Puttakkana Makkalu: ಪುಟ್ಟಕ್ಕನ ಮಕ್ಕಳು ಸಹನಾ ಕಾಳಿ ಜೋಡಿ ಸೂಪರ್, ಇಬ್ರಿಗೂ ಮದ್ವೆ ಮಾಡ್ಸಿಬಿಡಿ ಅನ್ನೋದಾ ಫ್ಯಾನ್ಸ್!

ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸಹನಾ ಕಾಳಿ ಕಣ್ಣಿಗೆ ಬಿದ್ದಿದ್ದಾಳೆ. ಸಖತ್ ಎಮೋಶನಲ್ ಆಗಿರೋ ಈ ಸೀನ್‌ನಲ್ಲಿ ಕಾಳಿ ಮತ್ತು ಸಹನಾನ್ನ ನೋಡಿ ಈ ಜೋಡಿ ಸೂಪರ್, ಮದುವೆ ಮಾಡ್ಸಿ ಅಂತಿದ್ದಾರೆ ಫ್ಯಾನ್ಸ್.

 

Fans of Puttakkana Makkalu serial hope for marriage of Sahana and Kali bni

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಏನೇನೋ ಕಥೆ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಕಳೆದುಹೋದ ಮಗಳು ಸಹನಾಳನ್ನು ಹುಡುಕಿಕೊಂಡು ಪೇಟೆಗೆ ಬರುವ ಪುಟ್ಟಕ್ಕ ಮತ್ತು ಅಮ್ಮನಿಗಾಗಿ ಹಂಬಲಿಸುವ ಮಗಳು ಸಹನಾ ಸೀನ್ ಪ್ರಸಾರವಾಗುತ್ತಿತ್ತು. ಇದೀಗ ಇಲ್ಲಿ ಮತ್ತೊಂದು ಟ್ವಿಸ್ಟ್ ಆಗಿದೆ. ಆದರೆ ಈ ಸೀನ್‌ನಲ್ಲಿ ಸಾಕಷ್ಟು ಜನ ವೀಕ್ಷಕರು ಸಹನಾ ಮತ್ತು ಕಾಳಿ ಜೋಡಿಯನ್ನು ಬಹಳ ಇಷ್ಟಪಟ್ಟಿದ್ದಾರೆ. ಇವರಿಬ್ಬರಿಗೂ ಮದುವೆ ಮಾಡಿಸಿಬಿಡಿ ಅಂತಿದ್ದಾರೆ. ಅಷ್ಟಕ್ಕೂ ಜನ ಹೀಗೆ ಮಾತನಾಡಿಕೊಳ್ಳೋದಕ್ಕೆ ಕಾರಣ ಸಹನಾ ಮತ್ತು ಕಾಳಿಯ ಪಾತ್ರಗಳು. ಆ ಪಾತ್ರಗಳನ್ನು ಬಹಳ ಎಮೋಶನಲ್‌ ಆಗಿ ಸೀರಿಯಲ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ.

ಇದಕ್ಕೂ ಮೊದಲು ಪುಟ್ಟಕ್ಕ ತನ್ನ ಮಗಳು ಸಹನಾಳನ್ನು ಹುಡುಕಿಕೊಂಡು ದೇವಸ್ಥಾನದ ಬಳಿ ಹೋಗುತ್ತಾರೆ. ಅಲ್ಲಿ ದೇವರ ದರ್ಶನ ಮಾಡಿ ತನ್ನ ಮಗಳ ಹೆಸರಿನಲ್ಲಿ ಅರ್ಚನೆ ಮಾಡಿ ಪುಟ್ಟಕ್ಕ ದೇವರ ಮೊರೆ ಹೋಗುತ್ತಾಳೆ. 'ನನ್ನ ಮಗಳ ಫೋಟೋ ಇದೀಗ ಕಳೆದು ಹೋಗಿದೆ. ನಾನು ಹೇಗೆ ನನ್ನ ಮಗಳನ್ನು ಹುಡುಕಲಿ. ಆಕೆಯ ಜೊತೆ ನಾನು ಹೇಗೆ ಕಾಲ ಕಳೆಯಲಿ' ಎಂದು ದೇವರ ಬಳಿ ಕೇಳುತ್ತಿರುತ್ತಾರೆ. ನನ್ನ ಮಗಳು ನನಗೆ ಆದಷ್ಟು ಬೇಗ ಸಿಗಲಿ ಎಂದು ದೇವರ ಬಳಿ ಬೇಡುತ್ತಿರುವಾಗಲೇ ಕಂಠಿ ಹಾಗೂ ಆತನ ಗೆಳೆಯರು ಆ ದೇವಾಲಯಕ್ಕೆ ಬರುತ್ತಾರೆ.

