ಬಿಗ್‌ಬಾಸ್ ಕನ್ನಡ 11: ಈ ವಾರ ಮಿಡ್‌ವೀಕ್ ಎಲಿಮಿನೇಶನ್ ಘೋಷಿಸಿದ ಕಿಚ್ಚ, ಮನೆಗೆ ಹೋಗೋದು ಎಷ್ಟು ಮಂದಿ?
ಬಿಗ್‌ಬಾಸ್ ಕನ್ನಡ 11 ಸೆಮಿಫಿನಾಲೆ ವಾರಕ್ಕೆ ಕಾಲಿಟ್ಟಿದ್ದು, ಹನುಮಂತ ಹೊರತುಪಡಿಸಿ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಮಿಡ್‌ವೀಕ್ ಮತ್ತು ವೀಕೆಂಡ್ ಎಲಿಮಿನೇಷನ್‌ನಲ್ಲಿ ಯಾರು ಹೊರ ಹೋಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಬಿಗ್‌ಬಾಸ್ ಕನ್ನಡ 11 ಸೆಮಿಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆದರು. ಟಿಕೆಟ್ ಟು ಫಿನಾಲೆಗೆ ಕಾಲಿಟ್ಟ ಮನೆಯ ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತ ಬಿಟ್ಟು ಮನೆಯ ಎಲ್ಲಾ ಸದಸ್ಯರು ಸೆಮಿಫಿನಾಲೆ ವೀಕ್ ನಲ್ಲಿ ನಾಮಿನೇಟ್ ಆಗಿದ್ದಾರೆ.
ಮಾತ್ರವಲ್ಲ ಕಿಚ್ಚ ಸುದೀಪ್ ಈ ವಿಚಾರವನ್ನು ಖುದ್ದು ಸ್ಪರ್ಧಿಗಳಿಗೆ ತಿಳಿಸಿದ್ದು, ಮಿಡ್ ವೀಕ್ನಲ್ಲಿ ಎಲಿಮಿನೇಟ್ ಇದೆ ಎಂದಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ. ಹನುಮಂತನ ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದೀರಿ. ಹೋಗುವವರಿಗೆ ಈಗಲೇ ಬ್ಯಾಡ್ ಲಕ್ ಹೇಳುತ್ತಿದ್ದೇನೆ. ಎಲ್ಲರೂ ಚೆನ್ನಾಗಿ ಆಟ ಆಡಿ. ಎಲ್ಲರಿಗೂ ಗುಡ್ ಲಕ್’ ಎಂದು ಕಿಚ್ಚ ಸುದೀಪ್ ಜನವರಿ 13ರ ಎಪಿಸೋಡ್ ನಲ್ಲಿ ವಿಡಿಯೋ ಸಂದೇಶ ಕಳುಹಿಸಿದ್ದರು.
ತ್ರಿವಿಕ್ರಮ್‌ಗೆ 'ಮೈಂಡ್ ಯುವರ್ ಲಾಂಗ್ವೇಜ್' ಎಂದ ಭವ್ಯಾ ಗೌಡ; 105 ದಿನಗಳ ಸ್ನೇಹಕ್ಕೆ ಎಳ್ಳುನೀರು!
ವಾರದ ಮಧ್ಯದಲ್ಲಿ ಹೋಗುವ ಸ್ಪರ್ಧಿಯು ಸುದೀಪ್ ಅವರನ್ನು ಭೇಟಿಯಾಗುವುದಿಲ್ಲ. ವೀಕೆಂಡ್ ಸಂಚಿಕೆಯಲ್ಲಿ ಕರೆದು ಎಲಿಮಿನೇಟ್ ಆದ ಸ್ಪರ್ಧಿಯನ್ನು ಮಾತನಾಡಿಸಬಹುದು. ಇದರ ಜೊತೆಗೆ ವೀಕೆಂಡ್ ನಲ್ಲೂ ಒಬ್ಬರ ಎಲಿಮಿನೇಶನ್ ನಡೆಯಲಿದೆ.
ಈ ಮೂಲಕ ಫಿನಾಲೆ ವಾರಕ್ಕೆ ಒಟ್ಟು 6 ಜನ ಎಂಟ್ರಿ ಕೊಡಲಿದ್ದಾರೆ. ಒಂದು ವೇಳೆ ಈ ವಾರದಲ್ಲಿ ಡಬಲ್ ಎಲಿಮಿನೇಶನ್ ನಡೆದರೆ, ಫಿನಾಲೆ ವಾರಕ್ಕೆ ಹನುಮಂತ ಸೇರಿಸಿ ಬೇಕಾದ 5 ಜನ ಎಂಟ್ರಿ ಕೊಡಲಿದ್ದಾರೆ.
