ಸಿಹಿ ಸೀತಾಳ ಮಗಳೇ ಅಲ್ವಾ? ರಾಮ್‌ಗೆ ವಂಚಿಸಿದ್ದು ಸಿಹಿ ಅಮ್ಮನೇನಾ? ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್?

ಸೀತಾರಾಮ ಸೀರಿಯಲ್‌ನಲ್ಲಿ ಸಿಹಿ ಅನ್ನೂ ಕ್ಯೂಟ್ ಪುಟಾಣಿಯದ್ದೇ ಹವಾ. ಇದೀಗ ಸಡನ್ನಾಗಿ ಒಂದು ಬೆಳವಣಿಗೆ ಆಗಿ ಸೀತಾಗೆ ನಿಜಕ್ಕೂ ಮದ್ವೆ ಆಗಿಲ್ವಾ? ಸಿಹಿ ಅವಳ ಮಗಳೇ ಅಲ್ವಾ ಅನ್ನೋ ಡೌಟ್ ಬರ್ತಾ ಇದೆ.

seetha marriage story in seetharama serial of zeek kannada bni

ಸೀತಾರಾಮ ಸೀರಿಯಲ್‌ ಜೀ ಕನ್ನಡದಲ್ಲಿ ಟಿಆರ್‌ಪಿಯಲ್ಲೂ, ಜನಪ್ರಿಯತೆಯಲ್ಲೂ ಮುಂದಿರೋ ಸೀರಿಯಲ್. ಈ ಸೀರಿಯಲ್‌ನಲ್ಲಿ ಸದ್ಯಕ್ಕೀಗ ಸೀತಾ ಬಹಳ ಕಷ್ಟದಲ್ಲಿದ್ದಾಳೆ. ತನ್ನ ಆಧಾರವಾಗಿದ್ದ ಮನೆಯನ್ನೇ ಅವಳೀಗ ಮಾರಬೇಕಿದೆ. ಮಗಳ ಜೊತೆ ಬಾಡಿಗೆ ಮನೆಯಲ್ಲಿ ಬದುಕಬೇಕಿದೆ. ಇನ್ನೊಂದು ಕಡೆ ಅವಳಿಗೆ ಆಫೀಸಿಂದ ಬರಬೇಕಿದ್ದ ಅಡ್ವಾನ್ಸ್ ಸಾಲರಿ ಬಂದಿಲ್ಲ. ಈ ನಡುವೆಯೇ ಸೀತಾ ಮತ್ತವಳ ಮಗಳ ವಿಚಾರ ಬಂದಿದೆ. ಇಲ್ಲಿ ಸಿಕ್ಕಿರೋ ಸುಳಿವಿನ ಪ್ರಕಾರ ಸೀತಾಗಿನ್ನೂ ಮದುವೆನೇ ಆದಂಗಿಲ್ಲ. ಬಹುಶಃ ಅವಳ ಅಕ್ಕನ ಮಗಳನ್ನೇ ಅವಳು ತನ್ನ ಮಗಳು ಅಂದುಕೊಂಡು ಬೆಳೆಸ್ತಿದ್ದಾಳೆ. ಅಕ್ಕನ ಗಂಡ ಮಾಡಿರೋ ಸಾಲವನ್ನು ತನ್ನ ಮೈ ಮೇಲೆ ಎಳ್ಕೊಂಡಿದ್ದಾಳೆ.

ತೆಲುಗಿನಲ್ಲಿ ಮಧುರಾ ನಗರಿಲೊ ಎಂಬ ಒಂದು ಸೀರಿಯಲ್ ಬರ್ತಿದೆ. ಅದರಲ್ಲೂ ಹೆಚ್ಚುಕಮ್ಮಿ ಇದೇ ಕಥೆ ಇದೆ. ನಾಯಕಿ ತನ್ನ ಅಕ್ಕನ ಮಗನನ್ನೇ ತನ್ನ ಮಗನಾಗಿ ಸಾಕುತ್ತಿರುತ್ತಾಳೆ. ಇನ್ನೊಂದೆಡೆ ಅವಳ ಅಕ್ಕನಿಂದ ಮೋಸ ಹೋದ ಹುಡುಗನಿಗೆ ಇವಳ ಜೊತೆಗೆ ಲವ್ ಅಗುತ್ತೆ. 'ಸೀತಾರಾಮ' ಸೀರಿಯಲ್‌ನಲ್ಲೂ ರಾಮಂಗೆ ಮಲೇಷ್ಯಾದಲ್ಲೇ ಒಂದು ಬ್ರೇಕಪ್ ಆಗಿದೆ. ಆ ಬೇಸರದಲ್ಲೇ ಆತ ಇಂಡಿಯಾಗೆ ಬಂದಿದ್ದಾನೆ. ಆ ಹೊತ್ತಲ್ಲಿ ಆಫೀಸ್‌ನ ರಿಯಲ್ ಸ್ಥಿತಿ ನೋಡಬೇಕು ಅಂತ ಬಾಸ್ ಆಗಿರುವ ಆತ ಎಂಪ್ಲಾಯ್ ಥರ ಕೆಲಸ ಮಾಡ್ತಿದ್ದಾನೆ. ಈ ನಡುವೆ ಸೀತಾ ಅವಳ ಮಗಳು ಸಿಹಿ ಜೊತೆಗೆ ಸ್ನೇಹ ಆಗಿದೆ. ಈಗಾಗಲೇ ಮೋಸ ಹೋಗಿರೋ ರಾಮಂಗೆ ಮತ್ತೆ ಪ್ರೀತಿ, ಮದುವೆ ಅನ್ನೋದರಲ್ಲೆಲ್ಲ ಮನಸ್ಸಿಲ್ಲ. ಬಹುಶಃ ಈ ರಾಮಂಗೆ ಕೈಕೊಟ್ಟ ಹುಡುಗಿ ಸಿಹಿ ತಾಯಿ ಇರಬೇಕು ಅನ್ನೋ ಡೌಟ್ ಅಂತೂ ಇದೆ.

ಹಾಟ್ ಫೋಟೋ ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ ನಟಿ ಜ್ಯೋತಿ ರೈ

ಸದ್ಯಕ್ಕೀಗ ತನ್ನ ತಂದೆಯ ಬಗ್ಗೆ ಸಿಹಿಗೆ ಡೌಟ್ ಬರೋ ಸನ್ನಿವೇಶ ಬರುವ ಸೂಚನೆ ಇದೆ. ಈಗ ಸಿಹಿ ತನ್ನ ತಂದೆ ಯಾರು ಅಂತ ಸೀತಾ ಬಳಿ ಕೇಳಬಹುದು. ಇನ್ನೊಂದು ಕಡೆ ರಾಮ್‌ಗೂ ಕೂಡ ಸೀತಾಳ ಹಿಸ್ಟರಿ ಗೊತ್ತಿಲ್ಲ. ವಕೀಲ ರುದ್ರಪ್ರತಾಪ್‌ನಿಂದ ರಾಮ್ ಕೂಡ ಸೀತಾಳನ್ನು ಬಚಾವ್ ಮಾಡಬೇಕಿದೆ. ಒಟ್ಟಿನಲ್ಲಿ ಆದಷ್ಟು ಬೇಗ ಸೀತಾ ತನ್ನ ಗಂಡ ಯಾರು? ಅಥವಾ ಮದುವೆಯಾಗಿರೋದು ನಿಜವಾ ಅನ್ನೋದು ಗೊತ್ತಾಗಲಿದೆ.

ಶಾಲೆಯಲ್ಲಿ ಸಿಹಿಗೆ ಅಪ್ಪ ಯಾರು ಎಂಬ ಪ್ರಶ್ನೆ ಎದುರಾಗಿದೆ. ಒಂದಿನ ಅಪ್ಪ ಬರ್ತಾರೆ ಅಂತ ಸಿಹಿ ನಂಬಿಕೊಂಡು ಕೂತಿದ್ದಾಳೆ. ಅವಳು ತಾಯಿ ಸೀತಾ ಬಳಿ ನನಗೆ ಅಪ್ಪ ಬೇಕು ಅಂತ ಹಠ ಹಿಡಿಯಬಹುದು. ಇವಳ ಹಠಕ್ಕೆ ಮಣಿದು ಸೀತಾ ಮದುವೆಗೆ ಒಪ್ಪಬಹುದು. ಆದರೆ ಸೀತಾ ಯಾರನ್ನು ಮದುವೆ ಆಗ್ತಾಳೆ ಎನ್ನೋದು ಬಹಿರಂಗ ಆಗಬೇಕಿದೆ. ಅದು ರಾಮನ್ನೇ ಅನ್ನೋದು ಗೊತ್ತು, ಆದರೂ ಅದು ಹೇಗೆ ಆಗಬಹುದು ಅನ್ನೋ ಕ್ಲಾರಿಟಿ ಮುಂದಿನ ದಿನಗಳಲ್ಲಿ ಸಿಗಬೇಕಿದೆ.