 ಅಲ್ಲಿ ಕಂಠಿಯ ಗೆಳೆಯರು ಪುಟ್ಟಕ್ಕನನ್ನು ನೋಡುತ್ತಾರೆ. ಅಣ್ಣ ಅಲ್ಲಿ ನೋಡಿ ಅವ್ವ ಇದ್ದಾರೆ ಎಂದು ಹೇಳುತ್ತಾರೆ. ಆಗ ಕಂಠಿ, ಪುಟ್ಟಕ್ಕ ಇರುವ ಕಡೆ ನೋಡುತ್ತಾನೆ. ಪುಟ್ಟಕ್ಕ ದೇವರ ಬಳಿ ಪ್ರಾರ್ಥನೆ ಮಾಡುತ್ತಿರುವುದನ್ನು ನೋಡಿ ಕಂಠಿಗೆ ಹೋದ ಜೀವ ಮತ್ತೆ ಬಂದ ಹಾಗೆ ಆಗುತ್ತದೆ. ಇನ್ನು ಅತ್ತೆಯನ್ನು ನೋಡಿದ ಖುಷಿಯಲ್ಲಿ ಕಂಠಿ ಹೋಗಿ ಪುಟ್ಟಕ್ಕನ ಬಳಿ ಮಾತನಾಡುತ್ತಾನೆ. 'ಅತ್ತೆ ಯಾಕೆ ಈ ರೀತಿ ಮಾಡಿದ್ದೀರಿ' ಎಂದು ಕೇಳುತ್ತಾನೆ. ಪುಟ್ಟಕ್ಕಗೆ ಕಂಠಿಯನ್ನು ನೋಡಿ ಶಾಕ್ ಆಗುತ್ತೆ. 'ನಾನು ಸಹನಾ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದೇನೆ. ಆದರೆ ನನ್ನ ಮಗಳು ನನಗೆ ಇಷ್ಟು ದೊಡ್ಡ ಸಿಟಿಯಲ್ಲಿ ಹುಡುಕಲು ಬಹಳ ಕಷ್ಟ ಆಗುತ್ತಿದೆ' ಎಂದು ಪುಟ್ಟಕ್ಕ ಹೇಳುತ್ತಾರೆ. ನನ್ನ ಸಹನಾ ಖಂಡಿತವಾಗಿಯೂ ಬದುಕಿದ್ದಾಳೆ. ಆದರೆ, ಆಕೆಯನ್ನು ಹುಡುಕಬೇಕಷ್ಟೇ. ಆಕೆ ಫೋನ್‌ನಲ್ಲಿ ನನ್ನ ಬಳಿ ಮಾತನಾಡಿದಳು. ಆದರೆ, ನಾನು ಆ ದಿನ ನಿಮ್ಮ ಬಳಿ ಏನು ಹೇಳಲಿಲ್ಲ. ಇದೀಗ ನಾನು ಹೇಳುತ್ತಿದ್ದೇನೆ. ನನಗೆ ತುಂಬಾ ಬೇಸರ ಆಗುತ್ತಿದೆ. ನನ್ನ ಮಗಳು ನನಗೆ ಬೇಕು" ಎಂದು ಅಳುತ್ತಾರೆ.

