BBK9 ಕನ್ನಡ ಹೋರಾಟಗಾರರ ಪರ ನಿಂತ ಸುದೀಪ್; ಪ್ರಶಾಂತ್ ಸಂಬರಗಿಗೆ ಬುದ್ಧಿ ಹೇಳಿದ್ದು ಹೀಗೆ...
ಬಿಬ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ ಪ್ರಶಾಂತ್ ಸಂಬರಗಿ. ವೀಕೆಂಡ್ ಮಾತುಕಥೆಯಲ್ಲಿ ಕ್ಲಾಸ್ ತೆಗೆದುಕೊಂಡು ಕಿಚ್ಚ...
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 9 42ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೆ ಮನೆಯಿಂದ 5 ಸ್ಪರ್ಧಿಗಳು ಹೊರ ನಡೆದಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಹೆಚ್ಚಿದೆ. ಆದರೆ ಈ ವಾರ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಜಗಳ ಆಗಿರುವ ಕಾರಣ ಸುದೀಪ್ ಗರಂ ಆಗಿದ್ದಾರೆ. ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ನಡುವೆ ಆದ ಜಗಳದಿಂದ ಕನ್ನಡ ಪರ ಹೋರಾಟಗಾರರು ಗರಂ ಆಗಿ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದರು. ದಿನ ಆರಂಭವಾಗುವ ಮುನ್ನ ಪ್ರಶಾಂತ್ ಕನ್ಫೆಷನ್ ರೂಮ್‌ಗೆ ತೆರಳಿ ಕ್ಷಮೆ ಕೇಳಿದ್ದರು.
ಬಿಗ್ ಬಾಸ್ ಕನ್ಫೆಷನ್ ರೂಮ್‌ಗೆ ಪ್ರಶಾಂತ್ ಅವರನ್ನು ಕರೆಸಿ ತಪ್ಪಿನ ಬಗ್ಗೆ ವಿವರಿಸಿದರು. 'ರೂಪೇಶ್ ಮತ್ತು ನಿಮ್ಮ ನಡುವೆ ನಡೆದ ಮಾತುಕತೆಯಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ನೀವು ಆಡಿದ ಮಾತು ಭಾಷೆಯನ್ನು ಪ್ರೀತಿಸುವ ಅನೇಕರಿಗೆ ನೋವಾಗಿದೆ ಎಂದು ಬಿಗ್ ಬಾಸ್ ವಿವರಿಸಿದರು'. ಬಳಿಕ ಪ್ರಶಾಂತ್ ಸಂಬರಗಿ ತಕ್ಷಣ ಕ್ಷಮೆ ಕೇಳಿದರು. 'ನಾನು ಹಾಗಿ ಹೇಳಿಲ್ಲ. ಆದರೆ ತಪ್ಪಾಗಿದ್ದರೆ ನನ್ನ ಕ್ಷಮೆ. ಮಾತಿನ ರಭಸದಲ್ಲಿ ಹೇಳಿದ್ದೇನೆ. ಕನ್ನಡ ಪ್ರೀತಿ ಮಾಡುವವರು, ಕನ್ನಡ ಹೋರಾಟಗಾರರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಇದು ಒಬ್ಬರ ವಿರುದ್ಧ ಮಾಡಿದ ಆರೋಪ. ನನಗೆ ನೋಯಿಸುವ ಅಥವಾ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ನನ್ನ ಮಾತನ್ನು ಹಿಂಪಡೆಯುತ್ತೇನೆ' ಎಂದು ಹೇಳಿ ಕಣ್ಣೀರು ಹಾಕಿದರು.
ಈ ವಿಚಾರದ ಬಗ್ಗೆ ವೀಕೆಂಡ್ ಮಾತುಕತೆಯಲ್ಲಿ ಸುದೀಪ್ ಮಾತನಾಡಿದ್ದಾರೆ. 'ಮಾತು ಮನೆ ಕೆಡಿಸಿತು ಎಂಬ ಗಾದೆ ಮಾತಿದೆ. ಈ ಮಾತುಗಳನ್ನು ಯಾಕೆ ಹೇಳುತ್ತಾರೆ ಗೊತ್ತಾ?' ಎಂದು ಸುದೀಪ್ ಪ್ರಶ್ನೆ ಮಾಡುತ್ತಾರೆ.
BBK9;ತಾರಕಕ್ಕೇರಿದ ಜಗಳ, ಮನೆ ಬಿಟ್ಟು ಹೊರಟ ರೂಪೇಶ್ ರಾಜಣ್ಣ
'ಯಾವುದೋ ಆವೇಶದಲ್ಲಿ ಜೆನರಲ್ ಆಗಿ ನಾನು ಹೇಳಿಕೆ ಕೊಟ್ಟಾಗ ಎಷ್ಟೊಂದು ಜನರಿಗೆ ನೋವಾಗುತ್ತದೆ ಆದರೆ ನಾನು ಮಾತನಾಡಿದ್ದು ಒಬ್ಬರಿಗೆ. ಇದರಿಂದ ನಾನು ಕ್ಷಮೆ ಕೇಳಿದ್ದೀನಿ' ಎಂದು ಪ್ರಶಾಂತ್ ಹೇಳಿದ್ದಾರೆ.
