ದೃಷ್ಟಿ ಧಾರಾವಾಹಿಯಲ್ಲಿ ದತ್ತಾ ಮತ್ತು ದೃಷ್ಟಿ ನಡುವೆ ಪ್ರೀತಿ ಚಿಗುರುತ್ತಿದೆ. ದತ್ತಳ ಹಿಂದಿನ ಪ್ರೇಯಸಿ ದೃಷ್ಟಿಯ ಅಕ್ಕ ಎಂಬುದು ದೃಷ್ಟಿಗೆ ತಿಳಿದಿಲ್ಲ. ಶರಾವತಿ ಇಬ್ಬರನ್ನೂ ಹನಿಮೂನ್‌ಗೆ ಕಳುಹಿಸಿದ್ದಾಳೆ. ಸಮೀಕ್ಷಾ ಇಬ್ಬರನ್ನೂ ಒಂದು ಮಾಡಲು ಪ್ರಯತ್ನಿಸುತ್ತಿದ್ದಾಳೆ. ದೃಷ್ಟಿ ಪಾತ್ರಧಾರಿ ಅರ್ಪಿತಾ ಕಪ್ಪು ಮೇಕಪ್‌ಗೆ ಎರಡು ಗಂಟೆಗಳನ್ನು ವ್ಯಯಿಸುತ್ತಾರೆ. ಪಾತ್ರಕ್ಕೆ ತಕ್ಕಂತೆ ಇರಲು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಅಳಿಸಿದ್ದಾರೆ.
ದೃಷ್ಟಿ ಎಂದರೆ ಸಾಕು... ಸೀರಿಯಲ್ ಪ್ರಿಯರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ದೃಷ್ಟಿಬೊಟ್ಟು ನಾಯಕಿ ಕಣ್ಮುಂದೆ ಬರುತ್ತಾಳೆ. ಒಮ್ಮೊಮ್ಮೆ ತೀರಾ ಕಪ್ಪು ಬಣ್ಣ ಬಳಿದುಕೊಂಡು ಕಾಣಿಸಿಕೊಳ್ಳುವ ನಾಯಕಿ ಈಕೆ. ಸದ್ಯ ತನ್ನ ಗಂಡನ ಅಕ್ಕನಿಂದ ಕಿರುಕುಳ ಅನುಭವಿಸುತ್ತಾ, ಅಕ್ಕನ ಮಾತನ್ನೇ ಕೇಳಿಕೊಂಡಿರೋ ತಮ್ಮ ಅರ್ಥಾತ್ ಪತಿಯಿಂದಲೂ ನಿಂದನೆಗೆ ಒಳಗಾಗ್ತಿದ್ದಾಳೆ ದೃಷ್ಟಿ. ಆದರೆ, ಅದೇ ದೃಷ್ಟಿ ಮತ್ತು ದತ್ತಾ ನಡುವೆ ಈಗ ಪ್ರೀತಿ ಹುಟ್ಟುತ್ತಿದೆ. ದತ್ತಾ ಪ್ರೀತಿಸಿದ್ದ ದೃಷ್ಟಿಯ ಅಕ್ಕ ಓಡಿಹೋಗಿದ್ದಳು. ಅವಳೀಗ ಸಿಕ್ಕಿದ್ದಾಳೆ. ಆದರೆ ಅವಳೇ ದತ್ತನ ಲವರ್ ಎನ್ನುವ ವಿಷಯ ದೃಷ್ಟಿಗೆ ಗೊತ್ತಿಲ್ಲ. ಆದರೆ ತನ್ನ ತಂಗಿ ಮದ್ವೆಯಾಗಿರುವುದು ತಾನು ಪ್ರೀತಿಸಿದ ಹುಡುಗನನ್ನೇ ಎನ್ನುವುದು ಅಕ್ಕನಿಗೆ ತಿಳಿದಿದೆ. ಇದು ತಿಳಿಯುತ್ತಿದ್ದಂತೆಯೇ ಆಕೆ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ. ಮಾತನಾಡಿದರೆ ಸಮಸ್ಯೆ ಎನ್ನುವುದು ಅವಳಿಗೆ ಗೊತ್ತಿದೆ. ಆದ್ದರಿಂದ ಏನೂ ಅರಿಯದವಳಂತೆ ಇದ್ದಾಳೆ.
