Asianet Suvarna News Asianet Suvarna News

ಸಿರಿಯಲ್​ನಲ್ಲೂ ಮಿಸ್ಸು, ಜೀ ಕುಟುಂಬ ಅವಾರ್ಡ್‌ನಲ್ಲೂ ನಾಪತ್ತೆ! ಗಟ್ಟಿಮೇಳದ ವೇದಾಂತ್ ಎಲ್ಲಿ?

ಗಟ್ಟಿಮೇಳದ ವೇದಾಂತ್​ ಪಾತ್ರಧಾರಿ ರಕ್ಷ್​ ಅವರು ಸೀರಿಯಲ್​ ಮತ್ತು ಜೀ ಕುಟುಂಬ ಅವಾರ್ಡ್​ನಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೆ ಸೀರಿಯಲ್​ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
 

Gattimela actor Vedanth missing in serial and Zee Kutumba award fans questioning suc
Author
First Published Nov 17, 2023, 5:03 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಗಟ್ಟಿಮೇಳ ಧಾರಾವಾಹಿ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ. ಹೊಸ ಸೀರಿಯಲ್​ನ ಪ್ರೋಮೋ ಕೂಡ ರಿಲೀಸ್​  ಆಗುತ್ತಿದ್ದು, ಇದು ಗಟ್ಟಿಮೇಳದ ಜಾಗಕ್ಕೆ ಬರಲಿದೆ ಎಂದೇ ಹೇಳಲಾಗುತ್ತಿದೆ. ಧಾರಾವಾಹಿಯ ವಿಲನ್​ ಸುಹಾಸಿನಿ ತನ್ನ ಅಕ್ಕನ ಇಬ್ಬರು ಮಕ್ಕಳನ್ನು ಕೊಲೆ ಮಾಡಲು ಪ್ರಯತ್ನಿಸಿರುವುದು ಸೇರಿದಂತೆ ಅಗ್ನಿ ಎಂಬ ವಿಲನ್​ ಕೊಲೆ ಮಾಡಿದ್ದರೂ ಸಿಕ್ಕಿಬಿದ್ದಿಲ್ಲ. ಅದೇ ಇನ್ನೊಂದೆಡೆ, ತನ್ನ ಮನೆಯಲ್ಲಿಯೇ ತಾಯಿಯಾಗಿರುವ ವೈದೇಹಿ ಕೆಲಸದವಳ ರೀತಿ ಇದ್ದು, ಮಕ್ಕಳ ಪ್ರೀತಿಗೆ ಪಾತ್ರಳಾಗಿದ್ದಾಳೆ. ಈಕೆಯ ಕಳೆದು ಹೋಗಿರುವ ಗಂಡ ಸೂರ್ಯನಾರಾಯಣ ಸಿಕ್ಕಿದ್ದರೂ ಆತನನ್ನು ವೈದೇಹಿ ಎಲ್ಲಿಯೋ ಮುಚ್ಚಿಟ್ಟಿದ್ದಾಳೆ. ಕೊನೆಗೂ ಈ ರಹಸ್ಯ ಬಯಲಾದರೆ ಅಲ್ಲಿಯೇ ಧಾರಾವಾಹಿ ಕೊನೆಗೊಳ್ಳುವುದು ದಿಟ. ಆದರೆ ಈ ನಡುವೆಯೇ ಧಾರಾವಾಹಿಯ ನಾಯಕ ವೇದಾಂತ್​ ಮಾತ್ರ ಮಿಸ್ಸಿಂಗ್​ ಆಗಿಬಿಟ್ಟಿದ್ದು, ಫ್ಯಾನ್ಸ್​ ಚಿಂತಾಕ್ರಾಂತರಾಗಿದ್ದಾರೆ.

