Asianet Suvarna News Asianet Suvarna News

ಅಂತಿಮ ಘಟ್ಟದಲ್ಲಿ ಗಟ್ಟಿಮೇಳ! ಅಮೂಲ್ಯ ಕೊಟ್ಟ ಶಾಕ್​ಗೆ ಸುಹಾಸಿನಿ ತತ್ತರ.. ಆದ್ರೂ ಫ್ಯಾನ್ಸ್​ಗೆ ಕಾಡುತ್ತಿದೆ ನೋವು...

ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ  ಗಟ್ಟಿಮೇಳ ಅಂತಿಮ ಘಟ್ಟಕ್ಕೆ ತಲುಪಿದೆ.  ಅಮೂಲ್ಯ ಕೊಟ್ಟ ಶಾಕ್​ಗೆ  ಸುಹಾಸಿನಿ ತತ್ತರಿಸಿದ್ದಾಳೆ. ಆದ್ರೂ ಫ್ಯಾನ್ಸ್​ಗೆ ಕಾಡುತ್ತಿದೆ ನೋವು. ಏನದು? 
 

Gatti Mela serial in its final stage Suhasini is shaken by the shock given by Amulya suc
Author
First Published Nov 23, 2023, 2:54 PM IST

2019ರ ಮಾರ್ಚ್​ 11ರಿಂದ ಶುರುವಾದ ಜೀ ಟಿ.ವಿ ವಾಹಿನಿಯ ಗಟ್ಟಿಮೇಳ ಈಗ ಅಂತಿಮ ಘಟಕ್ಕೆ ತಲುಪಿದೆ. ನಾಲ್ಕೂವರೆ ವರ್ಷಗಳವರೆಗೆ ಧಾರಾವಾಹಿ ಪ್ರಿಯರನ್ನು ಹಿಡಿದುಕೊಂಡಿದ್ದ ಈ ಸೀರಿಯಲ್​ ಮುಗಿಯುವ ಹಂತಕ್ಕೆ ಬಂದಿದೆ. ಇದಾಗಲೇ ಈ ವಿಷಯ ಗಟ್ಟಿಮೇಳ ಫ್ಯಾನ್ಸ್​ಗೆ ತಿಳಿದೇ ಇತ್ತು. ಧಾರಾವಾಹಿಯ ವಿಲನ್​ ಸುಹಾಸಿನಿ ತನ್ನ ಅಕ್ಕನ ಇಬ್ಬರು ಮಕ್ಕಳನ್ನು ಕೊಲೆ ಮಾಡಲು ಪ್ರಯತ್ನಿಸಿರುವುದು ಸೇರಿದಂತೆ ಅಗ್ನಿ ಎಂಬ ವಿಲನ್​ ಕೊಲೆ ಮಾಡಿದ್ದರೂ ಸಿಕ್ಕಿಬಿದ್ದಿಲ್ಲ. ಅದೇ ಇನ್ನೊಂದೆಡೆ, ತನ್ನ ಮನೆಯಲ್ಲಿಯೇ ತಾಯಿಯಾಗಿರುವ ವೈದೇಹಿ ಕೆಲಸದವಳ ರೀತಿ ಇದ್ದು, ಮಕ್ಕಳ ಪ್ರೀತಿಗೆ ಪಾತ್ರಳಾಗಿದ್ದಾಳೆ. ಈಕೆಯ ಕಳೆದು ಹೋಗಿರುವ ಗಂಡ ಸೂರ್ಯನಾರಾಯಣ ಸಿಕ್ಕಿದ್ದರೂ ಆತನನ್ನು ವೈದೇಹಿ ಎಲ್ಲಿಯೋ ಮುಚ್ಚಿಟ್ಟಿದ್ದಾಳೆ. ಇವಿಷ್ಟೂ ಬಯಲಾದರೆ  ಅಲ್ಲಿಯೇ ಧಾರಾವಾಹಿ ಕೊನೆಗೊಳ್ಳುತ್ತದೆ ಎಂದು  ಫ್ಯಾನ್ಸ್​ ಕಾಯುತ್ತಿದ್ದ ನಡುವೆಯೇ, ಸೀರಿಯಲ್​ ಇಂಟರೆಸ್ಟಿಂಗ್​ ತಿರುವು ಪಡೆದಿತ್ತು. 

