ಗೌತಮಿ ಜಾಧವ್ ಮಿಡ್‌ವೀಕ್ ಎಲಿಮಿನೇಟ್ ಆಗೋದು ಗ್ಯಾರಂಟಿ? ಇದು ಜನರೇ ಕೊಟ್ಟ ತೀರ್ಪು!

ಬಿಗ್ ಬಾಸ್ ಕನ್ನಡ ಸೀಸನ್ 11ರ ಸೆಮಿಫಿನಾಲೆಯಿಂದ ಈ ವಾರ ಮಧ್ಯಂತರದಲ್ಲಿಯೇ ಯಾರು ಹೊರಗೆ ಹೋಗಲಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿಯಿಂದ ಹಾಕಲಾಗಿದ್ದ ಓಟಿಂಗ್ ಪೋಲ್‌ನಲ್ಲಿ ಅತಿಹೆಚ್ಚಿನ ಜನರು ಗೌತಮಿ ಜಾಧವ್‌ ಅವರನ್ನು ಹೊರಗೆ ಕಳುಹಿಸುವುದಕ್ಕೆ ಮತವನ್ನು ಹಾಕಿದ್ದಾರೆ.

Gauthami Jadav mid-week eliminated from Bigg Boss Kannada 11 house sat

ಬೆಂಗಳೂರು (ಜ.14): ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಜನ ಸ್ಪರ್ಧಿಗಳು ಇದ್ದು ಈ ವಾರ ವಾರದ ಮಧ್ಯದಲ್ಲಿಯೇ (ಮಿಡಲ್ ವೀಕ್) ಎಲಿಮಿನೇಷನ್ ಆಗಲಿದೆ. ಈ ವಾರ ಯಾರು ಮಧ್ಯಂತರದಲ್ಲಿಯೇ ಹೋಗಲಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿಯಿಂದ ಹಾಕಲಾಗಿದ್ದ ಓಟಿಂಗ್ ಪೋಲ್‌ನಲ್ಲಿ ಅತಿಹೆಚ್ಚಿನ ಜನರು ಗೌತಮಿ ಜಾಧವ್‌ನನ್ನು ಹೊರಗೆ ಕಳುಹಿಸುವುದಕ್ಕೆ ಮತವನ್ನು ಹಾಕಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ಸೆಮಿಫಿನಾಲೆ ಆರಂಭವಾಗಿದೆ. ಚೈತ್ರಾ ಕುಂದಾಪುರ ಅವರು 15ನೇ ವಾರದಲ್ಲಿ ಮನೆಗೆ ಹೋಗಿದ್ದಾರೆ. ಇದಾದ ನಂತರ 16ನೇ ವಾರದಲ್ಲಿ ಸೆಮಿ ಫಿನಾಲೆ ಆರಂಭವಾಗಲಿದ್ದು, ಈ ವಾರ ಮಿಡಲ್ ವೀಕ್ ಎಲಿಮಿನೇಷನ್ ಆಗಲಿದೆ. ಇದಕ್ಕೆ ಬಿಗ್ ಬಾಸ್ ಕೊಡುವ ಟಾಸ್ಕ್‌ನ ಜೊತೆಗೆ ಜನರು ಹಾಕುವ ಮತಗಳು ಕೂಡ ಆಧಾರ ಆಗಿರುತ್ತವೆ ಎಂದು ಹೇಳಲಾಗಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಕಳೆದ ಎರಡು ದಿನಗಳಿಂದ ನಡೆಸಲಾಗುತ್ತಿರುವ ಟಾಸ್ಕ್‌ನಲ್ಲಿ ಭವ್ಯಾಗೌಡ, ಮೋಕ್ಷಿತಾ ಪೈ, ಗೌತಮಿ ಜಾಧವ್ ಅವರು ಮಹಿಳಾ ಸ್ಪರ್ಧಿಗಳಿದ್ದಾರೆ.

ಉಳಿದಂತೆ ಉಗ್ರಂ ಮಂಜು, ರಜತ್ ಕಿಶನ್, ತ್ರಿವಿಕ್ರಮ್, ಧನರಾಜ್ ಆಚಾರ್ ಹಾಗೂ ಫೈನಲಿಸ್ಟ್ ಗಾಯಕ ಹನುಮಂತು ಪುರುಷ ಸ್ಪರ್ಧಿಗಳಿದ್ದಾರೆ. ಈ ಪೈಕಿ ಭವ್ಯಾಗೌಡ ಮತ್ತು ಮೋಕ್ಷಿತಾ ಅತಿಹೆಚ್ಚು ಅಂಕ ಗಳಿಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಮಿಡಲ್‌ವೀಕ್ ಎಲಿಮಿನೇಷನ್‌ನಲ್ಲಿ ಅಂಕಗಳಲ್ಲಿ ಯಾವುದೇ ಖಾತೆ ತೆರೆಯದ ಗೌತಮಿ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಜನರು ಕೂಡ ಗೌತಮಿ ಜಾಧವ್ ಅವರನ್ನೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಬೇಕು ಎಂದು ಮತಗಳನ್ನು ಹಾಕಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹಾಕಲಾದ 'ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ ಸಿಗುತ್ತೆ?' ಓಟಿಂಗ್ ಪೋಲ್‌ನಲ್ಲಿ ಗೌತಮಿ ಆಟಕ್ಕೆ ಫುಲ್‌ಸ್ಟಾಪ್ ಸಿಗಲಿದೆ ಎಂದು ಅತಿಹೆಚ್ಚು ಮತಗಳನ್ನು ಹಾಕಿದ್ದಾರೆ.

