Asianet Suvarna News Asianet Suvarna News

'ಬೀಗ್​ ಬಾಸ್'​ ಮನೆಯಲ್ಲಿ ಲೂಸ್​-ಟೈಟ್​ ಮಾಡಲು ಎಂಟ್ರಿ ಕೊಟ್ಟ ಪ್ಲಂಬರ್! ಸ್ಪರ್ಧಿಗಳು ಶಾಕ್​...

ಬೀಗ್​ಬಾಸ್​ ಮನೆಯಲ್ಲಿ ಪ್ಲಂಬರ್​ ಎಂಟ್ರಿಯಾಗಿದೆ. ಇದರಿಂದ ಸ್ಪರ್ಧಿಗಳು ಶಾಕ್​ ಆಗಿದ್ದಾರೆ. ಅಸಲಿಗೆ ಏನಿದು ಆಟ?
 

A plumber has entered the Bigg Boss house contestants are shocked by this suc
Author
First Published Dec 18, 2023, 6:00 PM IST

ಬಿಗ್​ಬಾಸ್​ ಕನ್ನಡ ಸಕತ್​ ಸದ್ದು ಮಾಡುತ್ತಿದೆ. ವಿಭಿನ್ನ ಟಾಸ್ಕ್​ಗಳ ಜೊತೆಗೆ ಭರ್ಜರಿಯಾಗಿಯೇ ಹೋರಾಟ, ಕಾದಾಟ, ಮಾತಿನ ಜಟಾಪಟಿಗಳು ನಡೆಯುತ್ತಿವೆ. ಇದಾಗಲೇ ಇಬ್ಬರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಿದ್ದರು. ಆದರೆ ಮಾಡೆಲ್​ ಪವಿ ಪೂವಪ್ಪ ಅವರು ಇದಾಗಲೇ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ವೈಲ್ಡ್​ ಕಾರ್ಡ್​ ಮೂಲಕ ಇನ್ನಾರು ಎಂಟ್ರಿ ಕೊಡಬಹುದು ಎಂಬ ಕುತೂಹಲವೂ ಇನ್ನೊಂದೆಡೆ ಇದೆ. ಹೀಗೆ ಸ್ಪರ್ಧಿಗಳು ಕುತೂಹಲದಲ್ಲಿರುವಾಗಲೇ ಪ್ಲಂಬರ್​ ಒಬ್ಬರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ! ಮನೆಯಲ್ಲಿದ್ದರೂ ಸೇರಿ ಮನೆಯಲ್ಲಿನ ಲೂಸ್​ಗಳನ್ನು ಟೈಟ್​ ಮಾಡಲು, ಟೈಟ್​ಗಳನ್ನು ಲೂಸ್​ ಮಾಡಲು ತಾವು ಬೀಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿರುವುದಾಗಿ ಹೇಳುತ್ತಿದ್ದಂತೆಯೇ ಮನೆಯವರೆಲ್ಲಾ  ಶಾಕ್​ ಆಗಿದ್ದಾರೆ. 

ಅಷ್ಟಕ್ಕೂ ಹೀಗೆ ಪ್ಲಂಬರ್​ ಎಂಟ್ರಿ ಕೊಟ್ಟಿರುವುದು ಕಿಚ್ಚ ಸುದೀಪ್​ ನಡೆಸಿಕೊಡುವ ಬಿಗ್​ಬಾಸ್​ ಮನೆಗೆ ಅಲ್ಲ. ಬದಲಿಗೆ ವಿಕ್ಕಿಪಿಡಿಯಾ ಖ್ಯಾತಿಯ ಹಾಗೂ ನಾನು ನಂದಿನಿಯಿಂದಲೇ ಫೇಮಸ್​ ಆಗಿರೋ ವಿಕ್ಕಿ ಅಲಿಯಾಸ್​ ವಿಕ್ರಮ್​ ಅವರು! ಬಿಗ್​ಬಾಸ್​ನಂತೆಯೇ  ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ..’ ಹಾಡಿನ ಖ್ಯಾತಿಯ ವಿಕ್ರಮ್​ ಅಲಿಯಾಸ್​ ವಿಕ್ಕಿ ಅವರು ಹೊಸದಾಗಿ ಕೂಲ್​ ಕಲರ್ಸ್​ ಎನ್ನುವ ಚಾನೆಲ್​ ಹೆಸರು ಇಟ್ಟುಕೊಂಡು ಬೀಗ್​ ಭಾಸ್​ ಎನ್ನುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಲ್ಲಿ ಬಿಗ್​ಬಾಸ್​ ಮನೆಯಲ್ಲಿ ನಡೆಯುವ ಕೆಲವು ಘಟನೆಗಳನ್ನು ಹಾಸ್ಯದ ರೂಪದಲ್ಲಿ ಅನುಕರಣೆ ಮಾಡಲಾಗುತ್ತಿದೆ. ಇದಾಗಲೇ ಕೆಲವು ಎಪಿಸೋಡ್​ಗಳನ್ನು ಮಾಡಿರುವ ವಿಕ್ಕಿ ಅವರು ಇದೀಗ ವೈಲ್ಡ್​ ಕಾರ್ಡ್​ ಎಂಟ್ರಿಯ ಎಪಿಸೋಡ್​ ಮಾಡಿದ್ದಾರೆ. ಈ ರೀಲ್ಸ್​ ನೋಡಿ ಜನ ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ನಟನಾಗಬೇಕೆಂದ್ರೆ ಸಿನಿಮಾನೇ ಯಾಕೆ ಮಾಡ್ಬೇಕು? ದುಡ್ಡಿಗಾಗಿ ವಿಲನ್ನೂ ಆಗ್ಬಿಟ್ಟೆ: ಪ್ರಕಾಶ್​ ರಾಜ್​