ಅದೇನೆಂದರೆ, ವೇದಾಂತ್​ ಕಟ್ಟಿ ಬೆಳೆಸಿದ ಕಂಪೆನಿ ಸೇರಿದಂತೆ ಮನೆಯ ಸಂಪೂರ್ಣ ಆಸ್ತಿ ವಿಲನ್​ ಸುಹಾಸಿನಿಯ ಪಾಲಾಗುವ ರೀತಿಯಲ್ಲಿ ತೋರಿಸಲಾಗಿತ್ತು. ನಾಯಕಿ ಅಮೂಲ್ಯ ಎಲ್ಲಾ ಆಸ್ತಿಗಳನ್ನು ಆಕೆಯ ಹೆಸರಿಗೆ ಮಾಡುವುದಾಗಿ ಹೇಳಿದಾಗ ಸೀರಿಯಲ್​ ಪ್ರಿಯರು ಶಾಕ್​ ಆಗಿದ್ದಂತೂ ದಿಟ. ಮನೆಯವರೆಲ್ಲರ ವಿರೋಧ ಇದ್ದರೂ ಅಮೂಲ್ಯ ಮತ್ತು ವೇದಾಂತ್​ ಏಕೆ ಈ ನಿರ್ಧಾರ ತೆಗೆದುಕೊಂಡರು ಎಂದು ತಿಳಿಯದ ರೀತಿಯಲ್ಲಿ ಧಾರಾವಾಹಿಯನ್ನು ತೋರಿಸಲಾಗಿದ್ದರೂ, ಅಮೂಲ್ಯ ನಾಟಕ ಮಾಡುತ್ತಿದ್ದಾಳೆ ಎಂದೇ ಹಲವರು ಅಂದುಕೊಂಡಿದ್ದೂ ಇದೆ. ಅದೇ ಇನ್ನೊಂದೆಡೆ, ಸಂಪೂರ್ಣ ಆಸ್ತಿ ತನ್ನ ಪಾಲಾದ ಬಳಿಕ ಹೇಗೆ ಎಲ್ಲರನ್ನೂ ಹೊರಕ್ಕೆ ಹಾಕಬೇಕು, ತಾನು ಯಜಮಾನಿಯಾಗಿ ಹೇಗೆ ಮೆರೆಯಬೇಕು ಎಂಬ ಬಗ್ಗೆ ಸುಹಾಸಿನಿ ಕನಸು ಕಾಣುತ್ತಿದ್ದಳು. ಅಮೂಲ್ಯ ಬೇಕಂತಲೇ ಸುಹಾಸಿನಿಯ ಪರವಾಗಿ ಇರುವಂತೆ ನಟಿಸಿ ಆಕೆಯ ಮನಸ್ಸನ್ನು ಗೆದ್ದಿದ್ದಳು. ಆರಂಭದಲ್ಲಿ ಅಮೂಲ್ಯಳಲ್ಲಿ ಆಗಿರುವ ಬದಲಾವಣೆಯನ್ನು ಸುಹಾಸಿನಿ ಒಪ್ಪಿಕೊಳ್ಳದಿದ್ದರೂ, ನಂತರ ಆಕೆ ಮಾಡುತ್ತಿರುವುದು ನಾಟಕ ಎಂದು ತಿಳಿಯಲೇ ಇಲ್ಲ.

ಸಿರಿಯಲ್​ನಲ್ಲೂ ಮಿಸ್ಸು, ಜೀ ಕುಟುಂಬ ಅವಾರ್ಡ್‌ನಲ್ಲೂ ನಾಪತ್ತೆ! ಗಟ್ಟಿಮೇಳದ ವೇದಾಂತ್ ಎಲ್ಲಿ?

ಇಷ್ಟೆಲ್ಲಾ ಆದ ಬಳಿಕ ಇಡೀ ಕುಟುಂಬಸ್ಥರನ್ನು ಕರೆದುಕೊಂಡು ಅಮೂಲ್ಯ ಕಂಪೆನಿಗೆ ಬಂದಿದ್ದಾಳೆ. ಸುಹಾಸಿನಿ ಯಜಮಾನಿ ಆಗುವ ಕನಸು ಕಾಣುತ್ತಿದ್ದಾಳೆ. ಆಕೆಯ ಕೈಗೆ ಸಂಪೂರ್ಣ ಆಸ್ತಿ ಹೋದರೆ ಮುಂದೇನು ಗತಿ ಎನ್ನುವ ಚಿಂತೆಯಲ್ಲಿ ಕುಟುಂಬಸ್ಥರು ಇದ್ದಾರೆ. ಆಗ ಅಮೂಲ್ಯ ನಮ್ಮ ಅತ್ತೆಗೆ ಈ ಸಂಪೂರ್ಣ ಆಸ್ತಿ ಸೇರಬೇಕು ಎಂದು ಹೇಳಿದಾಗ, ಸುಹಾಸಿನಿ ಮುಂದೆ ಬರುತ್ತಾಳೆ.  ಆಗ ಅಮೂಲ್ಯ ನಾನು ಕರೆದದ್ದು ಈ ಅತ್ತೆಯನ್ನು ಅಲ್ಲ, ಬದಲಿಗೆ ವೈದೇಹಿ ಸೂರ್ಯನಾರಾಯಣ ವಸಿಷ್ಠ ಎಂದಾಗ ಎಲ್ಲರಿಗೂ ಶಾಕ್​. ಈ ಪ್ರೊಮೋ ಅನ್ನು ಜೀ ಟಿ.ವಿ ವಾಹಿನಿ ಬಿಡುಗಡೆ ಮಾಡಿದೆ. ಇದರಿಂದ ಧಾರಾವಾಹಿ ಇಂದೋ, ನಾಳೆಯೋ ಮುಗಿಯುತ್ತದೆ ಎಂದು ತಿಳಿದುಬಂದಿದೆ. ಸುಹಾಸಿನಿ ಅರೆಸ್ಟ್​ ಆಗ್ತಾಳಾ ಎನ್ನುವುದು ನೋಡಬೇಕಿದೆ.

ಇವೆಲ್ಲಾ ಖುಷಿಯ ನಡುವೆಯೇ ಗಟ್ಟಿಮೇಳ ಪ್ರಿಯರಿಗೆ ನಿರಾಸೆ ಕಾಡಿದೆ. ಅದೇನೆಂದರೆ ನಾಯಕ ವೇದಾಂತ್​ ಪ್ರೊಮೋದಲ್ಲಿ ಕೂಡ ಕಾಣುತ್ತಿಲ್ಲ ಎನ್ನುವುದು. ಅಮ್ಮ ಮತ್ತು ಮಗನ ಮಿಲನಕ್ಕೆ ಕಾತರರಾಗಿದ್ದೇವೆ. ದಯವಿಟ್ಟು ಅವರನ್ನು ಕರೆಸಿ ಎಂದು ಕಮೆಂಟ್​ ಮೂಲಕ ಗೋಗರೆಯುತ್ತಿದ್ದಾರೆ. ಅಷ್ಟಕ್ಕೂ ಹಲವು ಕಂತುಗಳಿಂದ ವೇದಾಂತ್​ ಪಾತ್ರಧಾರಿ ರಕ್ಷ್​ ಕಾಣೆಯಾಗಿದ್ದಾರೆ. ಅವರು ಸಿನಿಮಾ ಒಂದರಲ್ಲಿ ನಟಿಸುತ್ತಿರುವ ಕಾರಣ ಧಾರಾವಾಹಿಗೆ ಗುಡ್​ಬೈ ಹೇಳಿದ್ದಾರೆ ಎನ್ನಲಾಗುತ್ತಿದ್ದರೂ, ಕೊನೆಯಾಗಿಯಾದರೂ ಒಮ್ಮೆ ಅವರನ್ನು ತೋರಿಸಿ ಎನ್ನುತ್ತಿದ್ದಾರೆ ಫ್ಯಾನ್ಸ್​. ಧಾರಾವಾಹಿಯಲ್ಲಿ ಕೂಡ ವೇದಾಂತ್​ ತನ್ನ ಆಸ್ತಿಯನ್ನು ಪತ್ನಿ ಅಮೂಲ್ಯಗೆ ಜಿಪಿಎ ಹೋಲ್ಡರ್​ ಮಾಡಿ ಕೊಟ್ಟಿದ್ದು, ಆತ ಕಂಪೆನಿಯೊಂದರ ಕೆಲಸದ ನಿಮಿತ್ತ ಪರ ಊರಿಗೆ ಹೋಗಿರುವುದಾಗಿ ತೋರಿಸಲಾಗಿದೆ. ಅದೇನೇ ಇದ್ದರೂ ಕೊನೆಯದಾಗಿ ಒಮ್ಮೆ ಅವರ ದರ್ಶನ ಮಾಡಿಸಿ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಹೋಗಲೇ ಅಂತ ಮಾತಾಡ್ಬೇಡಿ, ಅತಿಯಾಯ್ತು ನಿಂದು ಪ್ರತಾಪ್​... ಅತ್ತ ಟಾಸ್ಕ್​ ಜಟಾಪಟಿ... ಇತ್ತ ಫ್ಯಾನ್ಸ್​ ಬ್ಯಾಟಿಂಗ್!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios