ಇವ ಯಾವ ಸೀಮೆಯ ಗಂಡು... ಎಂದು ಭರ್ಜರಿ ಸ್ಟೆಪ್ ಹಾಕಿದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು!

ಶ್ರೀರಸ್ತು ಶುಭಮಸ್ತುವಿನ ಸೊಸೆಯಂದಿರಾದ ಪೂರ್ಣಿ ಮತ್ತು ದೀಪಿಕಾ ಇವ ಯಾವ ಸೀಮೆಯ ಗಂಡು ಕಾಣಮ್ಮಾ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ನೆಟ್ಟಿಗರು ಹೇಳ್ತಿರೋದೇನು?
 

Shreerastu Shubhamastu daughters in laws Poorni and Deepika made reels Fans reacts suc

ಶ್ರೀರಸ್ತು ಶುಭಮಸ್ತುವಿನಲ್ಲಿ ಅತ್ತೆ ತುಳಸಿ ಮತ್ತೊಮ್ಮ ಗರ್ಭಿಣಿಯಾಗಿದ್ದಾಳೆ. ಮಗುವನ್ನು ಹೆತ್ತರೆ ಜೀವಕ್ಕೆ ಅಪಾಯ ಇದೆ ಎಂದು ಗೊತ್ತಿದ್ದರೂ ಸೊಸೆ ಪೂರ್ಣಿಯ ಮಡಿಲಿಗೆ ಆ ಮಗುವನ್ನು ಇಡುವ ಆಸೆ ವ್ಯಕ್ತಪಡಿಸಿರೋ ತುಳಸಿ ತನ್ನ ಪ್ರಾಣ ಹೋದರೂ ಚಿಂತೆ ಇಲ್ಲ, ಮಗುವನ್ನು ಹೆರುವ ಪಣ ತೊಟ್ಟಿದ್ದಾಳೆ. ಈ ಅಸಲಿ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಬಹುತೇಕರ  ನಿಂದನೆಗೂ ಒಳಗಾಗಿದ್ದಾಳೆ ತುಳಸಿ. ಏಕೆಂದರೆ  ಪೂರ್ಣಿಗೆ ಮಕ್ಕಳಾಗೋದು ಡೌಟ್​ ಎಂದಿದ್ದಾರೆ ವೈದ್ಯರು.  ತುಳಸಿ ಗರ್ಭಿಣಿಯಾಗಿರೋ ಸುದ್ದಿ ಮಾಧವ್​ಗೆ ಬಿಟ್ಟು ಯಾರಿಗೂ ಗೊತ್ತಿರಲಿಲ್ಲ. ಈಗ ಮನೆಯವರೆಲ್ಲಾ ಗೊತ್ತಾಗಿದೆ.  ಕುತೂಹಲದ ವಿಷಯ ಎಂದರೆ ಮಗ ಸಮರ್ಥ್​ ಇದನ್ನು ಒಪ್ಪಿಕೊಂಡಿದ್ದಾನೆ. ಆದರೆ ಶಾರ್ವರಿ, ದೀಪಿಕಾ ಚುಚ್ಚು ಮಾತಿನಿಂದ ಅವರ ಮನಸ್ಸನ್ನು ನೋಯಿಸುತ್ತಲೇ ಇದ್ದಾಳೆ. ನಿಧಿಗೆ ಹುಡುಗನ ನೋಡಲು ಬಂದಾಗಲೂ ತಲೆ ತಿರುಗಿದ್ದಾಳೆ ತುಳಸಿ. ಇದನ್ನೇ  ಮುಂದುಮಾಡಿಕೊಂಡ ದೀಪಿಕಾ ಗರ್ಭಿಣಿಯಾಗಿರುವಾಗ ಹೀಗೆಲ್ಲಾ ಕೆಲಸ ಮಾಡಬೇಡಿ ಎಂದು ಗಂಡಿನ ಕಡೆಯವರಿಗೆ ಹೇಳಿದ್ದಾಳೆ. ಮುಂದೇನಾಗುತ್ತೋ ಎನ್ನುವ ಕುತೂಹಲ ಸೀರಿಯಲ್​ದ್ದು.