'ಪ್ರಶಾಂತ್ ಮತ್ತು ರಾಜಣ್ಣ ಮೊದಲನೇ ದಿನದಿಂದಲ್ಲೂ ಕಿತ್ತಾಡುತ್ತಿದ್ದಾರೆ ಸಮಸ್ಯೆ ಇದರಲ್ಲಿ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ಸಮಸ್ಯೆ ಇಲ್ಲ. ನೀವಿಬ್ಬರೂ ಏನೋ ಚರ್ಚೆ ಮಾಡುತ್ತೀರಿ....ಮಾತು ಮಾತು ಬರ್ತಾ ಏನಾಗುತ್ತೆ? ಕೋಪದಲ್ಲಿ ಮಾತನಾಡುವ ಮಾತುಗಳು ಅಳಿಸುವುದಕ್ಕೆ ಆಗೋಲ್ಲ. ಹೊರಗಡೆ ಕನ್ನಡಕ್ಕಾಗಿ ಹೋರಾಟ ಮಾಡಿ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಜನರು ತುಂಬಾ ಜನರಿದ್ದಾರೆ. ರಾಜಣ್ಣ ಮತ್ತು ಪ್ರಶಾಂತ್‌ಗೆ ಮಾತುಕತೆ ಬರಬೇಕು ಅಂದ್ರೆ ನಿಮ್ಮಿಬ್ಬರ ನಡುವೆ ಇರಬೇಕು. ಆದರೆ ಮಾತನಾಡುತ್ತಾ ಮಾತನಾಡುತ್ತಾ ಪ್ರಾಮಾಣಿಕವಾಗಿ ಅದರಲ್ಲಿ ಭಾಗಿಯಾಗಿರುವ ಹೋರಾಟಗಾರರು ಕೂಡ ಸೇರಿಕೊಳ್ಳುತ್ತಾರೆ ಅನ್ನೋದು ಮರೆಯಬೇಡಿ. ಇದರಿಂದ ದೊಡ್ಡ ತಪ್ಪಾಗಿದೆ ಪ್ರಶಾಂತ್. ಬಿಬಿ ಮನೆಯಲ್ಲಿ ಚರ್ಚೆ ಮಾಡುವ ವಿಚಾರಗಳು ತುಂಬಾನೇ ಇದೆ. ಆಟಕ್ಕೆ ಸೀಮತವಾಗಬೇಕು ಸ್ಪರ್ಧಿಗಳಿಗೆ ಬಗ್ಗೆ ಮಾತ್ರವಿರಬೇಕು ಆದರೆ ಜೆನರಲ್ ಆಗಿ ನೀವು ಹೇಳುವುದಕ್ಕೆ ಹೊರಗಡೆ ಜನರು ಸೇರಿಕೊಂಡರೆ ಇದಕ್ಕೆ ಓಕೆ ಅಲ್ಲ. ಬಿಗ್ ಬಾಸ್‌ಗೂ ಬರುವ ಮುನ್ನ ನಿಮ್ಮ ನಡುವೆ ಏನೇ ಜಗಳ ಇದ್ದರೂ ಈ ಮನೆಯಲ್ಲಿ ಮುಂದುವರೆಸಬೇಡಿ. ಹೊರಗಡೆ ಇರುವಂತ ನಮ್ಮ ವೀಕ್ಷಕರು ಅವರ ಸೆಂಟಿಮೆಂಟ್‌ಗೆ ನೋವಾಗುವಂತ ಯಾವುದೇ ವಿಚಾರ ಈ ಮನೆಯಲ್ಲಿ ಅವಶ್ಯಕತೆ ಇಲ್ಲ . ಕೋಪ ಬರುತ್ತೆ ಮಾತನಾಡಿ ಜಗಳ ಮಾಡಿ ನಿಮ್ಮಿಬ್ಬರಿಗೆ ಬಿಟ್ಟಿದ್ದು. ಅದು ತಪ್ಪು ಅಂತ ನಾನು ಹೇಳುವುದಿಲ್ಲ. ಇಲ್ಲಿರುವ ಸ್ಪರ್ಧಿಗಳು ಜೆನರಲ್ ಆಗಿ ಮಾತನಾಡುವಾಗ ಸಂಬಂಧ ಇಲ್ಲದೆ ಇರುವ ವ್ಯಕ್ತಿಗಳನ್ನು ಎಳೆದುಕೊಳ್ಳಬೇಡಿ' ಎಂದು ಸುದೀಪ್ ಬುದ್ಧಿ ಹೇಳಿದ್ದಾರೆ.