Standup Comedian: ಕಂಟೆಂಟ್ ಕ್ರಿಯೇಟರ್ಸ್ ಗೆ ಸೋನು ವೇಣುಗೋಪಾಲ್ ಕೊಟ್ಟ ಸಕ್ಸಸ್ ಟಿಪ್ಸ್

ಆಗ ಕಂಠಿ ಅತ್ತೆಗೆ ಸಮಾಧಾನ ಹೇಳುತ್ತಾನೆ. ಇನ್ನೂ ಅದೇ ದೇವಸ್ಥಾನಕ್ಕೆ ಸಹನಾ ಕೂಡ ಬರುತ್ತಾಳೆ. ಮ್ಯಾಕ್ಸ್‌ವೆಲ್ ದೇವಸ್ಥಾನದ ಚಿತ್ರೀಕರಣ ಮಾಡುತ್ತಿರುವ ವೇಳೆ ಪುಟ್ಟಕ್ಕ ಇರುವುದು ಆತನಿಗೆ ಕಾಣಿಸುತ್ತದೆ. ಆ ಕೂಡಲೇ ಸಹನಾ ಬಳಿ ಯುವರ್ ಮದರ್ ಎಂದು ಮ್ಯಾಕ್ಸ್‌ವೆಲ್ ಹೇಳುತ್ತಾನೆ. ಆಗ ಸಹನಾ ತನ್ನ ಅವ್ವನನ್ನು ನೋಡಿ ಅವ್ವ ಎಂದು ಹೇಳುತ್ತಾಳೆ. ಪುಟ್ಟಕ್ಕ ಸಹನಾಳನ್ನು ನೋಡಿ ಬಹಳ ಖುಷಿ ಪಟ್ಟು ಅಪ್ಪಿ ಮುದ್ದಾಡುತ್ತಾಳೆ.

ಸೀತಾರಾಮ: ಭಾರ್ಗವಿಗೆ ಆಸ್ತಿನೂ ಸಿಗಲಿಲ್ಲ, ಚಾಂದಿನಿಗೆ ಸಿಹಿ ಜನ್ಮ ರಹಸ್ಯವೂ ತಿಳಿಲಿಲ್ಲ!

 ಆಯ್ತು ಪುಟ್ಟಕ್ಕ ಸಹನ ಒಂದಾಗಿ ಆಯ್ತು ಅಂತ ಜನ ಸಂಭ್ರಮಿಸುತ್ತಿರುವಾಗಲೇ ಪುಟ್ಟಕ್ಕನ ಮಗಳು ಸಹನಾ ಅಮ್ಮನನ್ನು ಭೇಟಿಯಾಗಲಾರೆ ಎಂದು ಗಟ್ಟಿ ನಿರ್ಧಾರಕ್ಕೆ ಬರುತ್ತಾಳೆ. ಈ ಟೈಮಲ್ಲಿ ಅವಳು ಕಾಳಿಗೆ ಕಣ್ಣಿಗೆ ಬೀಳ್ತಾಳೆ. ಇವರಿಬ್ಬರ ನಡುವೆ ಬಹಳ ಎಮೋಶನಲ್‌ ಆಗಿರೋ ಸೀನ್‌ ಅನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಅದೆಷ್ಟು ಚೆನ್ನಾಗಿದೆ ಎಂದರೆ ಇವರಿಬ್ಬರ ಪರ್ಫಾಮೆನ್ಸ್ ನೋಡಿದ ಮಹಾಜನತೆ ಇವರಿಬ್ಬರಿಗೆ ಮದುವೆ ಮಾಡ್ಸಿಬಿಡಿ ಅಂತಿದ್ದಾರೆ. ಮುಂದೇನಾಗುತ್ತೋ ಭಗವಂತನಿಗೇ ಗೊತ್ತು!

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios