BBK9; ನಿಯಮ ಬ್ರೇಕ್ ಮಾಡಿದ್ದು ಅರ್ಯವರ್ಧನ್ ಆದರೆ ಕಿತ್ತಾಡಿದ್ದು ರೂಪೇಶ್ ಮತ್ತು ಅರುಣ್ ಸಾಗರ್

ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ನಡುವೆ ಜಗಳ ತಾರಕಕ್ಕೇರಿದೆ. ಆರ್ಯವರ್ಧನ್ ನಿಯಮ ಬ್ರೇಕ್ ಮಾಡಿದ್ದು ಆದರೆ ಕಿತ್ತಾಡಿದ್ದು ರೂಪೇಶ್ ಮತ್ತು ಅರುಣ್ ಸಾಗರ್.

fight between Roopesh rajanna and arun sagar in bigg boss kannada 9 sgk

ಬಿಗ್ ಬಾಸ್ ಸೀಸನ್ 9, 7ನೇ ವಾರಕ್ಕೆ ಕಾಲಿಟ್ಟಿದೆ. 6ನೇ ವಾರ ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬಗರಿ ನಡುವೆ ಕತ್ತಾಟವೇ ಹೆಚ್ಚಾಗಿತ್ತು. ದಿನಂಪ್ರತಿ ಇಬ್ಬರ ನಡುವೆ ಜಗಳ ಜೋರಾಗಿ ಇರುತ್ತಿತ್ತು. ಆದರೆ ಈ ಬಾರಿ ರೂಪೇಶ್ ರಾಜಣ್ಣ ಜೊತೆ ಪ್ರಶಾಂತ್ ಬದಲಿಗೆ ಅರುಣ್ ಸಾಗರ್ ಜಗಳವಾಡಿದ್ದಾರೆ. ಇಬ್ಬರ ಜಗಳ ನೋಡಿ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. 

ಅಷ್ಟಕ್ಕೂ ಜಗಳ ನಡೆಯಲು ಕಾರಣವೇನು ಎಂದರೆ, ಆರ್ಯವರ್ಧನ್ ಬಿಗ್ ಬಾಸ್ ನಿಯಮವನ್ನು ಬ್ರೇಕ್ ಮಾಡಿರುವುದ. ಜೈಲು ಸೇರಿರುವರೇ ಈರುಳ್ಳಿ ಕತ್ತರಿಸಿ ಅಡುಗೆ ಮಾಡಬೇಕು. ಆದರೆ ಆರ್ಯವರ್ಧನ್ ಈರುಳ್ಳಿ ಕತ್ತರಿಸಿ ಅಡುಗೆ ಮಾಡಿದರು. ನಿಯಮ ಮುರಿದ ಕಾರಣ ಬಿಗ್ ಬಾಸ್ ಮನೆಯಲ್ಲಿದ್ದ ಈರುಳ್ಳಿ, ಕೊಂತಂಬರಿ ಸೊಪ್ಪು ಸೇರಿದಂತೆ ಅನೇಕ ಅಡುಗೆ ವಸ್ತುಗಳನ್ನು ವಾಪಾಸ್ ಪಡೆದುಕೊಂಡಿದೆ. ಇದರಿಂದ ಕೆರಳಿದ ಆರ್ಯವರ್ಧನ್ ರೂಪೇಶ್ ರಾಜಣ್ಣ ಹೇಳಿದಕ್ಕೆ ಈರುಳ್ಳಿ ಬಳಸಿದೆ ಎಂದು ಹೇಳಿದರು. ಇದಕ್ಕೆ ರೂಪೇಶ್ ನಾನು ಹೊಸಬ ನನಗೆ ಗೊತ್ತಿಲ್ಲ ಎಂದು ಹೇಳಿದರು. ರೂಪೇಶ್ ಮಾತನಿಂದ ಸಿಟ್ಟಿಗೆದ್ದ ಅರುಣ್ ಸಾಗರ್, ಮನೆಗೆ ಬಂದು 6 ವಾರ ಆಯಿತು. ಈಗ ಹೊಸಬರು ಹೇಗೆ ಆಗುತ್ತೀರಿ ಎಂದು ಕೂಗಾಡಿದರು. ಡೈನಿಂಗ್ ಟೇಬಲ್ ಮೇಲೆ ಕುಳಿತಿದ್ದ ರೂಪೇಶ್ ರಾಜಣ್ಣ ಕೂಗಾಡುತ್ತಾ ಎದ್ದು ಬಂದರು. 

ಅನುಪಮಾ ಗೌಡ ತಡೆದರೂ ರೂಪೇಶ್ ಎದ್ದು ಬಂದು ಅರುಣ್ ಸಾಗರ್ ವಿರುದ್ಧ ಜಗಳಕ್ಕೆ ನಿಂತರು. ಸದ್ಯ ಈ ಎಪಿಸೋಡ್ ನ ಪ್ರೋಮ್ ರಿಲೀಸ್ ಆಗಿದೆ. ಮನೆ ಮಂದಿಯ ಕಿತ್ತಾಟ ಎಲ್ಲಿಗೆ ಹೋಗಿ ಮುಟ್ಟುತ್ತೊ, ಬಿಗ್ ಬಾಸ್ ಮತ್ತೆ ತರಕಾರಿಗಳನ್ನು ವಾಪಾಸ್ ನೀಡುತ್ತಾ ಇಂದಿನ (ನವೆಂಬರ್ 7) ಸಂಚಿಕೆಯಲ್ಲಿ ಗೊತ್ತಾಗಲಿದೆ. 

BBK9 ಕನ್ನಡ ಹೋರಾಟಗಾರರ ಪರ ನಿಂತ ಸುದೀಪ್; ಪ್ರಶಾಂತ್ ಸಂಬರಗಿಗೆ ಬುದ್ಧಿ ಹೇಳಿದ್ದು ಹೀಗೆ...

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9; ಕಣ್ಣೀರು ಹಾಕುತ್ತಾ ಕನ್ನಡ ಹೋರಾಟಗಾರರಿಗೆ ಕ್ಷಮೆ ಕೇಳಿದ ಪ್ರಶಾಂತ್ ಸಂಬರಗಿ

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಇದ್ದಾರೆ. 7ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios