ಹೋಗಲೇ ಅಂತ ಮಾತಾಡ್ಬೇಡಿ, ಅತಿಯಾಯ್ತು ನಿಂದು ಪ್ರತಾಪ್​... ಅತ್ತ ಟಾಸ್ಕ್​ ಜಟಾಪಟಿ... ಇತ್ತ ಫ್ಯಾನ್ಸ್​ ಬ್ಯಾಟಿಂಗ್!

ಬಿಗ್​ಬಾಸ್​ನಲ್ಲಿ ಬಾಲ್​ ಟಾಸ್ಕ್​ ಜೋರಾಗಿ ನಡೆಯುತ್ತಿದ್ದು ಪ್ರತಾಪ್​, ವಿನಯ್​ ನಡುವೆ ಮಾಡಿನ ಚಕಚಕಿ ಶುರುವಾಗಿದೆ. 
 

The ball task in Bigg Boss house and the fight between Pratap and Vinay has started suc

ಬಿಗ್​ಬಾಸ್​ ಮನೆಯಲ್ಲಿ ಟಾಸ್ಕ್​  ಭರಾಟೆ ಜೋರಾಗಿಯೇ ನಡೆಯುತ್ತಿದೆ. ಬಿಗ್​ಬಾಸ್​ ಶುರುವಾಗಿ ಒಂದೂವರೆ ತಿಂಗಳಾದ ಮೇಲೆ ಈ ಟಾಸ್ಕ್​ನಿಂದಾಗಿ ಪರಸ್ಪರ ಸ್ಪರ್ಧಿಗಳು ಕೈಕೈ ಮಿಲಾಯಿಸುವ ಸ್ಥಿತಿಗೆ ಬಂದಿದೆ.   ಎರಡು ತಂಡಗಳಾಗಿರುವ  ಗಜಕೇಸರಿ ತಂಡ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಫೈಟಿಂಗ್​ ಭರ್ಜರಿಯಾಗಿ ನಡೆಯುತ್ತಿದೆ.  ಗಜಕೇಸರಿ ತಂಡದಲ್ಲಿ ಡ್ರೋನ್ ಪ್ರತಾಪ್​, ಸಿರಿ, ಸಂಗೀತಾ, ವಿನಯ್, ಸ್ನೇಹಿತ್ ಹಾಗೂ ನಮ್ರತಾ ಇದ್ದರೆ, ಇನ್ನೊಂದು ತಂಡವಾಗಿರುವ ಸಂಪತ್ತಿಗೆ ಸವಾಲ್​ನಲ್ಲಿ ವರ್ತೂರು ಸಂತೋಷ್, ಮೈಕಲ್, ತನಿಷಾ,  ತುಕಾಲಿ ಸಂತೋಷ್,  ಕಾರ್ತಿಕ್ ಹಾಗೂ ನೀತು ಇದ್ದಾರೆ.  ಇಷ್ಟು ದಿನ ಫ್ರೆಂಡು ಫ್ರೆಂಡು ಅಂದುಕೊಂಡೆ ಕಾರ್ತಿಕ್ ಹಾಗೂ ತನಿಷಾ ಜೊತೆಯಲ್ಲಿದ್ದ ಸಂಗೀತ ಈಗ ವಿನಯ್ ಟೀಂ ಸೇರಿಕೊಂಡಿದ್ದಾರೆ. ಈ ವಾರ ಕಾರ್ತಿಕ್ ಹಾಗೂ ಸಂಗೀತಾ ಬೇರೆ ಬೇರೆ ಟೀಮ್ ಸೇರಿಕೊಂಡು ಆಟವಾಡ್ತಿದ್ದಾರೆ. 

ಇದೀಗ ಬಿಗ್​ ಬಾಸ್​ ಬಾಲಿನ ಟಾಸ್ಕ್ ನೀಡಿದೆ. ಈ ಆಟ ಆಡುವ ಸಮಯದಲ್ಲಿ, ಪ್ರತಾಪ್​, ಕಾರ್ತಿಕ್​  ಮತ್ತು ಮಹೇಶ್​ ನಡುವೆ ಮಾತಿಕ ಚಕಮಕಿ ನಡೆದಿದೆ.  ಕಾರ್ತಿಕ್ ಮತ್ತು ಮಹೇಶ್​ ಅವರು ಪ್ರತಾಪ್​ ಮೇಲೆ ಕಿರುಚಾಡಿದ್ದಾರೆ.  ​ಸಂಗೀತಾ ಬೇರೆ ಟೀಮ್ ಸೇರಿದ ಮೇಲೆ ಕಾರ್ತಿಕ್ ಸಣ್ಣ ಸಣ್ಣ ವಿಚಾರಕ್ಕೂ ಸಿಟ್ಟಾಗುತ್ತಿದ್ದಾರೆ.  ಬಾರೋ ಬಾ ಎಂದು ವಿನಯ್ ಕಾರ್ತಿಕ್​ ಕರೆದಿದ್ದಾರೆ.  ಬಾಲಿನ ಟಾಸ್ಕ್​ ಆಡುವ ಸಮಯದಲ್ಲಿ ಕೋಲಿನ ಸಹಾಯದಿಂದ ಚೆಂಡನ್ನು  ಕಾರ್ತಿಕ್​ ಹಾಗೂ ತನಿಷಾ ಅಲ್ಲಿರುವ ಡಬ್ಬಕ್ಕೆ ಹಾಕುವ ಪ್ರಯತ್ನ ಮಾಡುತ್ತಿದ್ದ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಗಲಾಟೆ ಶುರುವಾಗಿದೆ.  ಇತ್ತ  ಸಂಪತ್ತಿಗೆ ಸವಾಲ್ ತಂಡ ಬಾಲನ್ನು ಬಾಕ್ಸ್​​ಗೆ ಹಾಕಿದ್ದಾರೆ.

