ರಾಕಿ ಸ್ಟೈಲ್ ನಲ್ಲಿ ಮಹಾಲಕ್ಷ್ಮಿ ಎಂಟ್ರಿ, ಲುಕ್ ಚೆನ್ನಾಗಿಲ್ಲ ಅಂದ್ರು ಫ್ಯಾನ್ಸ್

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮಿ ಎಂಟ್ರಿಯಾಗಿದೆ. ಮಹಾಲಕ್ಷ್ಮಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಆದ್ರೆ ಫ್ಯಾನ್ಸ್ ಯಾಕೋ ಮುಗ್ದ ಮಹಾಲಕ್ಷ್ಮಿಗೆ ವೋಟ್ ನೀಡಿದ್ದಾರೆ.
 

Fans React to Lakshmi re entry in colors kannada lakshmi baramma serial roo

ಕಲರ್ಸ್ ಕನ್ನಡ ಲಕ್ಷ್ಮಿ ಬಾರಮ್ಮ ಸೀರಿಯಲ್ (Colors Kannada Lakshmi Baramma Serial) ನಲ್ಲಿ ವೀಕ್ಷಕರು ಕಾಯ್ತಿದ್ದ ಕ್ಷಣ ಬರ್ತಿದೆ. ಇಷ್ಟು ದಿನ ಮಹಾಲಕ್ಷ್ಮಿ ಕಾಣ್ತಾ ಇರಲಿಲ್ಲ. ಲಕ್ಷ್ಮಿ ಸಾವನ್ನಪ್ಪಿದ್ದು ಎಷ್ಟು ಸತ್ಯ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡ್ತಾನೇ ಇತ್ತು. ಆದ್ರೆ ಈ ಎಲ್ಲ ಕುತೂಹಲಕ್ಕೆ ತೆರೆ ಬೀಳುವ ಸಮಯ ಬಂದಿದೆ. ಮಹಾಲಕ್ಷ್ಮಿ ಎಂಟ್ರಿಯಾಗಿದೆ. ಕೋರ್ಟ್ (Court) ಗೆ ಲಕ್ಷ್ಮಿ ಬರ್ತಾ ಇದ್ದಂತೆ ಕಾವೇರಿ ತತ್ತರಿಸಿ ಹೋಗಿದ್ದಾಳೆ. 

ಕಲರ್ಸ್ ಕನ್ನಡ ಇಂದು ಪ್ರಸಾರವಾಗಲಿರುವ ಸೀರಿಯಲ್ ನ ಪ್ರೋಮೋ ಬಿಡುಗಡೆ ಮಾಡಿದೆ. ಅದ್ರಲ್ಲಿ ಕೋರ್ಟ್ ದೃಶ್ಯವನ್ನು ನೀವು ಕಾಣ್ಬಹುದು. ವೈಷ್ಣವ್, ಮಹಾಲಕ್ಷ್ಮಿ ಸತ್ತಿದ್ದಾಳೆ ಅನ್ನೋದನ್ನು ಮೊದಲು ನಂಬಿರಲಿಲ್ಲ. ಆದ್ರೆ ದಿನ ಕಳೆದಂತೆ ತನ್ನ ಪತ್ನಿ ಮಹಾಲಕ್ಷ್ಮಿ ಸಾವನ್ನಪ್ಪಿದ್ದಾಳೆ ಎಂಬುದನ್ನು ನಂಬಿದ್ದಲ್ಲದೆ ಅದಕ್ಕೆ ಎಡೆ ಕೂಡ ಇಟ್ಟಿದ್ದ. ಇತ್ತ ಜೈಲು ಸೇರಿರುವ ಕಾವೇರಿ, ಲಾಯರ್ (Lawyer) ಮುಂದೆ ಎಲ್ಲ ವಿಷ್ಯವನ್ನು ಹೇಳಿದ್ದರು. ಕಟಕಟೆ ಏರಿರುವ ಕಾವೇರಿ ಪರ ವಾದ ಮಂಡಿಸುತ್ತಿರುವ ಲಾಯರ್, ಕಾವೇರಿ, ಲಕ್ಷ್ಮಿ ಕೊಲೆ ಮಾಡಿಲ್ಲ ಎನ್ನುತ್ತಿದ್ದಾರೆ.

