ಸೀತಾರಾಮ: ಭಾರ್ಗವಿಗೆ ಆಸ್ತಿನೂ ಸಿಗಲಿಲ್ಲ, ಚಾಂದಿನಿಗೆ ಸಿಹಿ ಜನ್ಮ ರಹಸ್ಯವೂ ತಿಳಿಲಿಲ್ಲ!
ಸೀತಾರಾಮ ಧಾರಾವಾಹಿಯಲ್ಲಿ ಆಸ್ತಿಯನ್ನು ಹೊಡೆದುಕೊಳ್ಳುವ ಭಾರ್ಗವಿಯ ಯತ್ನ, ಸಿಹಿಯ ಜನ್ಮರಹಸ್ಯ ತಿಳಿಯಲು ಹೋದ ಚಾಂದಿನಿ ಇಬ್ಬರಿಗೂ ಸೋಲಾಗಿದೆ.
ಬೆಂಗಳೂರು (ಆ.27): ಸೀತಾರಾಮ ಧಾರಾವಾಹಿಯಲ್ಲಿ ರಾಮನ ಹೆಸರಿನಲ್ಲಿರುವ ಆಸ್ತಿಯನ್ನು ಕುತಂತ್ರದಿಂದ ಆಸ್ತಿ ವರ್ಗಾವಣೆ ಮಾಡಿಕೊಳ್ಳಲು ಸೀತಾಳಿಂತ ಸಹಿ ಹಾಕಿಸಿಕೊಳ್ಳುವ ಭಾರ್ಗವಿಯ ಯತ್ನ ವಿಫಲವಾಗಿದೆ. ಮತ್ತೊಂದೆಡೆ ಸಿಹಿಯ ಜನ್ಮರಹಸ್ಯವನ್ನು ತಿಳಿದುಕೊಳ್ಳಲು ಹೋದ ಚಾಂದಿನಿಗೆ ಡಾ. ಅನಂತಲಕ್ಷ್ಮಿ ಮುಖಕ್ಕೆ ಮುಂಗಳಾರತಿ ಮಾಡಿ ಕಳಿಸಿದ್ದಾರೆ. ಒಟ್ಟಾರೆ ದುಷ್ಟಕೂಟಕ್ಕೆ ಸೋಲುಣಿಸುವ ಮೂಲಕ ನಿರ್ದೇಶಕರು ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.
ಜೀ ಕನ್ನಡದ ಪ್ರಮುಖ ಟಿಆರ್‌ಪಿ ಧಾರಾವಾಹಿಗಳಲ್ಲಿ ಒಂದಾದ ಸೀತಾರಾಮ ಧಾರಾವಾಹಿಯಲ್ಲಿ ಖಳನಾಯಕರ ಪಾತ್ರಗಳ ಪ್ರಾಭಲ್ಯವೇ ಹೆಚ್ಚಾಗುತ್ತಿದೆ ಎನ್ನುತ್ತಿರುವಾಗ, ತಾವೇ ಸಂಕಷ್ಟಕ್ಕೆ ಸಿಲುಕಿದ್ದೇವೆಂದು ಒದ್ದಾಡುವ ವೀಕ್ಷಕರಿಗೆ ನಿರ್ದೇಶಕರು ಸಿಹಿ ಸುದ್ದಿ ಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೀತಾರಾಮ ಧಾರಾವಾಹಿಗಳಲ್ಲಿ ದುಷ್ಟರ ಕೂಟ ಹೆಚ್ಚು ಪ್ರಾಭಲ್ಯ ಪಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಅರಿವಾಗುತ್ತಿದೆ. ಭಾರ್ಗವಿ, ರಾಮನ ಹೆಸರಿನಲ್ಲಿದ್ದ ಆಸ್ತಿಯನ್ನು ಸಂಚು ಮಾಡಿ ಲಪಟಾಯಿಸಲು ಗಂಡನ ತಲೆ ಕೆಡಿಸಿ ತಮ್ಮ ದುಷ್ಟ ಕೂಟಕ್ಕೆ ಸೇರಿಸಿಕೊಂಡಿದ್ದಳು. ಇದರ ನಂತರ ಫ್ಯಾಮಿಲಿ ಲಾಯರ್‌ಗೆ ರಾಮನ ಹೆಸರಿನಲ್ಲಿರುವ ಆಸ್ತಿಯನ್ನು ಸೀತಾಳಿಗೂ ಹಕ್ಕು ಬರುವಂತೆ ಹಂಚಿಕೆ ಮಾಡುವ ರೀತಿಯಲ್ಲಿ ದಾಖಲೆಗಳನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಹಾಕಿಸಿಕೊಳ್ಳಲು ಮುಂದಾಗಿದ್ದಳು. ಆದರೆ, ಆಸ್ತಿ ವರ್ಗಾವಣೆಯ ದಾಖಲೆಗಳು ರಾಮ ಮತ್ತು ಸೀತಾ ಸಹಿ ಮಾಡಿದ ನಂತರ ಭಾರ್ಗವಿಯ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಸಿದ್ಧಪಡಿಸಲಾಗಿತ್ತು.
