67ನೇ ವಯಸ್ಸಿನಲ್ಲಿ ಶಾರುಕ್, ಸಲ್ಮಾನ್ ನಿಧನ! ಭವಿಷ್ಯವಾಣಿ ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಶಾರುಕ್ ಖಾನ್ ಹಾಗೂ ಸಲ್ಮಾನ್ ಖಾನ್ ಯಾವಾಗ ಇಹಲೋಕ ತ್ಯಜಿಸ್ತಾರೆ ಎಂಬ ಭವಿಷ್ಯವಾಣಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ (Bollywood King Khan Shahrukh Khan) ಹಾಗೂ ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ (Bollywood Most Eligible Bachelor Salman Khan) ಸಾವಿನ ವರ್ಷ ಫಿಕ್ಸ್ ಆಗಿದೆ. ಅವರು ಇನ್ನು ಆರೇಳು ವರ್ಷ ಬದುಕಿರ್ತಾರೆ. ಹೀಗಂತ ನಾವು ಹೇಳಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಪಾಡ್‌ಕ್ಯಾಸ್ಟ್ (Podcast) ನಲ್ಲಿ ವ್ಯಕ್ತಿಯೊಬ್ಬರು, ಶಾರುಕ್ ಹಾಗೂ ಸಲ್ಮಾನ್ ಖಾನ್ ನಿಧನದ ವರ್ಷವನ್ನು ಹೇಳಿದ್ದಾರೆ. ಇದನ್ನು ಕೇಳಿದ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.
podcast.short5 ಹೆಸರಿನ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ಬಾಲಿವುಡ್ ನಲ್ಲಿ ಮೂವರು ಖಾನ್ ಗಳಿದ್ದಾರೆ. ಅದ್ರಲ್ಲಿ ಅಮೀರ್ ಖಾನ್ ಹೊರತುಪಡಿಸಿ ಸಲ್ಮಾನ್ ಖಾನ್ ಹಾಗೂ ಶಾರುಕ್ ಖಾನ್ ವಿಷ್ಯಕ್ಕೆ ಬರೋದಾದ್ರೆ ಅವರು ತಮ್ಮ 67 ಅಥವಾ 68ನೇ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ ಎಂದಿದ್ದಾರೆ. ಅಷ್ಟೇ ಅಲ್ಲ, ಶಾರುಕ್ ಹಾಗೂ ಸಲ್ಮಾನ್ ಇಬ್ಬರೂ ಒಂದೇ ವರ್ಷ ಇಹಲೋಕ ತ್ಯಜಿಸುತ್ತಾರೆಂದು ಅವರು ಹೇಳಿದ್ದಾರೆ. ಶಾರುಕ್ ಹಾಗೂ ಸಲ್ಮಾನ್ ಖಾನ್ ಮರಣಕ್ಕೆ ಕಾರಣವೇನಾಗುತ್ತೆ ಎಂಬುದನ್ನು ಕೂಡ ಆ ವ್ಯಕ್ತಿ ಹೇಳಿದ್ದಾರೆ.
ಅತ್ತೆ ಮಾವನ ಜೊತೆ ಮನೆಯಿಂದ ಹೊರ ನಡೆದ ಭಾಗ್ಯಾ, ಭೇಷ್ ಎಂದ ವೀಕ್ಷಕರು!
ಅವರ ಪ್ರಕಾರ, ಶಾರುಕ್ ಖಾನ್ ಹಾಗೂ ಸಲ್ಮಾನ್ ಖಾನ್ ಹೆಚ್ಚಾಗಿ 67 ಇಲ್ಲವೇ 68ರಲ್ಲಿ ಇಹಲೋಕತ್ಯಜಿಸ್ತಾರೆ. ಇಬ್ಬರ ಸಾವು ಒಂದೇ ವರ್ಷದಲ್ಲಿ ಸಂಭವಿಸುತ್ತದೆ. ಒಬ್ಬರು ಅತಿಯಾದ ಖಾಯಿಲೆಯಿಂದ ನಿಧನರಾದ್ರೆ ಇನ್ನೊಬ್ಬರು ಕೂಡ ಖಾಯಿಲೆಯಿಂದಲೇ ಸಾವನ್ನಪ್ಪುತ್ತಾರೆ. ಆದ್ರೆ ಖಾಯಿಲೆ ಪ್ರಮಾಣ ಕಡಿಮೆ ಇರುತ್ತದೆ ಎಂದವರು ಹೇಳಿದ್ದಾರೆ.