ಇದನ್ನೂ ಓದಿ: ಡಾಕ್ಟರ್ ಮುಂದೆ ವಾಂತಿ ಮಾಡಿದ್ದೀನಿ, ನನಗೆ PCOD ಸಮಸ್ಯೆ ಇದೆ; ಆರೋಗ್ಯದ ಬಗ್ಗೆ ಚೈತ್ರಾ ಕುಂದಾಪುರ ಸ್ಪಷ್ಟನೆ

ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ ಸಿಗುತ್ತೆ? ಎಂಬ ಪ್ರಶ್ನೆಗೆ ಮೋಕ್ಷಿತಾ- 1000, ಭವ್ಯಾ- 1800, ತ್ರಿವಿಕ್ರಮ್- 372, ಗೌತಮಿ- 7500, ಧನರಾಜ್- 554, ರಜತ್ ಕಿಶನ್ 332, ಹಾಗೂ ಉಗ್ರಂ ಮಂಜು ಅವರಿಗೆ- 403 ಮತಗಳನ್ನು ಹಾಕಿದ್ದಾರೆ. ಅಂದರೆ ಇಲ್ಲಿ 8 ಸ್ಪರ್ಧಿಗಳಿಗೆ ಸುಮಾರು 12 ಸಾವಿರ ಜನರು ಓಟಿಂಗ್ ಮಾಡಿದ್ದಾರೆ. ಈ ಪೈಕಿ ಅತಿ ಹೆಚ್ಚಾಗಿ ಗೌತಮಿ ಅವರಿಗೆ ಮತ ಹಾಕಿ ಮನೆಗೆ ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ. ಅದು ಕೂಡ ಗೌತಮಿ ಅವರಿಗೆ 7,500 ಮತಗಳು ಮನೆಗೆ ಕಳುಹಿಸಬೇಕು ಎಂದು ಹೇಳಿದರೆ, ಉಳಿದ 7 ಜನ ಸ್ಪರ್ಧಿಗಳನ್ನು ಮನೆಗೆ ಕಳುಹಿಸಬೇಕು ಎಂದು ಹಾಕಿದ ಒಟ್ಟು ಮತಗಳ ಸಂಖ್ಯೆ ಕೇವಲ 4,500ಕ್ಕಿಂತ ಹೆಚ್ಚಾಗಿಲ್ಲ. ಒಟ್ಟಾರೆ ಗೌತಮಿ ಅವರೇ ಮಿಡ್ಲ್ ವೀಕ್ ಎಲಿಮಿನೇಟ್ ಆಗಬೇಕು ಎಂಬುದು ಎಂಬುದು ಜನರ ತೀರ್ಮಾನ ಆಗಿದೆ.

ಕಲರ್ಸ್ ಕನ್ನಡ ವಾಹಿನಿಯ ಓಟಿಂಗ್ ಪೋಲ್ ವಿವರ ಇಲ್ಲಿದೆ ನೋಡಿ..
Gauthami Jadav mid-week eliminated from Bigg Boss Kannada 11 house sat

ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡ 11: ಈ ವಾರ ಮಿಡ್‌ವೀಕ್‌ ಎಲಿಮಿನೇಶನ್‌ ಘೋಷಿಸಿದ ಕಿಚ್ಚ, ಮನೆಗೆ ಹೋಗೋದು ಎಷ್ಟು ಮಂದಿ?

ಇದನ್ನು ಕೇವಲ ಕಲರ್ಸ್ ಕನ್ನಡದ  ವಾಹಿನಿಯ ಓಟಿಂಗ್ ಪೋಲ್ ಆಧಾರದಲ್ಲಿ ಗೌತಮಿ ಜಾಧವ್ ಮಿಡ್ ವೀಕ್ ಎಲಿಮಿನೇಟ್ ಆಗಬಹುದು ಎಂದು ಊಹಿಸಲಾಗುತ್ತಿದೆ. ಆದರೆ, ಅಂತಿಮವಾಗಿ ಇನ್ನು ಎರಡು ದಿನಗಳ ಕಾಲ ನಡೆಯುವ ಟಾಸ್ಕ್‌ನಲ್ಲಿ ಗೌತಮಿ ಜಾಧವ್ ಉತ್ತಮವಾಗಿ ಆಟವಾಡಿ ಹೆಚ್ಚಿನ ಅಂಕ ಗಳಿಸಿದರೆ ಮನೆಯಲ್ಲಿ ಉಳಿದುಕೊಳ್ಳಬಹುದು. ಅವರ ಬದಲಾಗಿ ಕಡಿಮೆ ಅಂಕವಿರುವ ಯಾರಾದರೂ ಎಲಿಮಿನೇಟ್ ಆಗಬಹುದು. ಇದೇ ರೀತಿ ಕಳೆದ ವಾರದ ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಹಾಕಾಲಿದ್ದ ಓಟಿಂಗ್ ಪೋಲ್‌ನಲ್ಲಿ ಭವ್ಯಾ ಗೌಡ ಅವರಿಗೆ 12000 ಮತಗಳು ಹಾಗೂ ಚೈತ್ರಾ ಕುಂದಾಪುರ ಅವರಿಗೆ 9,000 ಮತಗಳು ಬಿದ್ದಿದ್ದವು. ಆದರೆ, ಜನರು ನಿರೀಕ್ಷೆ ಮಾಡಿದಂತೆ ಆಗದೇ ಭವ್ಯಾಗೌಡ ಎಲಿಮಿನೇಷನ್‌ನಿಂದ ಪಾರಾದ ಮೊದಲ ಸ್ಪರ್ಧಿಯಾದರು. ಉಳಿದಂತೆ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿ ಹೊರಬಂದರು.

Latest Videos
Follow Us:
Download App:
  • android
  • ios