ಬಿಗ್​ಬಾಸ್​ಗೆ ಕಾಂಟ್ರವರ್ಸಿ ಜೋಡಿ ರಾಖಿ- ಆದಿಲ್​ ಖಾನ್​ ಎಂಟ್ರಿ? ನಟಿ ಹೇಳಿದ್ದೇನು ನೋಡಿ...

ಈ ಸಮಯದಲ್ಲಿ  ಕಾರ್ತಿಕ್-ತನಿಷಾ ಹಾಕಿದ ಚೆಂಡು ಫೌಲ್ ಆಗಿದ್ದು ಮತ್ತೆ ಆಟ ಆರಂಭಿಸಿ ಎಂದ ಡ್ರೋನ್ ಪ್ರತಾಪ್ ಹೇಳಿದ್ದಾರೆ. ಡ್ರೋನ್ ಮಾತು ಕೇಳಿ ಕಾರ್ತಿಕ್​ ರೇಗಿ ಹೋದರು.  ನಾವು ಲೈನ್​ ಕ್ರಾಸ್ ಮಾಡಿದ್ದೇವೆ ಎಂದು ಕೂಗಾಡಿದರು. ಉಸ್ತುವಾರಿ ವಹಿಸಿಕೊಂಡಿದ್ದ ಪ್ರತಾಪ್​ ನನ್ನು ಆಯ್ತು ಹೋಗೋಲೇ ಎಂದಿದ್ದಾರೆ. ಆಗ ಪ್ರತಾಪ್​ ಹೋಗಲೇ ಅಂತೆಲ್ಲಾ ಮಾತನಾಡಬೇಡಿ ಎಂದರು. ವಿನಯ್​ ಹೋಗಲೇ ನಿನ್ನದು ಅತಿಯಾಯ್ತು ಪ್ರತಾಪ್​ ಎಂದರು.  ಸದ್ಯ ಇದರ ಪ್ರೊಮೋ ರಿಲೀಸ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 

ಇತ್ತ ಬಾಲ್​ ಟಾಸ್ಕ್​ ಜೋರಾಗಿ ನಡೆಯುತ್ತಿದ್ದರೆ, ಫ್ಯಾನ್ಸ್​ ನಡುವೆ ಬ್ಯಾಟಿಂಗ್​ ಶುರುವಾಗಿದೆ. ಈ ಸಲ ವಿನಯ್​ ಮತ್ತು ಪ್ರತಾಪ್​ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯ ಪರವಾಗಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ವಿನಯ್​ ಅವರೇ ಬಿಗ್​ಬಾಸ್​ ಗೆಲ್ಲಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು, ಪ್ರತಾಪ್​ ಗೆಲ್ಲಬೇಕು ಎನ್ನುತ್ತಿದ್ದಾರೆ. ವಿನಯ್​ಗೆ ಬೆಂಬಲಿಸುವವರು ಲೈಕ್​ ಮಾಡಿ ಎಂದು ಕೆಲವರು, ಪ್ರತಾಪ್​ರನ್ನ ಬೆಂಬಲಿಸುವವರು ಇಲ್ಲಿ ಲೈಕ್​ ಮಾಡಿ ಎಂದು ಜೋರಾಗಿ ಬ್ಯಾಟಿಂಗ್​ ಬೀಸುತ್ತಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿ ಸುದ್ದಿ ಬೆನ್ನಲ್ಲೇ ದಂಪತಿ ಮಾರಾಮಾರಿ: ಪತಿ ಕುತ್ತಿಗೆ ಹಿಡಿದ್ರೆ, ಪತ್ನಿ ಚಪ್ಪಲಿ ಎಸೆದಳು!
 

Latest Videos
Follow Us:
Download App:
  • android
  • ios