ಇದೇ ಮೊದಲ ಬಾರಿಗೆ ಬಿಗ್​ಬಾಸ್​ ನಿರ್ಧಾರವನ್ನೇ ಪ್ರಶ್ನೆ ಮಾಡಿದ್ದಾರೆ ಸುದೀಪ್​. ಬಿಗ್​ಬಾಸ್​ ಅವಸರದ ನಿರ್ಧಾರ ತೆಗೆದುಕೊಂಡ್ರಾ ಅಥವಾ ತೆಗೆದುಕೊಂಡಿರುವ ನಿರ್ಧಾರ ತಪ್ಪಾಗಿತ್ತಾ ಎಂದಿದ್ದಾರೆ.  

ಈ ಸಲದ ಬಿಗ್​ಬಾಸ್​​ ಉಳಿದ ಸೀಸನ್​ಗಳಿಗಿಂತಲೂ ವಿಭಿನ್ನವಾಗಿ ಬರುತ್ತಿದೆ. ಈ ಸೀಸನ್​ ಮೇಲೆ ಹಿಂದಿಗಿಂತಲೂ ಹೆಚ್ಚು ಆರೋಪಗಳಿವೆ. ಎಲ್ಲವೂ ಮೊದಲೇ ಹೇಳಿಕೊಟ್ಟು ಮಾಡಿಸುವುದು, ಇಲ್ಲಿರುವ ಸ್ಪರ್ಧಿಗಳು ಬಿಗ್​ಬಾಸ್​ ಕೈಗೊಂಬೆಗಳು ಅಷ್ಟೇ... ಆದರೆ ನೋಡುಗರಿಗೆ ಎಲ್ಲವೂ ಅಚಾನಕ್​ ಆಗಿ ಆಗಿದ್ದು ಎನ್ನಿಸುತ್ತದೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಾಗಲೇ ಬೇರೆ ಬೇರೆ ಭಾಷೆಗಳ ಬಿಗ್​ಬಾಸ್​ಗೆ ಹೋಗಿ ಬಂದವರೂ ಇಲ್ಲಿರುವುದೆಲ್ಲವೂ ಸ್ಕ್ರಿಪ್ಟೆಡ್​, ಜನರನ್ನು ಮರಳು ಮಾಡುವ ತಂತ್ರವಷ್ಟೇ. ಇದನ್ನು ಅರಿಯದ ಪ್ರೇಕ್ಷಕರು ತಮ್ಮ-ತಮ್ಮ ನಡುವೆ ಸುಖಾ ಸುಮ್ಮನೆ ಕಿತ್ತಾಡಿಕೊಳ್ತಾರೆ ಅಷ್ಟೇ ಎಂದು ಹೇಳಿದ್ದು ಇದೆ. ಅದೇನೇ ಇದ್ದರೂ, ಈ ಬಾರಿ ಸಾಕಷ್ಟು ಕುತೂಹಲವನ್ನು ಆಟ ಪಡೆದುಕೊಳ್ಳುತ್ತಿದೆ. 

ಇದರಲ್ಲಿ ಒಂದು ಬಿಗ್​ಬಾಸ್​ ತೀರ್ಮಾನವನ್ನೇ ಕಿಚ್ಚ ಸುದೀಪ್​ ಅವರು ಪ್ರಶ್ನೆ ಮಾಡಿರುವುದು. ವಾರಾಂತ್ಯದ ಪಂಚಾಯ್ತಿಯಲ್ಲಿ ಈ ಬಾರಿ ಬಿಗ್​ಬಾಸ್​​ ನಿರ್ಧಾರದ ಬಗ್ಗೆ ಚರ್ಚೆ ಶುರುವಾಗಿದೆ. ಇಷ್ಟು ಮನೆಯವರು ಮಾಡುವ ತಪ್ಪುಗಳನ್ನು ಚರ್ಚೆ ಮಾಡುತ್ತಿರುವ ಈ ವೇದಿಕೆಯಲ್ಲಿ ಈ ಬಾರಿ ಕಂಪ್ಲೇಂಟ್​ ಇರುವುದು ಬಿಗ್​ಬಾಸ್​ ಮೇಲೆ ಎನ್ನುತ್ತ ಮಾತು ಶುರು ಮಾಡಿರುವ ಸುದೀಪ್​ ಅವರು, ಬಿಗ್​ಬಾಸ್​ ಅವಸರದ ನಿರ್ಧಾರ ತೆಗೆದುಕೊಂಡ್ರಾ ಅಥವಾ ತೆಗೆದುಕೊಂಡಿರುವ ನಿರ್ಧಾರ ತಪ್ಪಾಗಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಸುದೀಪ್​ ಅವರು ಯಾವ ನಿರ್ಧಾರದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಬಗ್ಗೆ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸಾಕಷ್ಟು ಮಂದಿ ಚರ್ಚೆ ಮಾಡುತ್ತಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಂದು ರಾತ್ರಿಯೇ ತಿಳಿಯಬೇಕಿದೆ.

