ನಟಿ ಅನುಶ್ರೀ "ವಿದ್ಯಾಪತಿ" ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ, ಈ ವರ್ಷ "ಅನುಪತಿ" (ಮದುವೆ) ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಭಿಮಾನಿಗಳು ಅವರ ಮದುವೆಯ ಬಗ್ಗೆ ಪದೇ ಪದೇ ಪ್ರಶ್ನಿಸುತ್ತಿದ್ದ ಕಾರಣ, ಈ ರೀತಿ ಉತ್ತರಿಸಿದ್ದಾರೆ. ರವಿಚಂದ್ರನ್ ಕೂಡ ಅನುಶ್ರೀ ಮದುವೆ ಫಿಕ್ಸ್ ಆಗಿದೆ ಎಂದು ಹೇಳಿದ್ದರು. ಅನುಶ್ರೀ 1988 ಜನವರಿ 25 ರಂದು ಜನಿಸಿದ್ದು, ಅವರ ಅಭಿಮಾನಿಗಳು ಮದುವೆಗಾಗಿ ಕಾಯುತ್ತಿದ್ದಾರೆ.
ನಾಳೆ ವಿದ್ಯಾಪತಿ ಸಿನಿಮಾ ರಿಲೀಸ್ ಆದ್ರೆ, ಈ ವರ್ಷದಲ್ಲಿಯೇ ಅನುಪತಿ ಬಂದೇ ಬರ್ತಾನೆ ಎನ್ನುವ ಮೂಲಕ ಆ್ಯಂಕರ್ ಅನುಶ್ರೀ ಲಕ್ಷಾಂತರ ಮಂದಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಅವರು ನಟಿಸಿರುವ ವಿದ್ಯಾಪತಿ ಸಿನಿಮಾ ನಾಳೆ ಅಂದ್ರೆ ಏಪ್ರಿಲ್ 10ರಂದು ರಿಲೀಸ್ ಆಗಲಿದೆ. ಈ ಸಂಬಂಧ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಅನುಶ್ರೀ ಅವರು ನಟ-ನಟಿಯರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಲೈಕಾ ವಸುಪಾಲ್ ಅವರ ಕಾಲೆಳೆದರು. ಮಲೈಕಾ ತಮ್ಮ ಹುಡುಗ ಹೇಗಿರಬೇಕು ಎಂದೆಲ್ಲಾ ಮಾತನಾಡುತ್ತಿರುವ ನಡುವೆಯೇ, ಅನುಶ್ರೀ ಅಕ್ಕಾ, ನಿಮ್ಮ ಗಂಡ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಆಗ ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದರು. ಕೊನೆಗೆ ಮಲೈಕಾ ಅವರು ಯಾವಾಗ ಮದುವೆ ಎಂದು ಕೇಳಿದಾಗ, ನಾಳೆ ವಿದ್ಯಾಪತಿ, ಈ ವರ್ಷ ಅನುಪತಿ ಬಂದೇ ಬರ್ತಾನೆ ಎಂದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಈ ಮೂಲಕ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎಂದು ಕೇಳ್ತಿರೋರಿಗೆ ಅನುಶ್ರೀ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ, ಆ್ಯಂಕರ್ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್ ಇದೇ ಪ್ರಶ್ನೆ ಕೇಳುತ್ತಾರೆ. ಅವರಿಗೆ ಈಗ ಉತ್ತರ ಸಿಕ್ಕಿದೆ.
ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?
ಗೂಗಲ್ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಅವರಿಗೆ 37ವರ್ಷ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ.
ಮೊನ್ನೆಯಷ್ಟೇ ಜೀ ಕನ್ನಡದ ಬ್ಯಾಚುಲರ್ಸ್ ಪಾರ್ಟಿ ಕಾರ್ಯಕ್ರಮದಲ್ಲಿ, ರವಿಚಂದ್ರನ್ ಅವರು ಅನುಶ್ರೀ ಮದ್ವೆ ಫಿಕ್ಸ್ ಆಗಿದೆ ಎಂದು ಹೇಳುವ ಮೂಲಕ ಹಿಂಟ್ ಕೊಟ್ಟಿದ್ದರು. ಅಷ್ಟಕ್ಕೂ, ರವಿಚಂದ್ರನ್ ಅವರು ಸೀರಿಯಸ್ ಆಗಿ ಇದನ್ನೇನೂ ಹೇಳಿದ್ದಲ್ಲ. ಭರ್ಜರಿ ಬ್ಯಾಚುಲರ್ಸ್ನ ಸುನೀಲ್ ಮತ್ತು ಅಮೃತಾ ಸಕತ್ ಹಾಟ್ ಆಗಿ ಡಾನ್ಸ್ ಮಾಡಿದರು. ಆ ಡಾನ್ಸ್ಗೆ ಮಳೆ ನೀರನ್ನು ಸುರಿಸಲಾಗಿತ್ತು. ನೃತ್ಯ ಮುಗಿಯುತ್ತಿದ್ದಂತೆ ಅಮೃತಾ ನನಗೆ ತುಂಬಾ ಚಳಿಯಾಗುತ್ತಿದೆ ಎಂದು ಹೇಳಿದರು. ಆಗ ಅಲ್ಲಿಯೇ ಇದ್ದ ಅನುಶ್ರೀ ನಿಮಗೆ ಚಳಿಯಾಗುತ್ತಿದೆ. ಆದರೆ, ನೋಡಿದವರಿಗೆ ಬಿಸಿಯಾಗುತ್ತಿದೆ ಎಂದು ಹೇಳಿದರು. ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ರವಿಚಂದ್ರನ್ ಅವರು, ಅನುಗೆ ಬಿಸಿ ಆಯ್ತು ಅಂದ್ರೆ ಮದುವೆ ಫಿಕ್ಸ್ ಆಯ್ತು ಅಂತ ಎಂದು ಈ ಸಂದರ್ಭದಲ್ಲಿ ಹೇಳಿದ್ದರು. ಆಗ ಅನುಶ್ರೀ ನಾಚಿ ನೀರಾಗಿದ್ದರು. ರವಿಚಂದ್ರನ್ ಅವರಿಗೆ ಮದ್ವೆ ವಿಷಯ ತಿಳಿದಿದ್ದರಿಂದಲೇ ಹೀಗೆ ಹೇಳಿರುವುದಾಗಿ ಅಭಿಮಾನಿಗಳು ಅಂದುಕೊಂಡಿದ್ದು, ಅದೀಗ ನಿಜವಾಗಿದೆ.
ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್ ರಾಜ್...
