ಕೆಟ್ನಾಗಿ ಕಮೆಂಟ್ಸ್ ಮಾಡೋರಿಗೆ ಕ್ಲಾಸ್ ತಗೊಂಡ ಗಟ್ಟಿಮೇಳದ ಅಮೂಲ್ಯ

ಗಟ್ಟಿಮೇಳ ಸೀರಿಯಲ್ ನಾಯಕಿ ಅಮೂಲ್ಯ ಪಾತ್ರಧಾರಿ ನಿಶಾ ಮಿಲನಾಗೆ ಸಿಟ್ಟು ಬಂದಿದೆ. ಕೋಪದಲ್ಲಿ ಮೂಗಿನ ತುದಿ ಕೆಂಪಾಗಿದ್ರೂ, ನಂಗೇನು ಸಿಟ್ಟು ಬರಲ್ಲ ಅನ್ನುತ್ತಲೇ ಕೆಟ್ಟದಾಗಿ ಕಮೆಂಟ್ ಮಾಡೋರಿಗೆ ಕ್ಲಾಸ್ ತಗೊಂಡಿದ್ದಾರೆ. ಅಷ್ಟಕ್ಕೂ ವಿಷ್ಯ ಏನು ಗೊತ್ತಾ?

 

gattimela actress Nisha Milan asks netizens to keep away from troll

ಗಟ್ಟಿಮೇಳ ಸೀರಿಯಲ್‌ ಟಿಆರ್‌ಪಿಯಲ್ಲಿ ಟಾಪ್‌ ೩ಯೊಳಗೇ ಇರುತ್ತದೆ. ಹೀಗಾಗಿ ಅತೀ ಹೆಚ್ಚು ವೀಕ್ಷಕರು ಈ ಸೀರಿಯಲ್‌ಗಿದ್ದಾರೆ. ಅಂದಮೇಲೆ ಈ ಸೀರಿಯಲ್‌ನ ಹೀರೋ ಹೀರೋಯಿನ್‌ಗಳಿಗೂ ಒಳ್ಳೆಯ ಫ್ಯಾನ್‌ ಫಾಲೋವಿಂಗ್‌ ಇರಲೇಬೇಕಲ್ವಾ? ಇದ್ದೇ ಇದೆ. ಫ್ಯಾನ್ಸ್ ಫಾಲೋವಿಂಗ್ ಇರೋದು ಮಾತ್ರ ಅಲ್ಲ ಅವರ ಅತೀ ಪ್ರೀತಿ, ಅತೀ ಪೊಸೆಸ್ಸಿವ್‌ನೆಸ್‌ ಈ ಸೀರಿಯಲ್‌ ಹೀರೋಯಿನ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಕೆ ಬೇರೆ ದಾರಿ ಕಾಣದೇ ಇನ್‌ಸ್ಟಾ ಲೈವ್‌ಗೆ ಬಂದು ಹೀಗೆಲ್ಲ ನೀವು ಮಾಡಿದ್ರೆ ನಂಗೆ ಕಷ್ಟ ಆಗುತ್ತೆ ಅನ್ನೋದನ್ನೂ ಸ್ಟ್ರಿಕ್ಟ್ ಆಗಿಯೇ ಹೇಳಿದ್ದಾರೆ. 

ಅಷ್ಟಕ್ಕೂ ನಿಶಾ ಮೇಲೆ ಅವರ ಅಭಿಮಾನಿಗಳು ಮಾಡಿರುವ ಆಪಾದನೆಯಾದರೂ ಏನು ಅಂದರೆ ಅದಕ್ಕೊಂದು ಹಿನ್ನಲೆಯಿದೆ. ನಿಶಾ ಕನ್ನಡದಲ್ಲಿ 'ಗಟ್ಟಿಮೇಳ'ದಲ್ಲಿ ನಟಿಸುತ್ತಿರುವಂತೆ, ತೆಲುಗಿನಲ್ಲೂ 'ಮುತ್ಯಮುಂತ ಮುದ್ದು' ಅನ್ನೋ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ಗೆ ಉತ್ತಮ ಪ್ರತಿಕ್ರಿಯೆ ಇದ್ದು, ಆಂಧ್ರದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ನಿಶಾ ಅವರು ಕನ್ನಡದ ಅಭಿಮಾನಿಗಳಿಗಿಂತ ತೆಲುಗಿನ ಅಭಿಮಾನಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ, ಅವರಿಗಾಗಿ ತೆಲುಗಿನಲ್ಲಿ ರೀಲ್ಸ್ ಮಾಡ್ತಿದ್ದಾರೆ, ಅವರ ಜೊತೆಗೆ ಹೆಚ್ಚು ಆತ್ಮೀಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ನಡೆದುಕೊಳ್ಳುತ್ತಾರೆ ಅನ್ನೋದು ಕನ್ನಡದ ಅವರ ಅಭಿಮಾನಿಗಳ ಕಂಪ್ಲೇಂಟ್. ಈ ಹಿನ್ನೆಲೆಯಲ್ಲಿ ಕನ್ನಡದ ನಿಶಾ ಅಭಿಮಾನಿಗಳಲ್ಲಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಅದು ನಿಶಾಗೆ ಸಿಟ್ಟು, ಅಸಮಾಧಾನ ತರಿಸಿದರೂ ಆಕೆ ತಾಳ್ಮೆಯಲ್ಲೇ ಇನ್‌ಸ್ಟಾ ಲೈವ್‌ಗೆ ಬಂದು ಕೆಟ್ಟ ಕಮೆಂಟ್ ಮಾಡುವ ಅಭಿಮಾನಿಗಳಿಗೆ ಚುರುಕು ಮುಟ್ಟಿಸಿದ್ದಾರೆ. 

