Asianet Suvarna News Asianet Suvarna News

ನಮ್ಗೆ ಗೋಳಿನ ಸೀರಿಯಲ್ ಬೇಡ್ವೇ ಬೇಡ : ಸೀರಿಯಲ್ ವೀಕ್ಷಕರ ಡೈರೆಕ್ಟ್ ಅಟ್ಯಾಕ್!

ಸೀರಿಯಲ್ ಅಂದ್ರೆ ಗೋಳಿನ ಕಥೆ ಅನ್ನೋದು ಹೋಗ್ಬೇಕು. ಗೋಳಿನ ಕಥೆ ನಮ್ಗೆ ಬೇಡ್ವೇ ಬೇಡ ಅಂತ ಸೀರಿಯಲ್ ವೀಕ್ಷಕರು ನೇರವಾಗಿ ಅಭಿಪ್ರಾಯ ಹೇಳ್ತಿದ್ದಾರೆ. ಅಷ್ಟಕ್ಕೂ ನಡೆದದ್ದೇನು?

 

dont give us crying scenes repeatedly says kannada serial viewers bni
Author
First Published Sep 16, 2023, 10:35 AM IST

ಸಿನಿಮಾ ಅಂದ್ರೆ ನಾಲ್ಕು ಸಾಂಗ್, ಐದು ಫೈಟ್, ರೊಮ್ಯಾನ್ಸ್, ಫ್ಯಾಮಿಲಿ ಸೆಂಟಿಮೆಂಟ್‌ ಇವೆಲ್ಲ ಇರ್ಬೇಕು ಅನ್ನೋದು ಜನಪ್ರಿಯ ಫಾರ್ಮ್ಯಾಟ್. ಅದೇ ರೀತಿ ಸೀರಿಯಲ್ ಅಂದಾಗಲೂ ಟೀಮ್‌ನವರು ಒಂದು ಫಾರ್ಮ್ಯಾಟ್ ಇದೆ. ಅದೇನು ಅನ್ನೋದನ್ನು ಮನೇಲಿ ಟಿವಿ ಇರೋ ಪುಟಾಣಿ ಮಕ್ಕಳೂ ಹೇಳ್ತಾರೆ. ಅದರಲ್ಲಿ ಮೊಟ್ಟ ಮೊದಲ ಅಂಶವೇ ಗೋಳು. ಕಷ್ಟ ತಪ್ಪಲೇ ಬಾರದು, ಒಂದಾದ ಮೇಲೊಂದರಂತೆ ಬರುತ್ತಲೇ ಇರಬೇಕು. ಅಂದಹಾಗೆ ಈ ಕಷ್ಟಗಳೆಲ್ಲ ಬೀದಿಲಿ ಹೋಗೋರಿಗೆ ಬರೋದಲ್ಲ. ನಾಯಕಿಗೇ ಬರಬೇಕು. ಮತ್ತೊಂದು ಪಾಯಿಂಟ್‌ ಅಂದರೆ ನಾಯಕಿ ಸಿಕ್ಕಾಪಟ್ಟೆ ಒಳ್ಳೇವ್ಳಾಗಿರಬೇಕು. ಎಷ್ಟು ಒಳ್ಳೆಯವಳು ಅಂದರೆ ಜಗತ್ತಿನ ತಪ್ಪನ್ನೆಲ್ಲ ತನ್ನ ತಲೆ ಮೇಲೆ ಹಾಕಿಕೊಂಡು ಪರಮ ಶತ್ರುವೂ ಚೆನ್ನಾಗಿರಬೇಕು ಅಂತ ಬಯಸುತ್ತಿರಬೇಕು. ನಾಯಕಿ ಪಾತ್ರಧಾರಿ ಯಾವೊಂದು ಎಕ್ಸ್‌ಪ್ರೆಶನ್ ಕೊಡದಿದ್ದರೂ ಪರ್ವಾಗಿಲ್ಲ, ನೋಡೋದಕ್ಕೆ ಬೊಂಬೆ ಥರ ಇರಬೇಕು. 

ಇದರ ಜೊತೆಗೆ ಸಂಪ್ರದಾಯಸ್ಥಳಾಗಿರಬೇಕು, ಮದುವೆಗೂ ಮುಂಚೆ ಚೂಡಿದಾರ್ ಅಥವಾ ಕುರ್ತಾ ತೊಟ್ಟರೆ ಮದುವೆ ನಂತರ ಮಸ್ಟ್ ಆಂಡ್ ಶುಡ್ ಸೀರೆಯನ್ನೇ ಉಡಬೇಕು, ರಾತ್ರಿ ಮಲಗುವಾಗಲೂ ಸೀರೆ ಬಿಟ್ಟು ಡ್ರೆಸ್ ಹಾಕ್ಕೊಳ್ತೀನಿ ಅಂದ್ರೆ ನೆವರ್. ವಿಲನ್‌ಗಷ್ಟೇ ಖುಷಿ ಬಂದ ಡ್ರೆಸ್ ಹಾಕ್ಕೊಳ್ಳೋ ಸ್ವಾತಂತ್ರ್ಯ. ಕೆಲವೊಮ್ಮೆ ವಿಲನ್‌ಗಳು ಒಂದು ಟರ್ನಿಂಗ್ ಪಾಯಿಂಟ್‌ನಲ್ಲಿ ಬದಲಾಗಿ ಒಳ್ಳೆಯವರಾಗಿ ಬಿಡ್ತಾರೆ. ಆಗ ಅವರ ಡ್ರೆಸ್‌ ಸಾಂಪ್ರದಾಯಿಕವಾಗಬೇಕು. ಹೀಗೆ ಹನಮಂತನ ಬಾಲದಷ್ಟು ಪಾಪ್ಯುಲಾರಿಟಿ ಸೀಕ್ರೆಟ್ಸ್ ಇವೆ. ಆದರೆ ಇದನ್ನು ಮೀರಿದ ಕೆಲವು ಸೀರಿಯಲ್ ಬಂದವು. ಸಕ್ಸಸ್ ಕಂಡವು. ಸತ್ಯ ಪಾರ್ಟ್ ೧ ಇದಕ್ಕೆ ಉದಾಹರಣೆ. 

ಆದರೆ ಈ ಪಾಪ್ಯುಲರ್ ಫಾರ್ಮ್ಯಾಟ್‌ ನೋಡಿ ವೀಕ್ಷಕರಿಗೆ ತಲೆ ಚಿಟ್ಟು ಹಿಡಿದು ಹೋಗಿದೆ. ನಾಯಕಿಯ ಅತಿ ಒಳ್ಳೆತನ ಅವರಿಗೆ ವಾಕರಿಕೆ ತರಿಸಿದೆ. ಅದನ್ನವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ 'ಲಕ್ಷ್ಮೀ ಬಾರಮ್ಮ' ಸೀರಿಯಲ್. ಇದರಲ್ಲಿ ನಾಯಕಿ ಲಕ್ಷ್ಮೀ ಪಾತ್ರ ಆರಂಭದಲ್ಲಿ ಸ್ಟ್ರಾಂಗ್ ಇತ್ತು. ತಪ್ಪನ್ನು ತಪ್ಪು ಅಂತಲೇ ಅವಳು ಹೇಳುತ್ತಿದ್ದಳು. ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತಿದ್ದಳು. ಬಹಳ ನೇರ ಸ್ವಭಾವದ ಹುಡುಗಿ ಆಗಿದ್ದಳು. ಈ ಪಾತ್ರವನ್ನು ಜನ ಇಷ್ಟಪಟ್ಟಿದ್ದರು. ಅವಳ ಸ್ಟ್ರೈಟ್ ಫಾರ್ವಡ್‌ನೆಸ್‌ನ ಹೊಗಳಿದ್ದರು. ಆದರೆ ಈಗ ನಿಧಾನಕ್ಕೆ ಆ ಪಾತ್ರವನ್ನು ಅತೀ ಒಳ್ಳೆತನಕ್ಕೆ ಎಳೆಯುತ್ತಿದ್ದಾರೆ. ನಾಯಕ ವೈಷ್ಣವ್ ಪಾತ್ರಕ್ಕೆ ಕೊಂಚ ಗ್ರೇ ಶೇಡ್ ತರುತ್ತಿದ್ದಾರೆ. ಇದು ವೀಕ್ಷಕರಿಗೆ ಇಷ್ಟವಾಗ್ತಿಲ್ಲ. 

ಗಮನಿಸಿ: ಕನ್ನಡ ಸೀರಿಯಲ್ಸ್ ಅತ್ತೆಯಂದಿರು ಸಿಕ್ಕಾಪಟ್ಟೆ ಒಳ್ಳೇವ್ರಾಗ್ತಿದ್ದಾರೇಕೆ?

ಈ ಸೀರಿಯಲ್‌ನಲ್ಲಿ ಆರಂಭದಲ್ಲಿ ವೈಷ್ಣವ್ ಬರೆದ ಹಾಡನ್ನು ಪ್ರೊಡಕ್ಷನ್ ಹೌಸ್‌ನವರು ರಿಜೆಕ್ಟ್ ಮಾಡಿದ್ದರು. ಆದರೆ ಲಕ್ಷ್ಮೀ  ತನ್ನ ಗಂಡ ವೈಷ್ಣವ್‌ಗೆ ಹಾಡು ಬರೆಯಿರಿ ಅಂತ ಪ್ರೋತ್ಸಾಹ ಮಾಡಿ ಹಾಡು ಬರೆಸಿದ್ದಳು. ಆದರೆ ಆ ಹಾಡನ್ನು ವೈಷ್ಣವ್ ತಾಯಿ ಕಾವೇರಿ ಹರಿದು ಹಾಕಿದಳು. ಆಮೇಲೆ ಲಕ್ಷ್ಮೀಗೆ ಹಾಡು ಬರೆಯಲು ಹೇಳಿದ್ದಳು. ಲಕ್ಷ್ಮೀ ಹಾಡು ಬರೆದಳು, ಆಮೇಲೆ ಆ ಹಾಡನ್ನು ಕಾವೇರಿ ಪ್ರೊಡಕ್ಷನ್ ಹೌಸ್‌ಗೆ ಕಳಿಸಿದ್ದಳು. ಇದು ಲಕ್ಷ್ಮೀ, ವೈಷ್ಣವ್‌ಗೆ ಗೊತ್ತಿರಲಿಲ್ಲ. ಟೈಟಲ್ ಲಾಂಚ್ ವೇಳೆ ವೈಷ್ಣವ್‌ಗೆ ಹಾಡು ಲಾಂಚ್ ಆಗ್ತಿರೋದು ನಂದಲ್ಲ, ಲಕ್ಷ್ಮೀ ಬರೆದಿರೋದು ಅಂತ ಗೊತ್ತಾಗಿದೆ. ಮನೆಗೆ ಬಂದಮೇಲೆ ವೈಷ್ಣವ್ ತಾಯಿ ಬಳಿ ಯಾರು ಲಕ್ಷ್ಮೀ ಬರೆದಿರುವ ಹಾಡನ್ನು ಪ್ರೊಡಕ್ಷನ್ ಹೌಸ್‌ಗೆ ಕಳಿಸಿದ್ದು ಅಂತ ಕೇಳಿದ್ದಾನೆ. ಕಾವೇರಿ ಮಾಡಿದ ತಪ್ಪನ್ನು ಲಕ್ಷ್ಮೀ ತನ್ನ ಮೇಲೆ ಹಾಕಿಕೊಂಡಿದ್ದಾಳೆ. 

ಕಾವೇರಿ ಸದಾ ಮಗ ನನಗೆ ಆದ್ಯತೆ ಕೊಡಬೇಕು, ಮಗನಿಗೆ ನಾನೇ ಮುಖ್ಯ ಆಗಬೇಕು ಎಂದು ಬಯಸುತ್ತಿರುತ್ತಾಳೆ. ಈಗ ತನ್ನ ಮಗನ ಕಣ್ಣಲ್ಲಿ ತಾನು ತಪ್ಪು ಮಾಡಿದ್ದೀನಿ ಅಂತ ಅನಿಸಿದ್ರೆ ನಾನು ಬದುಕಿದ್ರೂ ಪ್ರಯೋಜನ ಇಲ್ಲ ಅಂತ ಕಾವೇರಿ ಅಂದುಕೊಳ್ಳುತ್ತಾಳೆ. ಮುಂದೆ ಏನಾಗುವುದು ಎಂಬ ಕುತೂಹಲ ಎದ್ದಿದೆ. ಈ ನಡುವೆ ಲಕ್ಷ್ಮೀ ಪಾತ್ರದ ಅತಿ ಒಳ್ಳೆತನ ವೀಕ್ಷಕರಿಗೆ ಬೇಜಾರು ತರಿಸಿದೆ. ಇಲ್ಲಿವರೆಗೆ ಸರಿ ಇತ್ತು ಧಾರಾವಾಹಿ, ಇನ್ನು ಅದಕ್ಕೆ ತಲೆ ಬುಡ ಇರಲ್ಲ. ನಾರ್ಮಲ್ ಸೀರಿಯಲ್‌ ಥರನೇ ಆಗಿಬಿಡುತ್ತೆ ಅಂತ ಬೈಕೊಳ್ತಿದ್ದಾರೆ. 

ಶಮಂತ್ ಬ್ರೊ ಗೌಡ, ಭೂಮಿಕಾ ರಮೇಶ್, ತನ್ವಿ ರಾವ್, ಸುಷ್ಮಾ ನಾಣಯ್ಯ ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಸಿಹಿ ಸೀತಾಳ ಮಗಳೇ ಅಲ್ವಾ? ರಾಮ್‌ಗೆ ವಂಚಿಸಿದ್ದು ಸಿಹಿ ಅಮ್ಮನೇನಾ? ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್?
 

Follow Us:
Download App:
  • android
  • ios