ಇನ್ನೊಂದೆಡೆ ಸೀತಾ ಮನೆ ಮೇಲೆ ಸಿಕ್ಕಾಪಟ್ಟೆ ಸಾಲ ಇದೆ. ಆಫೀಸ್‌ನಲ್ಲಿ ಅಡ್ವಾನ್ಸ್ ಸಂಬಳ ಸಿಗತ್ತೆ, ಇದರಿಂದ ನಾನು ನನ್ನ ಮನೆಯನ್ನು ಉಳಿಸಿಕೊಳ್ಳಬಹುದು ಅಂತ ಸೀತಾ ನಂಬಿಕೊಂಡು ಕೂತಿದ್ದಾಳೆ. ಆದರೆ ಭಾರ್ಗವಿ ಅವಳಿಗೆ ಬರಬೇಕಾದ ಹಣವನ್ನು ಪ್ರಿಯಾಗೆ ವರ್ಗಾವಣೆ ಮಾಡಿಸಿದ್ದಾಳೆ. ಸೀತಾ ಖಾತೆಗೆ ಹೋಗುವ ಬದಲು ಪ್ರಿಯಾ ಖಾತೆಗೆ ಹಣ ಹೋಗಿದೆ ಅಂತ ರಾಮ್‌ಗೆ ಅರ್ಥ ಆದರೂ ಕೂಡ ಇದರ ಹಿಂದೆ ಇರೋದು ಯಾರು ಎನ್ನೋದು ರಾಮ್‌ಗಾಗಲೀ, ಅಶೋಕ್‌ಗಾಗಲೀ ಗೊತ್ತಾಗಿಲ್ಲ. ಹೇಗಾದರೂ ಮಾಡಿ ಆ ಮನೆಯನ್ನು ಉಳಿಸಿಕೊಳ್ಳಬೇಕು ಅಂತ ರಾಮ್ ತಲೆ ಕೆಡಿಸಿಕೊಂಡಿದ್ದಾನೆ. ಇನ್ನೊಂದು ಕಡೆ ರಾಮ್ ನೀಡಿದ ಆಶ್ವಾಸನೆಯಿಂದ ಸೀತಾ ಕೂಡ ತನ್ನ ಮನೆ ಉಳಿಯುತ್ತದೆ ಎನ್ನುವ ನಂಬಿಕೆಯಲ್ಲಿದ್ದಾಳೆ.

ಸೀತಾಗೆ ಮನೆ ಕೊಡಿಸುವ ನೆಪದಲ್ಲಿ, ಸಾಲದಿಂದ ಬಚಾವ್ ಮಾಡುವ ನೆಪದಲ್ಲಿ ಅವಳನ್ನು ಮದುವೆಯಾಗಬೇಕು ಅಂತ ರುದ್ರ ಪ್ರತಾಪ್ ಆಲೋಚನೆ ಮಾಡಿದ್ದಾನೆ. ಇವನ ಸಂಚಿನಿಂದ ಸೀತಾಳನ್ನು ರಾಮ್ ಹೇಗೆ ಬಚಾವ್ ಮಾಡ್ತಾನೆ ಅಂತ ಕಾದು ನೋಡಬೇಕಿದೆ.

ವೈಷ್ಣವಿ ಗೌಡ ಸೀತಾ ಪಾತ್ರದಲ್ಲಿ, ಗಗನ್ ಚಿನ್ನಪ್ಪ ರಾಮ್ ಆಗಿ, ರೀತು ಸಿಂಗ್ ಸಿಹಿ ಪಾತ್ರದಲ್ಲಿ ನಟಿಸಿದ್ದಾರೆ.

ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳಲು ಮನೆ ಗೃಹ ಪ್ರವೇಶ ಬೇಗ ಮಾಡಿದ್ರಾ ನಾಗಿಣಿ ನಟಿ ನಮ್ರತಾ ಗೌಡ?

Latest Videos
Follow Us:
Download App:
  • android
  • ios