ಸಾವಿನ ಮನೆಗೆ ಸೆಲೆಬ್ರಿಟಿ ಆಹ್ವಾನಿಸಿ ಹಣ ನೀಡ್ತಾರೆ ಜನ! ಅತ್ರೆ ಹೆಚ್ಚಾಗುತ್ತೆ ಸಂಭಾವನೆ
ಸೆಲೆಬ್ರಿಟಿಗಳು ಸಿನಿಮಾ ಮಾತ್ರ ನಂಬಿ ಕೂರಲು ಸಾಧ್ಯವಿಲ್ಲ. ಜಾಹೀರಾತು, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಪಾದನೆ ಮಾಡ್ತಾರೆ. ಆದ್ರೆ ಜನರು ಎಲ್ಲೆಲ್ಲಿಗೆ ಸೆಲೆಬ್ರಿಟಿ ಕರೀತಾರೆ ಗೊತ್ತಾ? ಸತ್ಯ ಬಿಚ್ಚಿಟ್ಟಿದ್ದಾರೆ ಚಂಕಿ ಪಾಂಡೆ
ಸೆಲೆಬ್ರಿಟಿ (Celebrity)ಗಳನ್ನು ಮದುವೆ, ಹುಟ್ಟುಹಬ್ಬ ಸೇರಿದಂತೆ ಖಾಸಗಿ ಕಾರ್ಯಕ್ರಮಕ್ಕೆ (private event) ಆಹ್ವಾನಿಸೋದು ಈಗ ಮಾಮೂಲಿಯಾಗಿದೆ. ಅದು ಜನರಿಗೆ ಪ್ರತಿಷ್ಠೆಯ ವಿಷ್ಯ. ಲಕ್ಷಾಂತರ ರೂಪಾಯಿ ನೀಡಿ, ಗೆಸ್ಟ್ ಆಹ್ವಾನಿಸುವ ಜನರಿದ್ದಾರೆ. ಆದ್ರೆ ದುಃಖದ ಸಮಯದಲ್ಲೂ ಜನರು ಸೆಲೆಬ್ರಿಟಿಗಳನ್ನು ಹಣಕೊಟ್ಟು ಕರೆಸ್ತಾರೆ ಅಂದ್ರೆ ನಂಬೋದು ಕಷ್ಟ. ಸಾವಿನ ಮನೆಯಲ್ಲಿ ಹೆಣ ಹೊರಲು ಜನರಿಲ್ಲ, ಕಣ್ಣೀರು ಹಾಕಲು ಜನರಿಲ್ಲ ಅಂತ ಈಗ ಪ್ಯಾಕೇಜ್ ವ್ಯವಸ್ಥೆ ಮಾರುಕಟ್ಟೆಗೆ ಬಂದಿದ್ದು ನಿಮಗೆಲ್ಲ ಗೊತ್ತು. ಸಾವಾದ ಮನೆಯವರು ಪ್ಯಾಕೇಜ್ ಬುಕ್ ಮಾಡಿದ್ರೆ ಅದ್ರಲ್ಲಿ ಅಂತ್ಯಸಂಸ್ಕಾರ ಜೊತೆ ಅಳಲು ಜನರನ್ನೂ ಕರೆತರಲಾಗುತ್ತದೆ. ಆದ್ರೆ ಸೆಲೆಬ್ರಿಟಿಗಳಿಗೆ ಹಣ ನೀಡಿ, ಅವರನ್ನು ಸಾವಿನ ಮನೆಗೆ ಕರೆಸಿ, ಅತ್ತರೆ ಇನ್ನೊಂದಿಷ್ಟು ಹಣ ಕೊಡ್ತೇವೆ ಎಂಬ ಕುಟುಂಬಗಳೂ ಇವೆ ಗೊತ್ತಾ?. ಬಾಲಿವುಡ್ ಸ್ಟಾರ್ ಚಂಕಿ ಪಾಂಡೆ (Bollywood star Chunky Pandey) ಈ ಆಘಾತಕಾರಿ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಒಂದು ಕುಟುಂಬ, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಣ ನೀಡಿತ್ತಂತೆ.