ಕೂದಲ ಅಂದಕ್ಕಾಗಿ ಬಿಗ್​ಬಾಸ್​ 'ಸತ್ಯ' ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಫ್ಯಾನ್ಸ್​ ಸುಸ್ತು!

ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ಗೆ ಸುದೀಪ್​ ಅವರು ಗುಡ್​ಬೈ ಹೇಳುವ ಮೂಲಕ ಅಸಂಖ್ಯ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. 10 ಸೀಸನ್​ ಪೂರೈಸಿ 11ನೇ ಸೀಸನ್​ ಶುರುವಾಗಿ ಕೆಲವೇ ದಿನಗಳಲ್ಲಿ ಸುದೀಪ್​ ಅವರು ಈ ದಿಢೀರ್​ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವ ಬಗ್ಗೆ ಥಹರೇವಾರಿ ರೀತಿಯ ನಿಲುವು ವ್ಯಕ್ತವಾಗಿದೆ. #BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿಯ ಬಗ್ಗೆ ಟಿವಿಆರ್ (ಸಂಖ್ಯೆ)ಯಲ್ಲಿ ಕಾಣುತ್ತಿದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು. ನಾನು ಈಗ ಏನು ಬೇರೆ ಕಡೆಗೆ ನನ್ನ ನಡೆಯನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ​​ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಲವ್ ಮತ್ತು ಹಗ್‌ ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್‌ ನಲ್ಲಿ ಸುದೀಪ್​ ಬರೆದುಕೊಂಡು ಸಂಚಲನ ಮೂಡಿಸಿದ್ದಾರೆ.


ಅದರ ನಡುವೆಯೇ, ಬಿಗ್​ಬಾಸ್​ ಹಿನ್ನೆಲೆಯ ದನಿಯಲ್ಲಿ ಆಟದಿಂದ ಬ್ರೇಕ್​ ತೆಗೆದುಕೊಳ್ಳುತ್ತಿರುವುದಾಗಿ ಹೇಳಿ ಮತ್ತಷ್ಟು ಗೊಂದಲ ಸೃಷ್ಟಿಯಾಗಿತ್ತು. ನಿಮ್ಮೆಲ್ಲರ ವರ್ತನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಉಡಾಫೆ, ಅಪ್ರಾಮಾಣಿಕತೆಯ ನಡೆ ಇತ್ಯಾದಿಗಳಿಂದ ಬೇಸತ್ತು ಈ ಕ್ಷಣದಿಂದ ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ. ​ಈ ಕ್ಷಣದಿಂದ ಬಿಗ್​ಬಾಸ್ ನಿಮ್ಮೊಂದಿಗೆ ಇರಲ್ಲ ಎಂಬ ದನಿ ಬಂದಿತ್ತು. ಇದಾದ ಬಳಿಕ ಮನೆಯಲ್ಲಿ ಗಲಾಟೆ, ಚೀರಾಟ, ಕೂಗಾಟ ಹೆಚ್ಚಾಗಿದೆ. ಲಾಯರ್​ ಜಗದೀಶ್​ ಅವರು ಖುದ್ದು ಬಿಗ್​ಬಾಸ್​ ಮೇಲೆ ಆರೋಪ ಮಾಡಿದ್ದಾರೆ. ಅವರನ್ನು ಎಲಿಮಿನೇಟ್​ ಮಾಡಲಾಗಿದೆ ಎಂದೇ ಹೇಳಲಾಗಿತ್ತು. ನಂತರ ಅದು ಕುತೂಹಲದ ತಿರುವು ಪಡೆದುಕೊಂಡಿದೆ.

ಇವ ಯಾವ ಸೀಮೆಯ ಗಂಡು... ಎಂದು ಭರ್ಜರಿ ಸ್ಟೆಪ್ ಹಾಕಿದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು!

View post on Instagram