ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ಅರ್ಪಿತಾ ಮೋಹಿತೆ ನಾಯಕಿಯಾಗಿ ಮತ್ತು ವಿಜಯ್ ಸೂರ್ಯ ರೌಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಪಿತಾ ಪಾತ್ರಕ್ಕಾಗಿ ಕಪ್ಪು ಮೇಕಪ್ ಬಳಸುತ್ತಾರೆ. ಇತ್ತೀಚೆಗೆ ಚಿತ್ರೀಕರಣದ ಸ್ಥಳದಲ್ಲಿ ಅರ್ಪಿತಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅರ್ಪಿತಾ ಬಿಕಾಂ ಪದವೀಧರೆಯಾಗಿದ್ದು, ಅಭಿಮಾನಿಗಳಿಗೆ ತಮ್ಮ ನಿಜ ಬಣ್ಣ ತಿಳಿಯಬಾರದೆಂದು ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ್ದಾರೆ. ವಿಜಯ್ ಸೂರ್ಯ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಖ್ಯಾತಿ ಗಳಿಸಿದ್ದಾರೆ.

ದೃಷ್ಟಿ ಎಂದರೆ ಸಾಕು... ಸೀರಿಯಲ್​ ಪ್ರಿಯರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ದೃಷ್ಟಿಬೊಟ್ಟು ನಾಯಕಿ ಕಣ್ಮುಂದೆ ಬರುತ್ತಾಳೆ. ಒಮ್ಮೊಮ್ಮೆ ತೀರಾ ಕಪ್ಪು ಬಣ್ಣ ಬಳಿದುಕೊಂಡು ಕಾಣಿಸಿಕೊಳ್ಳುವ ನಾಯಕಿ ಈಕೆ. ಸದ್ಯ ತನ್ನ ಗಂಡನ ಅಕ್ಕನಿಂದ ಕಿರುಕುಳ ಅನುಭವಿಸುತ್ತಾ, ಅಕ್ಕನ ಮಾತನ್ನೇ ಕೇಳಿಕೊಂಡಿರೋ ತಮ್ಮ ಅರ್ಥಾತ್​ ಪತಿಯಿಂದಲೂ ನಿಂದನೆಗೆ ಒಳಗಾಗ್ತಿದ್ದಾಳೆ ದೃಷ್ಟಿ. ಅಂದಹಾಗೆ, ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅರ್ಪಿತಾ ಮೋಹಿತೆ. ಈಕೆ ಕಿರುತೆರೆಗೆ ಹೊಸ ಎಂಟ್ರಿ. ಇನ್ನು ದತ್ತಾ ಭಾಯಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್​ ಸೂರ್ಯ. ಇಲ್ಲಿ ಇವರದ್ದು ರಗಡ್​ ಅವತಾರ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

ನಿಜ ಜೀವನದಲ್ಲಿ ಹಾಲು ಬಿಳುಪಿನ ನಟಿ ಅರ್ಪಿತಾ ಈ ಸೀರಿಯಲ್​ನಲ್ಲಿ ಮುಖ ಮಾತ್ರವಲ್ಲದೇ ಮೈ-ಕೈಯೆಲ್ಲಾ ಕಪ್ಪಾಗಿ ಕಾಣಿಸಲು ಎರಡು ಗಂಟೆ ಮೇಕಪ್​ ಮಾಡಿಕೊಳ್ಳುತ್ತಿರುವುದಾಗಿ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದರು. ಮುಖಕ್ಕೆ ಮ್ಯಾಚ್​ ಆಗುವಂಥ ಕಪ್ಪು ಬಣ್ಣ ಕೈ-ಕಾಲುಗಳಿಗೂ ಹಚ್ಚಬೇಕು. ಇದರಿಂದ ಎರಡು ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದರು. ಇದೀಗ ಅವರು ನಿಜ ರೂಪದಲ್ಲಿ ಕಾಣಿಸಿಕೊಂಡಿದ್ದು, ಶೂಟಿಂಗ್​ ಸೆಟ್​ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದರ ವಿಡಿಯೋ ಅನ್ನು ಡಿವಿ ಡ್ರೀಮ್ಸ್​ ಯೂಟ್ಯೂಬ್ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಇದರಲ್ಲಿ ದೃಷ್ಟಿಬೊಟ್ಟು ತಂಡದ ಬಹುತೇಕ ಕಲಾವಿದರನ್ನು ನೋಡಬಹುದಾಗಿದೆ. ನಾಯಕ ವಿಜಯ ಸೂರ್ಯ ಅವರೂ ನಿಜ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೃಷ್ಟಿ ಅರ್ಥಾತ್​ ನಟಿ ಅರ್ಪಿತಾ ಅವರಿಗೆ ಕೇಕ್​ ತಿನ್ನಿಸಿದ್ದಾರೆ. 

ನನ್ನ ಇತಿಹಾಸ ಗೊತ್ತಿದ್ರೂ ಮದ್ವೆಗೆ ಒಪ್ಪಿದ್ದಾಳೆ! ಮತ್ತೊಂದು ಮದ್ವೆಗೆ ರೆಡಿಯಾದ ದೃಷ್ಟಿಬೊಟ್ಟು ನಟ ವಿಜಯ್ ಸೂರ್ಯ​ ಹೇಳಿದ್ದೇನು?

ಅಂದಹಾಗೆ, ಬೆಂಗಳೂರಿನ ಅರ್ಪಿತಾ ಮೋಹಿತೆ ಬಿಕಾಂ ಮುಗಿಸಿದ್ದಾರೆ. ನನಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದ್ದವು. ಈಗ ದೃಷ್ಟಿಬೊಟ್ಟುಗೆ ಆಯ್ಕೆ ಆಗಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ಇಷ್ಟೇ ಅಲ್ಲದೇ, ಇನ್ನೊಂದು ಇಂಟರೆಸ್ಟಿಂಗ್​ ವಿಷಯವನ್ನೂ ಅವರು ಹೇಳಿದ್ದರು. ಅದೇನೆಂದರೆ, ತಾವು ಹೀಗೆಯೇ ಎಂದು ಅಭಿಮಾನಿಗಳ ಮನಸ್ಸಿನಲ್ಲಿ ತಳವೂರಬೇಕು. ನನ್ನ ಅಸಲಿ ಬಣ್ಣ ಏನು ಎನ್ನುವುದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯನ್ನೂ ನಟಿ ಡಿಲೀಟ್​ ಮಾಡಿದ್ದಾರಂತೆ!

ಇನ್ನು, ನಟ ವಿಜಯ್ ಸೂರ್ಯ ಬಗ್ಗೆ ಸೀರಿಯಲ್​ ವೀಕ್ಷಕರಿಗೆ ಗೊತ್ತೇ ಇದೆ. ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ. ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ.

ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

YouTube video player