67ನೇ ವಯಸ್ಸಿನಲ್ಲಿ ಶಾರುಕ್, ಸಲ್ಮಾನ್ ನಿಧನ! ಭವಿಷ್ಯವಾಣಿ ವಿಡಿಯೋ ವೈರಲ್

ಕಾವೇರಿ, ಲಕ್ಷ್ಮಿ ಗೊಂಬೆಯನ್ನು ರಾವಣ ದಹನದ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ಒಳಗೆ ಇಟ್ಟು ಹತ್ಯೆ ಮಾಡಿದ್ದಾಳೆ ಎಂಬ ಆರೋಪವಿದೆ. ಆದ್ರೆ ಕಾವೇರಿ ಲಾಯರ್, ಲಕ್ಷ್ಮಿಯ ಪ್ರೀತಿಯ ಗೊಂಬೆ ಕೀರ್ತಿ ರೂಮಿನಲ್ಲಿ ಸಿಕ್ಕಿದೆ. ಹಾಗಾಗಿ ಕೀರ್ತಿಯೇ, ಲಕ್ಷ್ಮಿಯನ್ನು ಏಕೆ ಕೊಲೆ ಮಾಡಿರಬಾರದು, ಪಟಾಕಿ ಡೀಲರ್ ಬದಲಿಸಿರಬಹುದಲ್ವಾ ಎಂದು ಕೋರ್ಟ್ ಮುಂದೆ ಪ್ರಶ್ನೆ ಮಾಡ್ತಾರೆ. ಇದನ್ನು ಕೇಳಿ ಕೀರ್ತಿ ಆತಂಕಕ್ಕೊಳಗಾದ್ರೆ, ಕೀರ್ತಿ ರಕ್ಷಣೆಗೆ ಮಹಾಲಕ್ಷ್ಮಿ ಎಂಟ್ರಿಯಾಗಿದೆ. ಬೆಂಕಿಯಂತೆ ಮಹಾಲಕ್ಷ್ಮಿ ಕೋರ್ಟ್ ಒಳಗೆ ಬರ್ತಾಳೆ.

ಸೀರೆಯುಟ್ಟಿರುವ ಮಹಾಲಕ್ಷ್ಮಿ, ಗ್ಲಾಸ್ ಧರಿಸಿದ್ದಾಳೆ. ಸ್ವಲ್ಪ ಮೇಕಪ್ ಕೂಡ ಮಾಡಲಾಗಿದೆ. ಮಹಾಲಕ್ಷ್ಮಿ ಲುಕ್ ಸ್ವಲ್ಪ ಬದಲಾಗಿದೆ. ಪ್ರೋಮೋ ವೀಕ್ಷಣೆ ಮಾಡಿದ ಫ್ಯಾನ್ಸ್ ಗೆ ಮಹಾಲಕ್ಷ್ಮಿ ಈ ಹೊಸ ಅವತಾರ ಇಷ್ಟವಾದಂತೆ ಕಾಣ್ತಿಲ್ಲ. ಲಕ್ಷ್ಮಿಗೆ ಗ್ಲಾಸ್ ಅವಶ್ಯಕತೆ ಇರಲಿಲ್ಲ, ಎಷ್ಟು ಸಿಂಪಲ್ ಆಗಿದ್ದ ಲಕ್ಷ್ಮಿಯನ್ನು ಯಾಕೆ ಹೀಗೆ ಬದಲಿಸಿದ್ದೀರಿ? ಯಾರ್ ಹೇಗೆ ಇರಬೇಕೋ ಹಾಗೇ ಇದ್ದರೆ ಚೆಂದ. ಲಕ್ಷ್ಮಿ ಹೊಸ ಲುಕ್ ನಮಗೆ ಇಷ್ಟ ಆಗ್ಲಿಲ್ಲ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಲಕ್ಷ್ಮಿಗೆ ಇಷ್ಟೊಂದು ಮೇಕಪ್ ಅವಶ್ಯಕತೆ ಇರ್ಲಿಲ್ಲ ಅನ್ನೋದು ಮತ್ತೊಂದಿಷ್ಟು ಮಂದಿಯ ಅಭಿಪ್ರಾಯ. 