ಹೌಸ್ ಪುಲ್ ನಟ ಚಂಕಿ ಪಾಂಡೆ, ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಈ ಅಚ್ಚರಿ ವಿಷ್ಯವನ್ನು ಹೇಳಿದ್ದಾರೆ. ಆರಂಭದಲ್ಲಿ ಯಾವುದೇ ಇವೆಂಟ್ ಸಿಕ್ಕಿದ್ರೂ ಅದನ್ನು ಚಂಕಿ ಪಾಂಡೆ ಒಪ್ಪಿಕೊಳ್ತಿದ್ದರು. ಅದೇ ಒಮ್ಮೆ ಯಡವಟ್ಟು ಮಾಡಿತ್ತು. ಅಂತಿಮ ಸಂಸ್ಕಾರಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾವಿನ ಮನೆಗೆ ಹೋದ ಚಂಕಿ ಪಾಂಡೆ ಹಣವನ್ನು ಕೂಡ ಪಡೆದಿದ್ದರು.
67ನೇ ವಯಸ್ಸಿನಲ್ಲಿ ಶಾರುಕ್, ಸಲ್ಮಾನ್ ನಿಧನ! ಭವಿಷ್ಯವಾಣಿ ವಿಡಿಯೋ ವೈರಲ್
ಸಿನಿಮಾ ಬಿಟ್ರೆ ಬೇರೆ ಯಾವುದೇ ಗಳಿಕೆ ನನಗೆ ಇರಲಿಲ್ಲ. ಹಾಗಾಗಿ ಸಿಕ್ಕ ಎಲ್ಲ ಇವೆಂಟ್ ಒಪ್ಪಿಕೊಳ್ತಿದ್ದೆ. ನನ್ನ ಬಳಿ ಸದಾ ಒಂದು ಬ್ಯಾಗ್ ಸಿದ್ಧವಾಗಿರ್ತಾಯಿತ್ತು. ಮದುವೆ, ಮುಂಜಿ, ಹುಟ್ಟುಹಬ್ಬ, ಪಾರ್ಟಿ ಯಾವುದಕ್ಕೆ ಕರೆದ್ರೂ ನಾನು ಬ್ಯಾಗ್ ಹಾಕಿಕೊಂಡು ಓಡ್ತಿದ್ದೆ. ಒಂದು ದಿನ ಬೆಳಿಗ್ಗೆ ನನಗೆ ಇವೆಂಟ್ ಮ್ಯಾನೇಜರ್ ಒಬ್ಬರು ಕರೆ ಮಾಡಿದ್ರು. ಇವತ್ತು ಏನು ಕೆಲಸ ಅಂತ ಕೇಳಿದ್ರು. ನಾನು ಒಂದು ಶೂಟಿಂಗ್ ಇದೆ ಅಂತ ಹೇಳ್ದೆ. ಅವರು ಎಲ್ಲಿ ಅಂತ ಕೇಳಿದ್ದಕ್ಕೆ, ಫಿಲ್ಮಂ ಸಿಟಿಯಲ್ಲಿ ಅಂತ ನಾನು ಹೇಳಿದ್ದೆ. ಅವರು ಒಂದು ಕೆಲಸ ಮಾಡಿ, ಅದೇ ದಾರಿಯಲ್ಲಿ ಒಂದು ಇವೆಂಟ್ ಇದೆ. 10 ನಿಮಿಷ ಬಂದು ಹೋಗಿ. ಒಳ್ಳೆ ಪೇಮೆಂಟ್ ಇದೆ ಅಂದ್ರು ಅಂತ ಚಂಕಿ ಪಾಂಡೆ ಹೇಳ್ತಾರೆ.
