ಡಾಕ್ಟರ್ ಮುಂದೆ ವಾಂತಿ ಮಾಡಿದ್ದೀನಿ, ನನಗೆ PCOD ಸಮಸ್ಯೆ ಇದೆ; ಆರೋಗ್ಯದ ಬಗ್ಗೆ ಚೈತ್ರಾ ಕುಂದಾಪುರ ಸ್ಪಷ್ಟನೆ
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಎದುರಿಸಿದ ಆರೋಗ್ಯ ಸಮಸ್ಯೆಗಳು ಏನು? ಯಾಕೆ ಪದೇ ಪದೇ ಡಾಕ್ಟರ್ ಬಳಿ ಹೋಗುತ್ತಿದ್ದರು.
ಬಿಗ್ ಬಾಸ್ ಸೀಸನ್ 11ರಲ್ಲಿ ಅತಿ ಹೆಚ್ಚು ಕಳಪೆ ಪಡೆದ ಸ್ಪರ್ಧಿ ಚೈತ್ರಾ ಕುಂದಾಪುರ. ಬಿಗ್ ಬಾಸ್ ಮನೆ ಜೈಲು ನನಗೆ ತವರು ಮನೆ ಇದ್ದಂತೆ ಎಂದು ಹಾಸ್ಯ ಕೂಡ ಮಾಡಿದ್ದರು. ಇದೆಲ್ಲರ ನಡುವೆ ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಸಾಕಷ್ಟು ಗಾಸಿಪ್ ಹಬ್ಬಿತ್ತು. ಸುಮ್ಮನೆ ಹುಷಾರಿಲ್ಲದಂತೆ ವರ್ತಿಸುತ್ತಾರೆ ಡಾಕ್ಟರ್ ಜೊತೆ ಹೋಗುತ್ತಾರೆ ಹಾಗೆ ಹೀಗೆ ಎಂದು. ಯಾಕೆ ಚೈತ್ರಾ ಆರೋಗ್ಯ ಪದೇ ಪದೇ ಕೈ ಕೊಡುತ್ತಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
'ನಾನು ಡಾಕ್ಟರ್ ಎದುರಿಗೆ ವಾಂತಿ ಮಾಡಿದ್ದೀನಿ, ಡಾಕ್ಟರ್ ಎದುರಿಗೆ ಆರೋಗ್ಯ ಸಮಸ್ಯೆಗಳು ಬಂದೆ, ನನ್ನ UTI ರಿಪೋರ್ಟ್‌ಗಳು ಸಾಕ್ಷಿಯಾಗಿ ಬಂದಿತ್ತು ಹಾಗೂ PCOD ಸಮಸ್ಯೆಗಳ ಇತ್ತು. ಜೈಲಿಗೆ ಹೋದಾಗ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಆಗುತ್ತದೆ ಏಕೆಂದರೆ ಅಲ್ಲಿನ ಹೀಟ್, ಲೈಟ್, ಎಸಿಗಳಿಂದ ನಮ್ಮ ತಿಂಗಳ ಸೈಕಲ್‌ಗಳಲ್ಲಿ ತುಂಬಾ ಬದಲಾವಣೆ ಆಗುತ್ತಿತ್ತು. ಶೋಭಾ ಕಳೆಪೆ ಪಡೆದು ಜೈಲಿಗೆ ಹೋದ ಮೇಲೆ ಸ್ವಿಇಚ್ಛೆಯಿಂದ ಮನೆಗೆ ಹೋದರು ಏಕೆಂದರೆ ಅವರ ಆರೋಗ್ಯ ಸುಧಾರಿಸಲಿಲ್ಲ. ಪಿಸಿಓಡಿ ಇದ್ದಾಗ ಮಾನಸಿಕವಾಗಿ ಎಷ್ಟು ಮೂಡ್ ಸ್ವಿಂಗ್‌ಗಳನ್ನು ಎದುರಿಸುತ್ತೀವಿ ಅನ್ನೋದು ಬಹುತೇಕರಿಗೆ ಗೊತ್ತಿದೆ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಚೈತ್ರಾ ಮಾತನಾಡಿದ್ದಾರೆ.
ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಚೈತ್ರಾ ಕುಂದಾಪುರ; ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನಾ?
'ನಾನು ಮೊದಲೇ ಕರಾವಳಿಯವಳಾಗಿ ನನಗೆ ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಆಯ್ತು. ಒಂದು ವಾರ ಪೂರ್ತಿ ಎಪಿ ಮತ್ತು ಲೈಟ್‌ಗಳ ನಡುವೆ ಇರುತ್ತೀವಿ ಆದರೆ ಕಳಪೆಗೆ ಬಂದಾಗ ಏನೂ ಅಂದ್ರೆ ಏನೂ ಇರುವುದಿಲ್ಲ. ನಾರ್ಮಲ್ ವಾತಾವರಣಕ್ಕೆ ಬಾಡಿ ಸೆಟ್ ಆಗಬೇಕು, ರಾತ್ರಿ ಒಮ್ಮೆ ಸಿಕ್ಕಾಪಟ್ಟೆ ಕೋಲ್ಡ್ ಆಗುತ್ತಿತ್ತು ಅದರ ನಡುವೆ ರಾಗಿ ಗಂಜಿ ಮಾತ್ರ ಕಡಿಯಬೇಕು. ಬೇರೆ ಹೆಣ್ಣು ಮಕ್ಕಳು ಹೋಗದೇ ಇರದ ಕಾರಣ ಅವರಿಗೆ ಸಮಸ್ಯೆಗಳು ಏನು ಅನ್ನೋದು ಅರ್ಥವಾಗುತ್ತಿರಲಿಲ್ಲ. ಇಡೀ ದಿನ ಒಬ್ಬರನ್ನು ಕೂಡು ಹಾಕಿದ್ದರೆ ಮಾನಸಿಕವಾಗಿ ಕುಗ್ಗುತ್ತೀವಿ. ಕಳಪೆ ಪಡೆದು ಕಷ್ಟ ಅನುಭವಿಸಿದಾಗ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದದೆ. ಒಂದು ಸಲ ಕಳಪೆ ಪಡೆದ ಭವ್ಯಾ ತುಂಬಾ ಬೇಸರಲ್ಲಿ ಇದ್ದಳು, ಆಕೆಗೆ ಇಡೀ ಮನೆ ಸಪೋರ್ಟ್ ಇದ್ದರೂ ಕೂಡ ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡಳು' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜನಾ? ಚೈತ್ರಾ ಕುಂದಾಪುರ ಮಾತುಕೇಳಿ ಕುಟುಂಬಸ್ಥರು ಶಾಕ್