ಅನುಶ್ರೀ ಈ ವರ್ಷ ವಿವಾಹವಾಗುವುದಾಗಿ ಘೋಷಿಸಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ನಟ ನಟರಾಜ್ ತಮಾಷೆಯಾಗಿ ಅವರಿಗೆ ಉಂಗುರ ತೊಡಿಸಿ, ಆ್ಯಂಕರಿಂಗ್ ಸುಲಭ ಎಂದು ವ್ಯಂಗ್ಯವಾಡಿದರು. ನಟರಾಜ್ ತಮ್ಮ ಸಂಘರ್ಷದ ಬದುಕಿನ ಬಗ್ಗೆ ಹಾಸ್ಯಮಯವಾಗಿ ನುಡಿದರು.
ಕೆಲ ದಿನಗಳ ಹಿಂದಷ್ಟೇ ಆ್ಯಂಕರ್ ಅನುಶ್ರೀ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದರು. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. ನಟಿಯರಾದ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಅವರು ನಟಿಸಿರುವ ವಿದ್ಯಾಪತಿ ಸಿನಿಮಾ ರಿಲೀಸ್ಗೂ ಮೊದಲು, ಆ ಚಿತ್ರದ ಪ್ರಮೋಷನ್ಗಾಗಿ ನಟರು ಬಂದಿದ್ದಾಗ, ಅನುಶ್ರೀ ಅವರು, ಈ ವಿಷಯ ಬಹಿರಂಗಪಡಿಸಿದ್ದರು. ಮಲೈಕಾ ವಸುಪಾಲ್ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಪ್ರಶ್ನಿಸಿದ್ದರು. ಆಗ ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದರು. ಕೊನೆಗೆ ಮಲೈಕಾ ಅವರು ಯಾವಾಗ ಮದುವೆ ಎಂದು ಕೇಳಿದಾಗ, ಈ ವರ್ಷ 'ಅನುಪತಿ' ಬಂದೇ ಬರ್ತಾನೆ ಎಂದಿದ್ದರು.
ಇದೀಗ ಜೀ ಕನ್ನಡದ ಸರಿಗಮಪ ಮಹಾಸಂಚಿಕೆಯ ಸಮಯದಲ್ಲಿ ಆ್ಯಂಕರ್ ಅನುಶ್ರೀ ಅವರ ಬೆರಳಿಗೆ ಉಂಗುರ ಬಿದ್ದಿದೆ. ಇದು ಅವರ ಮದುವೆಯ ಸೂಚನೆಯನ್ನು ನೀಡುತ್ತಿದೆ ಎಂದೇ ಅವರ ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಅಂದ ಮಾತ್ರಕ್ಕೆ ಈ ವೇದಿಕೆಯಲ್ಲಿ ಅನುಶ್ರೀ ಅವರಿಗೆ ರಿಯಲ್ ಆಗಿ ಏನೂ ಎಂಗೇಜ್ಮೆಂಟ್ ಆಗಲಿಲ್ಲ. ಬದಲಿಗೆ ಗಿಲ್ಲಿ ನಟ ನಟರಾಜ್ ಅವರು ಉಂಗುರ ತೊಡಿಸಿದ್ದು. ಅವರಾಗಿಯೇ ಉಂಗುರ ತೊಡಿಸಲಿಲ್ಲ. ಉಂಗುರ ತಂದು ಕೊಟ್ಟಿದ್ದು, ಅದನ್ನು ಅನುಶ್ರೀ ಅವರಿಗೆ ಹಾಕಿಕೊಳ್ಳುವಂತೆ ಹೇಳಿದ್ದಾರೆ. ಅನುಶ್ರೀ ಅವರು ಆ ಉಂಗುರವನ್ನು ಹಾಕಿಕೊಂಡ ಬಳಿಕ, ನೋಡಿ ಆ್ಯಂಕರ್ಗೆ ರಿಂಗ್ ಹಾಕಿದೆ. ಈಗ ಆ್ಯಂಕರಿಂಗ್ ಆಗಿದೆ ಎಂದು ತಮಾಷೆ ಮಾಡಿದ್ದಾರೆ.
ಈ ವರ್ಷವೇ 'ಅನುಪತಿ' ಆಗಮನ ಎಂದ ಆ್ಯಂಕರ್ ಅನುಶ್ರೀ: ಭಾವಿ ಗಂಡನ ಬಗ್ಗೆ ನೇರಪ್ರಸಾರದಲ್ಲಿ ಮಾತು...