ಇದರ ನಡುವೆಯೇ,   ವಾರೆಗಿತ್ತಿಯರಾದ ಪೂರ್ಣಿ ಮತ್ತು ದೀಪಿಕಾ ಭರ್ಜರಿ ರೀಲ್ಸ್​ ಮಾಡಿದ್ದು, ನೆಟ್ಟಿಗರ ಶಹಬ್ಬಾಸ್​ಗಿರಿ ಗಿಟ್ಟಿಸಿಕೊಂಡಿದ್ದಾರೆ. ಇವರಿಬ್ಬರ ಡಾನ್ಸ್​ಗೆ ಸಕತ್​ ಕಮೆಂಟ್ಸ್​ ಕೂಡ ಬರುತ್ತಿವೆ. ಅಷ್ಟಕ್ಕೂ ಇವರಿಬ್ಬರೂ ಸೀರಿಯಲ್​ನಲ್ಲಿ ಸದಾ ಕಿತ್ತಾಡುತ್ತಿರುವ ಕಾರಣದಿಂದ ಅಲ್ಲಿ ಕಿತ್ತಾಡಿಕೊಂಡು ಇಲ್ಲಿ ಕುಣಿಯುತ್ತಿದ್ದೀರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ತುಳಸಿ ಅತ್ತೆ ಗರ್ಭಿಣಿಯಾಗಿರೋ ಖುಷಿಗೆ ಡಾನ್ಸಾ ಎಂದೂ ಪ್ರಶ್ನಿಸುತ್ತಿದ್ದಾರೆ! ಇದನ್ನು ತುಳಸಿ ಅಮ್ಮ ಅವರಿಗಾಗಿ ಎಂದು ದೀಪಿಕಾ ಸೋಷಿಯಲ್​  ಮೀಡಿಯಾದಲ್ಲಿ ಬರೆದುಕೊಂಡಿದ್ದರಿಂದ ಮತ್ತಷ್ಟು ಮಂದಿ ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ, ಈ ಸೀರಿಯಲ್​ನಲ್ಲಿ ಒಂದೇ ಮನೆಯ ಸೊಸೆಯಂದಿರಾಗಿರುವವರು ಪೂರ್ಣಿ ಮತ್ತು ದೀಪಿಕಾ.  ಅಣ್ಣ ತಮ್ಮಂದಿರ ಪತ್ನಿಯರಾದ ಇವರಿಬ್ಬರದ್ದೂ ಸೀರಿಯಲ್​ನಲ್ಲಿ ಭಿನ್ನ ಕ್ಯಾರೆಕ್ಟರ್​. ಒಬ್ಬಳು ಅತೀ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು ಅಂದ್ರೆ ವಿಲನ್​. ದೊಡ್ಡ ಸೊಸೆ ಪೂರ್ಣಿಗೆ ಇನ್ನಿಲ್ಲದ ಕಾಟ ಕೊಡುವುದು ಎಂದರೆ ದೀಪಿಕಾಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ, ಅವಳನ್ನು ಹೆಜ್ಜೆ ಹೆಜ್ಜೆಗೂ ಹಂಗಿಸಿ, ಟೀಕಿಸುತ್ತಾಳೆ. ಅದೇ ಪೂರ್ಣಿ ತುಂಬಾ ಒಳ್ಳೆಯವಳು. ಎಲ್ಲವನ್ನೂ ಸಹಿಸಿಕೊಂಡು ಹೋಗುವವಳು. ಇಂತಿಪ್ಪ ಸೊಸೆಯಂದಿರು ಒಟ್ಟುಗೂಡಿ ರೀಲ್ಸ್​ ಮಾಡಿದ್ದರಿಂದ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. 

ದೀಪಾ v/s ಸೌಂದರ್ಯ- ನೀನಾ... ನಾನಾ... ಯಾರೂ ಊಹಿಸದ ರೋಚಕ ಟ್ವಿಸ್ಟ್​! ಕುಣಿದಾಡುತ್ತಿರುವ ಫ್ಯಾನ್ಸ್​...

 

ಪೂರ್ಣಿಯ ರಿಯಲ್​ ಹೆಸರು ಲಾವಣ್ಯ ಹಾಗೂ ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (Model),  ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

 ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್‌ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಶಶಿ ಅವರು ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಸಹೋದರನ ಪಾತ್ರ ಮಾಡುತ್ತಿದ್ದಾರೆ.   ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ಹುಟ್ಟಿನ ಬಗ್ಗೆ ಅಪ್ಪ ಹೇಳಿಕೊಂಡಿದ್ದರು. ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!   

ಯಾರ ಕನಸ ಕನ್ಯೆಯೋ... ಎಂದು ಸುಧಾರಾಣಿ ಪೋಸ್​: ಪ್ಲೀಸ್​ ಮಗು ತೆಗೆಸಿ ಅಂತಿರೋ ಫ್ಯಾನ್ಸ್​!

Latest Videos
Follow Us:
Download App:
  • android
  • ios