ಹೌದು. ವೇದಾಂತ್​ ಪಾತ್ರಧಾರಿಯಾಗಿರುವ ರಕ್ಷ್‌ ಅವರು ಧಾರಾವಾಹಿಯಿಂದ ನಾಪತ್ತೆಯಾಗಿದ್ದಾರೆ. ಅವರಿಲ್ಲದೇ ಧಾರಾವಾಹಿಯನ್ನು ಹೇಗೋ ಮ್ಯಾನೇಜ್​ ಮಾಡಲಾಗುತ್ತಿದೆ.ಆದರೆ ಮೊನ್ನೆ ನಡೆದ ಜೀ ಕುಟುಂಬ ಅವಾರ್ಡ್​ನಲ್ಲಿಯೂ ಅವರು ಬರದೇ ಇದ್ದುದು ಮಾತ್ರ ಅಭಿಮಾನಿಗಳಿಗೆ ತುಂಬಾ ಬೇಸರ ತಂದಿದೆ. ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಗಟ್ಟಿಮೇಳದ ಅಮೂಲ್ಯ ಮತ್ತು ವೇದಾಂತ್​ ಜೋಡಿಗೆ ಬೆಸ್ಟ್​ ಜೋಡಿ ಅವಾರ್ಡ್​ ಸಿಕ್ಕಿದೆ. ಆದರೆ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಇಬ್ಬರ ಪರವಾಗಿ ಕೇವಲ ಅಮೂಲ್ಯ ಅರ್ಥಾತ್​, ನಿಶಾ ರವಿಕೃಷ್ಣನ್​ ಅವರು ಪ್ರಶಸ್ತಿ ಸ್ವೀಕರಿಸಿದರು. ನನ್ನ ಪೇರ್​ ಈ ಕ್ಷಣದಲ್ಲಿ ಇಲ್ಲ, ಆದ್ದರಿಂದ ನಾನೊಬ್ಬಳೇ ಅವಾರ್ಡ್​ ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದರು.

ಸೊಸೆಯೆಂದ್ರೆ ಹೀಗಿರ್ಬೇಕು: ಜೀ ಕುಟುಂಬ ಅವಾರ್ಡ್​ ಗೆದ್ದ ಸತ್ಯಾ, ಹಿಟ್ಲರ್​ ಕಲ್ಯಾಣದ ಲೀಲಾ ಹೇಳಿದ್ದೇನು?

ಇದೀಗ  ರಕ್ಷ್​ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋ ಶೇರ್​ ಮಾಡಿಕೊಂಡಿದ್ದು, ಕಮೆಂಟ್​ ಬಾಕ್ಸ್​ ತುಂಬ ಇದರ ಪ್ರಶ್ನೆಗಳದ್ದೇ ಸುರಿಮಳೆಯಾಗುತ್ತಿದೆ. ವೇದಾಂತ್​ ಅವರು ಸೀರಿಯಲ್​ನಲ್ಲಿಯೂ ಮಿಸ್ಸಿಂಗ್​  ಆಗಿದ್ದು, ಕೊನೆಯ ಪಕ್ಷ ಅವಾರ್ಡ್​ಗೂ ಬರದೇ ಇದ್ದುದಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹಲವು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ಆದರೂ ಯಾಕೆ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದು, ಯಾವ ಪ್ರಶ್ನೆಗೂ ರಕ್ಷ್​ ಅವರು ಉತ್ತರಿಸಿಲ್ಲ. 
 
ಅದೇ ಇನ್ನೊಂದೆಡೆ,  ರಕ್ಷ್‌ ಅವರು ರಕ್ಷ್​ ರಾಮ್‌ (Rakksh Raam) ಎಂದು ಹೆಸರು ಬದಲಿಸಿಕೊಂಡು ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ.  ಗಟ್ಟಿಮೇಳ ಮಾತ್ರವಲ್ಲದೇ 'ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕವೂ ಮಿಂಚಿದ್ದಾರೆ ರಕ್ಷ್‌. ಇದೀಗ ಇವರು ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರದ ಹೆಸರು ಬರ್ಮ. ಈ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕಮರ್ಷಿಯಲ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಚೇತನ್‌ ಕುಮಾರ್‌, ಬರ್ಮ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರ ಶೂಟಿಂಗ್​  ಕಾರಣದಿಂದ ಬಹುಶಃ ಸೀರಿಯಲ್​  ಮತ್ತು ಅವಾರ್ಡ್​ ಫಂಕ್ಷನ್​ಗೆ ಬರಲಿಲ್ಲ ಎನ್ನಲಾಗುತ್ತಿದೆ. ಕಾರಣ ಮಾತ್ರ ಅವರೇ ಹೇಳಬೇಕಿದೆ. 

ಅಂಕಲ್​ ನಿಮ್ಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಪುಟಾಣಿ ಸಿಹಿ ಪ್ರಶ್ನೆಗೆ ಡಿಕೆಶಿ ಹೇಳಿದ್ದೇನು?
 

 
 
 
 
 
 
 
 
 
 
 
 
 
 
 

A post shared by Rakksh (@rakkshofficial)

Follow Us:
Download App:
  • android
  • ios