 

 

ಕನ್ನಡತಿ ರಂಜನಿ ರಾಘವನ್ ಲಂಗ ದಾವಣಿ ಡ್ಯಾನ್ಸ್ ಈಗ ವೈರಲ್!

'ನಟನೆ ನನ್ನ ಕೆರಿಯರ್. ನನಗೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಇದನ್ನೇ ಕೆರಿಯರ್ ಆಗಿ ಮಾಡ್ಕೊಂಡಿರುವ ನಾನು ಈ ಅವಕಾಶಗಳನ್ನು ಮಿಸ್ ಮಾಡಲ್ಲ. ಹಾಗಂತ ಒಂದು ಭಾಷೆಗೆ ಪ್ರಾಮುಖ್ಯತೆ ಕೊಡೋದು, ಇನ್ನೊಂದು ಭಾಷೆಗೆ ಪ್ರಾಮುಖ್ಯತೆ ಕೊಡಲ್ಲ ಅನ್ನೋದೆಲ್ಲ ತಪ್ಪು. ನನಗೆ ಎಲ್ಲಾ ಭಾಷೆಗಳ ಬಗೆಗೂ ಪ್ರೀತಿ ಇದೆ. ಆದರೆ ಇನ್‌ಸ್ಟಾದಲ್ಲಿ ನಾನು ಬೇರೆ ಭಾಷೆಯಲ್ಲಿ ಆಕ್ಟ್ ಮಾಡ್ತೀನಿ, ಆ ಭಾಷೆಯಲ್ಲಿ ರೀಲ್ಸ್ ಮಾಡ್ತೀನಿ ಅಂದಾಕ್ಷಣ ಇಲ್ಲಿಯ ಫ್ಯಾನ್ಸ್ ಕೆಟ್ಟ ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಾರೆ. ನಾನು ಅಭಿಮಾನಿಗಳ ಪ್ರತಿಯೊಂದು ಕಮೆಂಟ್ಸ್‌ಅನ್ನೋ ಓದುತ್ತೀನಿ. ಈ ಥರದ ಕೆಟ್ಟ ಕಮೆಂಟ್‌ಗಳು ನನಗೆ ಬೇಸರ ತಂದಿದೆ' ಎಂದು ಆಕೆ ಲೈವ್‌ನಲ್ಲಿ ಬೇಸರ ಹೇಳಿಕೊಂಡಿದ್ದಾರೆ. 

ಜೊತೆಗೆ 'ನನಗೆ ಗಟ್ಟಿಮೇಳದ ರಕ್ಷ್‌ ಹಾಗೂ ತೆಲುಗು ಸೀರಿಯಲ್‌ ಸಿದ್ದು ಇಬ್ಬರೂ ಒಳ್ಳೆಯ ಸ್ನೇಹಿತರು. ನಮ್ಮೆಲ್ಲರ ಬಾಂಧವ್ಯ ಚೆನ್ನಾಗಿದೆ. ಆದರೆ ನೀವು ಮಾತ್ರ ಜಗಳ ಆಡುತ್ತೀರಿ. ನಿಮಗೆ ವೇದಾಂತ್ ಮತ್ತು ಅಮೂಲ್ಯ ಜೋಡಿಯ ಬಗ್ಗೆ ಪೊಸೆಸ್ಸಿವ್ ನೆಸ್ ಇದೆ ಅನ್ನೋದು ಗೊತ್ತು. ಆದರೆ ನಿಮ್ಮ ಈ ಅತಿ ಪ್ರೀತಿ ನನ್ನ ಬೆಳವಣಿಗೆಗೆ ಅಡ್ಡಿ ಆಗಬಾರದಲ್ವಾ, ನನಗೆ ಹರ್ಟ್ ಮಾಡಬಾರದಲ್ವಾ? ನಾನು ಕನ್ನಡವನ್ನು ಖಂಡಿತಾ ಮರೆತಿಲ್ಲ. ತೆಲುಗು ಸೆಟ್‌ನಲ್ಲೂ ಕನ್ನಡದಲ್ಲೇ ಮಾತಾಡ್ತೀನಿ. ನೀವು ನೋಡೋ ರೀತಿ, ದೃಷ್ಟಿಕೋನ ಬದಲಿಸಿಕೊಂಡರೆ ಎಲ್ಲವೂ ಚೆನ್ನಾಗಿಯೇ ಕಾಣುತ್ತೆ' ಅಂತ ನಿಶಾ ಮಿಲನ ಕ್ಲಾಸ್ ತಗೊಂಡಿದ್ದಾರೆ. 

