Asianet Suvarna News Asianet Suvarna News

ಗಮನಿಸಿ: ಕನ್ನಡ ಸೀರಿಯಲ್ಸ್ ಅತ್ತೆಯಂದಿರು ಸಿಕ್ಕಾಪಟ್ಟೆ ಒಳ್ಳೇವ್ರಾಗ್ತಿದ್ದಾರೇಕೆ?

ಸೀರಿಯಲ್‌ ಅಂದ್ರೆ ಅತ್ತೆ ಸೊಸೆ ಜಗಳ ಅನ್ನೋ ಕಾಲ ಈಗಿಲ್ಲ. ಈಗಿನ ಸೀರಿಯಲ್‌ ಅತ್ತೆಂದಿರುವ ಸಿಕ್ಕಾಪಟ್ಟೆ ಒಳ್ಳೇವ್ರು ಆಗ್ತಿದ್ದಾರೆ. ಯಾಕ್ಹಿಂಗೆ ಭಗವಂತಾ?

why serial aunts changed as  too good
Author
First Published Sep 14, 2023, 12:28 PM IST

ದಶಕದ ಹಿಂದಿನ ಸೀರಿಯಲ್‌ಗೂ ಈಗಿನ ಸೀರಿಯಲ್‌ ಟ್ರೆಂಡ್‌ಗೂ ಡಿಫರೆನ್ಸ್ ಇದೆ. ಹಿಂದೆಲ್ಲ ಸೀರಿಯಲ್ ಅಂದರೆ ಅತ್ತೆ ಸೊಸೆ ಜಗಳ ಅನ್ನೋ ಮಾತಿತ್ತು. ಆದರೆ ಈಗ ಹಾಗಲ್ಲ. ಸೀರಿಯಲ್‌ನ ಅತ್ತೆ ಸಿಕ್ಕಾಪಟ್ಟೆ ಒಳ್ಳೆಯವಳಾಗ್ತಿದ್ದಾಳೆ. ಈ ಚೇಂಜ್ ಯಾವಾಗಿಂದ ಆಯ್ತು ಅಂತ ಹೇಳೋದು ಕಷ್ಟ. ಆದರೆ ಟ್ರೆಂಡ್ ಅಂತೂ ಬದಲಾಗಿರೋದು ಸತ್ಯ. ಈಗ ಸೀರಿಯಲ್‌ಗಳಲ್ಲಿ ಅತ್ತೆ ಸೊಸೆ ಟಾಮ್‌ ಆಂಡ್ ಜೆರ್ರಿ ಥರ ಜಗಳ ಆಡಲ್ಲ. ಬದಲಿಗೆ ಅಮ್ಮ ಮಗಳ ಥರ ಇರ್ತಾರೆ. ಬಹುಶಃ ಕೆಲವು ಸಮಯ ಹಿಂದೆ ಬಂದ 'ಕನ್ನಡತಿ' ಸೀರಿಯಲ್ ಇದಕ್ಕೆ ಕಾರಣ ಇದ್ದರೂ ಇರಬಹುದು. ಅತ್ತೆ ಅಂದರೆ ವಿಲನ್ ಅನ್ನೋ ಕಾಂಸೆಪ್ಟ್‌ ಅನ್ನು ಹೊಡೆದು ಹಾಕಿದ ಸೀರಿಯಲ್ ಇದು. ಅತ್ತೆಯನ್ನ ಅಥವಾ ಸೊಸೆಯನ್ನ ವಿಲನ್ ಮಾಡದಿದ್ರೆ ಸೀರಿಯಲ್‌ಗೆ ಟಿಆರ್‌ಪಿ ಬರೋದಿಲ್ಲ ಅನ್ನೋ ಮೈಂಡ್‌ಸೆಟ್‌ ಇಲ್ಲಿಂದ ಬದಲಾಯ್ತು ಅನ್ನಬಹುದು. ಕನ್ನಡತಿ ಸೀರಿಯಲ್‌ನಲ್ಲಿ ಚಿತ್ಕಳಾ ಬಿರಾದಾರ್‌ ಅತ್ತೆ ರತ್ನಮಾಲಾ ಪಾತ್ರದಲ್ಲಿ ನಟಿಸಿದ್ರು. ಕಷ್ಟಪಟ್ಟು ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿ ಅದನ್ನು ಬೆಳೆಸುವಂಥಾ ಸ್ಟ್ರಾಂಗ್ ಸೊಸೆ ಹುಡುಕಿ ಅವಳ ಹೆಸರಿಗೇ ತನ್ನ ಸಮಸ್ತ ಆಸ್ತಿ ಬರೆದುಕೊಟ್ಟ ಸಿಕ್ಕಾಪಟ್ಟೆ ಒಳ್ಳೆ ಅತ್ತೆ ಅವ್ರು. ಅವ್ರ ಪಾತ್ರ ತೀರ್ಕೊಂಡಾಗ ಕಣ್ಣೀರಿಟ್ಟ ಫ್ಯಾನ್ಸ್‌ಗಳ ಸಂಖ್ಯೆ ಎಷ್ಟೋ ಸಾವಿರ ಇರಬಹುದು.