ಸಾವಿನ ಮನೆಗೆ ಸೆಲೆಬ್ರಿಟಿ ಆಹ್ವಾನಿಸಿ ಹಣ ನೀಡ್ತಾರೆ ಜನ! ಅತ್ರೆ ಹೆಚ್ಚಾಗುತ್ತೆ ಸಂಭಾವನೆ

ಲಕ್ಷ್ಮಿ ಪರ ಬ್ಯಾಟ್ ಬೀಸಿದ ಫ್ಯಾನ್ಸ್ ಸಂಖ್ಯೆ ಕೂಡ ಹೆಚ್ಚೇ ಇದೆ. ನಿನ್ನೆ ಕೈ ತೋರಿಸಿದ್ರು. ಹಾಗಾಗಿ ಲಕ್ಷ್ಮಿ ಬದಲಾಗಿದ್ದಾಳೆ ಅಂದ್ಕೊಂಡಿದ್ದೆ. ಭಟ್ ಅದೇ ಲಕ್ಷ್ಮಿ, ರೀ ಎಂಟ್ರಿ ಸೂಪರ್ ಎಂದು ಫ್ಯಾನ್ಸ್ ಹೇಳಿದ್ದಾರೆ.  ಮಹಾಲಕ್ಷ್ಮಿ ಎಂಟ್ರಿಗೆ ನಾವೆಲ್ಲ ಕಾಯ್ತಿದ್ವಿ, ಮಹಾಲಕ್ಷ್ಮಿ ಬಂದ್ಮೇಲೇ ಸೀರಿಯಲ್ ಗೆ ಹೊಸ ಕಳೆ ಬರೋದು, ನಿರ್ದೇಶಕರೆ ಎಂಥ ಟ್ವಿಸ್ಟ್ ನೀಡ್ತಿದ್ದೀರಾ, ಆರಂಭದಲ್ಲಿ ಅದೇ ಕಥೆ ಬೋರ್ ಆಗಿದೆ ಅಂತ ನಾವೆಲ್ಲ ಬೈತಾ ಇದ್ವಿ. ಆದ್ರೆ ಈಗ ದಿನ ದಿನಕ್ಕೂ ಹೊಸ ಟ್ವಿಸ್ಟ್ ಸಿಗ್ತಾಯಿದ್ದು, ಬೆಂಕಿ, ಬಿರುಗಾಳಿ ತರ ಸೀರಿಯಲ್ ಬರ್ತಿದೆ ಎಂದು ಮತ್ತೊಬ್ಬರು ಧಾರವಾಹಿಯನ್ನು ಹೊಗಳಿದ್ದಾರೆ. ಮಹಾಲಕ್ಷ್ಮಿ ನೋಡ್ತಿದ್ದಂತೆ ಕಾವೇರಿ ಜೀವ ಬಾಯಿಗೆ ಬಂದಿದೆ, ಕಾವೇರಿ ಶಾಕ್ ಆಗಿದ್ದಾಳೆ ಎಂದ ವೀಕ್ಷಕರು, ಈಗ್ಲೂ ಕಾವೇರಿ ನಿರಪರಾಧಿ ಅಂತ ಸಾಭೀತುಪಡಿಸ್ಬೇಡಿ ಎಂದಿದ್ದಾರೆ. ಕೆಲ ವೀಕ್ಷಕರಿಗೆ ಧಾರಾವಾಹಿ ಮುಗಿತಿದ್ಯಾ ಎನ್ನುವ ಪ್ರಶ್ನೆ ಕಾಡಲು ಶುರುವಾಗಿದೆ. ಕೋರ್ಟ್ ಮುಂದೆ ಕಾವೇರಿ ತಪ್ಪು ಹೊರಬಿದ್ಮೇಲೆ ಇನ್ನೇನಿರುತ್ತೆ ಎಂಬುದು ಅವರ ಅಭಿಪ್ರಾಯ. 

Latest Videos
Follow Us:
Download App:
  • android
  • ios