ಹನುಮಂತ ಹೊರತುಪಡಿಸಿ ಮನೆಯಲ್ಲಿರುವ ಧನರಾಜ್, ರಜತ್, ಗೌತಮಿ ಜಾದವ್, ಮೋಕ್ಷಿತಾ ಪೈ, ಭವ್ಯಾ ಗೌಡ, ಉಗ್ರಂ ಮಂಜು, ತ್ರಿವಿಕ್ರಮ್ ಅವರು ಕಾಲಕಾಲಕ್ಕೆ ಬಿಗ್‌ಬಾಸ್ ಕೊಡುವ ಟಾಸ್ಕ್ ಗೆದ್ದು ತಮ್ಮ ಉಳಿವಿಗಾಗಿ ಹೋರಾಟ ಮಾಡಿ ಮಿಡ್ ವೀಕ್ ಎಲಿಮಿನೇಶನ್‌ನಿಂದ ತಪ್ಪಿಸಿಕೊಳ್ಳಬಹುದು.
ಬಿಗ್‌ಬಾಸ್ 11ರ ವಿನ್ನರ್ ಘೋಷಿಸಿದ ವಿಕಿಪಿಡಿಯಾ: ಅಭಿಮಾನಿಗಳ ಸಂಭ್ರಮಾಚರಣೆ- ಆದದ್ದೇನು?
ಸರಣಿ ಟಾಸ್ಕ್ ನಲ್ಲಿ ಮೊದಲು ಯಾರು ಆಡಬೇಕೆಂದು ನಿರ್ಧರಿಸುವ ಹಕ್ಕು ಕ್ಯಾಪ್ಟನ್ ಹನುಮಂತ ಅವರಿಗಿತ್ತು. ಅದರಂತೆ ಭವ್ಯಾ ಗೌಡ ಅವರನ್ನು ಆಯ್ಕೆ ಮಾಡಿದರು. ಭವ್ಯಾ ಅವರು ಮೊದಲ ಟಾಸ್ಕ್ ನಲ್ಲಿ ಮೂವರು ಎದುರಾಳಿಗಳನ್ನು ಆಯ್ಕೆ ಮಾಡಬೇಕು. ಮೋಕ್ಷಿತಾ, ಗೌತಮಿ, ರಜತ್ ಆಯ್ಕೆ ಮಾಡಿದರು. ಈ ಟಾಸ್ಕ್ ನಲ್ಲಿ ಮೋಕ್ಷಿತಾ ಗೆಲುವು ಕಂಡರು. ಎರಡನೇ ಟಾಸ್ಕ್ ನಲ್ಲಿ ಎದುರಾಳಿಯನ್ನು ಆಯ್ಕೆ ಮಾಡುವ ಅವಕಾಶ ಮೋಕ್ಷಿತಾ ಅವರಿಗೆ ಸಿಕ್ಕಿತು. ಅದರಂತೆ ಮಂಜು, ಭವ್ಯಾ, ಧನ್‌ರಾಜ್ ಅವರನ್ನು ಆಯ್ಕೆ ಮಾಡಿದರು. ಇದರಲ್ಲಿ ಭವ್ಯಾ ಗೆದ್ದರು.
ಮೂರನೇ ಟಾಸ್ಕ್ ನಲ್ಲಿ ಎದುರಾಳಿಯನ್ನು ಆಯ್ಕೆ ಮಾಡುವ ಅವಕಾಶ ಭವ್ಯಾ ಅವರದ್ದಾಗಿತ್ತು. ಆ ಪ್ರಕಾರ ಧನು, ತ್ರಿವಿಕ್ರಮ್, ಮೋಕ್ಷಿತಾ ಅವರನ್ನು ಆಯ್ಕೆ ಮಾಡಿದರು. ಇದರಲ್ಲಿ ಧನ್‌ರಾಜ್ ವಿನ್ ಆದರು. ನಾಲ್ಕನೇ ಟಾಸ್ಕ್ ನಲ್ಲಿ ಎದುರಾಳಿಯನ್ನು ಆಯ್ಕೆ ಮಾಡುವ ಅಧಿಕಾರ ಧನ್‌ರಾಜ್ ಅವರ ಪಾಲಾಗಿದೆ. ನಾಳಿನ ಸಂಚಿಕೆಯಲ್ಲಿ ಧನು ಯಾರನ್ನು ಆಯ್ಕೆ ಮಾಡಿದ್ದಾರೆ. ಯಾರು ಎಷ್ಟು ಅಂಕಗಳನ್ನು ಪಡೆದಿದ್ದಾರೆ. ಏನೇನು ಆಗಲಿದೆ ಎಂಬುದು ತಿಳಿಯಲಿದೆ.