ಕನ್ನಡತಿಯ ಅತ್ತೆ ಒಳ್ಳೆಯವಳಾಗಿ ಗೆದ್ದದ್ದೇ ಉಳಿದ ಸೀರಿಯಲ್‌ಗಳಿಗೂ ಉಮೇದು ಬಂತು. 'ಭಾಗ್ಯಲಕ್ಷ್ಮೀ' ಸೀರಿಯಲ್‌ನ ಕುಸುಮಾ ಅನ್ನೋ ಅತ್ತೆ ಈಗ ಸಖತ್ ಫೇಮಸ್. ಈಕೆ ಮಹಾನ್ ಗಟ್ಟಿಗಿತ್ತಿ. ಪೋಲಿಬಿದ್ದ ಮಗ ನಲವತ್ತು ವರ್ಷದವನಾದ್ರೂ ಕಾಲರ್‌ ಹಿಡಿದು ಕೆನ್ನೆಗೆರಡು ಬಿಗಿದು ಪ್ರಶ್ನೆ ಮಾಡುವ ಸ್ಟ್ರಾಂಗ್ ಓಲ್ಡ್ ಲೇಡಿ. ಅಷ್ಟೇಯಾಕೆ ತನ್ನ ಸೊಸೆಯನ್ನ ಮಗ ಅವಿದ್ಯಾವಂತೆ, ಪೆದ್ದು ಅಂತ ಲೇವಡಿ ಮಾಡೋದರ ವಿರುದ್ಧ ತೊಡೆತಟ್ಟಿ ನಿಂತವಳು. ತನ್ನ ಸೊಸೆಯನ್ನು ಒಂಭತ್ತನೇ ಕ್ಲಾಸಿನ ತನ್ನ ಮೊಮ್ಮಗಳ ಜೊತೆಗೇ ಕೂರಿಸಿ ಓದಿಸುವಷ್ಟು ಪ್ರಭಾವಶಾಲಿ. ಈ ಪಾತ್ರಕ್ಕಂತೂ ಅಭಿಮಾನಿಗಳೇ ಅಭಿಮಾನಿಗಳು.

ಚಟಕ್ಕೋಸ್ಕರ ಲವ್ ಮಾಡ್ಬೇಡಿ, ಮನಸ್ಸಿಂದ ಪ್ರೀತಿ ಮಾಡಿ: ಕಣ್ಣೀರು ಹಾಕುತ್ತ ಸಂಜು ಬಸಯ್ಯ ಹೀಗೆ ಹೇಳಿದ್ಯಾಕೆ?