ಬಾಲಿವುಡ್ ಖಾನ್ಸ್ ಭವಿಷ್ಯ ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು, ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಯಾವುದೇ ವ್ಯಕ್ತಿಯ ಭವಿಷ್ಯವನ್ನು ಬುದ್ಧಿವಂತರಾದವರು ಹೀಗೆ ಹೇಳೋದಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ನಿಮ್ಮ ಸಾವು ಯಾವಾಗ ಗೊತ್ತಾ ಎಂದು ಬಹುತೇಕ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಇದಹದ್ದು ಟ್ರೆಂಡ್ ಆಗಿದೆ. ಜನರು ಹೆಚ್ಚಿನ ವೀವ್ಸ್ ಪಡೆಯಲು ಇಂಥ ಕೆಟ್ಟ ಕೆಲಸ ಮಾಡ್ತಿದ್ದಾರೆಂದು ಬಳಕೆದಾರರು ಕೋಪ ವ್ಯಕ್ತಪಡಿಸಿದ್ದಾರೆ.
ಪುಟ್ಟಕ್ಕನ ಮಕ್ಕಳು: ದೊಡ್ಡಮರದಲ್ಲಿ ನೇತಾಡ್ತಿದ್ದ ಎರಡು ಹೆಣಗಳು ಯಾರವು? ಕಂಠಿ ಕೆಲ್ಸನಾ ಇದು!
ಕೆಲ ಫ್ಯಾನ್ಸ್ ಧಮಕಿ ಹಾಕಿದ್ರೆ ಮತ್ತೆ ಕೆಲವರು ಭವಿಷ್ಯ ಸುಳ್ಳಾಗುತ್ತದೆ. 2000ದಲ್ಲಿ ಜಗತ್ ಪ್ರಳಯ ಆಗುತ್ತೆ ಎಂದು ಭವಿಷ್ಯ ಹೇಳಿದ್ರು. ನಾವೀಗ 2025ಕ್ಕೆ ಬರ್ತಿದ್ದೇವೆ ಎಂದು ಮತ್ತೊಬ್ಬರು ಹೇಳಿದ್ದಾರೆ. 2033ರಲ್ಲಿ ಶಾರುಕ್ ಹಾಗೂ ಸಲ್ಮಾನ್ ಖಾನ್ 67ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ವಿಡಿಯೋ ಸೇವ್ ಮಾಡಿಟ್ಟುಕೊಳ್ಳಿ. ಆಮೇಲೆ ಏನಾಗುತ್ತೆ ನೋಡೋಣ ಎಂದು ಮತ್ತೊಬ್ಬರು ಬರೆದಿದ್ದಾರೆ. ಒಟ್ಟಿನಲ್ಲಿ ಶಾರುಕ್ ಹಾಗೂ ಸಲ್ಮಾನ್ ಖಾನ್ ನಿಧನದ ಭವಿಷ್ಯ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ತಮ್ಮ ಸೂಪರ್ ಸ್ಟಾರ್ಸ್ ಸಾವಿನ ಸುದ್ದಿ ಕೇಳಲು ಫ್ಯಾನ್ಸ್ ಸಿದ್ಧರಿಲ್ಲ. ಮತ್ತೆ ಕೆಲವರು ಭವಿಷ್ಯವನ್ನು ನಂಬಲು ರೆಡಿಯಾಗಿಲ್ಲ.
ಶಾರುಕ್ ಖಾನ್ ಹಾಗೂ ಶಾರುಕ್ ಖಾನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಕೆಲಸದಲ್ಲಿ ಇಬ್ಬರು ನಟರು ಬ್ಯುಸಿಯಿದ್ದಾರೆ. ಶಾರುಕ್ ಖಾನ್ ನವೆಂಬರ್ 2, 1965ರಲ್ಲಿ ಜನಿಸಿದ್ದು ಈಗವರಿಗೆ 59 ವರ್ಷ ವಯಸ್ಸು. ಶಾರುಕ್ ಖಾನ್ ಸಿನಿಮಾ ಜೊತೆ ಐಪಿಎಲ್ ನಲ್ಲಿ ಬ್ಯುಸಿಯಿದ್ದಾರೆ. 2023ರಲ್ಲಿ ಪಠಾಣ್, ಜವಾನ್ ಸೇರಿ ಮೂರು ಚಿತ್ರ ಬಿಡುಗಡೆಯಾಗಿತ್ತು. 2024ರಲ್ಲಿ ಯಾವುದೇ ಸಿನಿಮಾದಲ್ಲಿ ತೆರೆ ಕಂಡಿಲ್ಲ. ಇನ್ನು ಸಲ್ಮಾನ್ ಖಾನ್ ಡಿಸೆಂಬರ್ 27, 1965ರಂದು ಜನಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 59ನೇ ವರ್ಷಕ್ಕೆ ಅವರು ಕಾಲಿಡಲಿದ್ದಾರೆ.