ಎಲ್ಲ ಸೀರಿಯಲ್ ಕಥೆಗಳಲ್ಲೂ ಫಸ್ಟ್ ನೈಟ್ ಪೋಸ್ಟ್ ಪೋನ್! ವೀಕ್ಷಕರ ಮೂಗಿನ ತುದಿಗೆ ತುಪ್ಪ

ಇದಕ್ಕೆ ಅಭಿಮಾನಿಗಳ ಕಮೆಂಟ್ಸ್ ಹರಿದುಬಂದಿದ್ದು, ಕೆಲವರು ತಮ್ಮಿಂದ ತಪ್ಪಾಗಿದ್ರೆ ಸಾರಿ ಅಂತ ಕೇಳಿದ್ದಾರೆ. ಇನ್ನೂ ಕೆಲವರು ತಾವ್ಯಾಕೆ ಆ ಥರ ರಿಯಾಕ್ಟ್ ಮಾಡಬೇಕಾಯ್ತು ಅನ್ನೋದಕ್ಕೆ ರೀಸನ್‌ ಕೊಟ್ಟಿದ್ದಾರೆ. ಇನ್ನೂ ಕೆಲವರು ಇಂಥಾ ನೆಗೆಟಿವ್ ಕಮೆಂಟ್ಸ್ ಬಗೆಗೆಲ್ಲ ಗಮನ ಕೊಡ್ಬೇಡಿ, ನೀವು ಪಾಸಿಟಿವ್ ಆಗಿ ಬೆಳೆಯಿರಿ ಎಂದು ಸಲಹೆ ನೀಡಿದ್ದಾರೆ. ಇಲ್ಲಿ ಒಂದಿಷ್ಟು ಜನ ತೆಲುಗು ಫ್ಯಾನ್ಸ್ ಬಂತು ಕಮೆಂಟ್ ಮಾಡಿರೋದು ವಿಶೇಷ. ಹಾಗೆ ಕನ್ನಡದ ಅಭಿಮಾನಿಗಳು ಇಲ್ಲೂ ಬೇಡಿಕೆ ಇಟ್ಟಿದ್ದಾರೆ. ನೀವು ತೆಲುಗಿನಲ್ಲಿ ಮಾಡುವ ಹಾಗೆ ಕನ್ನಡದಲ್ಲು ರೀಲ್ಸ್ ಮಾಡಿ ಅಂದಿದ್ದಾರೆ. ಆದರೆ ಗಟ್ಟಿಮೇಳ ನಾಯಕ ರಕ್ಷ್ ಗೆ ಇವೆಲ್ಲ ಇಷ್ಟ ಆಗಲ್ಲ ಅಂತ ಈಕೆ ಹೇಳಿದ್ರೂ ಅಭಿಮಾನಿಗಳ ಬೇಡಿಕೆ ಕಡಿಮೆ ಆಗಿಲ್ಲ. ಇವೆಲ್ಲಕ್ಕೂ ನಿಶಾ ಲೈಕ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಅಭಿಮಾನ ಕಲಾವಿದೆಯೊಬ್ಬಳ ಬೆಳವಣಿಗೆಗೆ ಅಡ್ಡಿ ಆಗದಿರಲಿ ಅನ್ನೋದು ನಿಶಾ ಟ್ರೂ ಫ್ಯಾನ್ಸ್ ಕಳಕಳಿ. 

ವೈರಲ್‌ ಆಗುತ್ತಿದೆ ಕನ್ನಡತಿಯ ರತ್ನಮಾಲಾ ಕಣ್ಣೀರು! ಮತ್ತೆ ಬರಲ್ವಾ ಅಮ್ಮಮ್ಮಾ?
 

Latest Videos
Follow Us:
Download App:
  • android
  • ios