ಇನ್ನು ದತ್ತಾ ಕಣ್ಣಿಗೆ ದೃಷ್ಟಿ ಅಕ್ಕ ಬಿದ್ದಿಲ್ಲ. ಆದರೆ ವಿಲನ್ ಶರಾವತಿಗೆ ಈ ವಿಷಯ ತಿಳಿದಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಆಕೆ, ಏನೋ ದೊಡ್ಡ ಪ್ಲ್ಯಾನ್ ಮಾಡಿ ದತ್ತಾ ಮತ್ತು ದೃಷ್ಟಿಯನ್ನು ಹನಿಮೂನ್‌ಗೆ ಕಳಿಸಿದ್ದಾಳೆ. ತಾನು ಎಷ್ಟೇ ಕಿರುಕುಳ ಕೊಟ್ಟರೂ ದೃಷ್ಟಿ ಪ್ರೀತಿಸುವುದನ್ನು ನೋಡಿ ದತ್ತಾಗೆ ದೃಷ್ಟಿಯ ಮೇಲೆ ಪ್ರೀತಿ ಹುಟ್ಟುತ್ತಿದೆ. ಇದೀಗ ಹನಿಮೂನ್ ಬೇರೆ. ಅಲ್ಲಿ ಅವರು ಒಂದಾಗುತ್ತಾರೋ ಇಲ್ಲವೋ ಎನ್ನುವ ಕುತೂಹಲ ಇತ್ತು. ಇದೀಗ ಅವರಿಬ್ಬರ ನಡುವೆ ಮೂರು ಗಂಟು ಸೀರಿಯಲ್ನಲ್ಲಿ ಶ್ರಾವಣಿಯಾಗಿ ಕಾಣಿಸಿಕೊಂಡಿದ್ದ ನಟಿ ಸಮೀಕ್ಷಾ ಇಬ್ಬರನ್ನೂ ಒಂದು ಮಾಡಲು ಮುಂದಾಗಿದ್ದಾರೆ. ಇದೀಗ ಸಮೀಕ್ಷಾ ಮತ್ತು ದೃಷ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅರ್ಪಿತಾ ಮೋಹಿತೆ ಇನ್‌ಸ್ಟಾಗ್ರಾಮ್ ನೇರಪ್ರಸಾರದಲ್ಲಿ ಬಂದು ಹನಿಮೂನ್ನಲ್ಲಿ ಇಬ್ಬರೂ ಒಂದಾಗುತ್ತಾರೋ ಇಲ್ಲವೋ ಎನ್ನುವುದನ್ನು ಹೇಳಿದ್ದಾರೆ.
ಮೇಕಪ್ ಕಳಚಿ ಅಸಲಿ ರೂಪದಲ್ಲಿ ಬಂದ ದೃಷ್ಟಿ- ದತ್ತಾಭಾಯ್ ಫುಲ್ ಖುಷ್: ಕೊನೆಗೂ ಈಡೇರಿತು ಫ್ಯಾನ್ಸ್ ಆಸೆ...