ಅಸಲಿಗೆ ಓರ್ವ ಪ್ಲಂಬರ್​ ಎಂಟ್ರಿಯಾಗುತ್ತದೆ. ಇವರನ್ನು ನೋಡುತ್ತಿದ್ದಂತೆಯೇ ಬೀಗ್​ ಭಾಸ್​ ಸ್ಪರ್ಧಿಗಳು ವೈಲ್ಡ್​ ಕಾರ್ಡ್​ ಎಂಟ್ರಿ ಎಂದು ಶಾಕ್​  ಆಗುತ್ತಾರೆ. ಅದರಲ್ಲಿಯೂ ಪ್ಲಂಬರ್​ಮೊದಲಿಗೆ  ತಾವು ಪ್ಲಂಬರ್​ ಎಂದು ಹೇಳದೇ, ಮನೆಯಲ್ಲಿ ಇದ್ದ ಲೂಸ್​ಗಳಿಗೆ ಟೈಟ್​ ಮಾಡುವುದಾಗಿ ಹಾಗೂ ಟೈಟ್​ ಎಲ್ಲಾ ಲೂಸ್​ ಮಾಡುವುದು ಗೊತ್ತು ಎನ್ನುತ್ತಿದ್ದಂತೆಯೇ ಇವ ಒಬ್ಬ ಸ್ಟ್ರಾಂಗ್​ ಕಂಟೆಸ್ಟೆಂಟ್​ ಎಂದು ಮನೆಯಲ್ಲಿ ಇದ್ದವರಿಗೆ ಭಯ ಹುಟ್ಟುತ್ತದೆ. ಇದೇ ವೇಳೆ ಜಾಸ್ತಿ ಅಧಿಕ ಪ್ರಸಂಗ ಮಾಡದೇ ಮನೆಯಲ್ಲಿನ ಕೆಲಸ ಮಾಡಿಕೊಂಡು ಹೋಗು ಎಂದು ಬಿಗ್​ಬಾಸ್​ ದನಿ ಬರುತ್ತಿದ್ದಂತೆಯೇ ಈತ ಪ್ಲಂಬರ್ ಎಂದು ತಿಳಿದು ಸ್ಪರ್ಧಿಗಳಿಗೆ ಖುಷಿಯಾಗುತ್ತದೆ. ಇದರ ವಿಡಿಯೋಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.

ಪ್ಲಂಬರ್ ಬರುವುದಕ್ಕೂ ಮೊದಲು ಬಿಗ್​ಬಾಸ್​​ನಲ್ಲಿ ಕಾಮನ್ ಆಗಿರೋ ಲವ್​ಸ್ಟೋರಿ ಕಥೆಯನ್ನೂ ಹೇಳಿದ್ದಾರೆ. ಬಹುತೇಕ ಮಂದಿಗೆ ತಿಳಿದಿರುವಂತೆ ಹೆಚ್ಚು ಕಾಂಟ್ರವರ್ಸಿ, ಅಧಿಕ ಪ್ರಸಂಗ, ಅಶ್ಲೀಲತೆ... ಇಂಥ ಸ್ಪರ್ಧಿಗಳಿಗೆ ಎಲ್ಲಾ ಭಾಷೆಯ ಬಿಗ್​ಬಾಸ್​ಗಳಲ್ಲಿಯೂ ಆದ್ಯತೆ ಹೆಚ್ಚು. ಇದೇ ಕಾರಣಕ್ಕೆ ಕೊನೆಯ ತನಕ ಇರುವುದಾದರೆ ಏನು ಮಾಡಬೇಕು ಎಂದು ಈ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಾರೆ. ಲವ್​ ಮಾಡಿದರೆ ಹೆಚ್ಚು ದಿನ ಇರಬಹುದು ಎಂದು ಮಾತನಾಡಿಕೊಂಡರೆ, ಮತ್ತೋರ್ವ್ ಸ್ಪರ್ಧಿ ಅವರು ಲವ್​  ಮಾಡ್ತಾರೆ, ನಾವು ಜಗಳ ಮಾಡೋಣ, ಹೀಗೆ ಹೆಚ್ಚಿಗೆ ದಿನ ಇರಬಹುದು ಎನ್ನುವ ಮೂಲಕ ಬಿಗ್​ಬಾಸ್​ನ ಸತ್ಯಾಸತ್ಯತೆಯನ್ನು ಸೂಕ್ಷ್ಮವಾಗಿ ಹಾಸ್ಯದ ರೂಪದಲ್ಲಿಯೂ ಇದೇ ರೀಲ್ಸ್​ನಲ್ಲಿ ನೀಡಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಬ್ರೇಕಿಂಗ್​ ನ್ಯೂಸ್​: ಕಿಚನ್​ನಿಂದ ಬೆಡ್​ರೂಮ್​ವರೆಗಿನ ವಿಷ್ಯ ಬಯಲು!

Follow Us:
Download App:
  • android
  • ios