಲ್ಲಾ ವೋಟ್ ಮಾಡಿ ಅನ್ನೋದು ಗಿಲ್ಲಿಯ ಪ್ರತಿಭೆಗೆ ಮಾಡಿದ ಅವಮಾನ. ನೈಜ ಪ್ರತಿಭೆ ಯಾರೇ ಆಗಿದ್ದರೂ ಯಾವುದೇ ಜನಾಂಗದ ವ್ಯಕ್ತಿಯಾಗಿದ್ದರೂ ಅದನ್ನು ಬೆಂಬಲಿಸಬೇಕು. ಅದು ಬಿಟ್ಟು 'ಕುರುಬ' ಸಮೂದಾಯ ಎಂದು ವೋಟ್ ಕೇಳೋದು ಎಷ್ಟು ಸರಿ ಎಂಬ ಬಾದ ಇದೀಗ ಶುರುವಾಗಿದೆ.

ಬಿಗ್ ಬಾಸ್ ಫಿನಾಲೆ ಹತ್ತಿರ ಆದಾಗಿನಿಂದ ಈ ರೀತಿಯ ಚರ್ಚೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿವೆ. ಈ ಮೊದಲು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ್ದರು. ಇಂದು ಕನ್ನಡಪರ ಹೋರಾಟಗಾರರಿಂದ ಅಶ್ವಿನಿ ಗೌಡ ಅವರಿಗೆ ಸಿಗುತ್ತಿರುವ ಬೆಂಬಲ ಅಂದು ರೂಪೇಶ್ ರಾಜಣ್ಣ ಅವರಿಗೆ ಸಿಕ್ಕಿರಲಿಲ್ಲ ಎಂಬ ಟೀಕೆ ಸಹ ಎದುರಾಗಿದೆ. ಆದರೆ, ಎಲ್ಲ ಚರ್ಚೆಗಳಿಗೂ ಬಿಗ್ ಬಾಸ್ ಫಿನಾಲೆ ಅಂತ್ಯ ಹಾಡಲಿರುವುದಂತೂ ಪಕ್ಕಾ. ಆಮೇಲೆ ಕೂಡ ಅದೂ ಇದೂ ವಾದ-ವಿವಾದಗಳು ನಡೆಯಬಹುದು. ಆದರೆ, ಎಲ್ಲವೂ ಮುಗಿದ ಮೇಲೆ ಏನೇ ನಡೆದರೂ ಅದು ವೇಸ್ಟ್!