ಆರಂಭದಲ್ಲಿ ಸಂಪೂರ್ಣ ನೆಗೆಟಿವಿಟಿ ಹೊತ್ತುಬಂದು ʼಬಿಗ್‌ ಬಾಸ್‌ʼ ಶೋಗೆ ಎಂಟ್ರಿ ಕೊಟ್ಟ ಈ ಸ್ಪರ್ಧಿ ಆ ಬಳಿಕ ಪಾಸಿಟಿವ್‌ ಆಗಿ ಹೊರಬಂದರು. ಅವರು ಯಾರು?

'ಬಿಗ್‌ ಬಾಸ್‌' ಎಂದಕೂಡಲೇ ಕಾಂಟ್ರವರ್ಸಿ ಮಾಡಿಕೊಂಡವರು, ಅಥವಾ ನೆಗೆಟಿವ್‌ ಅಭಿಪ್ರಾಯ ಹೊಂದಿದ್ದವರೇ ಜಾಸ್ತಿ ಹೋಗ್ತಾರೆ ಎಂದು ವರ್ಗ ಸದಾ ಆರೋಪ ಮಾಡುವುದು. ಇನ್ನೂ ಕೆಲವೊಮ್ಮೆ ಪಾಸಿಟಿವ್‌ ಅಭಿಪ್ರಾಯ ಹೊಂದಿದ್ದವರು ಒಳಗಡೆ ಹೋಗಿ ಕಾಂಟ್ರವರ್ಸಿ ಮಾಡಿಕೊಂಡಿದ್ದೂ ಕೂಡ ತುಂಬ ಇದೆ. ಆದರೆ ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲಿ ಓರ್ವ ವ್ಯಕ್ತಿ ದೊಡ್ಡ ಮಟ್ಟದಲ್ಲಿ ನೆಗೆಟಿವ್‌ ಅಭಿಪ್ರಾಯ ಇಟ್ಕೊಂಡು, ಹೊರಗಡೆ ಬರುವಾಗ ಪಾಸಿಟಿವ್‌ ಆಗಿ ಬಂದಿದ್ದು ಎಂದರೆ ಅದು ಡ್ರೋನ್‌ ಪ್ರತಾಪ್‌ ಎನ್ನಬಹುದು.

ನೆಗೆಟಿವಿಟಿ ಹೊತ್ತು ದೊಡ್ಮನೆಗೆ ಹೋದ್ರು!

ಡ್ರೋನ್‌ ತಯಾರಿ ಮಾಡ್ತೀನಿ ಎಂದು ಪ್ರತಾಪ್‌ ಅವರು ಹೇಳಿದ್ದ ಸುಳ್ಳುಗಳು ಯಾವ ಮಟ್ಟಕ್ಕೆ ಇತ್ತು ಎನ್ನೋದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಡ್ರೋನ್‌ ತಜ್ಞರು ಏನೆಲ್ಲ ಹೇಳಿದರು ಎನ್ನೋದು ಕೂಡ ಎಲ್ಲರಿಗೂ ಗೊತ್ತಿರುವಂಥದ್ದೇ. ತನ್ನಿಂದ ತಪ್ಪಾಗಿದೆ, ಕ್ಷಮಿಸಿ ಎಂದು ಪ್ರತಾಪ್‌ ಕೇಳಿದ್ದೂ ಇದೆ. ಆ ಬಳಿಕ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟರು.

ತಾಳ್ಮೆ ಅಸ್ತ್ರ ಮಾಡಿಕೊಂಡರು!

ಅಲ್ಲಿ ಯಾರು ಎಷ್ಟೇ ನೆಗೆಟಿವ್‌ ಮಾತನಾಡಿದರೂ ಕೂಡ ತಾಳ್ಮೆಯನ್ನೇ ಅವರು ಅಸ್ತ್ರ ಮಾಡಿಕೊಂಡರು. ಆಟಗಳಲ್ಲಿ ಶಕ್ತಿ ಬಲಕ್ಕಿಂತ ಯುಕ್ತಿ ಬಲ ಉಪಯೋಗಿಸಿದರು. ಪ್ರತಾಪ್‌ ಸಂಯಮ, ಬುದ್ಧಿಮತ್ತೆ ಎಲ್ಲರಿಗೂ ಇಷ್ಟವಾಯ್ತು. ಎಲ್ಲರೂ ಪ್ರತಾಪ್‌ ವಿರುದ್ಧ ಹರಿಹಾಯ್ದಾಗ ವೀಕ್ಷಕರಿಗೆ ಬೇಸರ ಆಗಿತ್ತು, ಸಿಂಪಥಿ ಬಂದಿತ್ತು.

ಧನಸಹಾಯ ಮಾಡಿದ್ರು!

ಆರಂಭದಲ್ಲಿ ಸೈಲೆಂಟ್‌ ಆಗಿದ್ದ ಪ್ರತಾಪ್‌ ಆ ಬಳಿಕ ಡ್ಯಾನ್ಸ್‌ ಮಾಡಲು ಆರಂಭಿಸಿದರು, ಏಟಿಗೆ ತಿರುಗೇಟು ಕೊಡಲು ಆರಂಭಿಸಿದರು. ಅಷ್ಟೇ ಅಲ್ಲದೆ ದೊಡ್ಮನೆಯಿಂದ ಹೊರಗಡೆ ಬಂದಮೇಲೂ ಕೂಡ ಅವರು ಕೆಲವರಿಗೆ ಧನಸಹಾಯ ಮಾಡಲು ಆರಂಭಿಸಿದರು.

ಓದುವ ಹೆಣ್ಣು ಮಕ್ಕಳಿಗೆ, ಗುಡಿಸಲಿನಲ್ಲಿದ್ದ ಅಜ್ಜಿಗೆ ಧನಸಹಾಯ ಮಾಡಿದ್ದರು. ಈ ವಿಡಿಯೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಕಂಪೆನಿ ಕೊಟ್ಟುವ ಆಸೆ ಇದೆ!

ದೊಡ್ಡ ಕಂಪೆನಿ ಕಟ್ಟಬೇಕು ಎಂದುಕೊಂಡಿರುವ ಡ್ರೋನ್‌ ಪ್ರತಾಪ್‌ ಸದ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಸ್ವಂತ ಕಂಪೆನಿ ಕಟ್ಟುವತ್ತ ಅವರು ಶ್ರಮ ಹಾಕುತ್ತಿದ್ದಾರೆ. ಅಂದಹಾಗೆ ಇತ್ತೀಚೆಗೆ ಅವರು ತಾಯಿಗೆ ಕಾರ್‌ ಕೊಟ್ಟು ಸರ್ಪ್ರೈಸ್‌ ಆಗಿದ್ದರು. ಆ ಕಾರ್‌ ನೋಡಿ ತಾಯಿ ಖುಷಿಯಿಂದ ಕಣ್ಣೀರು ಹಾಕಿದ್ದರು.

ಅಂದಹಾಗೆ ಮುಂಬರುವ ಸೆಪ್ಟೆಂಬರ್‌ನಲ್ಲಿ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 12’ ಆರಂಭ ಆಗಲಿದೆಯಂತೆ. ಕಿಚ್ಚ ಸುದೀಪ್‌ ಅವರೇ ಈ ಶೋ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಸ್ಪರ್ಧಿಗಳು ಯಾವ ರೀತಿ ಇರಲಿದ್ದಾರೆ ಎಂಬ ಕುತೂಹಲವಿದೆ.