ಅಶೋಕನ ಹೆಂಡತಿ ಪ್ರಿಯಾಗೆ ಕ್ಯಾನ್ಸರ್ ಮುನ್ಸೂಚನೆ ಕೊಟ್ರಾ ವೈದ್ಯರು!
ರಾಮನ ತಾತ ಸೂರ್ಯಪ್ರಕಾಶ್ ದೇಸಾಯಿ ಕೂಸ ಫ್ಯಾಮಿಲಿ ಲಾಯರ್ ಮನೆಗೆ ಕರಿಸಿ ಆಸ್ತಿ ಪತ್ರಗಳಿಗೆ ಸೀತಾಳಿಂದ ಸಹಿ ಪಡೆಯಲು ಮುಂದಾಗಿದ್ದರು. ಆದರೆ, ಅಷ್ಟೊತ್ತಿದೆ ರಾಮನ ಚಿಕ್ಕಪ್ಪನಿಗೆ ಎಲ್ಲ ವಿಷಯ ತಿಳಿಸಿದ್ದು, ತನ್ನ ಹೆಂಡತಿ ಸಾಧನಾಗೆ ಆಸ್ತಿ ಪತ್ರಕ್ಕೆ ಸೀತಾ ಸಹಿ ಹಾಕುವುದನ್ನು ತಪ್ಪಿಸುವಂತೆ ಸೂಚನೆ ನೀಡುತ್ತಾನೆ. ಇಲ್ಲಿ ಸೀತಾಳಿಗೆ ಒಳಿತು ಬಯಸುವ ಉದ್ದೇಶದಿಂದ ಸಾಧನಾ ಆಸ್ತಿ ಪತ್ರದ ಮೇಲೆ ಕಾಫಿ ಚೆಲ್ಲುವ ಮೂಲಕ ಅದನ್ನು ಹಾಳು ಮಾಡುತ್ತಾಳೆ. ಈ ಮೂಲಕ ಭಾರ್ಗವಿ ದೇಸಾಯಿ ಕುಟುಂಬದ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರೂ, ಆಸ್ತಿ ಸಿಗದಂತಾಗಿದೆ.