ಈ ಇಬ್ಬರು ನಟಿಯರು ವೀಕ್ಷಕರ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರ ಸಂದೇಹ ಪರಿಹರಿಸಿದ್ದಾರೆ. ಆಗ ಸಮೀಕ್ಷಾ ಅವರು, ಸದ್ಯ ದೃಷ್ಟಿ ಮತ್ತು ದತ್ತಾ ನಮ್ಮ ಎಸ್ಟೇಟ್ಗೆ ಬಂದಿದ್ದಾರೆ. ಅವರಿಬ್ಬರನ್ನೂ ಒಂದು ಮಾಡಿ ಕಳುಹಿಸುವುದು, ಅವರ ನಡುವೆ ಪ್ರೀತಿ ಮೂಡಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದಿದ್ದಾರೆ. ಹಾಗಿದ್ದರೆ ದೃಷ್ಟಿ ಮತ್ತು ದತ್ತಾ ಒಂದಾಗುತ್ತಾರಾ? ದೃಷ್ಟಿಯ ಮೇಲೆ ದತ್ತಾಗೆ ಪ್ರೀತಿ ಮೂಡುತ್ತದೆಯಾ ಎನ್ನುವುದು ಮುಂದಿನ ಪ್ರಶ್ನೆ. ಹೀಗೆ ಆಗಲಿ ಎಂದೇ ದೊಡ್ಡ ಪ್ಲ್ಯಾನ್ ಹಾಕಿದ್ದಾಳೆ ಶರಾವತಿ. ದೃಷ್ಟಿಯ ಮೇಲೆ ಪ್ರೀತಿ ಹುಟ್ಟಿದ ಬಳಿಕ, ದೃಷ್ಟಿಯ ಅಕ್ಕಳನ್ನು ಮುಂದು ಮಾಡಿಕೊಂಡು ಎಲ್ಲರಿಗೂ ಟಾರ್ಚರ್ ಕೊಡುವ ಉದ್ದೇಶ ಅವಳದ್ದು. ಮುಂದೆ ಏನಾಗುತ್ತದೆ ಎನ್ನುವ ಕುತೂಹಲವಿದೆ.
ಇನ್ನು ದೃಷ್ಟಿ ಪಾತ್ರಧಾರಿ ಅರ್ಪಿತಾ ಕುರಿತು ಹೇಳುವುದಾದರೆ, ನಿಜ ಜೀವನದಲ್ಲಿ ಹಾಲು ಬಿಳುಪಿನ ಈಕೆ, ಈ ಸೀರಿಯಲ್ನಲ್ಲಿ ಮುಖ ಮಾತ್ರವಲ್ಲದೇ ಮೈ-ಕೈಯೆಲ್ಲಾ ಕಪ್ಪಾಗಿ ಕಾಣಿಸಲು ಎರಡು ಗಂಟೆ ಮೇಕಪ್ ಮಾಡಿಕೊಳ್ಳುತ್ತಿರುವುದಾಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. ಮುಖಕ್ಕೆ ಮ್ಯಾಚ್ ಆಗುವಂಥ ಕಪ್ಪು ಬಣ್ಣ ಕೈ-ಕಾಲುಗಳಿಗೂ ಹಚ್ಚಬೇಕು. ಇದರಿಂದ ಎರಡು ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದರು. ಬೆಂಗಳೂರಿನ ಅರ್ಪಿತಾ ಮೋಹಿತೆ ಬಿಕಾಂ ಮುಗಿಸಿದ್ದಾರೆ. ನನಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದ್ದವು. ಈಗ ದೃಷ್ಟಿಬೊಟ್ಟುಗೆ ಆಯ್ಕೆ ಆಗಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ಇಷ್ಟೇ ಅಲ್ಲದೇ, ಇನ್ನೊಂದು ಇಂಟರೆಸ್ಟಿಂಗ್ ವಿಷಯವನ್ನೂ ಅವರು ಹೇಳಿದ್ದರು. ಅದೇನೆಂದರೆ, ತಾವು ಹೀಗೆಯೇ ಎಂದು ಅಭಿಮಾನಿಗಳ ಮನಸ್ಸಿನಲ್ಲಿ ತಳವೂರಬೇಕು. ನನ್ನ ಅಸಲಿ ಬಣ್ಣ ಏನು ಎನ್ನುವುದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೂ ನಟಿ ಡಿಲೀಟ್ ಮಾಡಿದ್ದಾರಂತೆ!