ಮಾತು ಮುಂದುವರೆಸಿದ ಅವರು, ನೀವು ಬರೋದೇ ಆದ್ರೆ ಬಿಳಿ ಡ್ರೆಸ್ ಧರಿಸಿ ಬನ್ನಿ ಅಂತ ಹೇಳಿದ್ರು. ನಾನು ಹೆಚ್ಚು ಆಲೋಚನೆ ಮಾಡ್ತಿಲ್ಲ. ಬಿಳಿ ಬಣ್ಣದ ಬಟ್ಟೆ ಧರಿಸಿ ಅವರು ಹೇಳಿದ ಜಾಗಕ್ಕೆ ಹೋದೆ ಎನ್ನುತ್ತಾರೆ ಚಂಕಿ ಪಾಂಡೆ. ಮನೆ ಮುಂದೆ ಬಿಳಿ ಡ್ರೆಸ್ ಧರಿಸಿದ್ದ ಅನೇಕರಿದ್ರು. ಅವರನ್ನೆಲ್ಲ ದಾಟಿ ಮುಂದೆ ಹೋಗ್ತಿದ್ದ ನನಗೆ ಆರಂಭದಲ್ಲಿ ಏನಾಗ್ತಿದೆ ಎಂಬುದು ಗೊತ್ತಾಗ್ಲಿಲ್ಲ. ಮುಂದೆ ಹೋಗಿ ಶವ ನೋಡಿದಾಗ್ಲೇ ಎಲ್ಲ ಅರ್ಥವಾಯ್ತು ಎನ್ನುತ್ತಾರೆ ಚಂಕಿ ಪಾಂಡೆ. ಅಲ್ಲಿ ನೆರೆದಿದ್ದ ಜನರು, ನನ್ನನ್ನು ನೋಡಿ ಚಂಕಿ ಪಾಂಡೆ ಅಲ್ವಾ ಅಂತ ಮಾತನಾಡ್ತಿದ್ದರು. ನನಗೆ ಇರುಸುಮುರುಸಾಯ್ತು, ಇವೆಂಟ್ ಮ್ಯಾನೇಜರ್ ಕರೆಸಿದೆ ಎನ್ನುವ ಚಂಕಿ, ಮುಂದೆ ನಡೆದ ಅಚ್ಚರಿ ಸಂಗತಿಯನ್ನು ಹೇಳಿದ್ದಾರೆ.
ಅತ್ತೆ ಮಾವನ ಜೊತೆ ಮನೆಯಿಂದ ಹೊರ ನಡೆದ ಭಾಗ್ಯಾ, ಜೊತೆಗಿದ್ದೇ ಪಾಠ ಕಲಿಸಬೇಕಿತ್ತೆಂದ
ಅತ್ತರೆ ಹೆಚ್ಚಾಗುತ್ತೆ ಸಂಭಾವನೆ : ಚಂಕಿ ಪಾಂಡೆ ಮುಂದೆ ಬಂದ ಇವೆಂಟ್ ಮ್ಯಾನೇಜರ್, ಚಿಂತೆ ಮಾಡ್ಬೇಡಿ ನಿಮ್ಮ ಹಣ ನನ್ನ ಕೈ ಸೇರಿದೆ ಅಂದ್ರು. ಅಷ್ಟೇ ಅಲ್ಲ, ನೀವು ಶವದ ಮುಂದೆ ಕಣೀರು ಹಾಕ್ತೀರಾ ಎಂದಾದ್ರೆ ಕುಟುಂಬಸ್ಥರು ಹೆಚ್ಚಿನ ಹಣ ನೀಡಲು ಸಿದ್ಧರಿದ್ದಾರೆ ಎಂದು ಇವೆಂಟ್ ಮ್ಯಾನೇಜರ್ ಹೇಳಿದ್ದರು. ಈ ಮಾತು ಕೇಳಿ ಶಾಕ್ ಆದ ಪಾಂಡೆ ಅಲ್ಲಿಂದ ಬಂದಿದ್ದರಂತೆ.