Serial Actress Nisha Ravikrishnan: ಕಿರುತೆರೆ ಕಲಾವಿದೆ ನಿಶಾ ರವಿಕೃಷ್ಣನ್ ಅವರ ಫೋಟೋಶೂಟ್ ವೈರಲ್ ಆಗಿದೆ. ಸೀರೆಯಲ್ಲಿ ನೋಡಿದ ಅಭಿಮಾನಿಯೊಬ್ಬರು, ಹೀಗೆ ಫೋಟೋಶೂಟ್ ಮಾಡಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು: ಕಿರುತೆರೆ ಕಲಾವಿದೆ ನಿಶಾ ರವಿಕೃಷ್ಣನ್ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ಕಲಾವಿದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಅಮೂಲ್ಯಳಾಗಿ ಪರಿಚಯವಾದ ನಿಶಾ, ಇಂದು ಕರುನಾಡಿನೆಲ್ಲಡೆ ಪಾರು ಆಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹಾಗೆ ತೆಲಗು ಕಿರುತೆರೆಯಲ್ಲಿ ರೂಪಾ ಎಂದೇ ಫೇಮಸ್. ಕಲಾವಿದರು ಅಂದ್ರೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು ಎಂದು ಕನಸು ಕಂಡಿರುತ್ತಾರೆ. ಆದ್ರೆ ಕಿರುತೆರೆ ಕಲಾವಿದರನ್ನು ಒಂದೇ ಲುಕ್‌ನಲ್ಲಿ ನೋಡಿದ ವೀಕ್ಷಕರು, ಅವರನ್ನು ಹೊಸರೂಪದಲ್ಲ ಕಾಣಲು ಇಷ್ಟಪಡಲ್ಲ. ಅಣ್ಣಯ್ಯ ಸೀರಿಯಲ್‌ನಲ್ಲಿ ಶಿವಣ್ಣನ ಮಡದಿಯಾಗಿರುವ ಪಾರು, ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಗಟ್ಟಿಮೇಳದಲ್ಲಿ ಲಂಗ-ದಾವಣಿ ಮತ್ತು ಸೀರೆಯ ಲುಕ್‌ನಲ್ಲಿಯೇ ನಿಶಾ ಕಾಣಿಸಿಕೊಂಡಿದ್ದರು. 

ಇದೀಗ ನಿಶಾ ರವಿಕೃಷ್ಣನ್ ಸ್ಲೀವ್‌ಲೆಸ್ ಫ್ರಾಕ್ ತೊಟ್ಟು ಕ್ಲಿಕ್ಕಿಸಿಕೊಂಡಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುಟ್ಟ ಹುಡುಗಿಯಂತೆ ಮುದ್ದಾಗಿ ಕಂಡಿರುವ ನಿಶಾ ಪೋಟೋಗೆ ಬಹುತೇಕರು ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ. ಆದ್ರೆ ಓರ್ವ ಅಭಿಮಾನಿ, ಅಕ್ಕಾ, ದಯವಿಟ್ಟು ಹೀಗೆ ಫೋಟೋಶೂಟ್ ಮಾಡಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾನೆ. ಧಾರಾವಾಹಿಯಲ್ಲಿನ ಪಾರು ಲುಕ್‌ಗೆ ಈ ಅಭಿಮಾನಿ ಫಿದಾ ಆದಂತೆ ಕಂಡಿದೆ. 

ವೈರಲ್ ಆಗಿರುವ ಫೋಟೋವನ್ನು Nisha Amulya ಹೆಸರಿನ ಫ್ಯಾನ್ಸ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಶುಕ್ರವಾರ ಸಂಜೆ ನಿಶಾ ಅವರ ಹಳೆಯ ಫೋಟೋಗವನ್ನು ರಿಶೇರ್ ಮಾಡಿಕೊಂಡಿದ್ದರು. ಸಮುದ್ರದಡದಲ್ಲಿ ಬಣ್ಣ ಬಣ್ಣದ ಸ್ಲೀವ್‌ಲೆಸ್ ಗೌನ್ ಧರಿಸಿರುವ ನಿಶಾ ಚಿಟ್ಟೆಯಂತೆ ಕಾಣಿಸುತ್ತಿದ್ದಾರೆ. ಈ ಫೋಟೋಗೆ ಸುಂದರವಾಗಿದೆ, ಸೂಪರ್ ಎಂದು ಬರೆದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಫಸ್ಟ್‌ನೈಟ್‌ನಲ್ಲಿ ಮಂಚ ಮುರಿದ ಮಗನಿಗೆ ಅಪ್ಪನ ಶಹಬ್ಬಾಸ್‌ಗಿರಿ! ಸೀನ್-ಗುಂಡಮ್ಮನ ರಾದ್ಧಾಂತದ ಮೊದಲ ರಾತ್ರಿ !

ರೋಚಕ ತಿರುವಿನಲ್ಲಿ ಅಣ್ಣಯ್ಯ
ಅಣ್ಣಯ್ಯ ಧಾರಾವಾಹಿ ರೋಚಕ ತಿರುವಿಗೆ ಬಂದಿದೆ. ತನ್ನ ವಿರುದ್ಧ ನಿಂತಿರುವ ಮಗಳು ಪಾರುಗೆ ಬುದ್ಧಿ ಕಲಿಸಲು ಮಾರಿಗುಡಿ ವೀರಭದ್ರ ಮುಂದಾಗಿದ್ದಾನೆ. ಗುಂಡಮ್ಮನ ಮದುವೆಗಾಗಿ ವ್ಯಕ್ತಿಯೊಬ್ಬರ ಬಳಿ ಶಿವು ಸಾಲ ಮಾಡಿಕೊಂಡಿದ್ದನು. ಈ ವೇಳೆ ಖಾಲಿ ಪತ್ರಕ್ಕೆ ಶಿವು ಸಹಿ ಹಾಕಿದ್ದನು. ಆದರೆ ಈಗ ಶಿವು ಸಹಿ ಹಾಕಿರೋ ಖಾಲಿ ಪತ್ರ ವೀರಭದ್ರನ ಕೈಗೆ ಸೇರಿದೆ. ಇದೀಗ ಈ ಪತ್ರವನ್ನಿಟ್ಟುಕೊಂಡು ಶಿವು ಮನೆಯನ್ನು ಹರಾಜು ಹಾಕಲು ವೀರಭದ್ರ ಸಂಚು ರೂಪಿಸಿದ್ದಾನೆ. ಇತ್ತ ವೀರಭದ್ರನ ಮುಂದೆ ತುಟ್ಟಿಬಿಚ್ಚಲು ಹೆದರಿದ ಹೆಂಡತಿ ತಿರುಗೇಟು ಕೊಟ್ಟಿದ್ದಕ್ಕೆ ವೀರಭದ್ರ ಕೆಂಡವಾಗಿದ್ದಾನೆ. ಈ ಸೇಡು ತೀರಿಸಿಕೊಳ್ಳಲು ವೀರಭದ್ರ ಗಾಯಗೊಂಡ ಸಿಂಹದಂತೆ ಆಗಿದ್ದಾನೆ. ಈಗ ಮುಂದೆ ಪಾರು ಏನು ಮಾಡುತ್ತಾಳೆ? ಶಿವು ಮನೆಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 'ನಂಗೆ ಬ್ರೇಕಪ್‌ ಆಗಿರೋದು ಸತ್ಯ': ಅಣ್ಣಯ್ಯ ಧಾರಾವಾಹಿ ನಟ ವಿಕಾಶ್‌ ಉತ್ತಯ್ಯ