ಇದಕ್ಕೆ ಕಾರಣವೂ ಇದೆ. ಸಿಂಧನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಂಕರಿಂಗ್ ಮಾಡುವ ಬಗ್ಗೆ ಒಂದಿಷ್ಟು ಚರ್ಚೆಯಾಗಿದೆ. ಆ್ಯಂಕರಿಂಗ್ ಮಾಡುವುದು ಎಷ್ಟು ಕಷ್ಟ ಎನ್ನುವ ಬಗ್ಗೆ ಮಾತನಾಡಲಾಗಿದೆ. ಆ ಸಮಯದಲ್ಲಿ ಆ್ಯಂಕರಿಂಗ್ ಮಾಡುವುದು ಸಕತ್ ಸುಲಭ ಎಂದು ವೀಕ್ಷಕರ ಸಾಲಿನಲ್ಲಿ ಒಬ್ಬರು ಹೇಳಿದ್ದಾರೆ. ಅವರ್ಯಾರು ಎಂದು ನೋಡಿದಾಗ ನಟ ನಟರಾಜ್. ವೇದಿಕೆ ಮೇಲೆ ಬಂದ ಅವರು, ರಿಂಗ್ ತಂದು ಅದನ್ನು ಧರಿಸುವಂತೆ ಅನುಶ್ರೀಗೆ ಹೇಳಿ ಕೊನೆಗೆ ನೋಡಿ ಆ್ಯಂಕರಿಂಗ್ ಎಷ್ಟು ಸುಲಭ. ಆ್ಯಂಕರ್ಗೆ ರಿಂಗ್ ಹಾಕಿದ್ರೆ ಆಯ್ತು ಎಂದಿದ್ದಾರೆ. ಇವೆಲ್ಲವೂ ಮೊದಲೇ ಪ್ರೀಪ್ಲ್ಯಾನ್ಡ್ ಆಗಿದ್ದರೂ, ಅದು ಜನರಿಗೆ ಸಕತ್ ಎಂಜಾಯ್ಮೆಂಟ್ ನೀಡುತ್ತದೆ ಎನ್ನುವುದೂ ಸುಳ್ಳಲ್ಲ. ಹಲವರಿಗೆ ಇದು ಮೊದಲೇ ನಿಗದಿಯಾಗಿರುತ್ತದೆ ಎನ್ನುವುದೂ ಗೊತ್ತಿರಲ್ಲ. ಅಚಾನಕ್ ಆಗಿ ಇವೆಲ್ಲಾ ಆಗಿಬಿಟ್ಟಿದೆ ಎಂದು ನಂಬಿ, ಸಕತ್ ಖುಷಿಪಟ್ಟುಕೊಳ್ಳುವುದು ಇದೆ. ಅದಕ್ಕೆ ತಕ್ಕಂತೆ ನಟರು ಕೂಡ ಚೆನ್ನಾಗಿ ಆ್ಯಕ್ಟ್ ಮಾಡುವ ಕಾರಣ, ಇದು ಆ ಕ್ಷಣದಲ್ಲಿ ಆದ ಘಟನೆ ಎಂದುಕೊಳ್ಳುತ್ತಾರೆ. ಅದೇನೇ ಇದ್ದರೂ ಇವರ ಕರ್ತವ್ಯ ಜನರಿಗೆ ಮನರಂಜನೆ ನೀಡುವುದು ಅಷ್ಟೇ. ಅದು ಸಕ್ಸಸ್ ಆಗಿದೆ.
ಈ ಸಮಯದಲ್ಲಿ ಮಾತನಾಡಿದ ನಟ ನಟರಾಜ್ ಅವರು, ಕಷ್ಟಪಟ್ಟು ಹೈಸ್ಕೂಲ್ ಪಾಸ್ ಮಾಡಿದೆ. ಬೆಂಗಳೂರಿಗೆ ಬರೋಕೆ ಅಪ್ಪ ಅಮ್ಮನ ಫೇಸ್ ಮಾಡಿ, ಬಾಡಿಗೆ ಮನೆಗೆ ರೆಂಟ್ ಕಟ್ಟೋಕೆ ಒದ್ದಾಡಿ, ನಿತ್ಯ ಸಮಸ್ಯೆ ಜೊತೆ ಗುದ್ದಾಡಿ, ಕೆಲಸ ಇಲ್ಲದೆ ಒದ್ದಾಡಿ, ಜೀ ಕನ್ನಡ ಆಡಿಷನ್ಗೆ ಕ್ಯೂ ನಿಂತು, ಕಾಮಿಡಿ ಶೋನಲ್ಲಿ ಕಾಮಿಡಿ ಮಾಡಕಾಗ್ದೆ, ಡ್ಯಾನ್ಸ್ ಶೋನಲ್ಲಿ ಡ್ಯಾನ್ಸ್ ಮಾಡಕಾಗದೆ ನಿಮ್ಮನ್ನು ಗಾಡ್ ಮದರ್ ಆಗಿ ನಿಮ್ಮನ್ನು ತೆಗೆದುಕೊಂಡ ನನಗೆ ಆ್ಯಂಕರಿಂಗ್ ಬರಲ್ವ’ ಎಂದು ತಮಾಷೆ ಮಾಡಿದ್ದಾರೆ.
ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?


