ಸಂಗೀತಾ ಮುಖದಲ್ಲಿ ಮಾತ್ರ ನಗು ಕಾಣ್ತಾ ಇದೆ, ಪ್ರತಾಪ್‌ಗೆ ಒಳ್ಳೇದಾಗಲಿ; ನೆಟ್ಟಿಗರ ಮಾತಿನ ಮರ್ಮವೇನು?
ಡ್ರೋನ್ ಪ್ರತಾಪ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎಂಬ ಪ್ರೊಮೋ ಬಿಡುಗಡೆಯಾಗಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಡ್ರೋನ್ ಪ್ರತಾಪ್ ಅಭಿಮಾನಿಗಳು ಅದನ್ನು ಲೈಕ್ ಮಾಡಿದ್ದರೆ ಸಹಜವಾಗಿ ಹಲವರು ಬೇರೆಯವರ ಬಗ್ಗೆ ಅನುಕಂಪ ತೋರಿ ಬರೆದಿದ್ದಾರೆ. ಅದರೆ, ಒಬ್ಬರು ಹಾಕಿರುವ ಕಾಮೆಂಟ್ ಗಮನಕ್ಕೆ ಬರುವಂತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ಸಂಗೀತಾ ಬಳಿಕ ಇದೀಗ ಡ್ರೋನ್ ಪ್ರತಾಪ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇಂದಿನ ಸಂಚಿಕೆಯ ಪ್ರೊಮೋದಲ್ಲಿ , ಹೋಸ್ಟ್ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳೆಲ್ಲರ ಸಮ್ಮುಖದಲ್ಲಿ ಡ್ರೋನ್ ಪ್ರತಾಪ್ ಅವರಿಗೆ ತಾವು ನೀಡುವ 'ಕಿಚ್ಚನ ಚಪ್ಪಳೆ' ಘೋಷಿಸಿದರು. ಸ್ವತಃ ಡ್ರೋನ್ ಪ್ರತಾಪ್ ಸೇರಿದಂತೆ, ಹಲವು ಸ್ಪರ್ಧಿಗಳು ಇದರಿಂದ ಖುಷಿಯಾದರು. 'ಟೀಮ್ ಎಲ್ಲಾ ಅಗೇನಸ್ಟ್ ಆಗಿ ನಿಂತಿರುವಾಗ್ಲೂ ನೀವು ಆನೆಸ್ಟಿಯಿಂದ ನೀವು ಮನೆನ ನಡೆಸಿದ್ದಕ್ಕೆ ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ ಪ್ರತಾಪ್ ಅವರೇ' ಎಂದಿದ್ದಾರೆ ಕಿಚ್ಚ ಸುದೀಪ್.
ಈ ವೇಳೆ ಮಾತನಾಡಿದ ಡ್ರೋನ್ ಪ್ರತಾಪ್ 'ಸರ್ ಬಿಗ್ ಮೂವ್‌ಮೆಂಟ್. ಹೊರಗಡೆ ಆದ್ರೆ ಎರಡೂ ಕಡೆ ಏನು ತಪ್ಪಾಗುತ್ತೆ ಅಂತ ಕಾಣ್ಸಲ್ಲ ಸರ್. ಆದರೆ, ಹೌದು ನಾನು ಹಲವು ತಪ್ಪು ಮಾಡಿದೀನಿ, ಅದನ್ನ ಹೇಳೋದಕ್ಕೆ ಯಾವ್ದೇ ಮುಜುಗರ ಇಲ್ಲ ಸರ್.. ಹೌದು, ನನ್ನ ಬಗ್ಗೆ ಕಳ್ಳ ಅಂದವ್ರು ಸುಳ್ಳ ಅಂದವ್ರು, ಹೀಯಾಳಿಸಿದವ್ರು ಈಗ ನೆನಪಿಸಿಕೊಂಡ್ರೆ ಮನಸು ಹಗುರ ಅನ್ಸುತ್ತೆ.. 'ಎಂದಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಬೆಳಕಿನ ಹಬ್ಬಕ್ಕೆ ನಗುವಿನ ರಸದೌತಣ ನೀಡಲು 'ದೀಪಾವಳಿ ನಗೆ ಉತ್ಸವ'
ಡ್ರೋನ್ ಪ್ರತಾಪ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎಂಬ ಪ್ರೊಮೋ ಬಿಡುಗಡೆಯಾಗಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಡ್ರೋನ್ ಪ್ರತಾಪ್ ಅಭಿಮಾನಿಗಳು ಅದನ್ನು ಲೈಕ್ ಮಾಡಿದ್ದರೆ ಸಹಜವಾಗಿ ಹಲವರು ಬೇರೆಯವರ ಬಗ್ಗೆ ಅನುಕಂಪ ತೋರಿ ಬರೆದಿದ್ದಾರೆ. ಅದರೆ, ಒಬ್ಬರು ಹಾಕಿರುವ ಕಾಮೆಂಟ್ ಗಮನಕ್ಕೆ ಬರುವಂತಿದೆ. ಅದೇನೆಂದರೆ, 'ಸಂಗೀತಾ ಮುಖದಲ್ಲಿ ಮಾತ್ರ ನಗು ಕಾಣಿಸುತ್ತಿದೆ' ಎಂಬುದು ಆ ಮಾತು. ಹೌದು, ಸರಿಯಾಗಿ ಗಮನಿಸಿದರೆ ತಿಳಿಯುತ್ತದೆ.
ನಟಿ ಎಂದ್ಮೇಲೆ ಎಲ್ಲದ್ದಕ್ಕೂ ಸಿದ್ಧವಿರ್ಬೇಕು ಎಂದ ಬಿಗ್ಬಾಸ್ ತನಿಷಾ, ಪೂಜಾ ಗಾಂಧಿಗೂ ಲಿಪ್ಲಾಕ್ ಮಾಡಿದ್ರಂತೆ!
ಸಂಗೀತಾ ಬಿಟ್ಟು ಉಳಿದವರ ಮುಖದಲ್ಲಿ ಡ್ರೋನ್ ಪ್ರತಾಪ್ ಕಿಚ್ಚನ ಚಪ್ಪಾಳೆ ಗಿಟ್ಟಿಸಿದ್ದಾರೆ ಎಂದು ತಿಳಿದಾಗ ಖುಷಿಯೇನೂ ಕಾಣಿಸಲಿಲ್ಲ. ಆದರೆ, ಎಲ್ಲರೂ ಒಮ್ಮೆ 'ಓ' ಎಂದು ಉದ್ಗಾರ ತೆಗೆದು ಕಿರುಚಿದ್ದಾರೆ. ಆಮೇಲೂ ಮುಖದಲ್ಲಿ ನಗು ಉಕ್ಕಿ ಹರಿಯುತ್ತಿದ್ದುದು ಕೇವಲ ಸಂಗೀತಾ ಮುಖದಲ್ಲಿ ಮಾತ್ರ. ಅದನ್ನು ಕೂಡ ಗಮನಿಸಿ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ ಎಂದರೆ, ಇದು ಸ್ಪೆಷಲ್ ಎನ್ನಲೇಬೇಕು. ಏಕೆಂದರೆ, ಇತ್ತೀಚೆಗೆ ಸೋಷಿಯಲ್ ಮೀಡಿಯಾ ಎನ್ನವುದು ಬಹಳಷ್ಟು ಶಕ್ತಿ ಪಡೆದುಕೊಳ್ಳುತ್ತಿದೆ. ಕಾರಣ, ಪ್ರತಿಕ್ರಿಯೆ ನೀಡಲು ಎಲ್ಲರಿಗೂ ಅದು ಸುಲಭವಾಗಿ ಸಿಗುತ್ತದೆ.