Asianet Suvarna News Asianet Suvarna News

ನಟಿ ಎಂದ್ಮೇಲೆ ಎಲ್ಲದ್ದಕ್ಕೂ ಸಿದ್ಧವಿರ್ಬೇಕು ಎಂದ ಬಿಗ್​ಬಾಸ್​ ತನಿಷಾ, ಪೂಜಾ ಗಾಂಧಿಗೂ ಲಿಪ್​ಲಾಕ್​ ಮಾಡಿದ್ರಂತೆ!

ಬಿಗ್​ಬಾಸ್​​ ಖ್ಯಾತಿಯ ತನಿಷಾ ಕುಪ್ಪಂಡ ತಾವು ಮಾಡಿರುವ ಬೋಲ್ಡ್​ ದೃಶ್ಯಗಳ ಕುರಿತು ಮಾತನಾಡಿದ್ದಾರೆ. ಜೊತೆಗೆ ದಂಡುಪಾಳ್ಯ-2 ಚಿತ್ರದಲ್ಲಿ ಪೂಜಾ ಗಾಂಧಿಗೆ ಲಿಪ್​ಲಾಕ್​ ಮಾಡಿದ್ದನ್ನೂ ಹೇಳಿದ್ರು!
 

Tanisha Kuppanda of Bigg Boss fame has spoken about the bold scenes she has done suc
Author
First Published Nov 11, 2023, 4:26 PM IST

ಸದ್ಯ ಬಿಗ್​ಬಾಸ್​ ಮನೆಯಲ್ಲಿ ವಿನಯ್, ಕಾರ್ತಿಕ್, ಸಂಗೀತಾ, ಡ್ರೋನ್ ಪ್ರತಾಪ್ ಜೊತೆ  ತನಿಷಾ ಕುಪ್ಪಂಡ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ವಿನಯ್‌ಗೂ ಕೂಡ ತನಿಷಾ  ಪೈಪೋಟಿ ಕೊಡುತ್ತಿದ್ದಾರೆ. ಅಷ್ಟಕ್ಕೂ ತನಿಷಾ ಬಿಗ್​ಬಾಸ್​ ಮನೆಯೊಳಕ್ಕೆ ಹೋಗಲು ಪ್ರಬಲ ಕಾರಣ, ಆಕೆಗೆ ಈ ಹಿಂದೆ ಕೇಳಲಾಗಿದ್ದ ಪ್ರಶ್ನೆ ಜೊತೆಗೆ ಆ ಪ್ರಶ್ನೆ ಸೃಷ್ಟಿಸಿದ್ದ ವಿವಾದದಿಂದ ಆಕೆ ಫೇಮಸ್​ ಆಗಿದ್ದು ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ತನಿಷಾ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದಾರೆ.  ತಮಿಳು ಸಿನಿಮಾದಲ್ಲೂ ನಟಿಸಿದ್ದಾರ.  ಇವರು ಹೆಚ್ಚು ನಟಿಸಿರುವುದು ಬೋಲ್ಡ್ ಪಾತ್ರಗಳಲ್ಲೇ. ಈ ಕಾರಣದಿಂದ  ಯೂಟ್ಯೂಬರ್​ ಒಬ್ಬರು ಸಂದರ್ಶನ ಮಾಡುವಾಗ ಪ್ರಶ್ನೆ ಕೇಳುವ ಭರದಲ್ಲಿ ನೀವು ಸದಾ ಬೋಲ್ಡ್​ ದೃಶ್ಯ ಮಾಡುತ್ತೀರಿ,  ನೀವು ನೀಲಿ ಚಿತ್ರದಲ್ಲಿ ನಟಿಸಿದ್ದೀರಾ ಎಂದುಬಿಟ್ಟಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದೂ ಅಲ್ಲದೇ, ತನಿಷಾ ಸಕತ್​ ಫೇಮಸ್​ ಕೂಡ ಆದರು. ಬಿಗ್​ಬಾಸ್​ಗೂ ಎಂಟ್ರಿ ಸಿಕ್ಕಿತು. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ತನಿಷಾ ಬಹಳ ಸುದ್ದಿಯಲ್ಲಿದ್ದಾರೆ. 

ಈ ಸಂದರ್ಭದಲ್ಲಿ ಅವರ ಹಳೆಯ ಸಂದರ್ಶನದ ವಿಡಿಯೋ ಒಂದು ಮತ್ತೆ ಸದ್ದು ಮಾಡುತ್ತಿದೆ. ಅದರಲ್ಲಿ, ಈಕೆ ಸಕತ್​ ಬೋಲ್ಡ್​ ಆಗಿ ನಟಿಸಿದ್ದಾರೆ. ಪುರುಷನೊಬ್ಬನ ಜೊತೆ ಸೆಕ್ಸ್​ ಸೀನ್​ ಇದಾಗಿದೆ. ಈ ದೃಶ್ಯವನ್ನು ನೋಡಿದ ಮೇಲೆ ಎಲ್ಲರೂ ಹೇಗೆ ರಿಯಾಕ್ಟ್​ ಮಾಡಿದರು ಎಂದು ಸಂದರ್ಶಕ ಕೇಳಿದಾಗ, ತನಿಷಾ ಅವರು, ನನಗೆ ತುಂಬಾ ಜನ ಕಾಲ್​ ಮಾಡಿ ತುಂಬಾ ಚೆನ್ನಾಗಿ ಆ್ಯಕ್ಟ್​ ಮಾಡಿದಿ ಎಂದು ಹೇಳಿದ್ರು. ಇನ್ನು ಕೆಲವರು ಇಷ್ಟು ಬೋಲ್ಡ್​ ಆಗಿ ಮಾಡಬಾರದಿತ್ತು ಎಂದರು. ಅಂಥವರಿಗೆ ನಾನು ಹೇಳೋದು ಇಷ್ಟೇನೆ. ನಟಿಯರಾದ ಮೇಲೆ ಯಾವ ಸೀನ್​ ಬೇಕಾದ್ರೂ ಮಾಡಬೇಕು, ಚಿತ್ರಕ್ಕೆ ಪೂರಕವಾಗಿದ್ದರೆ ಅದನ್ನು ಮಾಡಲೇಬೇಕು. ಆದರೆ ಇಂಡಸ್ಟ್ರಿಯಲ್ಲಿ ಇರುವವರೇ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಚ್ಚರಿಯಾಗುತ್ತದೆ ಎಂದಿದ್ದಾರೆ ತನಿಷಾ.

ಈ ರಣವೀರ್‌ ಸಿಕ್ರೂ ಆ ರಣವೀರ್‌ನ್ನು ಬಿಟ್ಟಿಲ್ವಾ ದೀಪಿಕಾ? ಆಲಿಯಾ ಪತಿ ಜೊತೆ ಇದೇನಪ್ಪಾ?

ಯಾರು ಒಪ್ಪಿಕೊಳ್ಳಲಿ ಬಿಡಲಿ ನನ್ನ ಅಮ್ಮ ಅಂತೂ ಈ ಸೀನ್​ ನೋಡಿ ಏನೂ ಹೇಳಲಿಲ್ಲ. ಅದೇ ನನಗೆ ಖುಷಿಯಾಗಿದ್ದು, ಅಮ್ಮ ಏನು ಹೇಳ್ತಾರೋ ಎನ್ನುವ ಭಯವಿತ್ತು ಎಂದು ನೆನಪಿಸಿಕೊಂಡಿದ್ದಾರೆ.  ಇದೇ ವೇಳೆ, ದಂಡುಪಾಳ್ಯ-2 ಚಿತ್ರದಲ್ಲಿ ನಾಯಕಿ ಪೂಜಾ ಗಾಂಧಿಯವರಿಗೂ ಕಿಸ್​ ಕೊಟ್ಟಿದ್ದು ತಾವೇ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

ದಂಡು ಪಾಳ್ಯ-2ದಲ್ಲಿ ಪೂಜಾ ಗಾಂಧಿಗೆ ಕಿಸ್​ ಕೊಡುವ ಸೀನ್​ ಮಾಡಿದ್ದೆ. ಅದನ್ನು ಅಮ್ಮನ ಬಳಿ ಹೇಳಲು ಹೆದರಿದ್ದೆ. ಆ ಸೀನ್​ ಅನ್ನು ಕೊನೆಗೂ ಅವರಿಗೆ ತೋರಿಸಲಿಲ್ಲ. ಪೂಜಾ ಗಾಂಧಿ ಇದ್ರು, ಡೈರೆಕ್ಟರ್​ ಕಿಸ್​ ಮಾಡಿ ಅಂದ್ರು, ಅವ್ರು ತುಂಬಾ ಚೆನ್ನಾಗಿ ಇದ್ದಾರಲ್ಲ, ಕಿಸ್​ ಮಾಡಿ ಬಂದೆ ಅಂತಷ್ಟೇ ಅಮ್ಮನಿಗೆ ಹೇಳಿದ್ದೆ. ಆದರೆ ಈಗ ಈ ಬೋಲ್ಡ್​ ಸೀನ್​ಗಳನ್ನು ನೋಡಿಯೂ ಅಮ್ಮ ಅದನ್ನು ಅಕ್ಸೆಪ್ಟ್​ ಮಾಡಿಕೊಂಡಿರುವುದು ತುಂಬಾ ಖುಷಿಯಾಗಿದೆ ಎಂದಿದ್ದಾರೆ. ಅಂದಹಅಘೆ, ಶ್ರೀನಿವಾಸ್ ರಾಜು ನಿರ್ದೇಶನದ ದಂಡುಪಾಳ್ಯ-2 ಸಿನಿಮಾ 2017ರಲ್ಲಿ ರಿಲೀಸ್​ ಆಗಿತ್ತು. ಚಿತ್ರದಲ್ಲಿ ಪೂಜಾ ಗಾಂಧಿ, ದಂಡುಪಾಳ್ಯ ಗ್ಯಾಂಗ್ ಸದಸ್ಯೆ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದರು. ಆಕೆ ಜೈಲಿನಲ್ಲಿ ಇರುವಾಗ ಇತರೆ ಮಹಿಳಾ ಕೈದಿಗಳು  ಹಿಂಸಿಸುವ ಸನ್ನಿವೇಶ ಇತ್ತು. ಆ ಸನ್ನಿವೇಶದಲ್ಲಿ ಪೂಜಾಗೆ ತನಿಷಾ ಲಿಪ್ ಲಾಕ್ ಮಾಡುವ ಸೀನ್​ ಶೂಟ್​ ಮಾಡಲಾಗಿತ್ತು. ಸದ್ಯ ಬಿಗ್‌ಬಾಸ್​ನಲ್ಲಿ ಸದ್ದು ಮಾಡ್ತಿರೋ ತನಿಷಾ ಫೈನಲ್ ಹಂತಕ್ಕೇ ಏರುತ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ.

ಹೇಗಿದ್ದವಳು ಹೇಗಾದ್ಲು! ತಮನ್ನ ಭಾಟಿಯಾ ಸ್ತನಕ್ಕೂ ಬಿದ್ದಿದ್ಯಾ ಕತ್ತರಿ? ಏನಿದು ಗುಸುಗುಸು?

Follow Us:
Download App:
  • android
  • ios