ಮತ್ತೊಂದೆಡೆ, ಭಾರ್ಗವಿಯ ದುಷ್ಟ ಕೂಟದ ಮತ್ತೊಬ್ಬ ಸದಸ್ಯೆ ಚಾಂದಿನಿ ಸಿಹಿಯ ಜನ್ಮ ರಹಸ್ಯವನ್ನು ತಿಳಿದುಕೊಳ್ಳಲು ಮುಂದಾಗಿದ್ದಳು. ಇದಕ್ಕಾಗಿ ಸೀತಾಳಿಗೆ ಹೆರಿಗೆ ಮಾಡಿಸಿದ ಡಾ. ಅನಂತಲಕ್ಷ್ಮೀ ಅವರಿಂದ ಸೀತಾಳ ಮಗಳು ಸಿಹಿಗೆ ಅಪ್ಪ ಯಾರು ಎಂಬುದನ್ನು ತಿಳಿದುಕೊಳ್ಳಲು ಮುಂದಾಗಿದ್ದಳು. ಭಾರ್ಗವಿ ದೇಸಾಯಿ ಮಾತು ಕೇಳಿಕೊಂಡು ಡಾಕ್ಟರ್ ಅನಂತಲಕ್ಷ್ಮೀ ಬಳಿಗೆ ಹೋದ ಚಾಂದಿನಿ ನಾನು ಸೀತಾಳ ಸ್ನೇಹಿತೆ, ತೀವ್ರ ಆಪ್ತರು, ಅವಳಿಗಾಗಿ ಹಲವು ವರ್ಷಗಳಿಂದ ಹುಡುಕುತ್ತಿದ್ದೇನೆ ಎಂದು ಸೀತಾ ಬರೆದ ಪತ್ರವನ್ನು ಹಿಡಿದುಕೊಂಡು ತೋರಿಸುತ್ತಾಳೆ. ಆಗ ವೈದ್ಯರ ವೃತ್ತಿ ಧರ್ಮದಂತೆ ಯಾವುದೇ ಪೇಷಂಟ್‌ಗಳ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಡಾಕ್ಟರ್ ಹೇಳುತ್ತಾರೆ. ಆಗ ಹೋಗಲಿ ಸೀತಾಳ ಫೋಟೋವನ್ನಾದರೂ ಖಚಿತಪಡಿಸಿ ಎಂದು ಕೇಳುತ್ತಾಳೆ.
ಸಿಹಿಯ ಗುಟ್ಟು ತಿಳಿದಿರೋ, ಮೇಲಿಂದ ಮೇಲೆ ಶಾಕ್ ಕೊಡ್ತಿರೋ ನಿಗೂಢ ವೈದ್ಯೆ ಅನಂತಲಕ್ಷ್ಮಿ ಯಾರು?
ಆಗ ಕೋಪಗೊಂಡ ಡಾ. ಅನಂತಲಕ್ಷ್ಮೀ ನೀನು ಸೀತಾಳ ಸ್ನೇಹಿತೆಯಾದರೂ ಆಕೆ ಯಾರೆಂಬುದನ್ನು ನಾನೇಕೆ ಖಚಿತಪಡಿಸಬೇಕು? ನಿನ್ನ ಉದ್ದೇಶವೇನು? ನಿನ್ನ ಕುತಂತ್ರವೇನು? ನೀನು ಇಲ್ಲಿಂದ ಎದ್ದು ಹೋಗು ಎಂದು ಹೇಳುತ್ತಾರೆ. ಇಷ್ಟಾದರೂ ಮಾತು ಕೇಳದಿದ್ದಾರೆ ಚಾಂದಿನಿಗೆ ಮೈಚಳಿ ಬಿಡಿಸಿ ಆಸ್ಪತ್ರೆಯಿಂದ ಹೊರಗೆ ಹಾಕುವಂತೆ ಹಾಗೂ ಮತ್ತೊಬ್ಬ ರೋಗಿಯನ್ನು ಒಳಗೆ ಕಳಿಸುವಂತೆ ಸಿಬ್ಬಂದಿಗೆ ಹೇಳುತ್ತಾರೆ. ಈ ಮೂಲಕ ಭಾರ್ಗವಿಗೆ ದೇಸಾಯಿ ಕುಟುಂಬದ ಆಸ್ತಿಯೂ ಸಿಗಲಿಲ್ಲ, ಇತ್ತ ಚಾಂದಿನಿಗೆ ಸಿಹಿಯ ಜನ್ಮ ರಹಸ್ಯವೂ ತಿಳಿಯಲಿಲ್ಲ. ಒಟ್ಟಾರೆ, ದುಷ್ಟರ ಕೂಟಕ್ಕೆ ಸೋಲುಂಟಾಗಿದ್ದು, ವೀಕ್ಷಕರಿಗೆ ಸಂತಸ ಉಂಟಾಗಿದೆ.