ಈಗ ಕಲರ್ಸ್ ಕನ್ನಡದಲ್ಲಿ ಫೇಮಸ್ ಆಗಿರೋ 'ರಾಮಾಚಾರಿ' ಸೀರಿಯಲ್ (serial) ತಗೊಳ್ಳಿ. ಈ ಅತ್ತೆ ತುಂಬಾ ಪ್ರೀತಿ (love) ಇರುವವಳು. ಶ್ರೀರಸ್ತು ಶುಭಮಸ್ತು ಸೀರಿಯಲ್‌ನ ನಾಯಕಿಯೇ ಅತ್ತೆ. ಇವಳಂತೂ ಪುಟ್ಟಾ ಅಂತ ಮಗಳಿಗಿಂತ ಹೆಚ್ಚು ಪ್ರೀತಿಯನ್ನು ಸೊಸೆಯಲ್ಲಿ ನೋಡುವವಳು. ಕೆಂಡಸಂಪಿಗೆ ಅನ್ನೋ ಇನ್ನೊಂದು ಸೀರಿಯಲ್ ಇದೆ. ಅದರ ಅತ್ತೆಯೂ ಯಾವಾಗಲೂ ಸೊಸೆ ಸುಮನಾ ಪರ. ಎಷ್ಟೋ ಸಲ ತನ್ನ ಮಗನ ವಿರುದ್ಧವೇ ದನಿ ಎತ್ತುತ್ತಾಳೆ. ಕೆಂಡಸಂಪಿಗೆ ಸೀರಿಯಲ್ ಅತ್ತೆಗೆ ಮಗನ ಮೇಲೆ ಸಿಕ್ಕಾಫಟ್ಟೆ ವ್ಯಾಮೋಹ. ಅದೇ ಕಾರಣಕ್ಕೆ ಒಳ್ಳೆಯವಳೇ ಆದ ಅವಳು ಸೊಸೆ ಪಾಲಿಗೆ ವಿಲನ್‌ ಆಗಬೇಕಾಗುತ್ತದೆ. ಸತ್ಯಾ ಸೀರಿಯಲ್ ಅತ್ತೆನೂ ಒಳ್ಳೆಯವಳೇ. ಲಕ್ಷಣ ಸೀರಿಯಲ್‌ ಅತ್ತೆಗೆ ಸ್ವಲ್ಪ ವಿಚಾರ ಮಾಡೋ ಬುದ್ಧಿ ಕಡಿಮೆ ಅನ್ನೋದು ಬಿಟ್ಟರೆ ಅವಳು ಕೆಟ್ಟವಳಲ್ಲ. ಸಾಲು ಸಾಲು ಸೀರಿಯಲ್‌ಗಳಲ್ಲಿ ಒಳ್ಳೆಯ ಅತ್ತೆಯನ್ನೇ ಕಾಣ್ತೀವಿ. ಇದು ಕೆಟ್ಟ ಬೆಳವಣಿಗೆ ಏನಲ್ಲ.

ಈ ಕಾಲದ ಸೀರಿಯಲ್ ವೀಕ್ಷಕರಲ್ಲಿ ಹೆಚ್ಚಿನವರು ಅತ್ತೆ ಮಾವನಿಂದ ದೂರ ಇರುವ ನ್ಯೂಕ್ಲಿಯರ್ ಫ್ಯಾಮಿಲಿಯವರು. ಹೀಗಿರುವಾಗ ಅತ್ತೆ, ಸೊಸೆ ಜಗಳ ಕಡಿಮೆಯೇ. ಅಪರೂಪಕ್ಕೆ ಬರುವ ಸೊಸೆ ಬಗ್ಗೆ ಅತ್ತೆ ಮಗನಿಗಿಂತ ಹೆಚ್ಚು ಕೇರ್‌ (care) ಮಾಡೋದನ್ನ ನೋಡ್ತೇವೆ. ಸೋ ಬದುಕು ಬದಲಾಗಿದೆ, ಸ್ವಲ್ಪಮಟ್ಟಿಗೆ ಅತ್ತೆ ಬದಲಾಗಲಿಕ್ಕೆ ಇದು ಕಾರಣ ಇರಬಹುದು. ಇಲ್ಲಾ ಚೇಂಚ್ (change) ಬಯಸೋ ವೀಕ್ಷಕರಿಗಾಗಿ ಅತ್ತೆ ಬದಲಾಗಿರಬಹುದು. ರೀಸನ್ ಏನೇ ಇದ್ರೂ ಅತ್ತೆ ಸೊಸೆ ಜಗಳದಿಂದ ಹುಡುಗ ಹುಡುಗಿ ನಡುವಿನ ರೊಮ್ಯಾಂಟಿಕ್ ಜಗಳದ ಕಡೆ ತಿರುಗಿರೋ ಸೀರಿಯಲ್ಸ್ ಟ್ರೆಂಡ್ಸ್‌ನ ವೀಕ್ಷಕರಂತೂ ಖುಷಿಯಿಂದಲೇ ಎನ್‌ಜಾಯ್ (enjoy) ಮಾಡುತ್ತಿದ್ದಾರೆ.

'ಹೆಣ್ಣು ಏನ್​ ಮಾಡ್ಬೇಕು ನೀವೇ ಹೇಳ್ಬಿಡಿ' ಎಂಬ ಭಾಗ್ಯಳ ಪ್ರತಿ ಮಾತಿಗೂ ಭಾವುಕರಾದ ನೆಟ್ಟಿಗರು

Follow Us:
Download App:
  • android
  • ios